ಟೊಯೊಟಾ ಇನ್ನೋವಾ ಹೈಕ್ರಾಸ್ vs ಕಿಯಾ ಕಾರ್ನಿವಲ್: ಯಾವುದು ಬೆಸ್ಟ್?

ಭಾರತದ ಮಾರುಕಟ್ಟೆಯಲ್ಲಿ ವಾಹನ ತಯಾರಿಕ ಕಂಪನಿಗಳ ನಡುವೆ ಯಾವಾಗಲು ಆರೋಗ್ಯಕಾರ ಪೈಪೋಟಿ ಇರುತ್ತದೆ. ಅದರಂತೆ ಹಲವು ವಿಭಿನ್ನ ವೈಶಿಷ್ಟ್ಯಗಳೊಂದಿಗೆ ತಮ್ಮ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿರುತ್ತಾರೆ. ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ (ಬಹುಪಯೋಗಿ ವಾಹನ) ಎಂವಿಪಿ ಅನ್ನು ಇನೋವಾ ಕ್ರಿಸ್ಟಾಗೆ ಅತ್ಯಾಧುನಿಕ ಪರ್ಯಾಯವಾಗಿ ಇತ್ತೀಚೆಗೆ ಅನಾವರಣಗೊಳಿಸಲಾಯಿತು.

ಹೊಸ ಇನ್ನೋವಾ ಹೈಕ್ರಾಸ್ ಜೊತೆಗೆ ಇನ್ನೋವಾ ಕ್ರಿಸ್ಟಾವನ್ನು ಮಾರಾಟ ಮಾಡುವುದನ್ನು ಮುಂದುವರಿಸಲಾಗುವುದು ಎಂದು ಟೊಯೊಟಾ ಹೇಳಿದೆ. ಸದ್ಯ ಇನ್ನೋವಾ ಹೈಕ್ರಾಸ್ ಹೈಬ್ರಿಡ್, ಕಿಯಾ ಕಾರ್ನಿವಲ್‌ಗೆ ಮಾರುಕಟ್ಟೆಯಲ್ಲಿ ನೇರ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇನ್ನೋವಾ ಹೈಕ್ರಾಸ್ ಗ್ರಾಹಕರಿಗೆ ಖರೀದಿಸಲು ಹತ್ತಿರವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಎರಡು ಎಂವಿಪಿಗಳ ನಡುವಿನ ವಿವರವಾದ ಹೋಲಿಕೆ ಕುರಿತು ಇಲ್ಲಿ ತಿಳಿಸಿಕೊಡಲಾಗಿದ್ದು, ಯಾವ ಕಾರು ಖರೀದಿ ಉತ್ತಮ ಎಂಬುದನ್ನು ನೀವೇ ತಿಳಿಯಿರಿ.

ಟೊಯೊಟಾ ಇನ್ನೋವಾ ಹೈಕ್ರಾಸ್ vs ಕಿಯಾ ಕಾರ್ನಿವಲ್: ಯಾವುದು ಬೆಸ್ಟ್?

ಸುತ್ತಳತೆ:
ಟೊಯೊಟಾ ಇನ್ನೋವಾ ಹೈಕ್ರಾಸ್‌ನ VX ಹೈಬ್ರಿಡ್ ರೂಪಾಂತರವು 4755 ಎಂಎಂ ಉದ್ದ, 1845 ಎಂಎಂ ಅಗಲ, 1795 ಎಂಎಂ ಎತ್ತರ ಮತ್ತು 2850 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ತೀವ್ರ ಪ್ರತಿಸ್ಪರ್ಧಿಯಾಗಿರುವ ಕಿಯಾ ಕಾರ್ನಿವಲ್ 5115 ಎಂಎಂ ಉದ್ದ, 1985 ಎಂಎಂ ಅಗಲ, 1755 ಎಂಎಂ ಎತ್ತರವನ್ನು ಹೊಂದಿದೆ. ಅಷ್ಟೇ ಅಲ್ಲದೆ, 3060 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಕಿಯಾ ಕಾರ್ನಿವಲ್, ಟೊಯೊಟಾ ಇನ್ನೋವಾ ಹೈಕ್ರಾಸ್‌ಗಿಂತಲೂ ದೊಡ್ಡದಾಗಿದೆ ಎಂದು ಹೇಳಬಹುದು. ಮುಂಬರುವ ಹೊಸ ಇನ್ನೋವಾಗೆ ಹೋಲಿಸಿದರೆ Kia ಎಂವಿಪಿ 360 ಎಂಎಂ ಉದ್ದ, 140 ಎಂಎಂ ಅಗಲವಾಗಿದೆ. ಜೊತೆಗೆ 210 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಇನ್ನೋವಾ ಹೈಕ್ರಾಸ್ ಕಾರು, ಮಧ್ಯದಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ 7-ಸೀಟ್ ಸೆಟಪ್ ಅಥವಾ 8-ಸೀಟ್ ಕಾನ್ಫಿಗರೇಶನ್‌ ಅನ್ನು ಹೊಂದಬಹುದು. ಕಿಯಾ ಕಾರ್ನಿವಲ್ 7-ಸೀಟ್ ಆಯ್ಕೆಗಳಲ್ಲಿ ಲಭ್ಯವಿದ್ದು, ಸೆಕೆಂಡ್ ರೋನಲ್ಲಿ ಐಚ್ಛಿಕ ವಿಐಪಿ ಸೀಟುಗಳು ಲಭ್ಯವಿವೆ.

ಎಂಜಿನ್ ಸಾಮರ್ಥ್ಯ:
ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದೆ. 2.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮೋಟಾರ್ ಅನ್ನು ಹೊಂದಿದ್ದು, ಇದು 174 PS ಪವರ್, 209 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಮೋಟಾರ್, 186 PS ಪವರ್ ಮತ್ತು 206 Nm ಟಾರ್ಕ್ ಉತ್ಪಾದಿಸಲಿದೆ. ಹಿಂದಿನ ಮಾದರಿಯು CVT ಆಟೋ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿತ್ತು. ಆದರೆ, ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು e-CVT ಅನ್ನು ಹೊಂದರಬಹುದು.

ಟೊಯೋಟಾ ಇನ್ನೋವಾ ಹೈಕ್ರಾಸ್ ಡೀಸೆಲ್ ಎಂಜಿನ್ ಅನ್ನು ಹೊಂದಿರುವುದಿಲ್ಲ. ಆದರೆ, ಹೈಬ್ರಿಡ್ ಪವರ್‌ಟ್ರೇನ್ 21.1 kmpl ಫ್ಯೂಯೆಲ್ ಎಫಿಶಿಯನ್ಸಿ ಫಿಗರ್ ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಕಿಯಾ ಕಾರ್ನಿವಲ್ ಅನ್ನು ಏಕೈಕ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದ್ದು, ಅದು 200 PS ಪವರ್ ಮತ್ತು 440 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಆಗಿ 8-ಸ್ಪೀಡ್ ಎಟಿಯೊಂದಿಗೆ ಖರೀದಿಗೆ ಲಭ್ಯವಿದೆ ಎಂದು ಹೇಳಬಹುದು.

ವೈಶಿಷ್ಟ್ಯಗಳು:
ಟೊಯೊಟಾ ಇನ್ನೋವಾ ಹೈಕ್ರಾಸ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಮ್, ಎರಡನೇ ಸಾಲಿನಲ್ಲಿ ವಿಸ್ತರಿಸುವ ಲೆಗ್ ರೆಸ್ಟ್‌ಗಳೊಂದಿಗೆ ಚಾಲಿತ ಒಟ್ಟೋಮನ್ ಸೀಟ್‌ಗಳನ್ನು ಹೊಂದಿದೆ. 360-ಡಿಗ್ರಿ ಕ್ಯಾಮೆರಾ, ಮೂಡ್ ಲೈಟಿಂಗ್, ಚಾಲಿತ ಟೈಲ್‌ಗೇಟ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ವಾಹನ ಪ್ರಿಯರಿಗೆ ಇಷ್ಟವಾಗಬಹುದು ಎಂದು ಹೇಳಬಹುದು.

ಇನ್ನು, ಕಾರ್ನಿವಲ್ ಎಂವಿಪಿ, ಕಿಯಾ ಕನೆಕ್ಟ್‌ನೊಂದಿಗೆ 8-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, OTT ಮತ್ತು ನ್ಯೂಸ್ ಅಪ್ಲಿಕೇಶನ್‌ಗಳಲ್ಲಿ ಮಾಡಲ್ಪಟ್ಟ ಡ್ಯುಯಲ್ 10.1-ಇಂಚಿನ ಹಿಂಬದಿ-ಆಸನದ ಮನರಂಜನಾ ಪರದೆಗಳು, ಹಾರ್ಮನ್ ಕಾರ್ಡನ್ 8-ಸ್ಪೀಕರ್ ಆಡಿಯೊ ಸಿಸ್ಟಮ್, 10-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಚಾಲಿತ ಟೈಲ್‌ಗೇಟ್, ಪವರ್ ಸ್ಲೈಡಿಂಗ್ ಡೋರ್‌ಗಳು, ಡ್ಯುಯಲ್ ಎಲೆಕ್ಟ್ರಿಕ್ ಸನ್‌ರೂಫ್‌ಗಳು, ಟ್ರೈ-ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ಲೆಗ್ ಸಪೋರ್ಟ್‌ನೊಂದಿಗೆ ವಿಐಪಿ ಸೀಟ್‌ಗಳನ್ನು ಹೊಂದಿದೆ ಇದನ್ನು ಕೂಡ ಕಾರು ಖರೀದಿಸುವವರು ಲೈಕ್ ಮಾಡಬಹುದು.

ಸುರಕ್ಷತೆ:
ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಸುರಕ್ಷತೆಯ ವಿಚಾರಗಳ ಬಗ್ಗೆ ಹೇಳುವುದಾದರೆ, 6 ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ + ಹಿಲ್ ಸ್ಟಾರ್ಟ್ ಅಸಿಸ್ಟ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, EBD ಜೊತೆಗೆ ABS, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ISOFIX ಆಂಕಾರೇಜ್‌ಗಳು ಮತ್ತು ADAS ನ ಟೊಯೊಟಾ ಸೇಫ್ಟಿ ಸೆನ್ಸ್ ಸೂಟ್ (ಅಡ್ವಾನ್ಸ್ಡ್) ಅನ್ನು ಒಳಗೊಂಡಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟೆನ್ಸ್, ಬ್ಲೈಂಡ್ ಸ್ಪಾಟ್ ಮಾನಿಟರ್, ಪ್ರಿ-ಕ್ರ್ಯಾಶ್ ಸೇಫ್ಟಿ ಹಾಗೂ ಆಟೋ ಹೈ ಬೀಮ್ ಸೇರಿದಂತೆ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಅನ್ನು ಹೊಂದಿದೆ.

ಕಿಯಾ ಕಾರ್ನಿವಲ್‌ ಎಂವಿಪಿ ಸುರಕ್ಷತೆಯ ವೈಶಿಷ್ಠ್ಯಗಳ ಬಗ್ಗೆ ಮಾತನಾಡುವುದಾದರೆ, ABS ಜೊತೆಗೆ EBD, ESC ಜೊತೆಗೆ ಹಿಲ್ ಅಸಿಸ್ಟ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಶನ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು ಹೊಂದಿದೆ. ಇದು ಪ್ರಯಾಣಿಕರಿಗೆ ರಕ್ಷಣೆಯನ್ನು ಒದಗಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ಸ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಒಳಗೊಂಡಿದೆ ಎಂದು ಹೇಳಬಹುದು.

ಬೆಲೆ:
ಕಿಯಾ ಕಾರ್ನಿವಲ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಪ್ರೆಸ್ಟೀಜ್, ಲಿಮೋಸಿನ್ ಮತ್ತು ಲಿಮೋಸಿನ್ ಪ್ಲಸ್, ಕ್ರಮವಾಗಿ ರೂ.30.99 ಲಕ್ಷ, ರೂ.33.49 ಲಕ್ಷ ಮತ್ತು ರೂ.35.49 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿದೆ. ಆದರೆ, ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಬೆಲೆಯನ್ನು ಮುಂದಿನ ತಿಂಗಳು ಪ್ರಕಟಿಸುವ ನಿರೀಕ್ಷೆಯಿದೆ. ಕಿಯಾ ಕಾರ್ನಿವಲ್ ಎಂವಿಪಿಗೆ ಹೋಲಿಕೆ ಮಾಡಿದರೆ ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಬೆಲೆ 20-30 ಲಕ್ಷ ರೂಪಾಯಿಗಳ ನಡುವೆ (ಎಕ್ಸ್ ಶೋ ರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Toyota innova hicross vs kia carnival which is the best
Story first published: Friday, December 16, 2022, 13:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X