ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ ತನ್ನ ಪ್ರಮುಖ ಕಾರು ಮಾದರಿಗಳನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ಇತ್ತೀಚೆಗೆ ಅನಾವರಣಗೊಳಿಸಲಾದ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಕಂಪನಿಯು ಲ್ಯಾಟಿನ್ ಅಮೆರಿಕದ ಪ್ರಮುಖ ಮಾರುಕಟ್ಟೆಗಳಲ್ಲಿ ಪರಿಚಯಿಸಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸಿಟ್ರನ್ ಕಂಪನಿಯು ಭಾರತದಲ್ಲಿ ಎರಡನೇ ಕಾರು ಮಾದರಿಯಾಗಿ ಸಿ3 ಹೊಸ ಕಾರು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರು ಭಾರತದಲ್ಲಿ ಬಿಡುಗಡೆಗೂ ಮುನ್ನ ಅರ್ಜೆಂಟೀನಾ ಸೇರಿದಂತೆ ದಕ್ಷಿಣ ಅಮೆರಿಕಾದ ಪ್ರಮುಖ ಮಾರುಕಟ್ಟೆಗಳಲ್ಲಿ ಇದೇ ತಿಂಗಳಾಂತ್ಯಕ್ಕೆ ಖರೀದಿಗೆ ಲಭ್ಯವಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಹೊಸ ಕಾರನ್ನು ಭಾರತದಲ್ಲಿ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುುವಿ ಎಂದಿರುವ ಸಿಟ್ರನ್ ಕಂಪನಿಯು ಲ್ಯಾಟಿನ್ ಅಮೆರಿಕದಲ್ಲಿಇದೇ ಕಾರು ಮಾದರಿ ಬಿಗ್ ಹ್ಯಾಚ್‌ಬ್ಯಾಕ್ ಮಾದರಿಯಾಗಿ ಪರಿಚಯಿಸಿದ್ದು, ಸಿಎಂಏಫ್ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಹೊಸ ಕಾರು ಆಯಾ ಮಾರುಕಟ್ಟೆಗಳಿಗೆ ಸ್ಥಳೀಯ ಬಿಡಿಭಾಗಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಮಾಡ್ಯುಲರ್ ಪ್ಲಾಟ್‌ಫಾರ್ಮ್ ಮೂಲಕ ಸ್ಥಳೀಯ ಮಟ್ಟದಲ್ಲಿಯೇ ಶೇ.90 ರಷ್ಟು ಬಿಡಿಭಾಗಗಳನ್ನು ಹೊಂದಲಿರುವ ಸಿಟ್ರನ್ ಕಾರುಗಳು ಬೆಲೆ ನಿಯಂತ್ರಣಕ್ಕಾಗಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಉನ್ನತ ಮಟ್ಟದ ಸ್ಥಳೀಕರಣವು ಸ್ಪರ್ಧಾತ್ಮಕ ಬೆಲೆಯನ್ನು ಖಚಿತಪಡಿಸುತ್ತದೆ. ಸಿಟ್ರನ್ ಕಂಪನಿಯು ಐಷಾರಾಮಿ ಕಾರುಗಳ ಜೊತೆ ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲೂ ಮುಂಚೂಣಿ ಹೊಂದಿದ್ದು, ಕಂಪನಿಯು ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸದ್ಯ ಮಾರುಕಟ್ಟೆಯಲ್ಲಿರುವ ಸಿ5 ಏರ್‌ಕ್ರಾಸ್ ಮಾದರಿಯು ಕೆಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ದುಬಾರಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಸಿ3 ಕಾರು ಮಾದರಿಯು ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸಿ3 ಕಂಪ್ಯಾಕ್ಟ್ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್ ಗಮನಸೆಳೆಯುತ್ತದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಹೊಸ ಕಾರಿನಲ್ಲಿ ಎರಡುಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಕಂಪನಿಯು ನೀಡುವ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸುಮಾರು 78 ಆಕ್ಸೆಸರಿಸ್‌ಗಳನ್ನು ಒಳಗೊಂಡಿರಲಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಕಪ್ ಹೋಲ್ಡರ್, ಸ್ಮಾರ್ಟ್‌ಫೋನ್ ಹೋಲ್ಡರ್, ಸೆಂಟರ್ ಕನ್ಸೊಲ್ ಜೊತೆಗೆ ಆರ್ಮ್ ರೆಸ್ಟ್ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ನಾಲ್ಕು ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಹೊಂದಿರಲಿವೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಹೊಸ ಕಾರು ಐಸ್ ವೈಟ್, ಪ್ಲ್ಯಾಟಿನಂ ಗ್ರೇ, ಆರ್ಟೆನ್ಸ್ ಗ್ರೇ, ಜೆಸ್ಟಿ ಆರೇಂಜ್ ಸಿಂಗಲ್ ಟೋನ್ ಬಣ್ಣಗಳೊಂದಿಗೆ ಆರ್ಟೆನ್ಸ್ ಗ್ರೇ ಮತ್ತು ಜೆಸ್ಟಿ ಆರೇಂಜ್ ರೂಫ್ ಹೊಂದಿರುವ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿರಲಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಸದ್ಯ ಕಾರು ಮಾದರಿಯನ್ನು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳಿಸಿರುವ ಸಿಟ್ರನ್ ಕಂಪನಿಯು ತಾಂತ್ರಿಕ ಅಂಶಗಳ ಮಾಹಿತಿಯ ಹೊರತಾಗಿಯು ಎಂಜಿನ್ ಆಯ್ಕೆಯ ಕುರಿತಾಗಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಹೊಸ ಕಾರಿನ ಬಿಡುಗಡೆಯ ವೇಳೆಯಲ್ಲಿ ಎಂಜಿನ್ ಮಾಹಿತಿಯು ಲಭ್ಯವಾಗಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಫ್ಲೆಕ್ಸ್ ಫ್ಯೂಲ್ ತಂತ್ರಜ್ಞಾನ ಹೊಂದಿರುವ 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಫ್ಲೆಕ್ಸ್ ಫ್ಯೂಲ್ ಎಂಜಿನ್ ತಂತ್ರಜ್ಞಾನ ಹೊಂದಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿಯು ಸಂಪೂರ್ಣವಾಗಿ ಎಥೆನಾಲ್ ಇಲ್ಲವೇ ಸಂಪೂರ್ಣವಾಗಿ ಪೆಟ್ರೋಲ್ ಮೂಲಕ ಸಂಚರಿಸುವಂತೆ ಅಭಿವೃದ್ದಿಪಡಿಸಲಾಗುತ್ತಿದ್ದು, ಲಭ್ಯವಿರುವ ಇಂಧನಕ್ಕೆ ಹೊಂದಾಣಿಕೆಗೊಂಡು ಎಂಜಿನ್ ಚಾಲನೆಗೊಳ್ಳುವ ಪ್ರಕ್ರಿಯೆ ಇದಾಗಿದೆ.

ಭಾರತದಲ್ಲಿ ಬಿಡುಗಡೆಗೂ ಮುನ್ನ ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಗೊಂಡ ಸಿಟ್ರನ್ ಸಿ3

ಹೊಚ್ಚ ಹೊಸ ಸಿ3 ಮಾದರಿಯು ವಿದೇಶಿ ಮಾರುಕಟ್ಟೆಯಲ್ಲಿ ಆವೃತ್ತಿಯ ಬೆಲೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದೆ.

More from DriveSpark

Article Published On: Monday, January 17, 2022, 14:50 [IST]
English summary
Citroen c3 debuts in latin america india launch soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+