2022ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಎಂಪಿವಿಗಳು... ಖರೀದಿಗೆ ಯಾವುದು ಉತ್ತಮ?

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಮತ್ತು (ಬಹುಪಯೋಗಿ ವಾಹನ) ಎಂಪಿವಿಗಳು ಅಪಾರ ಜನಪ್ರಿಯತೆಯನ್ನು ಗಳಿಸಿವೆ. ಬಹುತೇಕ ವಾಹನ ತಯಾರಿಕ ಕಂಪನಿಗಳು, ಈ ವಿಭಾಗಗಳಲ್ಲಿ ಹಲವಾರು ಮಾದರಿಗಳನ್ನು ಪರಿಚಯಿಸುತ್ತಿರುತ್ತವೆ. ಇವುಗಳ ಕಾರ್ಯಕ್ಷಮತೆಯು ಗ್ರಾಹಕರಿಗೆ ಇಷ್ಟವಾಗುವುದರಿಂದ ಈ ವಾಹನಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಹೇಳಬಹುದು.

ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು (ಎಸ್‌ಯುವಿ) ಅವುಗಳ ಸಾಮರ್ಥ್ಯ ಹಾಗೂ ಆಕರ್ಷಣೆಯಿಂದಾಗಿ ಮೆಚ್ಚುಗೆ ಪಡೆದಿದ್ದರೂ, ಆರು, ಏಳು ಪ್ರಯಾಣಿಕರು ಏಕಕಾಲದಲ್ಲಿ ಆರಾಮವಾಗಿ ಪ್ರಯಾಣಿಸಲು ಎಂಪಿವಿಗಳನ್ನೇ ಲೈಕ್ ಮಾಡುತ್ತಾರೆ. ಇಂತಹ ಉಪಯುಕ್ತ ವಾಹನಗಳನ್ನು ಕೊಳ್ಳಲು ಖರೀದಿದಾರರು ಮಾರುಕಟ್ಟೆಯಲ್ಲಿ ಹುಟುಕಾಟವನ್ನು ನಡೆಸುತ್ತಾರೆ. ಅಂತಹವರಿಗಾಗಿ 2022ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಟಾಪ್ 5 ಎಂಪಿವಿಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ಅವುಗಳ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಆಧರಿಸಿ, ಬೆಲೆಗಳು ಬೇರೆ-ಬೇರೆಯಾಗಿರುತ್ತದೆ ಎಂಬುದನ್ನು ತಿಳಿಯಿರಿ.

2022ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಎಂಪಿವಿಗಳು..

ಮಾರುತಿ ಸುಜುಕಿ ಎರ್ಟಿಗಾ (1,21,541 ಯುನಿಟ್‌ಗಳು):
ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುವ ಎಂವಿಪಿಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕೂಡ ಒಂದಾಗಿದೆ. 2022ರಲ್ಲಿ ಈಗಾಗಲೇ 1,21,541 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಎರ್ಟಿಗಾ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿ ಅಗ್ರಸ್ಥಾನದಲ್ಲಿದೆ. ಇದು 99 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ MT ಮತ್ತು 6-ಸ್ಪೀಡ್ ATನೊಂದಿಗೆ ಜೋಡಿಸಲಾಗಿದೆ. ಎರ್ಟಿಗಾ ಎಕ್ಸ್ ಶೋ ರೂಂ ಬೆಲೆ 8.35 ಲಕ್ಷದಿಂದ 12.79 ಲಕ್ಷ ರೂ ಇದೆ.

ಕಿಯಾ ಕ್ಯಾರೆನ್ಸ್ (59,561 ಯುನಿಟ್‌ಗಳು):
ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಿಕ ಕಂಪನಿಯಾಗಿರುವ 'ಕಿಯಾ'ದ ಕ್ಯಾರೆನ್ಸ್, ಇನ್ನೋವಾವನ್ನು ಹಿಂದಿಕ್ಕಿ ಈ ವರ್ಷ ಭಾರತದಲ್ಲಿ ಎರಡನೇ ಅತಿಹೆಚ್ಚು ಮಾರಾಟವಾದ ಎಂವಿಪಿ ಆಗಿದೆ. ಈ ವರ್ಷದ ಜನವರಿಯಲ್ಲಿ ಪ್ರಾರಂಭವಾದಾಗಿನಿಂದ ಈ ಎಂವಿಪಿಯ ಸುಮಾರು 59,561 ಯುನಿಟ್‌ಗಳು ದೇಶದಲ್ಲಿ ಮಾರಾಟಮಾಡಲಾಗಿದೆ. ಕ್ಯಾರೆನ್ಸ್, 1.5-ಲೀಟರ್ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಇದರ ಬೆಲೆ 10 ಲಕ್ಷದಿಂದ 18 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇದೆ.

ಟೊಯೊಟಾ ಇನ್ನೋವಾ (56,533 ಯುನಿಟ್‌ಗಳು):
ಟೊಯೊಟಾ ಇನ್ನೋವಾ ಎಂಪಿವಿ ವಿಭಾಗದಲ್ಲಿ ಯಾವಾಗಲೂ ಜನಪ್ರಿಯ ಆಯ್ಕೆಯಾಗಿದೆ. ಇಲ್ಲಿಯವರೆಗೆ ಈ ಎಂಪಿವಿಯ 56,533 ಯುನಿಟ್‌ಗಳು ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಇತ್ತೀಚೆಗೆ, ಕಂಪನಿಯು ಇನ್ನೋವಾ ಹೈಕ್ರಾಸ್ ಅನ್ನು ಅನಾವರಣಗೊಳಿಸಿದ್ದು ಅದು ಮುಂದಿನ ವರ್ಷದ ಆರಂಭದಲ್ಲಿ ಮಾರಾಟವಾಗಲಿದೆ. ಟೊಯೋಟಾ ಇನ್ನೋವಾ ಹೈಕ್ರಾಸ್ ಡೀಸೆಲ್ ಎಂಜಿನ್ ಅನ್ನು ಹೊಂದಿರುವುದಿಲ್ಲ. ಆದರೆ, ಹೈಬ್ರಿಡ್ ಪವರ್‌ಟ್ರೇನ್ 21.1 kmpl ಫ್ಯೂಯೆಲ್ ಎಫಿಶಿಯನ್ಸಿ ಫಿಗರ್ ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಹೊಸ ಇನ್ನೋವಾ ಹೈಕ್ರಾಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದೆ. 2.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮೋಟಾರ್ ಅನ್ನು ಹೊಂದಿದ್ದು, ಇದು 174 PS ಪವರ್, 209 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಮೋಟಾರ್, 186 PS ಪವರ್ ಮತ್ತು 206 Nm ಟಾರ್ಕ್ ಉತ್ಪಾದಿಸಲಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಬೆಲೆ 20-30 ಲಕ್ಷ ರೂಪಾಯಿಗಳ ನಡುವೆ (ಎಕ್ಸ್ ಶೋ ರೂಂ) ಇರಬಹುದೆಂದು ಅಂದಾಜಿಸಲಾಗಿದೆ.

ಮಾರುತಿ ಸುಜುಕಿ ಎಕ್ಸ್‌ಎಲ್6 (35,004 ಯುನಿಟ್‌ಗಳು):
ಮಾರುತಿ ಸುಜುಕಿ ಎರ್ಟಿಗಾ ಆಧಾರಿತ ಪ್ರೀಮಿಯಂಗೆ ಪರ್ಯಾಯವಾದ XL6 ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. 2022ರಲ್ಲಿ ಈ ಪೀಪಲ್ ಮೂವರ್‌ನ 35,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಎರ್ಟಿಗಾದಂತೆಯೇ 5-ಸ್ಪೀಡ್ MT ಮತ್ತು 6-ಸ್ಪೀಡ್ AT ಯೊಂದಿಗೆ ಖರೀದಿಗೆ ಲಭ್ಯವಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ 99 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು. ಪ್ರಸ್ತುತ, ಮಾರುತಿ ಸುಜುಕಿ ಎಕ್ಸ್‌ಎಲ್6 ಬೆಲೆ ರೂ.11.29 ಲಕ್ಷದಿಂದ ರೂ.14.55 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.

ರೆನಾಲ್ಟ್ ಟ್ರೈಬರ್ (31,751 ಯುನಿಟ್‌ಗಳು):
ಅಂತಿಮವಾಗಿ, ಈ ಪಟ್ಟಿಯಲ್ಲಿರುವ ಕೊನೆಯ ಎಂವಿಪಿ ರೆನಾಲ್ಟ್ ಟ್ರೈಬರ್ ಆಗಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತದೆ. 2022ರಲ್ಲಿ ಟ್ರೈಬರ್‌ನ ಸುಮಾರು 31,751 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದು 71 bhp ಪವರ್ ಉತ್ಪಾದಿಸುವ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 5-ಸ್ಪೀಡ್ MT ಮತ್ತು AMTಗೆ ಜೋಡಿಸಲಾಗಿದೆ. ಟ್ರೈಬರ್ ಎಕ್ಸ್ ಶೋ ರೂಂ ಬೆಲೆ 5.92 ಲಕ್ಷದಿಂದ 8.51 ಲಕ್ಷ ರೂ. ಇದೆ.

Most Read Articles

Kannada
English summary
Top five best selling mpv in india in 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X