ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಸಿಟ್ರನ್‌ ಇಂಡಿಯಾ‌ ಕಂಪನಿಯು ತನ್ನ ಬಹುನೀರಿಕ್ಷಿತ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಮುಂದಿನ ತಿಂಗಳು ಜುಲೈ ಮಧ್ಯಂತರದಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಖರೀದಿಗಾಗಿ ಡೀಲರ್ಸ್ ಮಟ್ಟದಲ್ಲಿ ಬುಕಿಂಗ್ ಆರಂಭಗೊಂಡಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಭಾರತದಲ್ಲಿ ಸದ್ಯ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾರಾಟಗೊಳಿಸುತ್ತಿರುವ ಸಿಟ್ರನ್ ಕಂಪನಿಯು ಎರಡನೇ ಕಾರು ಮಾದರಿಗಾಗಿ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಹೊಸ ಮಾದರಿಯೊಂದಿಗೆ ಸಿಟ್ರನ್ ಕಂಪನಿಯು ಮಾರಾಟ ಜಾಲವನ್ನು ವಿಸ್ತರಿಸುವ ಸಿದ್ದತೆಯಲ್ಲಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಹೊಸ ಕಾರು ಮಾದರಿಯೊಂದಿಗೆ ಸಿಟ್ರನ್ ಕಂಪನಿಯು ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಈಗಾಗಲೇ ಅನಾವರಣಗೊಂಡಿರುವ ಹೊಸ ಕಾರಿನ ಉತ್ಪಾದನಾ ಆವೃತ್ತಿಯು ಅನಾವರಣಕ್ಕೆ ಸಜ್ಜುಗೊಂಡಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಸಿ5 ಏರ್‌ಕ್ರಾಸ್ ನಂತರ ಸಿ3 ಮಾದರಿಯನ್ನು ಸಹ ಸ್ಥಳೀಕರಣದೊಂದಿಗೆ ಉತ್ತಮ ಬೆಲೆಯೊಂದಿಗೆ ಬಿಡುಗಡೆಗೊಳಿಸುವ ಯೋಜನೆ ಹೊಂದಿರುವ ಸಿಟ್ರನ್ ಕಂಪನಿಯು ಶೇ.90 ರಷ್ಟು ಸ್ಥಳೀಕರಣದೊಂದಿಗೆ ಹೊಸ ಮಾದರಿಯನ್ನು ನಿರ್ಮಾಣಗೊಳಿಸುತ್ತಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಜಾಗತಿಕ ಮಾರುಕಟ್ಟೆಯಲ್ಲಿ ಸಿಟ್ರನ್ ಕಂಪನಿಯು ಐಷಾರಾಮಿ ಕಾರುಗಳ ಜೊತೆ ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲೂ ಮುಂಚೂಣಿ ಹೊಂದಿದ್ದು, ಕಂಪನಿಯು ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಕಂಪನಿಯ ಸಿ5 ಏರ್‌ಕ್ರಾಸ್ ಮಾದರಿಯು ಕೆಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ತುಸು ದುಬಾರಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಮುಂಬರುವ ಕಾರು ಸಿ3 ಕಾರು ಮಾದರಿಯು ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಬಜೆಟ್ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಹೊಸ ಸಿ3 ಕಂಪ್ಯಾಕ್ಟ್ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್ ಗಮನಸೆಳೆಯುತ್ತದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಹೊಸ ಕಾರಿನಲ್ಲಿ ಎರಡುಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸುಮಾರು 78 ಆಕ್ಸೆಸರಿಸ್‌ಗಳನ್ನು ಒಳಗೊಂಡಿರಲಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಕಪ್ ಹೋಲ್ಡರ್, ಸ್ಮಾರ್ಟ್‌ಫೋನ್ ಹೋಲ್ಡರ್, ಸೆಂಟರ್ ಕನ್ಸೊಲ್ ಜೊತೆಗೆ ಆರ್ಮ್ ರೆಸ್ಟ್ ಹೊಂದಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವುದು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ನಾಲ್ಕು ಸಿಂಗಲ್ ಮತ್ತು ಎರಡು ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಹೊಂದಿರಲಿವೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಹೊಸ ಕಾರು ಐಸ್ ವೈಟ್, ಪ್ಲ್ಯಾಟಿನಂ ಗ್ರೇ, ಆರ್ಟೆನ್ಸ್ ಗ್ರೇ, ಜೆಸ್ಟಿ ಆರೇಂಜ್ ಸಿಂಗಲ್ ಟೋನ್ ಬಣ್ಣಗಳೊಂದಿಗೆ ಆರ್ಟೆನ್ಸ್ ಗ್ರೇ ಮತ್ತು ಜೆಸ್ಟಿ ಆರೇಂಜ್ ರೂಫ್ ಹೊಂದಿರುವ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿರಲಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಹೊಸ ಕಾರಿನ ಅಧಿಕೃತ ಎಂಜಿನ್ ಮಾಹಿತಿಯು ಬಿಡುಗಡೆಯ ವೇಳೆಯಲ್ಲಿ ಲಭ್ಯವಾಗಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಫ್ಲೆಕ್ಸ್ ಫ್ಯೂಲ್ ತಂತ್ರಜ್ಞಾನ ಹೊಂದಿರುವ 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.

ಜುಲೈ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಸಿಟ್ರನ್ ಸಿ3 ಮಾದರಿಗಾಗಿ ಬುಕಿಂಗ್ ಶುರು

ಸಿ3 ಮಾದರಿಯು ಟಾಟಾ ಪಂಚ್ ಮಾದರಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಮಾದರಿಯು ಭಾರತದಲ್ಲಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದೆ.

More from DriveSpark

Article Published On: Saturday, June 4, 2022, 20:55 [IST]
English summary
Citroen c3 bookings open at dealerships ahead of launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+