ಭಾರತದಲ್ಲಿ ಎಷ್ಟು ಮಂದಿಗೆ ಎಲೆಕ್ಟ್ರಿಕ್ ವಾಹನ ಖರೀದಿಸುವ ಆಸಕ್ತಿಯಿದೆ ಗೊತ್ತಾ?

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಉತ್ತಮ ಪ್ರಗತಿ ಸಾಧಿಸಿದೆ. ಇದಕ್ಕೆ ಸಾಕ್ಷಿಯೆಂಬಂತೆ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಕುರಿತು ಖಾಸಗಿ ಕಂಪನಿಯೊಂದು ಇತ್ತೀಚೆಗೆ ನಡೆಸಿದ ಅಧ್ಯಯನದ ಫಲಿತಾಂಶಗಳು ಧನಾತ್ಮಕ ಬೆಳವಣಿಗೆಯನ್ನು ಬಹಿರಂಗಪಡಿಸಿವೆ.

ಸೈಬರ್ ಮೀಡಿಯಾ ರಿಸರ್ಚ್ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಬಗ್ಗೆ ಅಧ್ಯಯನ ನಡೆಸಿದ್ದು, ಶೇಕಡಾ 46 ರಷ್ಟು ಭಾರತೀಯ ಗ್ರಾಹಕರು ಇವಿ ವಾಹನಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಶೇ 54 ರಷ್ಟು ಗ್ರಾಹಕರು ಇವಿಗಳ ಗುಣಮಟ್ಟದ ಬಗ್ಗೆ ಸಂದೇಹ ಹೊಂದಿದ್ದಾರೆ.

ಗ್ರಾಹಕರು ವ್ಯಾಪ್ತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದರೆ ಅವರು ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಹೆಚ್ಚು ಯೋಚಿಸುತ್ತಿರುವುದಾಗಿ ಸಂಶೋಧನಾ ಫಲಿತಾಂಶಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯಗಳ ಕೊರತೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ನಿಧಾನವಾಗುತ್ತಿದೆ.

ಇದೀಗ ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವೂ ಬೆಳೆಯುತ್ತಿದೆ. ಪ್ರಮುಖ ನಗರಗಳಲ್ಲಿ ಅನೇಕ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಬಂದಿವೆ. ಅಲ್ಲದೆ ಕಂಪನಿಗಳು ಸಹಕಾರಿ ವಿಧಾನದಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸುತ್ತಿವೆ. ಭಾರತದಲ್ಲಿ ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯ ಶೀಘ್ರದಲ್ಲೇ ಲಭ್ಯವಾಗಲಿದೆ. ಹಾಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಚಾರ್ಜಿಂಗ್ ರಚನೆಗಳು ಅಗತ್ಯವಿಲ್ಲ ಎಂದು ಜನರು ಭಾವಿಸುತ್ತಾರೆ.

ಆದರೆ ಜನರು ಎಲೆಕ್ಟ್ರಿಕ್ ವಾಹನಗಳ ಗುಣಮಟ್ಟದ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸರಣಿ ಬೆಂಕಿ ಅವಘಡಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳ ಗುಣಮಟ್ಟದಲ್ಲಿ ಸಮಸ್ಯೆ ಇದೆಯೇ ಎಂದು ಉಳಿದ ಶೇ50 ರಷ್ಟು ಜನರು ಖರೀದಿಸಲು ಹಿಂಜರಿಯುತ್ತಿರುವುದಾಗಿ ಈ ಅಧ್ಯಯನವು ವರದಿ ಮಾಡಿದೆ.

ಗುಣಮಟ್ಟ ಎಂದರೆ ಕಾರಿನ ಬಾಹ್ಯ ಗುಣಮಟ್ಟ ಮಾತ್ರವಲ್ಲದೆ ವಾಹನಗಳಲ್ಲಿ ಬಳಸುವ ಬಿಡಿಭಾಗಗಳ ಗುಣಮಟ್ಟವೂ ಕೂಡ ಎಂದು ವರದಿ ಹೇಳಿದೆ. ಕೆಲ ಎಲೆಕ್ಟ್ರಿಕ್ ವಾಹನ ತಯಾರಕರು ನಿಯಮಿತ ಪರೀಕ್ಷಾ ಹಂತವನ್ನು ಮುಗಿಸದೆ ತಮ್ಮ ವಾಹಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸುತ್ತಿರುವುದು ಬೆಂಕಿ ಅವಘಡಗಳಿಗೆ ಪ್ರಮುಖ ಕಾರಣವಾಗಿದೆ.

ಇದರ ಜೊತೆಗೆ ವಾಹನಗಳಲ್ಲಿ ಬಳಸಲಾಗುವ ಬ್ಯಾಟರಿ ಗುಣಮಟ್ಟ ಕೂಡ ಪರಿಶೀಲಿಸಬೇಕಿದೆ. ಇವು ವಿವಿಧ ವಾತಾವರಣಕ್ಕೆ ತಕ್ಕಂತೆ ವರ್ತಿಸುತ್ತವೆ, ಉದಾಹರಣೆಗೆ ಕಳೆದ ವರ್ಷ ಬೇಸಿಗೆಯಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಅವಘಡಗಳು ವರದಿಯಾಗಿದ್ದವು. ಹಾಗಾಗಿ ಗುಣಮಟ್ಟದ ನಿರ್ಮಾಣದ ಜೊತೆಗೆ ಎಲ್ಲಾ ವಿಧಗಳಲ್ಲೂ ಬ್ಯಾಟರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಿದೆ.

ಸಬ್ಸಿಗಳಿಂದ ಬೇಡಿಕೆ ಹೆಚ್ಚಳ
ಸರ್ಕಾರದ ಹಲವು ಯೋಜನೆಗಳಿಂದಾಗಿ ಜನರು ಉತ್ಸುಕತೆಯಿಂದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಟ್ಯಾಕ್ಸ್ ಕಡಿಮೆ ಮಾಡಿ ಸಬ್ಸಿಡಿ ನೀಡುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳು ವೇಗವಾಗಿ ಮಾರಾಟವಾಗುತ್ತಿವೆ. ಹೀಗಾಗಿ ಅನೇಕ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದು, ಬ್ಯಾಟರಿ ಸಮಸ್ಯೆಗಳು ಬಗೆಹರಿದರೆ ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು.

ಈಗಲೂ ಮಾರಾಟವೇನೂ ಕಡಿಮೆಯಾಗಿಲ್ಲ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ದೊಡ್ಡ ಕ್ರಾಂತಿಯೇ ನಡೆದಿದೆ ಎಂದು ಹೇಳಬಹುದು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸಲು ಅನೇಕ ಸಬ್ಸಿಡಿಗಳನ್ನು ನೀಡುತ್ತಿರುವುದು ಸಾರ್ವಜನಿಕರಲ್ಲಿ ಎಲೆಕ್ಟ್ರಿಕ್ ಖರೀದಿಗೆ ಪ್ರಮುಖ ಕಾರಣವಾಗಿದೆ.

ಪ್ರಸ್ತುತ ಭಾರತದಲ್ಲಿ ಬ್ಯಾಟರಿ ಉತ್ಪಾದನೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಲು ಪ್ರಮುಖ ಕಾರಣವೆಂದರೆ ಅವುಗಳ ಬ್ಯಾಟರಿಗಳು. ಭಾರತದಲ್ಲಿ ವಾಹನಗಳ ಬ್ಯಾಟರಿಗಳನ್ನು ತಯಾರಿಸಿದರೆ, ಪೆಟ್ರೋಲ್ ಕಾರುಗಳಿಗಿಂತ ಕಡಿಮೆ ವೆಚ್ಚವಾಗುತ್ತದೆ. ಪ್ರಸ್ತುತ, ಗುಣಮಟ್ಟದ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವುದು ಎಲೆಕ್ಟ್ರಿಕ್ ವಾಹನ ಮಾರಾಟಗಾರರ ಮುಖ್ಯ ಉದ್ದೇಶವಾಗಿರಬೇಕು ಎಂದು ಅಧ್ಯಯನ ಹೇಳಿದೆ.

Most Read Articles

Kannada
English summary
Do you know how many people in India are interested in buying an electric vehicle
Story first published: Wednesday, November 9, 2022, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X