ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದರೂ ಮಾಲಿನ್ಯ ಪ್ರಮಾಣವು ದಿನಂಪ್ರತಿ ಹೆಚ್ಚುತ್ತಲೇ ಇದ್ದು, ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳೆಯ ವಾಹನಗಳ ಜೊತೆಗೆ ಬಿಎಸ್-4 ಎಮಿಷನ್ ಹೊಂದಿರುವ ಡೀಸೆಲ್ ವಾಹನಗಳ ಸಂಚಾರವನ್ನು ಸಹ ಸ್ಥಗಿತಗೊಳಿಸುವ ಸಿದ್ದತೆ ನಡೆಸಲಾಗುತ್ತಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ದೆಹಲಿಯಲ್ಲಿ ಮಿತಿಮಿರಿದ ವಾಹನಗಳ ಓಡಾಟದಿಂದ ನಗರದಲ್ಲಿ ಮಾಲಿನ್ಯ ಪ್ರಮಾಣವು ಅಪಾಯದ ಮಟ್ಟ ತಲುಪಿದ್ದು, ಈ ಹಿನ್ನಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಹೆಚ್ಚುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹಲವು ಕಠಿಣ ಕ್ರಮಗಳ ಜಾರಿಗೆ ಮುಂದಾಗಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ದೆಹಲಿ ಮತ್ತು ಎನ್‌ಸಿಆರ್ ಜೊತೆಗೆ ಗಡಿ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಅಪಾಯಕಾರಿ ಮಟ್ಟವಾದ 450ಕ್ಕೆ ತಲುಪುತ್ತಿದ್ದು, ಇದು ಮುಂಬರುವ ಅಕ್ಟೋಬರ್ ಹೊತ್ತಿಗೆ ಇನ್ನಷ್ಟು ಹೆಚ್ಚಳವಾಗಲಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ವಿಪರೀತ ಚಳಿ ಜೊತೆಗೆ ಅಪಾಯಕಾರಿಯಾದ ಮಾಲಿನ್ಯ ಪ್ರಮಾಣವು ಹಲವಾರು ತೊಂದರೆಗಳಿಗೆ ಕಾರಣವಾಗಲಿದ್ದು, ಈ ಹಿನ್ನಲೆಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಕಮಿಷನ್ (CAQM) ಹೊಸ ವಾಯು ಮಾಲಿನ್ಯ ನೀತಿಯ ಅಡಿಯಲ್ಲಿ ಕೆಲವು ಕಠಿಣ ಶಿಫಾರಸ್ಸುಗಳನ್ನು ಸೂಚಿಸಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಕಮಿಷನ್ ವರದಿ ಅನ್ವಯ ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 450 ಕ್ಕಿಂತ ಹೆಚ್ಚಾದರೆ ಹಳೆಯ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಚಳಿಗಾಲ ಸಂದರ್ಭದಲ್ಲಿ ದೆಹಲಿಯಲ್ಲಿನ ಕಲುಷಿತ ವಾತಾವರಣದಲ್ಲಿ ಧೂಳಿ ಮತ್ತು ಮಾಲಿನ್ಯ ಕಣಗಳ ಪ್ರಮಾಣವು 450ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಗಾಳಿಯು ಕೂಡಾ ವಿಷಕಾರಿಯಾಗುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಈಗಾಗಲೇ ಹಲವಾರು ಕ್ರಮ ತಗೆದುಕೊಂಡಿದ್ದರು ಮಾಲಿನ್ಯ ಪ್ರಮಾಣ ಮಾತ್ರ ತಗ್ಗುತ್ತಿಲ್ಲ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಇದಕ್ಕಾಗಿ ದೆಹಲಿ ಸರ್ಕಾರವು ಇದೀಗ ಹಳೆಯ ವಾಹನಗಳ ಜೊತೆಗೆ ಬಿಎಸ್-4 ಡೀಸೆಲ್ ವಾಹನಗಳನ್ನು ಭಾಗಶಃ ನಿಷೇಧಿಸಲು ನಿರ್ಧರಿಸಲಾಗುತ್ತಿದ್ದು, ಅಗತ್ಯ ಸೇವೆಗಳಲ್ಲಿ ತೊಡಗಿರುವ ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ದಳದ ವಾಹನಗಳು ಮತ್ತು ಹಳೆಯ ಡೀಸೆಲ್ ವಾಹನಗಳಿಗೆ ವಿನಾಯ್ತಿ ನೀಡಲಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಹೊಸ ನಿರ್ಬಂಧವು ದೆಹಲಿಯಲ್ಲಿನ ವಾಹನಗಳಿಗೆ ಮಾತ್ರವಲ್ಲ ಇತರೆ ರಾಜ್ಯಗಳಿಂದ ದೆಹಲಿ ಪ್ರವೇಶಿಸುವ ಹಳೆಯ ಡೀಸೆಲ್ ವಾಹನಗಳಿಗೂ ಸಮಾನವಾಗಿ ಅನ್ವಯಿಸಲಿವೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಜೊತೆಗೆ 2026ರ ವೇಳೆಗೆ ದೆಹಲಿಯಲ್ಲಿರುವ ಎಲ್ಲಾ ಮಾದರಿಯ ಡೀಸೆಲ್ ಚಾಲನೆಯಲ್ಲಿರುವ ಆಟೋ ರಿಕ್ಷಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದ್ದು,ಡೀಸೆಲ್ ಆಟೊಗಳ ಬದಲಿಗೆ ಸಿಎನ್‌ಜಿ ಮತ್ತು ಇವಿ ಆಟೋಗಳಿಗೆ ಮಾತ್ರ ಚಾಲನೆಗೆ ಅವಕಾಶ ನೀಡಲಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಹೊಸ ಶಿಫಾರಸ್ಸು ಆಧರಿಸಿ ಇದೀಗ ದೆಹಲಿ ಸರ್ಕಾರವು ಸದ್ಯ ಚಾಲ್ತಿಯಲ್ಲಿರುವ ಬಿಎಸ್-6 ವೈಶಿಷ್ಟ್ಯತೆ ಎಲ್ಲಾ ಮಾದರಿಯ ವಾಹನಗಳು ಮತ್ತು ಬಿಎಸ್-4 ವೈಶಿಷ್ಟ್ಯತೆಯ ಪೆಟ್ರೋಲ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ಡೀಸೆಲ್ ಕಾರುಗಳು ಮತ್ತು ಇತರೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗುತ್ತಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-6 ಮಾನದಂಡ ಹೊಂದಿರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಮಾಲಿನ್ಯ ಹೊರಸೂಸುವಿಕೆಯಲ್ಲಿ ಗಮನಾರ್ಹವಾದ ಬದಲಾವಣೆ ಅಳವಡಿಕೊಂಡಿರುವುದರಿಂದ ಬಿಎಸ್-4 ಮಾನದಂಡದ ಪೆಟ್ರೋಲ್ ಕಾರುಗಳನ್ನು ಬಿಟ್ಟು ಡೀಸೆಲ್ ಚಾಲಿತ ಕಾರುಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಆದಾಗ್ಯೂ, ಈ ನಿರ್ಬಂಧವು ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವ ವಾಹನಗಳ ಮೇಲೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಗುಣಮಟ್ಟ ನಿರ್ವಹಣಾ ಆಯೋಗವು 2023 ರಿಂದಲೇ ಹಳೆಯ ಡೀಸೆಲ್ ವಾಹನಗಳಿಗೆ ಪರ್ಮಿಟ್ ನೀಡದಿರಲು ನಿರ್ಧರಿಸಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ವಾಯು ಗುಣಮಟ್ಟ ಸೂಚ್ಯಂಕವು 450 ದಾಟುತ್ತಿರುವುದರಿಂದ ಜನರ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗುತ್ತಿದ್ದು, ಇದರಿಂದಾಗಿ ದೆಹಲಿಯಲ್ಲಿನ ಜನ ಹೆಚ್ಚಿನ ಮಟ್ಟದಲ್ಲಿ ಉಸಿರಾಟಕ್ಕೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಆಯೋಗದ ಮಾಹಿತಿ ಪ್ರಕಾರ ದೆಹಲಿಯಲ್ಲಿ ಮಾಲಿನ್ಯ ತಗ್ಗಿಸಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುತ್ತಿದ್ದು, ದೆಹಲಿ ಈಗಾಗಲೇ 10 ವರ್ಷಕ್ಕಿಂತ ಹಳೆಯ ಡೀಸೆಲ್ ಕಾರುಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಕಾರುಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಹಳೆಯ ವಾಹನನಗಳ ಸಂಚಾರಕ್ಕೆ ನಿಷೇಧದ ಜೊತೆಗೆ ದೆಹಲಿಯಲ್ಲಿ ಸಿಎನ್‌ಜಿ ನಿಲ್ದಾಣಗಳನ್ನು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಹೆಚ್ಚಿಸಲು ಆಯೋಗಕ್ಕೆ ನಿರ್ದೇಶನ ನೀಡಲಾಗಿದ್ದು, ದೂರದ ವಾಹನಗಳಿಗೂ ಹೆದ್ದಾರಿಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ.

ರಾಷ್ಟ್ರ ರಾಜಧಾನಿದಲ್ಲಿ ಬಿಎಸ್-4 ಡೀಸೆಲ್ ವಾಹನಗಳ ಚಾಲನೆಗೂ ಬೀಳಲಿದೆ ಬ್ರೇಕ್

ಹೊಸ ಮಾನದಂಡಗಳ ಪ್ರಕಾರ ಚಾಲ್ತಿಯಲ್ಲಿರುವ ಹಳೆಯ ಡೀಸೆಲ್ ವಾಹನಗಳು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ನೈಟ್ರೋಜನ್ ಆಕ್ಸೈಡ್ (NOx) ಸಂಯುಕ್ತಗಳನ್ನು ಹೊರಸೂಸುತ್ತಿದ್ದು, ಇದು ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ.

Article Published On: Tuesday, August 9, 2022, 15:49 [IST]
English summary
Delhi govt to banned bs 4 diesel cars from october 1st details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+