ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ಮುಂದಿನ ತಿಂಗಳು 20ರಂದು ತನ್ನ ಹೊಸ ಸಿ3 ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು ಕಾರು ಮಾರಾಟವನ್ನು ವಿಸ್ತರಿಸುತ್ತಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಪ್ರಸ್ತುತ ಸಿಟ್ರನ್ ಕಂಪನಿಯು ಭಾರತದಲ್ಲಿ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು ಮತ್ತಷ್ಟು ನಗರಗಳಲ್ಲಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುವ ಸಿದ್ದತೆಯಲ್ಲಿದೆ. ಸದ್ಯ ಸಿಟ್ರನ್ ಕಂಪನಿಯು ನಮ್ಮ ಬೆಂಗಳೂರು ಸೇರಿದಂತೆ ಪ್ರಮುಖ 10 ಹತ್ತು ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿದ್ದು, ಹೊಸ ಸಿ3 ಬಿಡುಗಡೆ ಮುನ್ನ ಕಂಪನಿಯು ಆರು ಹೊಸ ನಗರಗಳಲ್ಲಿ ಮಾರಾಟ ಆರಂಭಿಸುವ ಯೋಜನೆಯಲ್ಲಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ಸದ್ಯ ಬೆಂಗಳೂರು, ದೆಹಲಿ, ಗುರುಗ್ರಾಮ್, ಪುಣೆ, ಮುಂಬೈ, ಹೈದರಾಬಾದ್, ಚೆನ್ನೈ, ಕೊಯಮತ್ತೂರು, ಅಹಮದಾಬಾದ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ ಮತ್ತು ಸೂರತ್‌ನಲ್ಲಿ ಡೀಲರ್‌ಶಿಪ್‌ಗಳನ್ನು ಹೊಂದಿದ್ದು, ಕಂಪನಿಯು ಇದೀಗ ಹೊಸದಾಗಿ ಚಂಡೀಗಢ, ಜೈಪುರ್, ಇಂಧೋರ್, ನಾಗ್ಪುರ್, ವಿಶಾಖಪಟ್ಟಣಂ ಮತ್ತು ಕೋಯಿಕ್ಕೋಡ್‌ನಲ್ಲಿ ಹೊಸ ಡೀಲರ್ಸ್ ತೆರೆಯುತ್ತಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಅತ್ಯಾಧುನಿಕ ಸಂಪರ್ಕಿತ ಸೌಲಭ್ಯಗಳನ್ನು ಹೊಂದಿರುವ ಲಾ ಮೈಸನ್ ಸಿಟ್ರೊಯೆನ್ ಡೀಲರ್ಸ್ ತೆರೆಯುತ್ತಿರುವ ಸಿಟ್ರನ್ ಕಂಪನಿಯು ಗ್ರಾಹಕರಿಗೆ ವಿಶ್ವದರ್ಜೆಯ ಮಾರಾಟ ಸೇವೆಗಳನ್ನು ನೀಡಲಿದ್ದು, ಹೊಸ ಕಾರು ಮಾದರಿಯ ಮೂಲಕ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುನ ನೀರಿಕ್ಷೆಯಲ್ಲಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹೊಸ ಕಾರುಗಳ ಉತ್ಪಾದನೆಗಾಗಿ ಸ್ಥಳೀಯವಾಗಿ ಲಭ್ಯವಾಗುವ ಬಿಡಿಭಾಗಗಳಿಗೆ ಆದ್ಯತೆ ನೀಡಿರುವ ಸಿಟ್ರನ್ ಕಂಪನಿಯು ಶೇ.90 ರಷ್ಟು ಸ್ಥಳೀಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಸಿ5 ಏರ್‌ಕ್ರಾಸ್ ನಂತರ ಇದೀಗ ಸಿ3 ಮಾದರಿಯನ್ನು ಸಹ ಸ್ಥಳೀಕರಣದೊಂದಿಗೆ ಉತ್ತಮ ಬೆಲೆಯೊಂದಿಗೆ ಬಿಡುಗಡೆಗೊಳಿಸಲಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹೊಸ ಕಾರು ಲೈವ್ ಮತ್ತು ಫೀಲ್ ಎನ್ನುವ ಎರಡು ಮಾದರಿಗಳೊಂದಿಗೆ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಸಿ3 ಕಾರು ಮಾದರಿಯು ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಬಜೆಟ್ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹೊಸ ಕಾರು 3,981 ಎಂಎಂ ಉದ್ದಳತೆಯೊಂದಿಗೆ 1,733 ಎಂಎಂ ಅಗಲ, 1,586 ಎಂಎಂ ಎತ್ತರ ಮತ್ತು 2,540 ಎಂಎಂ ವ್ಹೀಲ್‌ಬೆಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರಲಿದ್ದು, ಪ್ರತಿಸ್ಪರ್ಧಿ ಮಾದರಿಗಳಿಂತಲೂ 42 ಎಂಎಂ ನಷ್ಟು ಹೆಚ್ಚುವರಿ ವ್ಹೀಲ್‌ಬೆಸ್‌ನೊಂದಿಗೆ ಹಿಂಬದಿಯ ಆಸನದಲ್ಲಿರುವ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಒದಗಿಸಲಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಸಿ3 ಕಂಪ್ಯಾಕ್ಟ್ ಎಸ್‌ಯುವಿಯು ಪ್ರತಿಸ್ಪರ್ಧಿ ಕಾರು ಮಾದರಿಗಿಂತಲೂ ಸಾಕಷ್ಟು ಆಕರ್ಷಕವಾಗಿದ್ದು, ದೊಡ್ಡದಾದ ಗ್ರಿಲ್‌ನೊಂದಿಗೆ ಕ್ರೋಮ್ ಫಿನ್ಸಿಂಗ್ ಹೊಂದಿರುವ ಸಿಟ್ರನ್ ಲೊಗೊ, ವಿಭಜಿತವಾಗಿರುವ ಹೆಡ್‌ಲ್ಯಾಂಪ್, ಡಿಆರ್‌ಎಲ್, ಲೊಗೊಗೆ ಹೊಂದಾಣಿಕೆಯಾಗುವ ಎಕ್ಸ್ ಶೇಫ್ ಡಿಸೈನ್ ಗಮನಸೆಳೆಯುತ್ತದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹಾಗೆಯೇ ಹೊಸ ಕಾರಿನಲ್ಲಿ ಎರಡು ಬದಿಯಲ್ಲೂ ಸ್ಕಫ್ ಪ್ಲೇಟ್, ಏರ್ ಪ್ಯಾಕೇಟ್ ಡಿಸೈನ್, ಅಲಾಯ್ ವ್ಹೀಲ್, ರೂಫ್ ರೈಲ್ಸ್, ಡ್ಯುಯಲ್ ಟೋನ್ ರೂಫ್ ಮತ್ತು ಸ್ಪ್ಲಿಟ್ ಟೈಲ್ ಲ್ಯಾಂಪ್‌ಗಳು ಆಕರ್ಷಕವಾಗಿವೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹೊಸ ಕಾರಿನ ಕ್ಯಾಬಿನ್ ವೈಶಿಷ್ಟ್ಯತೆಯು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ 10-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‍‌ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಕ್ವಿಕ್ ಚಾರ್ಜಿಂಗ್ ಯುಎಸ್‌ಬಿ ಸಾಕೆಟ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೊಲ್, 315 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯವಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರು ಅತ್ಯುತ್ತಮ ಕ್ಯಾಬಿನ್ ಸ್ಥಳಾವಕಾಶದೊಂದಿಗೆ ಹಿಂಬದಿಯ ಪ್ರಯಾಣಿಕರಿಗೆ 653 ಎಂಎಂ ಲೆಗ್‌ರೂಂನೊಂದಿಗೆ 2 ಲೀಟರ್ ಸಾಮರ್ಥ್ಯದ ಡೋರ್ ಪ್ಯಾಕೇಟ್, ಕಪ್ ಹೋಲ್ಡರ್, ಸ್ಮಾರ್ಟ್‌ಫೋನ್ ಹೋಲ್ಡರ್, ಸೆಂಟರ್ ಕನ್ಸೊಲ್ ಜೊತೆಗೆ ಆರ್ಮ್ ರೆಸ್ಟ್ ಹೊಂದಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಸಿ3 ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಆಕ್ಸೆಂಟ್ ನೀಡುತ್ತಿರುವ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದ್ದು, ಹೊಸ ಕಾರು ಒಟ್ಟು ನಾಲ್ಕು ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಹೊಂದಿರಲಿವೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹೊಸ ಕಾರು ಐಸ್ ವೈಟ್, ಪ್ಲ್ಯಾಟಿನಂ ಗ್ರೇ, ಆರ್ಟೆನ್ಸ್ ಗ್ರೇ, ಜೆಸ್ಟಿ ಆರೇಂಜ್ ಸಿಂಗಲ್ ಟೋನ್ ಬಣ್ಣಗಳೊಂದಿಗೆ ಆರ್ಟೆನ್ಸ್ ಗ್ರೇ ಮತ್ತು ಜೆಸ್ಟಿ ಆರೇಂಜ್ ರೂಫ್ ಹೊಂದಿರುವ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿರಲಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಇನ್ನು ಹೊಸ ಕಾರಿನಲ್ಲಿ ಕಂಪನಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಪರಿಚಯಿಸುತ್ತಿದ್ದು, 1.2-ಲೀಟರ್ ಪೆಟ್ರೋಲ್ ಮಾದರಿಯನ್ನು ಕಂಪನಿಯು ನ್ಯಾಚುರಲಿ ಆಸ್ಪೆರೆಡ್ ಮತ್ತು ಟರ್ಬೊ ಮಾದರಿಗಳಲ್ಲಿ ಅಭಿವೃದ್ದಿಗೊಳಿಸಿದೆ.

ಸಿ3 ಕಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಕಾರು ಮಾರಾಟವನ್ನು ವಿಸ್ತರಿಸಲಿದೆ ಸಿಟ್ರನ್

ಹೊಸ ಕಾರಿನಲ್ಲಿ ಕಂಪನಿಯು ಸದ್ಯಕ್ಕೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡುತ್ತಿದ್ದು, 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 81 ಬಿಎಚ್‌ಪಿ, 115 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.2-ಲೀಟರ್ ಟರ್ಬೊ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108 ಬಿಎಚ್‌ಪಿ, 190 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

More from DriveSpark

Article Published On: Tuesday, June 14, 2022, 8:45 [IST]
English summary
Citroen plans to open new dealership ahead of c3 launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+