ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಬೆಂಗಳೂರಿನಲ್ಲಿ ಕ್ಯಾಬ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ‌ಅದೃಷ್ಟವಷಾತ್ ಕ್ಯಾಬ್ ಬುಕ್‌ ಮಾಡಿದರೆ ಕಾಯುವ ಸಮಯವಂತೂ ಇನ್ನೂ ಹೆಚ್ಚು, ಇದು ಹೀಗಿದ್ದರೆ ಪ್ರಯಾಣದ ದರವೂ ಮಿತಿ ಮೀರುತ್ತಿದೆ ಎಂದು ನಗರದಲ್ಲಿ ಪ್ರಯಾಣಿಕರು ದೂರುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಕೊರೊನಾಗೂ ಮುಂಚೆ ನಗರದಲ್ಲಿ ಕ್ಯಾಬ್ ಬುಕ್ ಮಾಡಲು ಕೇವಲ 5-10 ನಿಮಿಷಗಳಾಗುತ್ತಿತ್ತು. ಅಲ್ಲದೇ ಬುಕ್ ಮಾಡಿದ ಕೂಡಲೇ ಚಾಲಕ ಪ್ರಯಾಣಿಕರನ್ನು ಸಂಪರ್ಕಿಸಿ ಕನಿಷ್ಠ ದರಕ್ಕೆ ಪಿಕ್-ಅಪ್‌ ಪಾಯಿಂಟ್‌ನಿಂದ ಡ್ರಾಪ್ ಪಾಯಿಂಟ್‌ಗೆ ಬಿಡುತ್ತಿದ್ದರು. ಆದರೆ ಇದೀಗ ಸಂಪೂರ್ಣ ಬದಲಾಗಿದೆ. ರಸ್ತೆಗಳಲ್ಲಿ ಕ್ಯಾಬ್‌ಗಳು ಕಾಣಿಸುವುದೇ ಅಪರೂಪ ಎಂಬಂತಾಗಿದೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಾಲೀಕರು ಮತ್ತು ಚಾಲಕರು ಅವರು ಲೋನ್ ಪಡೆದ ಹಣಕಾಸು ಸಂಸ್ಥೆಗಳಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ವಾಹನಗಳನ್ನು ಹಿಂತಿರುಗಿಸಲಾಗಿದೆ. ಇದೇ ಕಾರಣಕ್ಕೆ ಕೋವಿಡ್ ಪೂರ್ವದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇ50 ಕ್ಕಿಂತ ಹೆಚ್ಚು ಕ್ಯಾಬ್‌ಗಳು ರಸ್ತೆಯಿಂದ ಹೊರಗುಳಿದಿವೆ ಎಂದು ನಿರ್ವಾಹಕರು ಹೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಸದ್ಯ ರಸ್ತೆಯಲ್ಲಿರುವ ಕ್ಯಾಬ್‌ಗಳ ಯಾವುದೇ ಡೇಟಾ ಈಗ ಲಭ್ಯವಿಲ್ಲ. ಇವುಗಳನ್ನು ಹೊರತುಪಡಿಸಿ ಹೊಸ ಕ್ಯಾಬ್‌ಗಳು ಮತ್ತು ಆಟೋರಿಕ್ಷಾಗಳು ಫ್ಲೀಟ್‌ಗೆ ಸೇರುವ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಕೊರೊನಾ ಹರಡಿದ ನಂತರ ಹೊಸ ಟ್ಯಾಕ್ಸಿಗಳು ಮತ್ತು ಆಟೋಗಳ ನೋಂದಣಿ ಸಂಖ್ಯೆ ತೀವ್ರವಾಗಿ ಕುಸಿದಿದೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಕೊರೊನಾ ಪೂರ್ವದ ಸಮಯದಲ್ಲಿ, ನಗರದಲ್ಲಿ ಪ್ರತಿದಿನ ಸರಾಸರಿ 40 ಹೊಸ ಟ್ಯಾಕ್ಸಿಗಳು ನೋಂದಣಿಯಾಗುತ್ತಿದ್ದವು. 2020-21 ರಲ್ಲಿ ದಿನಕ್ಕೆ ಮೂರರಂತೆ ನೋಂದಣಿಯಾಗಿವೆ. ಹಿಂದಿನ ಹಣಕಾಸು ವರ್ಷದಲ್ಲಿ ಸರಾಸರಿ ನಾಲ್ಕು ಟ್ಯಾಕ್ಸಿಗಳು ನೋಂದಣಿಯಾಗಿವೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಇನ್ನು ಆಟೋಗಳ ವಿಷಯಕ್ಕೆ ಬಂದರೆ, 2019-20ರಲ್ಲಿ ಸರಾಸರಿ ಹೊಸ ನೋಂದಣಿ ದಿನಕ್ಕೆ 47 ಆಗಿತ್ತು. ಇದು 2020-21ರಲ್ಲಿ ದಿನಕ್ಕೆ ಮೂರಕ್ಕೆ ಇಳಿದಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಹೊಸದಾಗಿ ನೋಂದಣಿಯಾದ ಆಟೋಗಳ ಸಂಖ್ಯೆ ದಿನಕ್ಕೆ ನಾಲ್ಕು ಮಾತ್ರ. ನಗರದಲ್ಲಿ ಟ್ಯಾಕ್ಸಿ ಸೇವೆಗಳು ಹೇಗೆ ವ್ಯತಿರಿಕ್ತವಾಗಿವೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ದಿನನಿತ್ಯದ ಪ್ರಯಾಣಕ್ಕೆ ಟ್ಯಾಕ್ಸಿಯನ್ನೇ ನೆಚ್ಚಿಕೊಂಡಿರುವವರು, ಈ ಹಿಂದಿಗೆ ಹೋಲಿಸಿಕೊಂಡರೆ ಕಾಯುವ ಸಮಯದ ಜೊತೆಗೆ ಪ್ರಯಾಣದ ದರವೂ ಹೆಚ್ಚಾಗಿದೆ ಎನ್ನುತ್ತಾರೆ. ನಿತ್ಯ ಟ್ಯಾಕ್ಸಿ ಪ್ರಯಾಣಿಕರು ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದರೆ ದುಬಾರಿ ಮೊತ್ತ ತೋರಿಸುತ್ತಿದೆ. ಇದು ಹೀಗಿದ್ದರೇ ಚಾಲಕನು ಸವಾರಿಯನ್ನು ಸ್ವೀಕರಿಸುವಾಗ ನಗದು ಮೂಲಕ ಪಾವತಿಸದರೇ ಮಾತ್ರ ವಾಹನ ಏರಲು ಒಪ್ಪುತ್ತಿರುವುದಾಗಿ ಹಲವರು ದೂರುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಪ್ರಯಾಣಿಕರು, ವಿಶೇಷವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಪ್ರಯಾಣಿಸುವವರು, ಟೋಲ್ ರಸ್ತೆಯನ್ನು ಬಳಸದೆ, ಎಸಿಯನ್ನು ಬದಲಾಯಿಸದೆ ಟೋಲ್ ಶುಲ್ಕವನ್ನು ಸಂಗ್ರಹಿಸುವ ಚಾಲಕರ ವಿರುದ್ಧ ಅಗ್ರಿಗೇಟರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಐಟಿ ಕಂಪನಿಗಳು ಮತ್ತು ಇತರ ಉದ್ಯಮಗಳಿಗೆ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ನಿರ್ವಾಹಕರು ಸಹ ಈ ಬಿಸಿ ಅನುಭವಿಸುತ್ತಾರೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಟ್ಯಾಕ್ಸಿ ಪೂರೈಕೆ ನಿರ್ವಾಹಕರ ಕಥೆಯೇ ಬೇರೆ

ಕಳೆದ ಎರಡು ವರ್ಷಗಳಿಂದ ಮಾಲೀಕರು ಹಾಗೂ ಚಾಲಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸಾಲವನ್ನು ಪಾವತಿಸಲು ಸಾಧ್ಯವಾಗದೆ, ಅನೇಕರು ಹಣಕಾಸು ಕಂಪನಿಗಳಿಗೆ ವಾಹನಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ, ಅನೇಕ ಕಂಪನಿಗಳು ನಿಧಾನವಾಗಿ ಹೈಬ್ರಿಡ್ ವರ್ಕಿಂಗ್ ಮೋಡ್‌ಗೆ ಬದಲಾಗಿವೆ. ಬೇಡಿಕೆಯನ್ನು ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ. ವಾಹನವನ್ನು ಪಡೆಯಲು ನಾವು ಮಾಲೀಕರಿಗೆ ಅಥವಾ ಚಾಲಕರಿಗೆ ಅನೇಕ ಕರೆಗಳನ್ನು ಮಾಡಬೇಕಾಗಿದೆ. ಆದರೂ ನಮಗೆ ವಾಹನಗಳು ಸಿಗುತ್ತಿಲ್ಲ ಎಂದು ನಿರ್ವಾಹಕರು ಹೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಕೊರೊನಾ ನಂತರ ಅನೇಕ ಚಾಲಕರು ನಗರ ತೊರೆದು ತಮ್ಮ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲ ಮಾಡಿ ವಾಹನ ಖರೀದಿಸಿದ್ದರು. ಲಕ್ಷಗಟ್ಟಲೆ ಬಾಕಿ ಇರುವ ಹಣವನ್ನು ಪಾವತಿಸದೆ ಹಣಕಾಸು ಕಂಪನಿಗಳು ಬಿಡುಗಡೆ ಮಾಡುತ್ತಿಲ್ಲ. ಹೊಸ ವಾಹನ ಖರೀದಿಸಲು ಲಕ್ಷಗಳಲ್ಲಿ ಹೂಡಿಕೆ ಮಾಡುವವರು ಯಾರು? ವಾಹನದ ಬೆಲೆಗೆ ಹೆಚ್ಚುವರಿಯಾಗಿ, ಹೆಚ್ಚುತ್ತಿರುವ ಇಂಧನ ವೆಚ್ಚ, ಹೆಚ್ಚಿನ ವಿಮಾ ಮೊತ್ತ ಮತ್ತು ನಿರ್ವಹಣಾ ವೆಚ್ಚವು ಅನೇಕರನ್ನು ಟ್ಯಾಕ್ಸಿಗಳಲ್ಲಿ ಹೂಡಿಕೆ ಮಾಡುವುದನ್ನು ತಡೆಯುತ್ತಿದೆ.

ಬೆಂಗಳೂರಿನಲ್ಲಿ ಹೊಸ ಟ್ಯಾಕ್ಸಿಗಳ ನೋಂದಣಿಯಲ್ಲಿ ಭಾರೀ ಇಳಿಕೆ: ಪ್ರಯಾಣಿಕರ ಮೇಲೆ ನೇರ ಪ್ರಭಾವ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಎರಡು ವರ್ಷಗಳ ಹಿಂದೆ ₹ 7.5 ಲಕ್ಷ ಹೂಡಿಕೆ ಮಾಡಿ ವಾಹನ ಖರೀದಿಸಬಹುದಿತ್ತು, ಆದರೆ ಈಗ ₹ 12 ಲಕ್ಷದಿಂದ 13 ಲಕ್ಷ ಹೂಡಿಕೆ ಅಗತ್ಯವಿದೆ. ಅದೊಂದು ದೊಡ್ಡ ಮೊತ್ತ. ಈಗಾಗಲೇ ಭಾರೀ ನಷ್ಟ ಅನುಭವಿಸಿರುವ ಹಲವು ನಿರ್ವಾಹಕರಿಗೆ ಇದು ನಿಲುಕದ್ದು. ಹೊಸ ಕಾರುಗಳನ್ನು ಖರೀದಿಸಲು ಹೆಚ್ಚಿನ ವೆಚ್ಚವಾಗಿರುವುದರಿಂದ, ನಿರ್ವಾಹಕರಿಗೆ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರವು ತೆರಿಗೆಗಳನ್ನು ಕಡಿಮೆ ಮಾಡಬೇಕಿದೆ.

Article Published On: Monday, July 11, 2022, 12:25 [IST]
English summary
Big drop in registration of new taxis in Bengaluru Direct impact on commuters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+