ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಕ್ಷ ರೂ.ವರೆಗೆ ಉಳಿಸಬಹುದು

ಕಾರು ಕಂಪನಿಗಳು ಹಬ್ಬಗಳ ಸಂದರ್ಭದಲ್ಲಿ ತಮ್ಮ ವಾಹನಗಳ ಮೇಲೆ ಆಕರ್ಷಕ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುತ್ತಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಕೇವಲ 10 ದಿನಗಳಲ್ಲಿ 5.39 ಲಕ್ಷ ಕಾರುಗಳು ಮಾರಾಟವಾಗಿವೆ. ಇದೀಗ ದೀಪಾವಳಿಗೂ ಹಲವು ಕಾರು ಕಂಪನಿಗಳು ಹಲವು ರಿಯಾಯಿತಿಗಳನ್ನು ನೀಡುತ್ತಿವೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

ನಿಮ್ಮ ಮನೆಗೆ ಹೊಸ SUV ಅನ್ನು ತರಲು ನೀವು ಯೋಜಿಸುತ್ತಿದ್ದರೆ, ಅವುಗಳಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ನೀವು ತಿಳಿಯಲೇಬೇಕು. ಈ ದೀಪಾವಳಿಯಲ್ಲಿ ಅತ್ಯಧಿಕ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಮಾರಾಟವಾಗುತ್ತಿರುವ ಐದು SUV ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

1. ಮಹೀಂದ್ರಾ ಅಲ್ಟುರಾಸ್ ಜಿ4

ಮಹೀಂದ್ರಾದ ಐಷಾರಾಮಿ ಪೂರ್ಣ ಗಾತ್ರದ SUV Alturas G4 ಅನ್ನು ಖರೀದಿಸುವ ಮೂಲಕ ಈ ದೀಪಾವಳಿಯಲ್ಲಿ ನೀವು ದೊಡ್ಡ ಮೊತ್ತವನ್ನು ಉಳಿಸಬಹುದು. ಈ SUV ಯಲ್ಲಿ ಕಂಪನಿಯು 3 ಲಕ್ಷದವರೆಗೆ ಕೊಡುಗೆಗಳನ್ನು ನೀಡುತ್ತಿದೆ. ಮಹೀಂದ್ರಾ ಈ ದೀಪಾವಳಿಯಲ್ಲಿ Alturas G4 ನಲ್ಲಿ 2.20 ಲಕ್ಷ ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡುತ್ತಿದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

ಇದಲ್ಲದೇ ಎಸ್‌ಯುವಿಯನ್ನು 20,000 ರೂಪಾಯಿ ಮೌಲ್ಯದ ಉಚಿತ ಬಿಡಿಭಾಗಗಳು, 5,000 ರೂಪಾಯಿಗಳ ವಿನಿಮಯ ಪ್ರಯೋಜನ ಮತ್ತು 11,500 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. Mahindra Alturas G4 ಬೆಲೆ ರೂ. 30.68 ಲಕ್ಷದಿಂದ ಪ್ರಾರಂಭವಾಗಿ ರೂ. 31.88 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

ಮಹೀಂದ್ರಾ Alturas G4 2-ವೀಲ್ ಡ್ರೈವ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರ 4-ವೀಲ್ ಡ್ರೈವ್ ರೂಪಾಂತರವನ್ನು ಸ್ಥಗಿತಗೊಳಿಸಲಾಗಿದೆ. ಇದು 181 bhp ಉತ್ಪಾದಿಸುವ 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಮರ್ಸಿಡಿಸ್ ಮೂಲದ 7-ಸ್ಪೀಡ್ ಟ್ರಾನ್ಸ್‌ಮಿಷನ್‌ ಅನ್ನು ಬಳಸುತ್ತದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

2. ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಈ ಪಟ್ಟಿಯಲ್ಲಿ ಎರಡನೇ SUV ರಿಯಾಯಿತಿಯೊಂದಿಗೆ ಲಭ್ಯವಿರುತ್ತದೆ. ಈ ದೀಪಾವಳಿಯಲ್ಲಿ ನೀವು ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ರೂ. 2 ಲಕ್ಷದವರೆಗೆ ಉಳಿಸಬಹುದು. ಇದರಲ್ಲಿ ರೂ 1.75 ಲಕ್ಷ ನಗದು ರಿಯಾಯಿತಿ, ರೂ 20,000 ಮೌಲ್ಯದ ಉಚಿತ ಪರಿಕರಗಳು ಮತ್ತು ರೂ. 4,000 ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

ಹೊಸ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಆಗಸ್ಟ್ 19, 2022 ರಂದು ವಿವಿಧ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು S ಮತ್ತು S11 ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಸ್ಕಾರ್ಪಿಯೋ ಕ್ಲಾಸಿಕ್ ಬೆಲೆ ರೂ. 11.99 ಲಕ್ಷದಿಂದ ಪ್ರಾರಂಭವಾಗಿ ಟಾಪ್‌-ಎಂಡ್ ಮಾಡಲ್ ರೂ. 15.49 ಲಕ್ಷದವರೆಗೆ (ಎಕ್ಸ್ ಶೋ ರೂಂ) ಹೋಗುತ್ತದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

3. ಹುಂಡೈ ಕೋನಾ ಎಲೆಕ್ಟ್ರಿಕ್

ಈ ಹಬ್ಬಕ್ಕೆ ರಿಯಾಯಿತಿಯೊಂದಿಗೆ ಲಭ್ಯವಿರುವ ಏಕೈಕ ಎಲೆಕ್ಟ್ರಿಕ್ ಕಾರು ಹ್ಯುಂಡೈ ಕೋನಾ EV ಆಗಿದೆ. ಕಂಪನಿಯು ಈ ಕಾರಿನ ಮೇಲೆ 1 ಲಕ್ಷ ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡುತ್ತಿದೆ. ಕೋನಾ ಎಲೆಕ್ಟ್ರಿಕ್ ಅನ್ನು ಭಾರತದಲ್ಲಿ ಒಂದೇ ರೂಪಾಂತರದಲ್ಲಿ 25.3 ಲಕ್ಷ ರೂ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

ಕಂಪನಿಯು ಕೋನಾ ಇವಿಯನ್ನು ಪೋಲಾರ್ ವೈಟ್, ಫ್ಯಾಂಟಮ್ ಬ್ಲ್ಯಾಕ್, ಟೈಫೂನ್ ಸಿಲ್ವರ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಮತ್ತು ಟೈಫೂನ್ ಸಿಲ್ವರ್‌ನ ಮಿಶ್ರ ಬಣ್ಣದ ಆಯ್ಕೆಗಳಲ್ಲಿ ನಾಲ್ಕು ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಎಲೆಕ್ಟ್ರಿಕ್ SUV 39.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

ಇದರ ಎಲೆಕ್ಟ್ರಿಕ್ ಮೋಟಾರ್ 134 bhp ಪವರ್ ಮತ್ತು 395 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹುಂಡೈ ಕೋನಾ EV ಸಂಪೂರ್ಣ ಚಾರ್ಜ್‌ನಲ್ಲಿ 450 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು 17-ಇಂಚಿನ ಅಲಾಯ್ ವೀಲ್‌ಗಳು, ಆಟೋ ಹೆಡ್‌ಲೈಟ್, ಎಲ್‌ಇಡಿ ಟೈಲ್‌ಲೈಟ್, ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್ ಮತ್ತು ರೂಫ್ ರೈಲ್‌ಗಳನ್ನು ಹೊಂದಿದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

4. ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ತನ್ನ ಪ್ರಮುಖ ಕಾಂಪ್ಯಾಕ್ಟ್ ಎಸ್‌ಯುವಿಯಾದ ಟೈಗನ್‌ಗಾಗಿ ಈ ದೀಪಾವಳಿಯಲ್ಲಿ ರೂ. 80,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯು ಇತ್ತೀಚೆಗೆ ತನ್ನ ವಾರ್ಷಿಕೋತ್ಸವದ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಫೋಕ್ಸ್‌ವ್ಯಾಗನ್ ಟೈಗಾನ್ ಅನ್ನು 1.0-ಲೀಟರ್, 3-ಸಿಲಿಂಡರ್ TSI ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್, 4-ಸಿಲಿಂಡರ್ TSI ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಆಪಲ್ ಕಾರ್ಪ್ಲೇ/ಆಂಡ್ರಾಯ್ಡ್ ಆಟೋ ಜೊತೆಗೆ ವೈರ್‌ಲೆಸ್), ಎಂಟು ಇಂಚಿನ ಡ್ರೈವರ್ ಡಿಸ್ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ದಿಪಾವಳಿ ಡಿಸ್ಕೌಂಟ್: ಈ 5 SUV ಗಳ ಮೇಲೆ ಭರ್ಜರಿ ಆಫರ್, 3 ಲಕ್ಷ ರೂ.ವರೆಗೆ ಉಳಿಸಬಹುದು

5. ನಿಸ್ಸಾನ್ ಕಿಕ್ಸ್

ಈ ದೀಪಾವಳಿಯಲ್ಲಿ ನಿಸ್ಸಾನ್ ತನ್ನ ಕಿಕ್ಸ್ ಕಾಂಪ್ಯಾಕ್ಟ್ SUV ಮೇಲೆ ಕೊಡುಗೆಗಳನ್ನು ನೀಡುತ್ತಿದೆ. ಈ ಹಬ್ಬಕ್ಕೆ ನಿಸ್ಸಾನ್ ಕಿಕ್ಸ್‌ಗಾಗಿ ರೂ.60,000 ವರೆಗೆ ಉಳಿಸಬಹುದು. ಆಫರ್‌ಗಳು 30,000 ರೂಪಾಯಿಗಳ ವಿನಿಮಯ ಬೋನಸ್, 21,000 ರೂಪಾಯಿಗಳ ನಗದು ಲಾಭ ಮತ್ತು 10,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿವೆ. ಈ ದೀಪಾವಳಿಗೆ ನೀವು ನಿಸ್ಸಾನ್ ಕಿಕ್ಸ್ ಅನ್ನು ಶೇಕಡಾ 7 ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಖರೀದಿಸಬಹುದು.

Most Read Articles

Kannada
English summary
Diwali Discount Great offer on these 5 SUVs save up to Rs 3 Lakh
Story first published: [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X