ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸಿಟ್ರನ್ ಇಂಡಿಯಾ ಕಂಪನಿಯು ಹೊಸ ಸಿ3 ಮೈಕ್ರೊ ಎಸ್‌ಯುವಿ ಬಿಡುಗಡೆಗೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿಗೆ ಬೇಡಿಕೆ ಹೆಚ್ಚುತ್ತಿರುವಾಗಲೇ ಕಂಪನಿಯು ಹೊಸ ಕಾರಿನ ಬೆಲೆಯನ್ನು ಪರಿಷ್ಕರಣೆ ಮಾಡಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸಿ3 ಮಾದರಿಯ ಮೂಲಕ ಸಿಟ್ರನ್ ಕಂಪನಿಯು ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರಿಗಾಗಿ ಈಗಾಗಲೇ ಭಾರೀ ಪ್ರಮಾಣದ ಬುಕಿಂಗ್ ಕೂಡಾ ಹರಿದುಬರುತ್ತಿದೆ. ಹೊಸ ಕಾರು ಸದ್ಯ ಕೆಲವೇ ನಗರಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮಾರಾಟ ಜಾಲ ವಿಸ್ತರಣೆಗೂ ಮುನ್ನ ಹೊಸ ಕಾರಿನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸಿಟ್ರನ್ ಕಂಪನಿಯ ಹೊಸದರ ಪಟ್ಟಿಯಲ್ಲಿ ಸಿ3 ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 10 ಸಾವಿರದಿಂದ ರೂ. 18 ಸಾವಿರದಷ್ಟು ದುಬಾರಿಯಾಗಿದ್ದು, ದರ ಹೆಚ್ಚಳ ನಂತರ ಕಾರಿನ ಬೆಲೆಯನ್ನು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 5.88 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.15 ಲಕ್ಷ ಬೆಲೆ ಹೊಂದಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಹೊಸ ಕಾರಿನ ಟಾಪ್ ಎಂಡ್ ವೆರಿಯೆಂಟ್ 1.2 ಟರ್ಬೊ ಫೀಲ್ ಡ್ಯುಯಲ್ ಟೋನ್ ವೈಬ್ ಪ್ಯಾಕ್ ಮಾದರಿಯಲ್ಲಿ ಬೆಲೆಯಲ್ಲಿ ರೂ. 10 ಸಾವಿರದಷ್ಟು ಹೆಚ್ಚಳವಾಗಿದ್ದರೆ ಇನ್ನುಳಿದ ಎಲ್ಲಾ ವೆರಿಯೆಂಟ್‌ಗಳು ರೂ. 18 ಸಾವಿರದಷ್ಟು ದುಬಾರಿಯಾಗಿವೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸದ್ಯ ಸಿಟ್ರನ್ ಕಂಪನಿಯು ದೇಶದ ಪ್ರಮುಖ 19 ನಗರಗಳಲ್ಲಿ ಸುಮಾರು 24 ಶೋರೂಂಗಳಲ್ಲಿ ಹೊಸ ಕಾರನ್ನು ಮಾರಾಟಾ ಮಾಡುತ್ತಿದ್ದು, ಈ ವರ್ಷಾಂತ್ಯಕ್ಕೆ ಮತ್ತಷ್ಟು ಹೊಸ ಶೋರೂಂ ಆರಂಭಿಸುವ ಸಿದ್ದತೆಯಲ್ಲಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಹೊಸ ಕಾರು ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸಿ3 ಕಾರು ಮಾದರಿಯು ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸಿಟ್ರನ್ ಕಂಪನಿಯು ಹೊಸ ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಮಾದರಿಯು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್‌ ಮತ್ತು ಹೈ ಎಂಡ್ ಮಾದರಿಯಲ್ಲಿ ಟರ್ಬೊ ಚಾರ್ಜ್ ವೈಶಿಷ್ಟ್ಯತೆಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಆರಂಭಿಕ ವೆರಿಯೆಂಟ್‌ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ನೀಡಿದ್ದರೆ ಹೈ ಎಂಡ್ ಮಾದರಿಯಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಮ್ಯಾನುವಲ್ ಆಯ್ಕೆ ಮಾತ್ರ ನೀಡುತ್ತಿರುವ ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಆರಂಭಿಕ ಮಾದರಿಯು 82 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಟರ್ಬೊ ಪೆಟ್ರೋಲ್ ಆವೃತ್ತಿಯು 110 ಬಿಎಚ್‌ಪಿ, 190 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಲೈವ್ ವೆರಿಯೆಂಟ್‌ನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮಾತ್ರ ಆಯ್ಕೆ ಲಭ್ಯವಿದ್ದರೆ ಫೀಲ್ ವೆರಿಯೆಂಟ್‌ನಲ್ಲಿ ನ್ಯಾಚುರಲಿ ಆಸ್ಪರೆಟೆಡ್ ಮತ್ತು ಟರ್ಬೊ ಪೆಟ್ರೋಲ್ ಆಯ್ಕೆ ಲಭ್ಯವಿದೆ. ಹಾಗೆಯೇ ಹೊಸ ಮೈಕ್ರೊ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್‌ನೊಂದಿಗೆ ಗಮನಸೆಳೆಯುತ್ತದೆ.

ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್, ಸ್ಪ್ಲಿಟ್ ಟೈಲ್ ಲ್ಯಾಂಪ್ ಮತ್ತು 180 ಗ್ರೌಂಡ್ ಕಿಯರೆನ್ಸ್ ಆಕರ್ಷಕವಾಗಿದೆ. ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಿಡಿಭಾಗಗಗಳಿಂತಲೂ ಹೆಚ್ಚು ಆಕರ್ಷವಾಗಿರುವ ಮತ್ತು ಚಾಲನೆಗೆ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ಸಹ ಪರಿಚಯಿಸಲಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸುಮಾರು 78 ಆಕ್ಸೆಸರಿಸ್‌ಗಳನ್ನು ಒಳಗೊಂಡಿರಲಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸಿ3 ಮಾದರಿಯ ಮತ್ತೊಂದು ವಿಶೇಷವೆಂದರೆ ಕಂಪನಿಯು ಬಜೆಟ್ ಕಾರಿನಲ್ಲೂ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿದ್ದು, ಎಲ್ಇಡಿ ಡಿಆರ್‌ಎಲ್‌, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಫೋಲ್ಡ್-ಫ್ಲಾಟ್ ಹಿಂದಿನ ಸೀಟ್, ಒನ್-ಟಚ್ ಡೌನ್ ವಿಂಡೋಸ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಇದಲ್ಲದೆ ಹೊಸ ಕಾರಿನಲ್ಲಿ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಸ್ಮಾರ್ಟ್‌ಫೋನ್ ಹೋಲ್ಡರ್ ಮತ್ತು ಸೆಂಟರ್ ಕನ್ಸೊಲ್ ಹೊಂದಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವುದು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ಆರು ಸಿಂಗಲ್ ಟೋನ್ ಮತ್ತು ನಾಲ್ಕು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿಲಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಸಿಟ್ರನ್ ಸಿ3 ಮೈಕ್ರೊ ಎಸ್‌ಯುವಿ ಬೆಲೆ ಹೆಚ್ಚಳ

ಇನ್ನು ಹೊಸ ಕಾರಿನಲ್ಲಿ ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್, ಎಂಜಿನ್ ಇಮೊಬಿಲೈಜರ್ ಮತ್ತು ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್ ಸೌಲಭ್ಯಗಳಿವೆ.

Most Read Articles

Kannada
English summary
Citroen c3 micro suv receives its first price hike since launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X