ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಭವಿಷ್ಯದ ಯೋಜನೆಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಮೂರನೇ ಉತ್ಪಾದನಾ ಘಟಕ ನಿರ್ಮಾಣ ಯೋಜನೆ ಆರಂಭಿಸುವ ಸಿದ್ದತೆಯಲ್ಲಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಭಾರತದಲ್ಲಿ ಸದ್ಯ ವಿವಿಧ ಸ್ಕೂಟರ್ ಮಾದರಿಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಉತ್ಪನ್ನಗಳ ಬಿಡುಗಡೆಗೂ ಮುನ್ನ ಕಂಪನಿಯು ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡಲು ಉತ್ಪಾದನಾ ಘಟಕಗಳ ಸಾಮರ್ಥ್ಯ ಹೆಚ್ಚಿಸುತ್ತಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ದುಬಾರಿ ಇಂಧನ ಪರಿಣಾಮ ಇವಿ ವಾಹನ ಮಾರಾಟ ಹೆಚ್ಚುತ್ತಿರುವುದರಿಂದ ಎಥರ್ ಎನರ್ಜಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳಿಂತಲೂ ವಿಭಿನ್ನವಾದ ಹೊಸ ಇವಿ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯುತ್ತಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಎರಡನೇ ಘಟಕದ ನಿರ್ಮಾಣ ಕಾರ್ಯವು ಈಗಾಗಲೇ ಪೂರ್ಣಗೊಳ್ಳುತ್ತಿದ್ದು, ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಈ ಮೂಲಕಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ಈ ಎರಡು ಘಟಕದಲ್ಲಿ ಮಾತ್ರವಲ್ಲದೇ ಕಂಪನಿಯು ಇನ್ನು ಹೆಚ್ಚಿನ ಮಟ್ಟದ ಉತ್ಪಾದನಾ ಸಾಮರ್ಥ್ಯಕ್ಕಾಗಿ ಮೂರನೇ ಘಟಕವನ್ನು ಸಹ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಮೂರನೇ ಘಟಕವನ್ನು ಸ್ಥಾಪಿಸಲು ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗುಜರಾತ್ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿರುವ ಎಥರ್ ಕಂಪನಿಯು ಹೊಸ ಘಟಕ ನಿರ್ಮಾಣಕ್ಕಾಗಿ 100 ಎಕರೆ ಭೂಮಿ ಖರೀದಿಗೆ ಪ್ರಸ್ತಾಪ ಸಲ್ಲಿಸಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಮುಂದಿನ ಕೆಲವೇ ದಿನಗಳಲ್ಲಿ ಹೊಸ ಘಟಕ ಸ್ಥಾಪನೆ ಅಂತಿಮ ಸ್ಥಳ ನಿರ್ಧಾರ ಪ್ರಕಟಿಸಲಿದ್ದು, ಭವಿಷ್ಯದ ಯೋಜನೆಗಳಿಗಾಗಿ ಕಂಪನಿಯು ಈಗಲೇ ಭೂಮಿ ಖರೀದಿ ಪ್ರಕ್ರಿಯೆಗೆ ಮುಂದಾಗಿದೆ. ಮೂರನೇ ಘಟಕ ನಿರ್ಮಾಣದೊಂದಿಗೆ ಕಂಪನಿಯು ವಾರ್ಷಿಕವಾಗಿ 15 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದ್ದು, ಮಾರಾಟ ಮಳಿಗೆಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಲಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದು, ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಬೆಲೆ ಹೊಂದಿವೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಎಥರ್ ಇವಿ ಸ್ಕೂಟರ್‌ಗಳು ಇತರೆ ಮಾದರಿಗಳಿಂತಲೂ ತುಸು ದುಬಾರಿ ಬೆಲೆ ಹೊಂದಿದ್ದರೂಎಥರ್ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಇವಿ ಸ್ಕೂಟರ್‌ಗಳಿಂತಲೂ ತುಸು ಕಡಿಮೆ ಮೈಲೇಜ್ ಹೊರತುಪಡಿಸಿ ಪ್ರೀಮಿಯಂ ಫೀಚರ್ಸ್ ಮತ್ತು ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ತಾಂತ್ರಿಕ ಸೇವೆಗಳ ವಿಚಾರವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹೊಂದಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಎಥರ್ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಇವಿ ಸ್ಕೂಟರ್‌ಗಳಿಂತಲೂ ತುಸು ಕಡಿಮೆ ಮೈಲೇಜ್ ಹೊರತುಪಡಿಸಿ ಪ್ರೀಮಿಯಂ ಫೀಚರ್ಸ್ ಮತ್ತು ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ತಾಂತ್ರಿಕ ಸೇವೆಗಳ ವಿಚಾರವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹೊಂದಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಹೀಗಾಗಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಎಥರ್ ಕಂಪನಿಯು ಕಳೆದ ವರ್ಷಕ್ಕಿಂತ 2021ರಲ್ಲಿ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.

ಮೂರನೇ ಇವಿ ಸ್ಕೂಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸಿದ್ದವಾದ ಎಥರ್ ಎನರ್ಜಿ

ಎಥರ್ ಮುಂಬರುವ ಸ್ಕೂಟರ್ ಮಾದರಿಯು ರೂ. 1 ಲಕ್ಷ ಬೆಲೆಯೊಳಗೆ ಬಿಡುಗಡೆಯಾಗಲಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಅಳವಡಿಸಲಿದೆ.

More from DriveSpark

Article Published On: Thursday, June 16, 2022, 13:03 [IST]
English summary
Ather energy to setup third ev scooter production plant soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+