ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಸಿಟ್ರನ್ ಇಂಡಿಯಾ ಕಂಪನಿಯು ಸಿ5 ಏರ್‌ಕ್ರಾಸ್ ಎಸ್‌ಯುವಿ ಮತ್ತು ಸಿ3 ಮೈಕ್ರೊ ಎಸ್‌ಯುವಿ ಬಿಡುಗಡೆಯ ನಂತರ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿಯೇ ಮಧ್ಯಮ ಕ್ರಮಾಂಕದ 7 ಸೀಟರ್ ಎಸ್‌ಯುವಿ ಬಿಡುಗಡೆಗೆ ಯೋಜನೆ ರೂಪಿಸುತ್ತಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಸಿ3 ಮೈಕ್ರೊ ವಿನ್ಯಾಸ ಆಧರಿಸಿರುವ ಹೊಸ ಎಸ್‌ಯುವಿಯು 7 ಸೀಟರ್ ಸೌಲಭ್ಯದ ಕಿಯಾ ಕಾರೆನ್ಸ್ ಮತ್ತು ಮಾರುತಿ ಸುಜುಕಿ ಎರ್ಟಿಗಾ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತಾಗಿ ಕಂಪನಿಯು ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಹೊಸ 7 ಎಸ್‌ಯುವಿ ಕುರಿತಾಗಿ ಸಿಟ್ರನ್ ಕಂಪನಿಯು ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಕಾರಿನ ರೋಡ್ ಟೆಸ್ಟಿಂಗ್ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮುಂಬರುವ ಕೆಲವು ತಿಂಗಳಿನಲ್ಲಿ ಹೊಸ ಕಾರು ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

2023ರಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸಿಟ್ರನ್ ಹೊಸ ಕಾರು ಮಾದರಿಯು ಅನಾವರಣಗೊಳ್ಳಬಹುದಾಗಿದ್ದು, ಹೊಸ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ರೂ. 9 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಮುಂಬರುವ ಐದು ವರ್ಷಗಳಲ್ಲಿ ವಿವಿಧ ಸೆಗ್ಮೆಂಟ್‌ನಲ್ಲಿ ಒಟ್ಟು 6 ಹೊಸ ಕಾರು ಮಾದರಿಗಳನ್ನು ಹೊಂದುವ ಗುರಿ ಹೊಂದಿರುವ ಸಿಟ್ರನ್ ಕಂಪನಿಯು ಸಾಮಾನ್ಯ ಕಾರುಗಳ ಜೊತೆಗೆ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡಬಹುದಾಗಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಸಿ3 ಮೈಕ್ರೊ ಎಸ್‌ಯುವಿಯು ಭಾರತದಲ್ಲಿ ಸದ್ಯ ಬಜೆಟ್ ಮಾದರಿಯಾಗಿದ್ದರೆ ಸಿ5 ಏರ್‌ಕ್ರಾಸ್ ಎಸ್‌ಯುವಿಯು ಮಧ್ಯಮ ಕ್ರಮಾಂಕದ ಐಷಾರಾಮಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಇನ್ನು ಸಿಟ್ರನ್ ಕಂಪನಿಯು ಶೀಘ್ರದಲ್ಲಿಯೇ ಸಿ3 ಹೊಸ ಕಾರು ಮಾದರಿಯಲ್ಲಿ ಸಿಎನ್‌ಜಿ ಆವೃತ್ತಿಯ ಬಿಡುಗಡೆಯ ಸಿದ್ದತೆಯಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಉತ್ಪಾದನಾ ಕಂಪನಿಗಳು ಸಹ ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುತ್ತಿವೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ದುಬಾರಿ ಇಂಧನಗಳ ಪರಿಣಾಮ ಹೊಸ ಕಾರು ಖರೀದಿದಾರರು ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ಜಿ ಕಾರುಗಳತ್ತ ಮುಖ ಮಾಡುತ್ತಿದ್ದು, ಸಿಎನ್‌ಜಿ ಕಾರುಗಳು ಪೆಟ್ರೋಲ್ ಕಾರುಗಳೊಂದಿಗೆ ಸಂಯೋಜನೆ ಹೊಂದಿವೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಇವು ಡೀಸೆಲ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಜೊತೆಗೆ ಪರಿಸರ ಸ್ನೇಹಿ ಮಾದರಿಗಳಾಗಿವೆ. ಹೀಗಾಗಿ ಹೊಸ ಕಾರು ಬಿಡುಗಡೆಯಾಗಿ ಸಿಟ್ರನ್ ಕಂಪನಿಯು ಸಿ3 ಸಿಎನ್‌ಜಿ ಮಾದರಿಯ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಮಾದರಿಯು ಮುಂಬರುವ ಕೆಲವು ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಪರ್ಯಾಯ ಇಂಧನ ವ್ಯವಸ್ಥೆಯಾಗಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) [Compressed natural gas] ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದ್ದು, ಮಿತವ್ಯಯವೆನಿಸಿಕೊಂಡಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಹೀಗಿದ್ದರೂ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ಜಿ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರಲಿದ್ದು, ಆದರೆ ಅದರಲ್ಲಿನ ಇಂಧನ ದಕ್ಷತೆ ಹೆಚ್ಚಿರುತ್ತದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಂಪನಿಗಳು ಸಿಎನ್‌ಜಿ ಮಾದರಿಗಳ ಮೇಲೆ ಗಮನಹರಿಸುತ್ತಿದ್ದು, ಸಿಟ್ರನ್ ಸಿ3 ಕಾರು ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಕಿಟ್ ಹೊಂದಿರುತ್ತದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಸಿಟ್ರನ್ ಕಂಪನಿಯು ಹೊಸ ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಮಾದರಿಯು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್‌ ಮತ್ತು ಹೈ ಎಂಡ್ ಮಾದರಿಯಲ್ಲಿ ಟರ್ಬೊ ಚಾರ್ಜ್ ವೈಶಿಷ್ಟ್ಯತೆಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಆರಂಭಿಕ ವೆರಿಯೆಂಟ್‌ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ನೀಡಿದ್ದರೆ ಹೈ ಎಂಡ್ ಮಾದರಿಯಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಮ್ಯಾನುವಲ್ ಆಯ್ಕೆ ಮಾತ್ರ ನೀಡುತ್ತಿರುವ ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಆರಂಭಿಕ ಮಾದರಿಯು 82 ಬಿಎಚ್‌ಪಿ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿರುವ ಟರ್ಬೊ ಪೆಟ್ರೋಲ್ ಆವೃತ್ತಿಯು 110 ಬಿಎಚ್‌ಪಿ, 190 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಭಾರತದಲ್ಲಿ 7 ಸೀಟರ್ ಸೌಲಭ್ಯದ ಮಧ್ಯಮ ಕ್ರಮಾಂಕದ ಎಸ್‌ಯುವಿ ಬಿಡುಗಡೆಗೆ ಮುಂದಾದ ಸಿಟ್ರನ್

ಲೈವ್ ವೆರಿಯೆಂಟ್‌ನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮಾತ್ರ ಆಯ್ಕೆ ಲಭ್ಯವಿದ್ದರೆ ಫೀಲ್ ವೆರಿಯೆಂಟ್‌ನಲ್ಲಿ ನ್ಯಾಚುರಲಿ ಆಸ್ಪರೆಟೆಡ್ ಮತ್ತು ಟರ್ಬೊ ಪೆಟ್ರೋಲ್ ಆಯ್ಕೆ ಲಭ್ಯವಿದೆ. ಸಿ3 ಕಾರು ಮಾದರಿಯು ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರಿನ ಆರಂಭಿಕ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.06 ಲಕ್ಷ ಬೆಲೆಯೊಂದಿಗೆ ಎಂಟ್ರಿ ಲೆವೆಲ್ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
Citroen new c3 7 seats suv spied while testing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X