ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾಗಿರುವ ಬಿವೈಡಿ ಶೀಘ್ರದಲ್ಲಿಯೇ ತನ್ನ ಮತ್ತೊಂದು ಇವಿ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮುನ್ನ ಟೀಸರ್ ಪ್ರಕಟಿಸಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಚೀನಿ ಮೂಲದ ಬಿವೈಡಿ(ಬಿಲ್ಡ್ ಯುವರ್ ಡ್ರಿಮ್) ಕಂಪನಿಯು ಭಾರತದಲ್ಲಿ 2007ರಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದು, ಆರಂಭದಲ್ಲಿ ಎಲೆಕ್ಟ್ರಾನಿಕ್ ಬಿಡಿಭಾಗಗಳು ಮತ್ತು ಬ್ಯಾಟರಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ಆರಂಭಿಸಿದ ಕಂಪನಿಯು ಇದೀಗ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೂ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಇ6 ಎಂಪಿವಿ ಕಾರು ಬಿಡುಗಡೆ ಮಾಡಿದ್ದ ಕಂಪನಿಯು ಇದೀಗ ಎಸ್‌ಯುವಿ ವಿಭಾಗಗಕ್ಕೆ ಹೊಸ ಅಟ್ಟೊ 3 ಪರಿಚಯಿಸುತ್ತಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟಗೊಳ್ಳುತ್ತಿರುವ ಬಿವೈಡಿ ಅಟ್ಟೊ 3 ಎಸ್‌ಯುವಿ ಮಾದರಿಯು ಇದೀಗ ಭಾರತದಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದ್ದು, ಎಂಜಿ ಜೆಡ್ಎಸ್ ಇವಿ ಮತ್ತು ಹ್ಯುಂಡೈ ಕೊನಾ ಇವಿ ಕಾರುಗಳಿಗೆ ಇದು ಉತ್ತಮ ಪೈಪೋಟಿಯಾಗಲಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಬಿವೈಡಿ ಕಂಪನಿಯು ಹೊಸ ಅಟ್ಟೊ 3 ಕಾರು ಮಾದರಿಯನ್ನು ಸದ್ಯ ಸಿಂಗಪುರ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡುತ್ತಿದ್ದು, ರೈಡ್ ಹ್ಯಾಂಡ್ ಚಾಲಾನಾ ಶೈಲಿ ಹೊಂದಿರುವ ಹೊಸ ಕಾರು ದೇಶಿಯ ಮಾರುಕಟ್ಟೆಗಾಗಿ ಲೆಫ್ಟ್ ಹ್ಯಾಂಡ್ ಚಾಲನಾ ಶೈಲಿ ಸೇರಿದಂತೆ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಅಟ್ಟೊ 3 ಕಾರು ಮಾದರಿಯನ್ನು ಕಂಪನಿಯು ವಿದೇಶಿ ಮಾರುಕಟ್ಟೆಗಳಿಂದಲೇ ಭಾರತಕ್ಕೆ ಸೆಮಿ ನಾಕ್ಡ್ ಡೌನ್ ಆಮದು ನೀತಿಯಡಿ ತರುವ ಸಾಧ್ಯತೆಗಳಿದ್ದು, ತನ್ನ ಹೊಸ ಕಾರಿನ ಬಿಡಿಭಾಗಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಂಡು ಹೊಸ ಉತ್ಪಾದನಾ ಘಟಕದಲ್ಲಿ ಮರುಜೋಡಣೆ ಮಾಡಿ ಮಾರಾಟ ಮಾಡಲಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಲಾಂಗ್‌ವೀಲ್ಹ್ ಬೆಸ್ ಹೊಂದಿದ್ದು, ಆರಾಮದಾಯಕ ಪ್ರಯಾಣವನ್ನು ಒದಗಿಸುವುದರ ಜೊತೆಗೆ ಹೆಚ್ಚಿನ ಮೈಲೇಜ್ ಪ್ರೇರಣೆ ಹೊಂದಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಅಟ್ಟೊ 3 ಎಸ್‌ಯುವಿ ಮಾದರಿಯಲ್ಲಿ ಬಿವೈಡಿ ಕಂಪನಿಯು 60.48kWh ಮತ್ತು 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ನೀಡುವ ಸಾಧ್ಯತೆಯಿದ್ದು, ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಖರೀದಿಸಬಹುದಾಗಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

60.48kWh ಬ್ಯಾಟರಿ ಪ್ಯಾಕ್ ಮಾದರಿಯು ಪ್ರತಿ ಚಾರ್ಜ್‌ಗೆ 420 ಕಿ.ಮೀ ಮೈಲೇಜ್ ಹೊಂದಿದ್ದರೆ 49.92kWh ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಮಾದರಿಯು 320 ಕಿ.ಮೀ ಮೈಲೇಜ್ ಹೊಂದಿದ್ದು, ಉತ್ತಮ ಮೈಲೇಜ್ ಪ್ರೇರಣೆಯೊಂದಿಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಮೋಟಾರ್ ಕೇವಲ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಲಿದ್ದು, 201 ಬಿಎಚ್‌ಪಿ ಮತ್ತು 310 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎಂಟ್ರಿ ಲೆವಲ್ ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಳ್ಳುತ್ತದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್(ಎಡಿಎಎಸ್) ಸೌಲಭ್ಯವನ್ನು ಸಹ ಜೋಡಣೆ ಮಾಡಿದ್ದು, ಇದು ಹಲವಾರು ಸುರಕ್ಷಾ ಸೌಲಭ್ಯಗಳೊಂದಿಗೆ ಕಾರು ಚಾಲನೆಯನ್ನು ಸುರಕ್ಷಿತಗೊಳಿಸುತ್ತದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹಾಗೆಯೇ ಹೊಸ ಕಾರಿನಲ್ಲಿರುವ ಇತರೆ ಫೀಚರ್ಸ್‌ಗಳು ಉತ್ತಮವಾಗಿದ್ದು, 4,455 ಎಂಎಂ ಉದ್ದಳತೆಯೊಂದಿಗೆ 1,875 ಅಗಲ, 2,720 ಎಂಎಂ ವ್ಹೀಲ್‌ಬೆಸ್ ಹೊಂದಿದೆ. ಇದು ಜೆಡ್ಎಸ್ ಇವಿಗಿಂತಲೂ 132 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ಅರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಈ ಮೂಲಕ ಹೊಸ ಕಾರು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 22 ಲಕ್ಷದಿಂದ ರೂ. 26 ಲಕ್ಷದ ತನಕ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ಕಡಿಮೆ ಮೈಲೇಜ್‌ ಹೊಂದಿದ್ದರೂ ಫೀಟರ್ಸ್ ಮತ್ತು ತಂತ್ರಜ್ಞಾನ ಸೌಲಭ್ಯದಲ್ಲಿ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಇನ್ನು ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಕಳೆದ ವರ್ಷದ ಕೊನೆಯಲ್ಲಿ ಚಾಲನೆ ನೀಡಿದ್ದ ಬಿವೈಡಿ ಕಂಪನಿಯು ಆರಂಭದಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳ ಜೊತೆಗೂಡಿ ಕೇವಲ ಬಿ ಟು ಬಿ ಉದ್ದೇಶಕ್ಕಾಗಿ ಹೊಸ ಇ6 ಇವಿ ಕಾರಿನ ಮಾರಾಟ ಆರಂಭಿಸಿತ್ತು. ಇದೀಗ ಕಂಪನಿಯು ವೈಯಕ್ತಿಕ ಕಾರು ಬಳಕೆದಾದರಿಗೂ ಹೊಸ ಇವಿ ಕಾರಿನ ವಿತರಣೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಪನಿಯು ಪ್ರತ್ಯೇಕ ಮಾರಾಟ ಸೌಲಭ್ಯಕ್ಕಾಗಿ ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಬ್ರಾಂಡ್ ಅಡಿಯಲ್ಲಿ ಈಗಾಗಲೇ ಮೂರು ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆದಿರುವ ಬಿವೈಡಿ ಕಂಪನಿಯು ಇದೀಗ ನಾಲ್ಕನೇ ಮಾರಾಟ ಮಳಿಗೆಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭಿಸಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಲ್ಯಾಂಡ್‌‌ಮಾರ್ಕ್ ಸಹಭಾಗೀತ್ವದಲ್ಲಿ ದೆಹಲಿಯ ಓಕ್ಲಾ ಕೈಗಾರಿಕಾ ಪ್ರದೇಶದಲ್ಲಿ ಹೊಸ ಮಾರಾಟ ಮಳಿಗೆಯನ್ನು ಆರಂಭಿಸಿರುವ ಬಿವೈಡಿ ಕಂಪನಿಯು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಹೊಸ ಕಾರು ಮಾರಾಟ ಮಳಿಗೆಗಳನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

ಹೊಸ ಮಾರಾಟ ಮಳಿಗೆಗಳಲ್ಲಿ ಮಾರಾಟ, ಮಾರಾಟ ನಂತರದ ಗ್ರಾಹಕರ ಸೇವೆಗಳು ಮತ್ತು ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದ್ದು, ಮಾರಾಟ ಮಳಿಗೆಗಳಲ್ಲಿ ಮಾತ್ರವಲ್ಲದೇ ವಿವಿಧ ಖಾಸಗಿ ಕಂಪನಿಗಳ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ತೆರೆಯಲಾಗುತ್ತಿದೆ.

ಜೆಡ್ಎಸ್ ಇವಿ ಮತ್ತು ಕೊನಾ ಇವಿ ಕಾರಿಗೆ ಪೈಪೋಟಿಯಾಗಲಿದೆ ಬಿಡುಗಡೆಯಾಗಲಿದೆ ಬಿವೈಡಿ ಅಟ್ಟೊ 3

2024ರ ವೇಳೆಗೆ ದೇಶಾದ್ಯಂತ ಬಿವೈಡಿ ಕಂಪನಿಯು ಒಟ್ಟು 18 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸುವ ಭರವಸೆ ನೀಡಿದ್ದು, ಹೆಚ್ಚುತ್ತಿರುವ ಇವಿ ವಾಹನಗಳಿಗೆ ದೇಶದ ಯಾವುದೇ ಪ್ರದೇಶಗಳಿಗೂ ನಿಲುಗಡೆ ಮುಕ್ತ ಚಾರ್ಜಿಂಗ್ ಒದಗಿಸುವ ಗುರಿಹೊಂದಲಾಗಿದೆ.

Article Published On: Saturday, September 10, 2022, 16:25 [IST]
English summary
Byd new atto 3 electric suv officially teased details
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+