ಭಾರತದಲ್ಲಿ 'Buddie 25 ಇವಿ' ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ: DL ಬೇಕಿಲ್ಲ

ಭಾರತದಲ್ಲಿ ಅನೇಕ ವಾಹನ ತಯಾರಿಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತೇವೆ. ಇಂತಹ ವಾಹನಗಳನ್ನು ಬಹುತೇಕರು ಇಷ್ಟಪಡುತ್ತಾರೆ. ಇದೀಗ ರಿವಾಂಪ್ ಮೋಟೋ, ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುವ ದರದಲ್ಲಿ ಅತ್ಯಾಕರ್ಷಕ ಇವಿಯನ್ನು ಲಾಂಚ್ ಮಾಡಿದೆ.

ಮಹಾರಾಷ್ಟ್ರದ ನಾಸಿಕ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟ್ ಅಪ್ ಆಗಿರುವ ರಿವಾಂಪ್ ಮೋಟೋ, ತನ್ನ ಮೊದಲ ರೂಪಾಂತರಗೊಳ್ಳಬಹುದಾದ EVಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಹೊಸ RM Buddie 25 ಭಾರತದಲ್ಲಿ ರೂ.66,999 ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ ಪ್ರಕಾರ) ಬಿಡುಗಡೆ ಮಾಡಲಾಗಿದೆ. ಈ ಇವಿಗಾಗಿ ಈಗಾಗಲೇ ಬುಕ್ಕಿಂಗ್‌ಗಳು ಸಹ ಆರಂಭವಾಗಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ.999 ಟೋಕನ್ ಮೊತ್ತವನ್ನು ಗ್ರಾಹಕರು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಭಾರತದಲ್ಲಿ Buddie 25 ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ

RM Buddie 25 EV, 48V, 25Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಒಂದು ಬಾರಿ ಸಂಪೂರ್ಣ ಚಾರ್ಜ್‌ ಮಾಡಿದರೆ 70 ಕಿ.ಮೀ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ. ಇದು 25 kmph ಟಾಪ್ ಸ್ವೀಡ್ ಅನ್ನು ಹೊಂದಿದ್ದು, ಆದ್ದರಿಂದ ಯಾವುದೇ ನೋಂದಣಿ ಅಥವಾ ಪರವಾನಗಿ ಅಗತ್ಯವಿಲ್ಲ. ಈ ಇವಿಯನ್ನು 2 ಗಂಟೆ 45 ನಿಮಿಷಗಳಲ್ಲಿ ಶೇಕಡ 0 ರಿಂದ 100 ರಷ್ಟು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

'ರಿವಾಂಪ್ ಮೋಟೋ' ಕಂಪನಿ ಮಾಹಿತಿ ನೀಡಿರುವಂತೆ ಈ Buddie 25 ಇವಿಯನ್ನು ಮಹಾರಾಷ್ಟ್ರದ ಥಾಣೆಯಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ತನ್ನ ವಿವಿಧ ಹಣಕಾಸು ಪಾಲುದಾರರ ಮೂಲಕ, ರಿವಾಂಪ್ ಮೋಟೋ ಈ ಇವಿಯನ್ನು ಖರೀದಿ ಮಾಡುವ ಗ್ರಾಹಕರಿಗೆ EMI ಜೊತೆಗೆ ತ್ವರಿತ ಸಾಲಗಳಂತಹ ಹಲವು ಆಯ್ಕೆಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಿದೆ. ಇದರ ವಿತರಣೆಗಳು ಏಪ್ರಿಲ್ 2023 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ Buddie 25 ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ

ಇವಿ ಬಿಡುಗಡೆಯ ಕುರಿತು ಮಾತನಾಡಿದ ರಿವಾಂಪ್ ಮೋಟೋ ಸಂಸ್ಥಾಪಕ ಮತ್ತು ಸಿಇಒ ಪ್ರಿತೇಶ್ ಮಹಾಜನ್, 'ದೀರ್ಘ ಮತ್ತು ಪ್ರಯಾಸಕರ ಪ್ರಯಾಣದ ನಂತರ, ರಿವಾಂಪ್ ಭಾರತದ ಮೊಟ್ಟ ಮೊದಲ ರೂಪಾಂತರಗೊಳ್ಳುವ EV, RM Buddie 25 ಅನ್ನು ಲಾಂಚ್ ಮಾಡಲು ಹೆಮ್ಮೆಪಡುತ್ತದೆ. Buddieಯನ್ನು ಮಾಡ್ಯುಲರ್ ಯುಟಿಲಿಟಿ ಪ್ಲಾಟ್‌ಫಾರ್ಮ್‌ ಅಡಿ ನಿರ್ಮಿಸಲಾಗಿದೆ. ಇದು ಇನ್ಸುಲೇಟೆಡ್ ಬಾಕ್ಸ್, ಕ್ಯಾರಿಯರ್, ಸ್ಯಾಡಲ್ ಬ್ಯಾಗ್‌ಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಯಿಸಬಹುದು.

Buddie 25 ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಈ ಐವಿ 12-ಇಂಚಿನ ವೀಲ್ ಗಳನ್ನು ಹೊಂದಿದೆ. ಇದು ದೇಶದ ರಸ್ತೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. Buddie 25 ಉಪಯುಕ್ತ, ಸಿಟಿ ಎಲೆಕ್ಟ್ರಿಕ್ ಸ್ಕೂಟರ್ ಅಂಶಗಳ ಪರಿಪೂರ್ಣ ಮಿಶ್ರಣದಂತೆ ಕಾಣುತ್ತದೆ. ಮುಂಭಾಗದ ಏಪ್ರನ್ ಮತ್ತು ವೃತ್ತಾಕಾರದ ಟೈಲ್ ಲೈಟ್‌ನ ಎರಡೂ ಬದಿಗಳಲ್ಲಿ ಹೆಡ್‌ಲೈಟ್‌ಗಳನ್ನು ಹೊಂದಿದ್ದು, ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಹೇಳಬಹುದು.

ಇಷ್ಟೇ ಅಲ್ಲದೆ, ಹೈದರಾಬಾದ್ ಮೂಲದ ದ್ವಿಚಕ್ರ ವಾಹನ ತಯಾರಿಕ ಕಂಪನಿ ಪ್ಯೂರ್ ಇವಿ, ತನ್ನ 'ಇಕೋಡ್ರೈಫ್ಟ್' ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಹಿರಂಗಪಡಿಸಿದೆ. ಈ ಇವಿ ಬೈಕ್ ಒಂದೇ ಚಾರ್ಜ್‌ನಲ್ಲಿ 135 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಕಂಪನಿಯು ತನ್ನ ಡೀಲರ್‌ಶಿಪ್‌ಗಳಲ್ಲಿ ಟೆಸ್ಟ್ ಡ್ರೈವ್‌ ಅನ್ನು ಪ್ರಾರಂಭಿಸಿದೆ. ಜನವರಿ 2023ರ ಮೊದಲ ವಾರದಲ್ಲಿ ಬೆಲೆಗಳನ್ನು ಘೋಷಿಸುವ ನಿರೀಕ್ಷೆ ಇದ್ದು, ಬುಕ್ಕಿಂಗ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಸದ್ಯ, ಭಾರತೀಯ ಮಾರುಕಟ್ಟೆಯಲ್ಲಿರುವ ಪ್ಯೂರ್ ಇವಿಯ ಎಟ್ರಿಸ್ಟ್ 350 ಎಲೆಕ್ಟ್ರಿಕ್ ಬೈಕ್ ಖರೀದಿಗೆ ಲಭ್ಯವಿದ್ದು, 1,54,999 (ಎಕ್ಸ್ ಶೋ ರೂಂ) ಬೆಲೆಯನ್ನು ಹೊಂದಿದೆ. ಇದೊಂದು ಹೈ-ಸ್ಪೀಡ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದ್ದು, ಇದು ಗಂಟೆಗೆ 85 ಕಿ.ಮೀ ಟಾಪ್ ಸ್ವೀಡ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕ್ 3.5 kWh ಬ್ಯಾಟರಿ ಒಳಗೊಂಡಿದೆ. ಇದು 84 V 8A ಚಾರ್ಜರ್‌ ಜೊತೆ ಲಭ್ಯವಿದ್ದು, 6 ಗಂಟೆಗಳ ಅವಧಿಯಲ್ಲಿ ಬೈಕ್ ಸಂಪೂರ್ಣ ಚಾರ್ಜ್ ಆಗುತ್ತದೆ.

Most Read Articles

Kannada
English summary
Buddie ev launched in india at very affordable price
Story first published: Friday, December 16, 2022, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X