ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರ್ ಬ್ರಾಂಡ್ ಯಾವುದು ಗೊತ್ತಾ? ಖಂಡಿತ ಟೆಸ್ಲಾ ಮಾತ್ರ ಅಲ್ಲ!
ಜಾಗತಿಕ ಪ್ರಯಾಣಿಕ ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟವು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 2.18 ಮಿಲಿಯನ್ ಯುನಿಟ್‌ಗಳನ್ನು ತಲುಪುವ ಮೂಲಕ ಕಳೆದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಶೇಕಡಾ 61 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
Recommended Video
ಮೊದಲ ಬಾರಿಗೆ ಚೀನಾ ಮೂಲದ ಬಿವೈಡಿ ಕಂಪನಿಯು ಹೆಚ್ಚು ಮಾರಾಟವನ್ನು ದಾಖಲಿಸಿದೆ. ಈ ಮೂಲಕ EV ವಲಯದಲ್ಲಿ ವಿಶ್ವದ ಟಾಪ್ ಬ್ರಾಂಡ್ ಎನಿಸಿಕೊಂಡಿದ್ದ ಎಲೋನ್ ಮಸ್ಕ್ ಅವರ ಟೆಸ್ಲಾವನ್ನು ಹಿಂದಿಕ್ಕಿದೆ.

ಎರಡನೇ ತ್ರೈಮಾಸಿಕ ಅವಧಿಯಲ್ಲಿ BYD ಆಟೋ ಬರೋಬ್ಬರಿ 3,54,000 ಕ್ಕೂ ಹೆಚ್ಚು EV ಯುನಿಟ್‌ಗಳನ್ನು ರವಾನಿಸುವ ಮೂಲಕ ವಾರ್ಷಿವಾಗಿ ಶೇ 266 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಇನ್ನು ಟೆಸ್ಲಾದ ಜಾಗತಿಕ ಮಾರಾಟವು ಶೇ27 ರಷ್ಟು ಬೆಳೆದಿದ್ದು, 2,54,000 ಯುನಿಟ್‌ಗಳಿಗೆ ತಲುಪಿದೆ. ಇದು ನಿರೀಕ್ಷೆಗಳಿಗಿಂತ ತುಂಬಾ ಕಡಿಮೆಯಾಗಿದೆ.

ಅಮೆರಿಕಾದಲ್ಲಿ ವ್ಯಾಪಾರವು ಉತ್ತಮವಾಗಿದ್ದರೂ, ಟೆಸ್ಲಾದ ಚೀನಾದಲ್ಲಿನ ವ್ಯಾಪಾರವು Covid-19 ಸ್ಥಗಿತಗೊಳಿಸುವಿಕೆಯಿಂದ ಪ್ರಭಾವಿತವಾಗಿದೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ಪ್ರಕಾರ ಒಟ್ಟು EV ಮಾರಾಟದಲ್ಲಿ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ (PHEVs) ವಾಹನಗಳನ್ನು ಹೊರತುಪಡಿಸಿ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು (BEVs) ಶೇ 72 ರಷ್ಟು ಬೆಳವಣಿಗೆ ಸಾಧಿಸಿವೆ.

ಈ ವರದಿ ಆಧಾರದ ಮೇಲೆ EV ಮಾರಾಟದಲ್ಲಿ ಚೀನಾ ಮಾರುಕಟ್ಟೆಯು ನಾಯಕನಾಗಿ ಹೊರಹೊಮ್ಮಿದೆ, ನಂತರ ಯುರೋಪ್ ಮತ್ತು ಅಮೆರಿಕಾ ರಾಷ್ಟ್ರಗಳು ಇವೆ. ಚೀನಾದ EV ಮಾರಾಟವು 2021ರ ಎರಡನೇ ತ್ರೈಮಾಸಿಕದಲ್ಲಿ ಕೇವಲ 0.64 ಮಿಲಿಯನ್ ಯುನಿಟ್‌ಗಳು ಮಾರಟವಾಗಿದ್ದರೇ, ಈ ಬಾರಿ 1.24 ಮಿಲಿಯನ್ ಯುನಿಟ್‌ಗಳನ್ನು ತಲುಪುವ ಮೂಲಕ ಶೇ 92 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದೆ.

"ಜಾಗತಿಕ ಸೆಮಿಕಂಡಕ್ಟರ್ ಕೊರತೆಯು ಸ್ವಲ್ಪಮಟ್ಟಿಗೆ ಕಡಿಮೆಯಾದಂತೆ, ವಾಹನ ತಯಾರಕರು EV ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಮರ್ಥರಾಗಿದ್ದಾರೆ. ಮೇಲಾಗಿ, ಮಾರ್ಚ್‌ನಲ್ಲಿ ಚೀನಾದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡ ಕೋವಿಡ್ -19ನಿಂದಾಗಿ ಏಕಾಏಕಿ ಕುಸಿತವಾಗಿತ್ತು. ಇಲ್ಲಿದ್ದರೇ ಚೀನಾದಲ್ಲಿ EV ಮಾರಾಟವು ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಹಿರಿಯ ವಿಶ್ಲೇಷಕ ಸೌಮೆನ್ ಮಂಡಲ್ ಅಭಿಪ್ರಾಯಪಟ್ಟಿದ್ದಾರೆ.

2022 ರ ದ್ವಿತೀಯಾರ್ಧವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಆರ್ಥಿಕ ಕುಸಿತಗಳು, ಇಂಧನ ಬಿಕ್ಕಟ್ಟು, ಪೂರೈಕೆ ಸರಪಳಿ ಅಡಚಣೆಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚೀನಾದ ಆಟೋಮೋಟಿವ್ ಮಾರುಕಟ್ಟೆ, ವಿಶೇಷವಾಗಿ EV ಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.

2ನೇ ತ್ರೈಮಾಸಿಕ ಅವಧಿಯಲ್ಲಿ BMW ನ EV ಮಾರಾಟವು ವಾರ್ಷಿಕವಾಗಿ ಶೇ18 ರಷ್ಟು ಹೆಚ್ಚಾಗಿದೆ. BMW X3 ಮತ್ತು i-ಸರಣಿ ಮಾದರಿಗಳು BEV ವಿಭಾಗದಲ್ಲಿ ಕಂಪನಿಯನ್ನು ಮುನ್ನಡೆಸುತ್ತಿವೆ. ಅದೇ ರೀತಿ 5-ಸರಣಿ, 3-ಸರಣಿ ಮತ್ತು X5 ಮಾದರಿಗಳು PHEV (ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್) ವಿಭಾಗದಲ್ಲಿ ಮುನ್ನಡೆಸುತ್ತಿವೆ.

"EV ಅಳವಡಿಕೆಯನ್ನು ಹೆಚ್ಚಿಸುವಲ್ಲಿ ಪ್ರೋತ್ಸಾಹಕಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ವಾಹನ ತಯಾರಕರು ಮತ್ತು ಗ್ರಾಹಕರು ಇಬ್ಬರಿಗೂ ಚೀನಾದ ಬಲವಾದ ಪ್ರೋತ್ಸಾಹ ಕಾರ್ಯಕ್ರಮವು, ಆ ದೇಶವನ್ನು ಜಾಗತಿಕ EV ನಾಯಕನಾಗಲು ಸಹಾಯ ಮಾಡಿದೆ" ಎಂದು ಸಂಶೋಧನಾ ಉಪಾಧ್ಯಕ್ಷ ನೀಲ್ ಶಾ ಹೇಳಿದರು.

"ದೊಡ್ಡ ಮಾರುಕಟ್ಟೆಗಳ ಹೊರತಾಗಿ, ಭಾರತ, ಜಪಾನ್, ಥೈಲ್ಯಾಂಡ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾದಂತಹ ಸಣ್ಣ ಮಾರುಕಟ್ಟೆಗಳು EV ಖರೀದಿದಾರರು ಮತ್ತು ವಾಹನ ತಯಾರಕರಿಗೆ ನೇರವಾಗಿ ಬೆಲೆಗಳಲ್ಲಿ ರಿಯಾಯಿತಿ ಅಥವಾ ತೆರಿಗೆ ವಿನಾಯಿತಿಯಾಗಿ ವಿವಿಧ ಪ್ರಯೋಜನಗಳನ್ನು ನೀಡಲು ಪ್ರಾರಂಭಿಸಿವೆ" ಎಂದು ಅವರು ಹೇಳಿದರು.

ಭಾರತದಲ್ಲಿ BYD
BYD ಎಲೆಕ್ಟ್ರಿಕ್ ಭಾರತದಲ್ಲಿ MPV E6 ಅನ್ನು ಮಾರಾಟ ಮಾಡುತ್ತಿದೆ. ಇದು ಭಾರತದಲ್ಲಿ ಕಂಪನಿಯ ಏಕೈಕ ಮಾದರಿಯಾಗಿದೆ. BYD e6 ಬ್ಲೇಡ್ ಬ್ಯಾಟರಿ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಭಾರತದಲ್ಲಿನ ಕಂಪನಿಯ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ MPV ಆಗಿದೆ. ಈ ಬ್ಯಾಟರಿ ತಂತ್ರಜ್ಞಾನವನ್ನು 2020 ರಲ್ಲಿ ಜಾಗತಿಕವಾಗಿ ಪರಿಚಯಿಸಲಾಯಿತು.

ಇದು ಹೆಚ್ಚಿನ ಶ್ರೇಣಿ, ಹೆಚ್ಚಿನ ಸುರಕ್ಷತೆ ಮತ್ತು ದೀರ್ಘಾವಧಿಯ ಲೈಫ್‌ಟೈಪ್ ಭರವಸೆ ನೀಡುತ್ತದೆ. ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಭಾರತದಲ್ಲಿ E6 MPV ಅನ್ನು ಬಿಡುಗಡೆ ಮಾಡಿತು. ಕಂಪನಿಯು ಪ್ರಸ್ತುತ ಈ MPV ಅನ್ನು ಗ್ರಾಹಕರಿಗೆ ಫ್ಲೀಟ್ ಬಳಕೆಗಾಗಿ ಮಾತ್ರ ಮಾರಾಟ ಮಾಡುತ್ತಿದೆ. BYD E6 ಭಾರತದಲ್ಲಿ ರೂ 29.15 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.

BYD ಯ ಹೊಸ e6 MPV (ಮಲ್ಟಿ-ಪರ್ಪಸ್ ವೆಹಿಕಲ್) 71.7 kWh ಬ್ಲೇಡ್ ಬ್ಯಾಟರಿಯನ್ನು ಬಳಸುತ್ತದೆ. WLTP ರೇಟಿಂಗ್ ಪ್ರಕಾರ ನಗರ ಪರಿಸ್ಥಿತಿಗಳಲ್ಲಿ ಒಂದೇ ಚಾರ್ಜ್‌ನಲ್ಲಿ 520 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಾರು ತಯಾರಕರು ಹೇಳಿಕೊಂಡಿದ್ದಾರೆ. MPV 70kWh ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು ಇದು 180 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಲೆಕ್ಟ್ರಿಕ್ MPVಯ ಗರಿಷ್ಠ ವೇಗ ಗಂಟೆಗೆ 130 ಕಿ.ಮೀ ಆಗಿದೆ. ಎಲೆಕ್ಟ್ರಿಕ್ MPV e6 ಅನ್ನು AC ಮತ್ತು DC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯಗಳ ಮೂಲಕ ರೀಚಾರ್ಜ್ ಮಾಡಬಹುದು ಎಂದು BYD ಹೇಳಿದೆ. ಕೇವಲ ಅರ್ಧ ಗಂಟೆಯಲ್ಲಿ MPV ಅನ್ನು ಶೇ30 ರಿಂದ ಶೇ80 ರವರೆಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನ ಹೈ ಟೆಕ್ನಾಲಜಿಯಿಂದ ನಿರ್ಮಿತಗೊಂಡ ಟೆಸ್ಲಾ ಕಾರುಗಳು ಹೆಚ್ಚು ಮಾರಾಟ ದಾಖಲಿಸುವ ಮೂಲಕ ತನ್ನೊಂದಿಗೆ ಸ್ಪರ್ಧಿಸುವ ಯಾವುದೇ ಇತರ ಇವಿ ಕಂಪನಿಗಳು ಪೈಪೋಟಿ ನೀಡುವಲ್ಲಿ ವಿಫಲವಾಗಿದ್ದವು. ಇದೀಗ BYD ಎಲೆಕ್ಟ್ರಿಕ್ ವಿಭಾದಲ್ಲಿ ಭಾರಿ ಮಾರಾಟವನ್ನು ದಾಖಲಿಸಿದ್ದು, ಮುಂದಿನ ದಿನಗಳಲ್ಲಿ ಈ ದೈತ್ಯ ಕಂಪನಿಗಳ ನಡುವೆ ಗಟ್ಟಿ ಪೈಪೋಟಿ ಇರಲಿದೆ.


Click it and Unblock the Notifications