ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟ: ಕೊರಿಯಾ ಕಂಪನಿಗಳದ್ದೇ ಪ್ರಾಬಲ್ಯ

ಕಾಂಪ್ಯಾಕ್ಟ್ ಎಸ್‌ಯುವಿಗಳು ಭಾರತೀಯ ಕಾರು ಖರೀದಿದಾರರಲ್ಲಿ ಜನಪ್ರಿಯವಾಗಿವೆ. ಆದರೆ, ಬೇರೆ ವಾಹನ ತಯಾರಿಕ ಕಂಪನಿಗಳಿಗಿಂತ ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಗಳು ಈ ವಿಭಾಗದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುತ್ತಿವೆ. ಕುಶಾಕ್, ಆಸ್ಟರ್, ಟೈಗುನ್‌ ಕಾರು ಮಾರಾಟ ಸ್ಥಿರವಾಗಿದೆ. ದೇಶದಲ್ಲಿ ನವೆಂಬರ್ 2022ರ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಹುಂಡೈ ಕ್ರೆಟಾ (13,321 ಯುನಿಟ್‌ಗಳು):
ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಲಾಂಚ್ ಹೊರತಾಗಿಯೂ, ಹ್ಯುಂಡೈ ಕ್ರೆಟಾ ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಜನಪ್ರಿಯ ಆಯ್ಕೆಯಾಗಿಯೇ ಇದೆ. ನವೆಂಬರ್ 2022ರಲ್ಲಿ, ಹ್ಯುಂಡೈ ಉತ್ತಮವಾಗಿ ಚೇತರಿಸಿಕೊಂಡಿದೆ. ಭಾರತದಲ್ಲಿ 13,321 ಯುನಿಟ್ ಕ್ರೆಟಾ ಎಸ್‌ಯುವಿ ಮಾರಾಟ ಮಾಡುವಲ್ಲಿ ಕಂಪನಿ ಯಶಸ್ವಿಯಾಗಿದೆ. ಇದು ವರ್ಷದಿಂದ ವರ್ಷದ ಮಾರಾಟದಲ್ಲಿ ಶೇಕಡ 29 ಹೆಚ್ಚಳವಾಗಿದೆ. ಇದಲ್ಲದೆ, ಕಂಪನಿಯು ಅಕ್ಟೋಬರ್ ತಿಂಗಳಿಗಿಂತ ನವೆಂಬರ್ ತಿಂಗಳಲ್ಲಿ 1,441 ಹೆಚ್ಚು ಯನಿಟ್‌ಗಳನ್ನು ಮಾರಾಟ ಮಾಡಿದ್ದರಿಂದ ಮಾಸಿಕ ಮಾರಾಟವು ಶೇಕಡ 12ಕ್ಕಿಂತ ಹೆಚ್ಚಾಗಿದೆ.

ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟ: ಕೊರಿಯಾ ಕಂಪನಿಗಳದ್ದೇ ಪ್ರಾಬಲ್ಯ

ಕಿಯಾ ಸೆಲ್ಟೋಸ್ (9,284 ಯುನಿಟ್‌ಗಳು):
ನವೆಂಬರ್ ತಿಂಗಳಲ್ಲಿ 9,284 ಕಿಯಾ ಸೆಲ್ಟೋಸ್ ಎಸ್‌ಯುವಿಗಳು ಮಾರಾಟವಾಗಿವೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವುದು ಕಿಯಾ ಮಾಡೆಲ್ ಆಗಿದ್ದರೂ, ಕಂಪನಿಯು ತಿಂಗಳಿನಿಂದ ತಿಂಗಳ ಮಾರಾಟದ ಅಂಕಿಅಂಶಗಳು ಶೇಕಡ 5ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಬಹುದು. ಅಕ್ಟೋಬರ್ 2022ರಲ್ಲಿ 9,777 ಯುನಿಟ್ ಸೆಲ್ಟೋಸ್ ಎಸ್‌ಯುವಿಗಳು ಮಾರಾಟವಾಗಿದೆ. ಆದರೆ, ವರ್ಷದಿಂದ ವರ್ಷದ ಮಾರಾಟ ಪ್ರಮಾಣವು ಶೇಕಡ 4.8 ರಷ್ಟು ಸುಧಾರಿಸಿರುವುದು ವರದಿಯಾಗಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (4,433 ಯುನಿಟ್‌ಗಳು):
ದಸರಾ ದೀಪಾವಳಿ ಹಬ್ಬದ ಋತುವಿನಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ 8,000 ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲು ಕಂಪನಿ ಯಶಸ್ವಿಯಾಗಿತ್ತು. ಮಾರಾಟವು ನವೆಂಬರ್ 2022ರಲ್ಲಿ 4,433 ಯುನಿಟ್‌ ಮಾತ್ರವೇ ಆಗಿದ್ದು, ಅದರ ಅರ್ಧದಷ್ಟು ಕಡಿಮೆಯಾಗಿದೆ. ಇದು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇಕಡ 45 ರಷ್ಟು ಕುಸಿತಕ್ಕೆ ಕಾರಣವಾಗಿದೆ. ಆದಾಗ್ಯೂ, ಮುಂಬರುವ ತಿಂಗಳುಗಳಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮಾರಾಟವು ಸುಧಾರಿಸುತ್ತದೆ ಎಂದು ಅಂದಾಜಿಸಲಾಗಿದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರ್ಡರ್ (3,116 ಯುನಿಟ್‌ಗಳು):
ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ ಮಾರಾಟಕ್ಕೆ ಹೋಲಿಕೆ ಮಾಡಿದರೆ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ಮಾರಾಟವು ಸ್ವಲ್ಪ ಸ್ಥಿರವಾಗಿದೆ ಎಂದು ಹೇಳಬಹುದು. ಏಕೆಂದರೆ, ಕಂಪನಿಯು ನವೆಂಬರ್ 2022ರಲ್ಲಿ 3,116 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ. ಇದರಿಂದ ತಿಂಗಳ ಮಾರಾಟದ ಅಂಕಿಅಂಶಗಳು ಕೇವಲ ಶೇಕಡ 7.9 ಇಳಿಕೆ ಆಗಿದೆ. ಅಂದರೇ 268 ಯುನಿಟ್‌ಗಳು ಕಡಿಮೆ ಮಾರಾಟವಾಗಿದೆ.

ಸ್ಕೋಡಾ ಕುಶಾಕ್ (2,009 ಯುನಿಟ್‌ಗಳು):
ಸದ್ಯ ಸ್ಕೋಡಾ ಕುಶಾಕ್ ಎಸ್‌ಯುವಿ ವೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯನ್ನು ತನ್ನ ಮಾರಾಟದಲ್ಲಿ ಮೀರಿಸುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ, ನವೆಂಬರ್ 2022ರಲ್ಲಿ 2,009 ಯುನಿಟ್‌ಗಳನ್ನು ಮಾರಾಟ ಮಾಡಲು ಕಂಪನಿಗೆ ಸಾಧ್ಯವಾಗಿದೆ. ಇದರಿಂದ ಮಾರಾಟದ ಕಾರ್ಯಕ್ಷಮತೆಯು ವರ್ಷದಿಂದ ವರ್ಷಕ್ಕೆ ಶೇಕಡ 7 ಕ್ಕಿಂತ ಹೆಚ್ಚಿನ ಪ್ರಗತಿಗೆ ಕಾರಣವಾಗಿದೆ. ಹಾಗೆಯೇ ತಿಂಗಳಿನಿಂದ ತಿಂಗಳ ಮಾರಾಟ ಪ್ರಮಾಣವು ಶೇಕಡ 19 ರಷ್ಟು ಹೆಚ್ಚಳವಾಗಿದೆ ಎಂದು ಹೇಳಬಹುದು.

ವೋಕ್ಸ್‌ವ್ಯಾಗನ್ ಟೈಗನ್ (1,979 ಯುನಿಟ್‌ಗಳು):
ವೋಕ್ಸ್‌ವ್ಯಾಗನ್ ಕಂಪನಿಯು ಟೈಗನ್ ಎಸ್‌ಯುವಿಯನ್ನು ನವೆಂಬರ್ 2022ರಲ್ಲಿ ಕೇವಲ 1,979 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿದೆ. ಇದರಿಂದ ತನ್ನ ಮಾರಾಟದ ಕಾರ್ಯಕ್ಷಮತೆಯಲ್ಲಿ ಕುಸಿತ ಕಂಡಿದೆ. ಈ ಸಾಧಾರಣ ಮಾರಾಟದ ಕಾರ್ಯಕ್ಷಮತೆಯು ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಖಡ 30ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಬಹುದು. ಅಲ್ಲದೆ, ತಿಂಗಳಿನಿಂದ ತಿಂಗಳ ಮಾರಾಟ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ ಶೇಕಡ 16 ರಷ್ಟು ಕಡಿಮೆಯಾಗಿದೆ.

MG ಆಸ್ಟರ್ (1,434 ಯುನಿಟ್‌ಗಳು):
ಈ SUV ಬೇಡಿಕೆಯು ಆರಂಭದಲ್ಲಿ MG ಕಂಪನಿಯ ನಿರೀಕ್ಷೆಗಳನ್ನು ಮೀರಿದೆ. ಆದಾಗ್ಯೂ, ಇತ್ತೀಚಿನ ಸೆಮಿಕಂಡಕ್ಟರ್ ಕೊರತೆಯು ಅದರ ಮಾರಾಟದ ಅಂಕಿಅಂಶಗಳನ್ನು ಗಣನೀಯ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ. ನವೆಂಬರ್ 2022ರಲ್ಲಿ, MG ಆಸ್ಟರ್ SUVಯ ಕೇವಲ 1,434 ಯುನಿಟ್‌ಗಳು ಮಾತ್ರ ಮಾರಾಟವಾಗಿವೆ. ಆದರೂ ವರ್ಷದಿಂದ ವರ್ಷದ ಮಾರಾಟವು ಶೇಕಡ 40ಕ್ಕಿಂತ ಹೆಚ್ಚು ಸುಧಾರಣೆಯಾಗಿದೆ. ಆದಾಗ್ಯೂ, ತಿಂಗಳಿನಿಂದ ತಿಂಗಳ ಮಾರಾಟದ ಪ್ರಮಾಣ ಶೇಕಡ 19ಕ್ಕಿಂತ ಕಡಿಮೆಯಾಗಿದೆ.

ನಿಸ್ಸಾನ್ ಕಿಕ್ಸ್ (3 ಯುನಿಟ್‌ಗಳು):
ನಿಸ್ಸಾನ್ ಕಿಕ್ಸ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಕೆಲವು ಕಾರಣಗಿಂದ ಭಾರತದ ಮಾರುಕಟ್ಟೆಯಲ್ಲಿ ವಿಫಲವಾಗಿದೆ. ನವೆಂಬರ್ ತಿಂಗಳಲ್ಲಿ ನಿಸ್ಸಾನ್ ಭಾರತದಲ್ಲಿ ಮಾರುಕಟ್ಟೆಯಲ್ಲಿ ಕೇವಲ 3 ಯುನಿಟ್‌ ಮಾರಾಟ ಮಾಡಿದ್ದರಿಂದ ವರ್ಷದಿಂದ ವರ್ಷದ ಮಾರಾಟ ಪ್ರಮಾಣವು ಶೇಕಡ 97 ರಷ್ಟು, ತಿಂಗಳ ಮಾರಾಟ ಪ್ರಮಾಣವು ಶೇಕಡ 99 ರಷ್ಟು ಕುಸಿತವಾಗಿದೆ. ಇದಲ್ಲದೆ, ಮುಂಬರುವ ತಿಂಗಳುಗಳಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

More from DriveSpark

Article Published On: Saturday, December 10, 2022, 18:17 [IST]
English summary
Compact suv sales dominated by Korean companies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+