ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಭಾರತೀಯ ಆಟೋ ಉದ್ಯಮದಲ್ಲಿ ಒಂದು ಕಾಲದಲ್ಲಿ ಧೂಳೆಬ್ಬಿಸಿದ್ದ ಮಹೀಂದ್ರಾ ಸ್ಕಾರ್ಪಿಯೋ ಇದೀಗ ತನ್ನ ಸೆಕೆಂಡ್ ಇನ್ನಿಂಗ್ಸ್‌ ಆರಂಭಿಸಲು ಹೊಸ ತಲೆಮಾರಿನ ಮಹೀಂದ್ರಾ ಸ್ಕಾರ್ಪಿಯೊ-ಎನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದೆ. ಕಂಪನಿಯು ಈಗಾಗಲೇ ಹಲವು ಟೀಸರ್‌ಗಳನ್ನು ಆಗಾಗ್ಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಟೀಸರ್ ಹೊರತುಪಡಿಸಿ ಮಹೀಂದ್ರಾ ತಮ್ಮ ಸ್ಕಾರ್ಪಿಯೋ-ಎನ್ ಎಸ್‌ಯುವಿ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ, ಈ ಎಸ್‌ಯುವಿಗೆ ಸಂಬಂಧಿಸಿದ ಕೆಲ ವಿವರಗಳು ಈಗ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿವೆ. ಇದು ಸಾಲದೆಂಬಂತೆ ಇತ್ತೀಚೆಗೆ, ಸ್ಕಾರ್ಪಿಯೋ NSUV ಬಗ್ಗೆ ಹೆಚ್ಚಿನ ವಿವರಗಳು ಸೋರಿಕೆಯಾಗಿವೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಇತ್ತೀಚಿನ ವಿವರಗಳ ಪ್ರಕಾರ, ಮುಂಬರುವ 2022ರ ಮಹೀಂದ್ರಾ ಸ್ಕಾರ್ಪಿಯೋ-ಎನ್‌ ಎಸ್‌ಯುವಿಯು 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 400 ಎನ್‌ಎಂ ಟಾರ್ಕ್ ಮತ್ತು 172 ಬಿಹೆಚ್‌ಪಿ ಉತ್ಪಾದಿಸುತ್ತದೆ. ಈ ಎಂಜಿನ್‌ನ ಟಾರ್ಕ್ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 370 Nm ಗೆ ಸೀಮಿತವಾಗಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಹೆಚ್ಚುವರಿಯಾಗಿ ಹೊಸ 2022 ಮಹೀಂದ್ರಾ ಸ್ಕಾರ್ಪಿಯೋ-ಎನ್ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೂ ಲಭ್ಯವಿರಲಿದೆ. ಇದು ಗರಿಷ್ಠ 197bhp ಶಕ್ತಿಯನ್ನು ಉತ್ಪಾದಿಸುತ್ತದೆ. ಹೊಸ ಎಸ್‌ಯುವಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಕುತೂಹಲಕಾರಿಯಾಗಿ, ಮುಂಬರುವ 2022 ರ ಮಹೀಂದ್ರಾ ಸ್ಕಾರ್ಪಿಯೋ-ಎನ್‌ನ ಸ್ವಯಂಚಾಲಿತ ರೂಪಾಂತರವು ಮ್ಯಾನುವಲ್ ರೂಪಾಂತರಗಳಲ್ಲಿ ನೀಡಲಾದ 17-ಇಂಚಿನ ಅಲಾಯ್ ವೀಲ್‌ಗಳ ಬದಲಿಗೆ ದೊಡ್ಡ 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಮಹೀಂದ್ರಾ ಸ್ಕಾರ್ಪಿಯೊ-ಎನ್‌ಗಾಗಿ ಈ ಹಿಂದೆ ಬಿಡುಗಡೆ ಮಾಡಲಾದ ಟೀಸರ್‌ನಲ್ಲಿ ಎಸ್‌ಯುವಿ 'ಹೈಸ್ಟ್ ಕಮಾಂಡ್ ಸೀಟಿಂಗ್' ಅನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಮುಂಬರುವ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್‌ಎಸ್‌ಯುವಿ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರಲಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಲ್ಯಾಡರ್-ಆನ್-ಫ್ರೇಮ್ ಚಾಸಿಸ್‌ನಲ್ಲಿ ನಿರ್ಮಿಸಲಾಗುವುದು ಮತ್ತು ಸುಧಾರಿತ ಪೆಂಟಾ ಲಿಂಕ್ ಸಸ್ಪೆನ್ಷನ್ ಸೆಟಪ್ ಅನ್ನು ಸಹ ಹೊಂದಿರುತ್ತದೆ. ಹೆಚ್ಚುವರಿಯಾಗಿ, ಸೋರಿಕೆಯಾದ ಮಾಹಿತಿಯು ಹೊಸ 2022 ಮಹೀಂದ್ರಾ ಸ್ಕಾರ್ಪಿಯೊ-ಎನ್ ಐಚ್ಛಿಕ 4-ಮೋಡ್ ಫೋರ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಕಂಪನಿಯು ಈ SUV ಯಲ್ಲಿ ನೀಡಲಿರುವ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, 12-ಸ್ಪೀಕರ್ ಸೋನಿ ಆಡಿಯೋ ಸಿಸ್ಟಮ್, 3D ಸೌಂಡ್ ಸ್ಟೇಜಿಂಗ್, ಡ್ರೈವರ್ ಡ್ರೋಸಿನೆಸ್ ಅಲರ್ಟ್, ಸನ್‌ರೂಫ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಟೈಪ್, ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಕಂಪನಿಯು ಮಹೀಂದ್ರಾ ಸ್ಕಾರ್ಪಿಯೋ-ಎನ್‌ಎಸ್‌ಯುವಿಯ ಸುರಕ್ಷತಾ ಮಾನದಂಡಗಳನ್ನು ಸೂಚಿಸುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಅವರ ಪ್ರಕಾರ, ಈ SUV 6 ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟ್ರಾಕ್ಷನ್ ಕಂಟ್ರೋಲ್ (TC), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಹೋಮದಿರಲಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಮಹೀಂದ್ರಾ ಸ್ಕಾರ್ಪಿಯೊ ಎನ್ ಬಣ್ಣ ಆಯ್ಕೆಗಳ ಮಾಹಿತಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಇದು ವೈಟ್, ಸಿಲ್ವರ್, ರೆಡ್, ಬ್ಲೂ, ಗ್ರೀನ್, ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ವಿನ್ಯಾಸ ನೋಡುವುದಾದರೆ, ಮುಂಭಾಗದ ತುದಿ, ಬಾಕ್ಸಿ ಟ್ವಿನ್-ಪಾಡ್ ಹೆಡ್‌ಲ್ಯಾಂಪ್‌ಗಳು ಮತ್ತು ಟ್ವಿನ್ ಟೈಲ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಬೆಲೆಗೆ ಸಂಬಂಧಿಸಿದಂತೆ, ಮಹೀಂದ್ರಾ ತನ್ನ ಹೊಸ ಸ್ಕಾರ್ಪಿಯೋ-ಎನ್ ಮಾದರಿಯನ್ನು ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸುಮಾರು ರೂ. ಅಂದಾಜು 12 ಲಕ್ಷ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಎಸ್ ಯುವಿಗಳ ಬಿಗ್ ಡ್ಯಾಡಿ ಎಂದೇ ಬಣ್ಣಿಸಲಾಗಿರುವ ಮಹೀಂದ್ರಾ ಸ್ಕಾರ್ಪಿಯೊದಲ್ಲಿನ ಹೊಸ ಮಾದರಿಯೂ ಇದೇ ರೀತಿಯಲ್ಲಿ ಯಶಸ್ವಿಯಾಗಲಿದೆ ಎಂದು ಕಂಪನಿ ಆಶಿಸಿದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಕಂಪನಿಯು ಹೊಸ ಸ್ಕಾರ್ಪಿಯೋ-ಎನ್ ಅನ್ನು ಅಧಿಕೃತವಾಗಿ ಜೂನ್ 27, 2022 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಹೊಸ ಸ್ಕಾರ್ಪಿಯೋ-ಎನ್‌ಎಸ್‌ಯುವಿ ಪ್ರಸ್ತುತ ಸ್ಕಾರ್ಪಿಯೋಗಿಂತ ದೊಡ್ಡದಾಗಿ ಕಾಣುತ್ತದೆ. ಮಹೀಂದ್ರಾ XUV700 ನಂತೆ, ಇದು ಲೇನ್-ಕೀಪಿಂಗ್ ಅಸಿಸ್ಟ್, ಆಕ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಬ್ಲೈಂಡ್-ಸ್ಪಾಟ್ ಅಸಿಸ್ಟ್ ಮತ್ತು ಇನ್ನೂ ಅನೇಕ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ.

ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ವಿನ್ಯಾಸ, ವೈಶಿಷ್ಟ್ಯಗಳ ಕುರಿತು ಮತ್ತಷ್ಟು ವಿವರಗಳು ಸೋರಿಕೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ವಾಹನ ಮಾರುಕಟ್ಟೆಯಲ್ಲಿ ಮಹೀಂದ್ರಾಗೆ ಭಾರೀ ಬೇಡಿಕೆ ತಂದುಕೊಟ್ಟಿದ್ದ ಸ್ಕಾರ್ಪಿಯೋ ಮಾದರಿಯು, ಇತರ ಬ್ರಾಂಡ್‌ಗಳ ಹೊಸ ಕಾರುಗಳಲ್ಲಿನ ಹಲವು ವೈಶಿಷ್ಟ್ಯಗಳ ಪೈಪೋಟಿಯಿಂದಾಗಿ ತುಸು ಹಿಂದೆ ಸರಿದಿದೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ ಹೊಸ ತಲೆಮಾರಿನ ಸ್ಕಾರ್ಪಿಯೋ-ಎನ್ ತನ್ನ ಪೂರ್ವ ವೈಭವವನ್ನು ಹಿಂಪಡೆಯಲಿದೆಯೇ ಎಂದು ಕಾದುನೋಡಬೇಕಿದೆ.

Most Read Articles

Kannada
English summary
Design and features of the new Mahindra Scorpio N have been leaked
Story first published: Tuesday, June 7, 2022, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X