ಕೇವಲ ಭಾರತದಲ್ಲಿ ಮಾತ್ರ ಸಾಧ್ಯ...ರಸ್ತೆ ಮಧ್ಯೆ ಕೆಟ್ಟು ನಿಂತ ಬೆಂಜ್ ಕಾರಿಗೆ ಆಟೋ ಚಾಲಕನ ಸಹಾಯ

ಭಾರತೀಯರು ತಮ್ಮ ಹೊಸ ಐಡಿಯಾಗಳೊಂದಿಗೆ ವಿಶ್ವದ ಇತರ ದೇಶಗಳನ್ನು ಅಚ್ಚರಿಗೊಳಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಯನ್ನು ಪರಿಹರಿಸುವಲ್ಲಿ ಭಾರತೀಯರು ಮುಂದಿರುತ್ತಾರೆ. ಇತ್ತೀಚೆಗೆ ರಸ್ತೆ ಮಧ್ಯೆ ಕೆಟ್ಟು ನಿಂತ ಕಾರನ್ನು ಆಟೋ ಚಾಲಕ ಸಲೀಸಾಗಿ ಗ್ಯಾರೆಜ್ ವರೆಗೆ ತಳ್ಳಿಕೊಂಡು ಹೋದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ಕಿರು ವಿಡಿಯೋ ಆಗಿದೆ. ಈ ವೀಡಿಯೊದಲ್ಲಿ, ಕೆಂಪು ಬಣ್ಣದ Mercedes-Benz CLA ಐಷಾರಾಮಿ ಸೆಡಾನ್ ಅನ್ನು ಆಟೋರಿಕ್ಷಾದಿಂದ ತಳ್ಳುವುದನ್ನು ನಾವು ನೋಡಬಹುದು. ವಿಡಿಯೋ ಪ್ರಕಾರ, ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿ ಇದು ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಕಂಡುಬರುವಂತೆ ಆಟೋ ಚಾಲಕ ಪುಣೆಯ ಜನನಿಬಿಡ ರಸ್ತೆಗಳಲ್ಲಿ ಕಾರನ್ನು ತಳ್ಳುತ್ತಿದ್ದಾನೆ. ವಿಡಿಯೋವನ್ನು ಗಮನಿಸಿದಾಗ ಆಟೋ ಚಾಲಕ ಯಾವುದೇ ಶ್ರಮವಿಲ್ಲದೇ ಆಟೋವನ್ನು ತಳ್ಳುತ್ತಿರುವುದನ್ನು ಕಾಣಬಹುದು.

ನಮ್ಮ ನಗರದಲ್ಲಿ ಒಂದು ಕಾರು ಮತ್ತೊಂದು ಕಾರನ್ನು ಎಳೆಯುವುದನ್ನು ನಾವು ನೋಡಿದ್ದೇವೆ ಆದರೆ, ಬಹುಶಃ ಇದೇ ಮೊದಲ ಬಾರಿಗೆ, ನಾವು ಈ ರೀತಿಯದನ್ನು ನೋಡಿರಬಹುದು. ಕಾರಿನ ಮಾಲೀಕ ತನ್ನ ಕಾರನ್ನು ಹತ್ತಿರದ ವರ್ಕ್‌ಶಾಪ್‌ಗೆ ಕೊಂಡೊಯ್ಯಲು ಟೌ ಟ್ರಕ್ ಅಥವಾ ಫ್ಲಾಟ್‌ಬೆಡ್‌ಗಾಗಿ ಕಾಯುವಷ್ಟು ತಾಳ್ಮೆ ಹೊಂದಿಲ್ಲ ಎಂದು ತೋರುತ್ತಿದೆ. ಆಟೋ ಚಾಲಕನು ಮರ್ಸಿಡಿಸ್ ಚಾಲಕನಿಗೆ ಸಹಾಯ ಮಾಡಿರಬಹುದು. ಅವನನ್ನು ಹತ್ತಿರದ ವರ್ಕ್‌ಶಾಪ್‌ಗೆ ತಳ್ಳಲು ಮುಂದಾಗಿರಬಹುದು ಎಂದು ತೋರುತ್ತಿದೆ.

ಇದು ಚಿಕ್ಕ ವೀಡಿಯೊವಾಗಿರುವುದರಿಂದ, ಕಾರಿಗೆ ನಿಖರವಾಗಿ ಏನಾಯಿತು ಎಂದು ನಮಗೆ ಖಚಿತವಾಗಿಲ್ಲ. ಆಟೋ ಚಾಲಕ ತನ್ನ ಎಡ ಕಾಲನ್ನು ಮರ್ಸಿಡಿಸ್ ಬೆಂಜ್ ನ ಬಂಪರ್ ಮೇಲೆ ಇಟ್ಟು ತಳ್ಳುತ್ತಿರುವುದು ಕಂಡು ಬಂದಿದೆ. ಚಾಲಕ ಅಪಾಯದೊಂದಿಗೆ ಆಟವಾಡುತ್ತಿದ್ದಂತೆ ನಮಗನಿಸುತ್ತಿದೆ. ಆಟೋ ಚಾಲಕ ಯಾವುದೇ ತೊಂದರೆಯಿಲ್ಲದೆ ಕಾರನ್ನು ತಳ್ಳುತ್ತಿದ್ದಾನೆ ಸರಿ, ಆದರೆ ಅಕಸ್ಮಾತ್ತಾಗೆ ಬೃಹತ್ ವಾಹನಗಳನ್ನು ಟೌ ಮಾಡುವುದನ್ನು ಕಾಣದೆ ಮುನ್ನುಗ್ಗಿದರೆ ಅಪಾಯ ಕಟ್ಟಿಟ್ಟಬುತ್ತಿ.

ವೀಡಿಯೊದಲ್ಲಿ ಇದು ಸುಲಭವಾಗಿ ಕಾಣಿಸಬಹುದು ಆದರೆ 1,500 ಕೆ.ಜಿಗಿಂತ ಹೆಚ್ಚು ತೂಕವಿರುವ ಕಾರನ್ನು ತಳ್ಳುವುದು ಸುಲಭವಲ್ಲ. ಅದರಲ್ಲೂ ಆಟೋರಿಕ್ಷಾದೊಂದಿಗೆ ಅಷ್ಟು ದೊಡ್ಡ ಕಾರನ್ನು ಕಾಲಿನ ಮೂಲಕ ತಳ್ಳುವುದು ತುಂಬಾ ಅಪಾಯಕಾರಿ. ಈ ವೇಳೆ ಚಾಲಕ ಸರಿಯಾದ ಹಗ್ಗವನ್ನೂ ಬಳಸುತ್ತಿಲ್ಲ. ಕಾರನ್ನು ತಳ್ಳುವ ರಸ್ತೆಯಲ್ಲಿ ಯಾವುದೇ ಎತ್ತರದ ಪ್ರದೇಶಗಳು ಬಂದಿಲ್ಲ ಎಂದು ತೋರುತ್ತಿದೆ. ಒಂದು ವೇಳೆ ಎತ್ತರದ ಪ್ರದೇಶಗಳು ಇದ್ದಿದ್ದರೆ ಆಟೋ ಚಾಲಕನಿಗೆ ಸ್ವಲ್ಪ ಕಷ್ಟವಾಗುತ್ತಿತ್ತು.

ಕಾರನ್ನು ತಳ್ಳಲು ಮತ್ತು ವಾಹನಗಳ ನಡುವೆ ಅಂತರವನ್ನು ಕಾಯ್ದುಕೊಳ್ಳಲು ಅವನು ತನ್ನ ಪಾದವನ್ನು ಬಳಸುತ್ತಿರುವುದರಿಂದ, ಕಾರಿಗೆ ಅಪ್ಪಳಿಸುವುದನ್ನು ತಪ್ಪಿಸಲು ಅವನು ತನ್ನ ಪಾದಗಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬೇಕಾಗುತ್ತದೆ. ಸರಿಯಾದ ಟವ್ ಟ್ರಕ್ ಬದಲಿಗೆ ಮಾಲೀಕರು ಆಟೋರಿಕ್ಷಾ ಚಾಲಕರಿಂದ ಸಹಾಯ ಪಡೆದ ಕಾರಣ ಇದು ಖಂಡಿತವಾಗಿಯೂ ಹೊಸದಾಗಿ ಕಂಡರೂ ಅಪಾಯವೂ ಅಷ್ಟೇ ಇದೆ. ಕೆಟ್ಟುಹೋದ ಕಾರನ್ನು ತಳ್ಳಲು ಇದು ಉತ್ತಮ ಮಾರ್ಗವಲ್ಲ, ಯಾರೂ ಕೂಡ ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡಬಾರದು.

ಈ ರೀತಿಯಲ್ಲಿ ವಾಹನವನ್ನು ತಳ್ಳುವಾಗ ಹಲವಾರು ವಿಷಯಗಳು ತಪ್ಪಾಗಬಹುದು. ಕಾರನ್ನು ತಳ್ಳಲು ಯತ್ನಿಸಿದ ಆಟೋ ಚಾಲಕನ ಕಾಲಿಗೆ ಗಾಯವಾಗಿರುವ ಸಾಧ್ಯತೆಗಳಿವೆ. ಅದೇ ರೀತಿ ಕಾರಿನ ಇಂಜಿನ್ ಕೆಲಸ ಮಾಡದ ಕಾರಣ ಆಟೋ ತಳ್ಳುವಾಗ ಕಾರು ಚಾಲಕ ಏನೂ ಮಾಡಲು ಸಾಧ್ಯವಿಲ್ಲ. ಕೇವಲ ಬ್ರೇಕ್ ಅನ್ನು ಮಾತ್ರ ನಿಯಂತ್ರಿಸಬಲ್ಲ. ಒಂದು ವೇಳೆ ಆಟೋ ಚಾಲಕ ನಿಯಂತ್ರಣ ಕಳೆದುಕೊಂಡ ವೇಳೆ ಕಾರು ಚಾಲಕ ಸ್ವಲ್ಪ ಯಾಮಾರಿದರೂ ಆಟೋ ಚಾಲಕನ ಪ್ರಾಣಕ್ಕೆ ಗ್ಯಾರೆಂಟಿ ಇರುವುದಿಲ್ಲ. ಹಾಗಾಗಿ ಇಂತಹ ಪ್ರಯತ್ನಗಳಿಂದ ದೂರವಿರುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Auto driver help a benz car that broke down in the middle of the road
Story first published: Friday, December 16, 2022, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X