ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದರೂ ಮಾಲಿನ್ಯ ಪ್ರಮಾಣವು ಕಡಿಮೆಯಾಗುವ ಬದಲಿ ಹೆಚ್ಚುತ್ತಲೇ ಇದೆ. ಇದಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಎಸ್-4 ವಾಹನಗಳ ನಿಷೇಧಕ್ಕೂ ಸಿದ್ದತೆ ನಡೆಸಲಾಗುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ದೆಹಲಿಯಲ್ಲಿ ಮಿತಿಮಿರಿದ ವಾಹನಗಳ ಓಡಾಟದಿಂದ ನಗರದಲ್ಲಿ ಮಾಲಿನ್ಯ ಪ್ರಮಾಣವು ಅಪಾಯದ ಮಟ್ಟ ತಲುಪುತ್ತಿದ್ದು, ಈ ಹಿನ್ನಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಹೆಚ್ಚುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಶಿಫಾರಸ್ಸು ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ದೆಹಲಿ-ಎನ್‌ಸಿಆರ್ ಮತ್ತು ಗಡಿ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಅಪಾಯಕಾರಿ ಮಟ್ಟವಾದ 450ಕ್ಕೆ ತಲುಪಿದ್ದು, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಕಮಿಷನ್ (CAQM) ಹೊಸ ವಾಯು ಮಾಲಿನ್ಯ ನೀತಿಯ ಅಡಿಯಲ್ಲಿ ಕೆಲವು ಕಠಿಣ ಶಿಫಾರಸ್ಸುಗಳನ್ನು ಸೂಚಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

2026 ರ ವೇಳೆಗೆ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್-ಚಾಲಿತ ಆಟೋಗಳು ಮತ್ತು ಬಿಎಸ್-4 ಡೀಸೆಲ್ ಕಾರುಗಳನ್ನು ನಿಷೇಧಿಸುವುದಾಗಿ ಘೋಷಿಸಿದ್ದು, 2026ರ ವೇಳೆಗೆ ದೆಹಲಿಯಲ್ಲಿರುವ ಪ್ರತಿಯೊಂದು ಡೀಸೆಲ್ ಚಾಲನೆಯಲ್ಲಿರುವ ಆಟೋ ರಿಕ್ಷಾಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಹೇಳಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಡೀಸೆಲ್ ಆಟೊಗಳ ಬದಲಿಗೆ ಸಿಎನ್‌ಜಿ ಮತ್ತು ಇವಿ ಆಟೋಗಳಿಗೆ ಮಾತ್ರ ಚಾಲನೆಗೆ ಅವಕಾಶ ನೀಡುವುದಾಗಿ ಹೇಳಿಕೊಂಡಿದ್ದು, ಬಿಎಸ್-4 ಪೆಟ್ರೋಲ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಡೀಸೆಲ್ ಕಾರುಗಳನ್ನು ನಿಷೇಧ ಮಾಡಲಾಗುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-6 ಮಾನದಂಡ ಹೊಂದಿರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಮಾಲಿನ್ಯ ಹೊರಸೂಸುವಿಕೆಯಲ್ಲಿ ಗಮನಾರ್ಹವಾದ ಬದಲಾವಣೆ ಅಳವಡಿಕೊಂಡಿರುವುದರಿಂದ ಬಿಎಸ್-4 ಮಾನದಂಡದ ಪೆಟ್ರೋಲ್ ಕಾರುಗಳನ್ನು ಬಿಟ್ಟು ಡೀಸೆಲ್ ಚಾಲಿತ ಕಾರುಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಆದಾಗ್ಯೂ, ಈ ನಿರ್ಬಂಧವು ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವ ವಾಹನಗಳ ಮೇಲೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಗುಣಮಟ್ಟ ನಿರ್ವಹಣಾ ಆಯೋಗವು 2023 ರಿಂದಲೇ ಹಳೆಯ ಡೀಸೆಲ್ ವಾಹನಗಳಿಗೆ ಪರ್ಮಿಟ್ ನೀಡದಿರಲು ನಿರ್ಧರಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ವಾಯು ಗುಣಮಟ್ಟ ಸೂಚ್ಯಂಕವು 450 ದಾಟಿರುವುದರಿಂದ ಜನರ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗುತ್ತಿದ್ದು, ಇದರಿಂದಾಗಿ ದೆಹಲಿಯಲ್ಲಿನ ಜನ ಉಸಿರಾಟಕ್ಕೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಆಯೋಗದ ಮಾಹಿತಿ ಪ್ರಕಾರ ದೆಹಲಿಯಲ್ಲಿ ಮಾಲಿನ್ಯ ತಗ್ಗಿಸಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುತ್ತಿದ್ದು, 2023 ರಿಂದ ಡೀಸೆಲ್ ವಾಹನಗಳನ್ನು ನಿಷೇಧಿಸುವ ಮೂಲಕ ಇದನ್ನು ಪ್ರಾರಂಭಿಸಲಾಗುವುದು ಎಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಮುಂಬರುವ ಜನವರಿ 1, 2023 ರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಆಟೋಗಳಿಗೆ ಪರ್ಮಿಟ್‌ಗಳನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದ್ದು, ಬದಲಾಗಿ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆಟೋಗಳಿಗೆ ಮಾತ್ರ ಪರ್ಮಿಟ್‌ಗಳನ್ನು ಅನುಮತಿಸಲಾಗುವುದು ಎಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ನಿಷೇಧದ ಜೊತೆಗೆ ದೆಹಲಿಯಲ್ಲಿ ಸಿಎನ್‌ಜಿ ನಿಲ್ದಾಣಗಳನ್ನು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ಹೆಚ್ಚಿಸಲು ಆಯೋಗಕ್ಕೆ ನಿರ್ದೇಶನ ನೀಡಲಾಗಿದ್ದು, ದೂರದ ವಾಹನಗಳಿಗೂ ಹೆದ್ದಾರಿಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಹೊಸ ಮಾನದಂಡಗಳ ಪ್ರಕಾರ ಚಾಲ್ತಿಯಲ್ಲಿರುವ ಹಳೆಯ ಡೀಸೆಲ್ ವಾಹನಗಳು ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ನೈಟ್ರೋಜನ್ ಆಕ್ಸೈಡ್ (NOx) ಸಂಯುಕ್ತಗಳನ್ನು ಹೊರಸೂಸುತ್ತಿದ್ದು, ಇದು ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಇದಕ್ಕೆ ವ್ಯತಿರಿಕ್ತವಾಗಿ ಬಿಎಸ್-4 ಡೀಸೆಲ್ ವಾಹನಗಳು NOx ಹೊರಸೂಸುವಿಕೆಯ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿದ್ದು, ಈ ವಿಚಾರದಲ್ಲಿ ಬಿಎಸ್-4 ಮಾನದಂಡ ಹೊಂದಿರುವ ಪೆಟ್ರೋಲ್ ಮಾದರಿಗಳು ತುಸು ಸುಧಾರಣೆ ಹೊಂದಿವೆ. ಆದರೆ ಡೀಸೆಲ್ ಮಾದರಿಗಳಿಂದ ಹೊರಸೂಸುವ ಮಾಲಿನ್ಯವು ಸಾಕಷ್ಟು ಅಪಾಯಕಾರಿಯಾಗಿದ್ದು, ಬಿಎಸ್-6 ಮಾನದಂಡ ಹೊಂದಿರುವ ಡೀಸೆಲ್ ವಾಹನಗಳು ಇದೀಗ ಸಾಕಷ್ಟು ಸುಧಾರಣೆ ಕಂಡಿವೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಹೀಗಾಗಿ ಹೊಸ ನಿರ್ಧಾರದಿಂದ ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸುಮಾರು 9.50 ಲಕ್ಷಕ್ಕೂ ಹೆಚ್ಚು ಬಿಎಸ್-4 ಮಾನದಂಡ ಹೊಂದಿರುವ ಡೀಸೆಲ್ ವಾಹನಗಳು ನಿಷೇಧಿಸಬಹುದಾಗಿದ್ದು, ದೆಹಲಿಯಲ್ಲಿ 1 ಕೋಟಿ ನೋಂದಾಯಿತ ವಾಹನಗಳ ಪೈಕಿ ಕೇವಲ 10 ಲಕ್ಷ ವಾಹನಗಳು ಮಾತ್ರ ಬಿಎಸ್-6 (ಭಾರತ್ ಸ್ಟೇಜ್-6) ಮಾನದಂಡ ಹೊಂದಿವೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ಇದರಿಂದ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಕಮಿಷನ್ (CAQM) ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಬಿಎಸ್-3 ಮಾನದಂಡದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಜೊತೆ ಬಿಎಸ್-4 ಡೀಸೆಲ್ ಕಾರುಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಎಸ್-4 ವಾಹನಗಳ ಸಂಚಾರ ನಿಷೇಧಕ್ಕೆ ಸಿದ್ದತೆ

ದೆಹಲಿ-ಎನ್‌ಸಿಆರ್‌ನಲ್ಲಿ ಈಗಾಗಲೇ 10 ವರ್ಷಕ್ಕಿಂತ ಹಳೆಯದಾದ ಎಲ್ಲಾ ಡೀಸೆಲ್ ವಾಹನಗಳನ್ನು ಮತ್ತು 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಪೆಟ್ರೋಲ್ ವಾಹನಗಳ ಮೇಲೂ ನಿಷೇಧ ಹೇರಲಾಗಿದ್ದು, ಇದೀಗ ಹಂತ-ಹಂತವಾಗಿ ಬಿಎಸ್-3 ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಜೊತೆಗೆ ಬಿಎಸ್-4 ಮಾನದಂಡ ಡೀಸೆಲ್ ವಾಹನಗಳನ್ನು ನಿಷೇಧಿಸಲು ಸಿದ್ದತೆ ನಡೆಸಲಾಗುತ್ತಿದೆ.

Most Read Articles

Kannada
English summary
Delhi govt will ban bs 4 diesel vehicles soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X