Just In
- 11 hrs ago
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- 11 hrs ago
ಮ್ಯೂಸಿಕಲ್ ಸ್ಕೂಟರ್ನ ವಿಡಿಯೋ ಹಂಚಿಕೊಂಡು "ಭಾರತದಲ್ಲಿ ಮಾತ್ರ" ಎಂದ ಆನಂದ್ ಮಹೀಂದ್ರಾ
- 13 hrs ago
ಕೋಟಿ ಬೆಲೆಯ ಮರ್ಸಿಡಿಸ್ ಜಿಎಲ್ಎಸ್ ಎಸ್ಯುವಿ ಖರೀದಿಸಿದ ನಟ ವರುಣ್ ಧವನ್
- 15 hrs ago
ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು
Don't Miss!
- News
Breaking; ಸೇನಾ ಆಯ್ಕೆ ಪೂರ್ವ ತರಬೇತಿಗಾಗಿ 3 ಶಾಲೆ ಸ್ಥಾಪನೆ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Movies
ಕಾರ್ತಿಕ್ ಆರ್ಯನ್ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಕ್ಲಾಸಿಕ್ ಕಾರುಗಳಿಗಿಂತಲೂ ಹೊಸ ಐಸಿ ಕಾರುಗಳು ಮತ್ತು ಇವಿ ಕಾರುಗಳೇ ಪರಿಸರಕ್ಕೆ ಹೆಚ್ಚು ಡೇಂಜರ್
ಪರಿಸರ ಸಂರಕ್ಷಣೆಗಾಗಿ ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಬಳಕೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪರಿಸರ ಸ್ನೇಹಿ ಎನ್ನುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಇವಿ ಕಾರುಗಳು ಮತ್ತು ಮಾಲಿನ್ಯ ತಡೆಯುವ ಹೊಸ ತಂತ್ರಜ್ಞಾನ ಪ್ರೇರಿತ ಸಾಮಾನ್ಯ ಕಾರುಗಳ ಬಳಕೆ ಹೆಚ್ಚುತ್ತಿದೆ.

ಸುಧಾರಿತ ತಂತ್ರಜ್ಞಾನ ಪ್ರೇರಿತ ಪೆಟ್ರೋಲ್, ಹೈಬ್ರಿಡ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳ ಬಳಕೆಯು ಹೆಚ್ಚುತ್ತಿದ್ದು, ಮಾಲಿನ್ಯ ಪ್ರಮಾಣವನ್ನು ತಡೆಯಲು ಹಳೆಯ ವಾಹನಗಳ ಮೇಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಆದರೆ ಅಧ್ಯಯನವೊಂದರ ಪ್ರಕಾರ ಕ್ಲಾಸಿಕ್ ಕಾರುಗಳಿಂತಲೂ ಹೆಚ್ಚು ಹೊಸ ತಂತ್ರಜ್ಞಾನ ಪ್ರೇರಿತ ಇಂಧನ ಆಧರಿತ ಕಾರುಗಳು ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳಿಂದಲೇ ಪರಿಸರ ಹೆಚ್ಚು ಹಾನಿ ಎಂಬ ಅಂಶವನ್ನು ಬಹಿರಂಗಪಡಿಸಲಾಗಿದೆ.

ಹೌದು, ಕ್ಲಾಸಿಕ್ ಮತ್ತು ವಿಶೇಷ ಕಾರುಗಳ ವಿಮಾ ಪೂರೈಕೆದಾರರಾದ ಕಂಪನಿಯಾಗಿರುವ ಫುಟ್‌ಮ್ಯಾನ್ ಜೇಮ್ಸ್ ಹೊಸ ಅಧ್ಯಯನ ವರದಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಆಧುನಿಕ ವಾಹನಗಳಿಗಿಂತಲೂ ಕ್ಲಾಸಿಕ್ ಕಾರುಗಳು ಪರಿಸರಕ್ಕೆ ಕಡಿಮೆ ಹಾನಿಕಾರಕ ಎಂದು ಹೇಳಿಕೊಂಡಿದೆ.

ಆಧುನಿಕ ಕಾರುಗಳಿಗಿಂತಲೂ ಭಿನ್ನವಾಗಿರುವ ಕ್ಲಾಸಿಕ್ ಕಾರುಗಳ ವಾರ್ಷಿಕವಾಗಿ ಬಳಕೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನವನ್ನು ಮಾಡಲಾಗಿದ್ದು, ಆಧುನಿಕ ಕಾರುಗಳು ದೈನಂದಿನ ಆಧಾರದ ಮೇಲೆ ಹೆಚ್ಚಾಗಿ ಬಳಸಲ್ಪಡುವುದಲ್ಲದೆ ಅವುಗಳ ಉತ್ಪಾದನೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಇಂಗಾಲವನ್ನು ಉತ್ಪಾದಿಸುತ್ತವೆ.

ಹೊಸ ಅಧ್ಯಯನ ವರದಿಯ ಪ್ರಕಾರ, ಯುಕೆಯಲ್ಲಿನ ಕ್ಲಾಸಿಕ್ ಕಾರೊಂದು ವಾರ್ಷಿಕವಾಗಿ ಸರಾಸರಿಯಾಗಿ 1,931 ಕಿ.ಮೀ ಪ್ರಮಾಣದ ಮೂಲಕ ಗರಿಷ್ಠ 563 ಕೆಜಿ (1,241 lb) Co2 ಅನ್ನು ಹೊರಸೂಸುತ್ತವೆ.

ಆದರೆ ಆಧುನಿಕ ವಾಹನಗಳು ಪ್ರತಿ ಕಿ.ಮೀ ಗೆ ಗಣನೀಯವಾಗಿ ಕಡಿಮೆ CO2 ಹೊರಸೂಸುವಿಕೆಯನ್ನು ಹೊಂದಿದ್ದರೂ ಕೂಡಾ ಅವುಗಳು ವಾರ್ಷಿಕವಾಗಿ ಹೆಚ್ಚಿನ ದೂರ ಕ್ರಮಿಸುವುದರಿಂದ ಮತ್ತು ಕಾರ್ಖಾನೆಯಿಂದ ಗಣನೀಯವಾಗಿ ದೊಡ್ಡ ಪ್ರಮಾಣದಲ್ಲಿ ಇಂಗಾಲದ ಉತ್ಪಾದನೆಗೆ ಕಾರಣವಾಗುತ್ತವೆ.

ಯುರೋಪಿನಲ್ಲಿ ಫೋಕ್ಸ್‌ವ್ಯಾಗನ್ ಗಾಲ್ಫ್‌ನಂತಹ ಕಾರುಗಳು ಸರಾಸರಿ ಪ್ರಯಾಣಿಕ ಕಾರಿನ ಉತ್ಪಾದನೆಯ ಸಮಯದಲ್ಲಿ ವಾರ್ಷಿಕ ಇಂಗಾಲದ ಹೊರಸೂಸುವಿಕೆಯು 6.8 ಟನ್ (14,991 lb) ತಲುಪುತ್ತದೆ ಎನ್ನಲಾಗಿದ್ದು, ಇದರ ಜೊತೆಗೆ ಪೋಲೆಸ್ಟಾರ್ 2 ನಂತಹ ಆಧುನಿಕ ಬ್ಯಾಟರಿ-ಎಲೆಕ್ಟ್ರಿಕ್ ವಾಹನದ ಉತ್ಪಾದನೆ ಸಂದರ್ಭದಲ್ಲೂ 26 ಟನ್ (57,320 ಪೌಂಡ್) Co2 ಗೆ ಹೆಚ್ಚುತ್ತದೆ.

ಆದರೆ ಮಾಲಿನ್ಯಕ್ಕೆ ಮುಖ್ಯ ಕಾರಣ ಎನ್ನಲಾಗುವ ಕ್ಲಾಸಿಕ್ ಕಾರುಗಳು ಸರಾಸರಿ ಸಾಮಾನ್ಯ ಕಾರುಗಳು ವಾರ್ಷಿಕವಾಗಿ ಹೊರಸೂಸುವ 26-ಟನ್ Co2 ಅಂಕಿಅಂಶವನ್ನು ತಲುಪಲು ಕನಿಷ್ಠ 46 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನ್ಯಾಯೋಚಿತವಾಗಿ ಮುಂದಿನ ದಶಕದಲ್ಲಿ ವಾಹನ ತಯಾರಕರು ತಮ್ಮ ಕಾರ್ಬನ್-ತಟಸ್ಥ ಉತ್ಪಾದನಾ ಗುರಿಗಳನ್ನು ತಲುಪಿದ ಮಾತ್ರವೇ ಈ ಹೋಲಿಕೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.

ಇದಕ್ಕೆ ಎಲೆಕ್ಟ್ರಿಕ್ ಕಾರುಗಳ ಸಂಚಾರವು ಸಂಪೂರ್ಣವಾಗಿ ಮಾಲಿನ್ಯ ಮುಕ್ತವಾಗಿದ್ದರೂ ಇವಿ ವಾಹನ ಉತ್ಪಾದನೆ ಸಂದರ್ಭದಲ್ಲಿ ಮತ್ತು ಅದಕ್ಕೆ ಒದಗಿಸುವ ಶಕ್ತಿ ಸಂಪನ್ಮೂಲವು ಮಾಲಿನ್ಯ ಮುಕ್ತವಾಗಿಲ್ಲ.

ಭಾರತದಂತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಶೇ.70 ಕ್ಕಿಂತಲೂ ಕಲ್ಲಿದ್ದಲೂ ಮೇಲೆ ಅವಲಂಭಿತವಾಗಿದ್ದು, ಇವಿ ವಾಹನಗಳಿಗೆ ಬೇಕಿರುವ ಶಕ್ತಿ ಪೂರೈಕೆಯು ಹೆಚ್ಚಿನ ಮಟ್ಟದ ಮಾಲಿನ್ಯಕ್ಕೆ ಪರೋಕ್ಷ ಕಾರಣವಾಗುತ್ತದೆ ಎನ್ನುವುದು ಅಧ್ಯಯನದ ಮುಖ್ಯ ಅಂಶವಾಗಿದೆ.

ಅದಾಗ್ಯೂ, ಎಲೆಕ್ಟ್ರಿಕ್ ವಾಹನಗಳು ಅದರ ಜೀವನ ಚಕ್ರದಲ್ಲಿ ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ಹೊಂದಿರಲಿದ್ದು, ಕಾರುಗಳ ಬಳಕೆಯನ್ನು ಆಧರಿಸಿ ಕ್ಲಾಸಿಕ್ ಕಾರು ಮಾದರಿಗಳಿಗೆ ವಿನಾಯ್ತಿ ನೀಡುವಂತೆ ಫುಟ್‌ಮ್ಯಾನ್ ಜೇಮ್ಸ್ ಅಧ್ಯಯನ ವರದಿಯು ಶಿಫಾರಸ್ಸು ಮಾಡುತ್ತದೆ.