ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಬದಲಾಗಿ ಶೀಘ್ರದಲ್ಲಿಯೇ ಮತ್ತೊಂದು ಮಹತ್ವದ ಹೆಜ್ಜೆಯಿರಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ಹೊಸ ಶುಲ್ಕ ಪಾವತಿ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾ ಮುಕ್ತಗೊಳಿಸುವ ಯೋಜನೆಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಹೌದು, ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್‌ಗಿಂತಲೂ ವೇಗವಾಗಿ ಶುಲ್ಕ ಸಂಗ್ರಹಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುತ್ತಿದ್ದು, ಹೊಸ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ರಷ್ಯಾ ಸರ್ಕಾರದೊಂದಿನ ಸಹಭಾಗೀತ್ವ ಯೋಜನೆ ಅಡಿ ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಟೋಲ್ ಪ್ಲಾಜಾಗಳನ್ನು ಹಂತ-ಹಂತವಾಗಿ ತೆಗೆದುಹಾಕುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಸ್ಯಾಟ್‌ಲೈಟ್ ತಂತ್ರಜ್ಞಾನ ಸಹಾಯದೊಂದಿಗೆ ಜಿಪಿಎಸ್ ಟೋಲ್ ಸಿಸ್ಟಂ ನಿರ್ವಹಿಸಲಿರುವ ಕೇಂದ್ರ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಕಡಿತಕ್ಕಾಗಿ ಟೋಲ್‌ಗಳಲ್ಲಿ ವಾಹನ ಸವಾರರು ಕಾಯುವುದನ್ನು ಸಹ ಇದು ತಪ್ಪಿಸಲಿದೆ. ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಸಂಗ್ರಹಿಸುವ ತಾಂತ್ರಿಕ ಕಾರಣಗಳಿಂದ ತಡವಾದಲ್ಲಿ ಕೆಲವೊಮ್ಮೆ ಇತರೆ ವಾಹನ ಸವಾರರು ಸಹ ಕಾಯಬೇಕಿದ್ದು, ಜಿಪಿಎಸ್ ಟೋಲ್ ಸಂಗ್ರಹ ಸೌಲಭ್ಯ ಜಾರಿ ಬಂದಲ್ಲಿ ಇಂತಹ ಯಾವುದೇ ತೊಂದರೆ ಉಂಟಾಗುವುದಿಲ್ಲ ಎನ್ನಬಹುದು.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಹೊಸ ವಾಹನಗಳಲ್ಲಿ ಈಗಾಗಲೇ ಕಡ್ಡಾಯವಾಗಿ ಜಿಪಿಎಸ್ ಸೌಲಭ್ಯವನ್ನು ಅಳವಡಿಕೆ ಹೊಂದಿರುವುದರಿಂದ ಹೊಸ ಟೋಲ್ ಶುಲ್ಕ ಸೌಲಭ್ಯ ಅವಡಿಕೆ ಸುಲಭವಾಗಲಿದೆ ಎಂದಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಸೌಲಭ್ಯ ಜಾರಿಗೆ ತರುವ ಸುಳಿವು ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಜಿಪಿಎಸ್ ಟೋಲ್ ಬಳಕೆಯ ಮತ್ತೊಂದು ಉಪಯೋಗ ಏನೆಂದರೆ ಹೆದ್ದಾರಿ ಬಳಕೆದಾರರು ಪ್ರಯಾಣ ಮಾಡಿದ ಕಿ.ಮೀ ಗೆ ಅನುಗುಣವಾಗಿ ಹಣ ಪಾವತಿ ಮಾಡುತ್ತಾರೆ. ಒಂದು ವೇಳೆ ಹೆಚ್ಚು ಪ್ರಯಾಣ ಮಾಡಿದರೆ ಹೆಚ್ಚು ಶುಲ್ಕ ಭರಿಸಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಕಡಿಮೆ ಅಂತರದಲ್ಲಿ ಪ್ರಯಾಣಿಸುವ ವಾಹನ ಮಾಲೀಕರು ಕೆಲವೊಮ್ಮೆ ಹೆಚ್ಚು ಟೋಲ್ ಪಾವತಿಸುವ ಸಂದರ್ಭಗಳು ಎದುರಾಗುತ್ತವೆ. ಆದರೆ ಜಿಪಿಎಸ್ ಟೋಲ್ ಸಂಗ್ರಹ ಸೌಲಭ್ಯದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸುವ ಸಮಸ್ಯೆ ಇರುವುದಿಲ್ಲ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಹೆದ್ದಾರಿಯನ್ನು ಪ್ರವೇಶಿಸುತ್ತಿದ್ದಂತೆ ವಾಹನದ ಮಾಹಿತಿಯನ್ನು ಸಂಗ್ರಹಿಸಿ ನಿಯಂತ್ರಣಾ ಕೊಠಡಿಗಳಿಗೆ ರವಾನಿಸುವ ಜಿಪಿಎಸ್ ಸಿಸ್ಟಂ ಸೌಲಭ್ಯವು ವಾಹನ ಸವಾರರು ಹೆದ್ದಾರಿಯಿಂದ ನಿರ್ಗಮಿಸುವ ತನಕವೂ ಪ್ರಯಾಣಿಸಿದ ಕಿ.ಮೀ ಮಾಹಿತಿಯನ್ನು ನಿಖರವಾಗಿ ಅಳತೆ ಹಾಕುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಪ್ರಯಾಣಿಸಿದ ಕಿ.ಮೀ ಗೆ ಅನುಗುಣವಾಗಿ ಶುಲ್ಕ ವಿಧಿಸಲಿದ್ದು, ಜಿಪಿಎಸ್ ಟೋಲ್ ಸಿಸ್ಟಂ ಸೌಲಭ್ಯಕ್ಕಾಗಿ ಅಳವಡಿಕೆ ಮಾಡಲಾಗಿರುವ ವಾಹನ ಮಾಲೀಕರ ಖಾತೆಯಲ್ಲಿ ನಿಗದಿತ ಮೊತ್ತವಿರಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಇದು ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್ ಮಾದರಿಯಲ್ಲಿಯೇ ಕಾರ್ಯನಿರ್ವಹಣೆ ಮಾಡಲಿದ್ದರೂ ಟೋಲ್ ಮುಕ್ತ ಸೌಲಭ್ಯದಿಂದ ವಾಹನಗಳ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ತಗ್ಗಲಿದೆ ಎನ್ನಬಹುದು.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಜಿಪಿಎಸ್ ಮೂಲಕ ವಾಹನಗಳ ಚಲನವಲನದ ಮೇಲೆ ಟ್ರ್ಯಾಕ್ ಮಾಡುವ ಹೊಸ ಸೌಲಭ್ಯವು ನಿರ್ಗಮನ ಮಾರ್ಗಗಳಲ್ಲಿ ಹಾಯ್ದುಹೋಗುವಾಗ ಸ್ವಯಂಚಾಲಿತವಾಗಿ ವಾಹನ ಮಾಲೀಕರ ಖಾತೆಯಿಂದ ನೇರವಾಗಿ ಶುಲ್ಕ ಸಂದಾಯವಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಇದೇ ಕಾರಣಕ್ಕೆ ಪ್ರತಿ ವಾಹನದಲ್ಲೂ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಹೊಸ ಟೋಲ್ ಸಂಗ್ರಹದ ಸೌಲಭ್ಯದ ಮೂಲಕ ಮುಂದಿನ ಐದು ವರ್ಷಗಳಲ್ಲಿ ರೂ. 1.34 ಲಕ್ಷ ಕೋಟಿ ಆದಾಯ ನೀರಿಕ್ಷೆಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಈ ಮೂಲಕ ಕೇಂದ್ರ ಹೆದ್ದಾರಿ ಪ್ರಾಧಿಕಾರವು ಹೊಸ ಟೋಲ್ ಶುಲ್ಕ ಸಂಗ್ರಹ ಸೌಲಭ್ಯವನ್ನು ಪಾರದರ್ಶಕವಾಗಿ ಜಾರಿಗೆ ತರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ತಡೆರಹಿತವಾಗಲಿವೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ತೆರಿಗೆಯನ್ನು ಹೆಚ್ಚಿಸುವ ನಿರ್ಧಾರ ಮಾಡಿದ್ದು, ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ. ವಿವಿಧ ವಾಹನಗಳಿಗೆ ಅನುಗುಣವಾಗಿ ರೂ. 10 ರಿಂದ ರೂ. 65 ತನಕ ಟೋಲ್ ಹೆಚ್ಚಳವಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಪ್ಲಾಜಾಗಳಿಗೆ ಮುಕ್ತಿ ಹಾಡಲಿದೆ ಹೊಸ ಜಿಪಿಎಸ್ ಟೋಲ್ ಸಿಸ್ಟಂ

ಸಣ್ಣ ವಾಹನಗಳಿಗೆ ರೂ. 10 ರಿಂದ ರೂ. 15 ತನಕ ಮತ್ತು ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗೆ ಟೋಲ್ ತೆರಿಗೆಯನ್ನು ರೂ. 65 ತನಕ ಹೆಚ್ಚಿಸಲಾಗುತ್ತಿದ್ದು, ಇಂಧನ ದರಗಳ ಹೆಚ್ಚಳದ ನಡುವೆ ದುಬಾರಿ ಟೋಲ್ ಪ್ರಯಾಣವನ್ನು ಮತ್ತಷ್ಟು ತುಟ್ಟಿಗೊಳಿಸಲಿದೆ.

Most Read Articles

Kannada
English summary
Central government is now planning to introduce a gps based toll system
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X