ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಇತ್ತೀಚಿಗೆ ದೆಹಲಿಯಲ್ಲಿ ವಾಹನಗಳಿಂದ ಹೊರಸೂಸುವ ಕಾರ್ಬನ್‌ನಿಂದಾಗಿ ವಾಯು ಮಾಲಿನ್ಯವು ಈ ಹಿಂದಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಜನರು ಉಸಿರಾಡಲು ಕಷ್ಟಪಡುವ ಸ್ಥಿತಿಗೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ವಾಹನಗಳ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೇರಲು ದೆಹಲಿ ಸರ್ಕಾರ ಮುಂದಾಗಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಟ್ಯಾಕ್ಸಿ ವಲಯದಲ್ಲಿ ಬಳಕೆಯಾಗುವ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ದೆಹಲಿ ರಾಜ್ಯ ಸರ್ಕಾರ ಹೊಸ ನೀತಿಯನ್ನು ಪ್ರಕಟಿಸಿದೆ. ಇದು ಟ್ಯಾಕ್ಸಿ ಸೇವೆಯಲ್ಲಿ ತೊಡಗಿರುವ ಸಾವಿರಾರು ಚಾಲಕರಿಗೆ ದೊಡ್ಡ ಆಘಾತವನ್ನು ನೀಡಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಟ್ಯಾಕ್ಸಿ ಮತ್ತು ಇತರ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಳಸಬೇಕೆಂದು ದೆಹಲಿ ಸರ್ಕಾರ ಘೋಷಿಸಿದೆ. ದೆಹಲಿ ಸರ್ಕಾರದ ಈ ಘೋಷಣೆ ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡಿದರೆ. ಟ್ಯಾಕ್ಸಿ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ಆಘಾತಕ್ಕೀಡುಮಾಡಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಸರ್ಕಾರದ ಈ ನಿಯಮವನ್ನು ಏಪ್ರಿಲ್ 1, 2030 ರಂದು ಜಾರಿಗೆ ತರಲಾಗುವುದು. ಇದನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅಲ್ಲದೆ, ಈ ಆದೇಶವನ್ನು ಉಲ್ಲಂಘಿಸುವ ಕಾಲ್ ಟ್ಯಾಕ್ಸಿ ಚಾಲಕರಿಗೆ ರೂ. 50,000 ವರೆಗೆ ದಂಡ ವಿಧಿಸಲಾಗುತ್ತದೆ. ಈ ನಿಬಂಧನೆಯು ವಿತರಣಾ ಸೇವೆಯಲ್ಲಿ ತೊಡಗಿರುವ ವಾಹನಗಳಿಗೂ ಅನ್ವಯಿಸುತ್ತದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಈ ನಿಯಮವು ಕಾಲ್ ಟ್ಯಾಕ್ಸಿಗಳು, ಡೆಲಿವರಿ ಆಟೋಗಳು ಮತ್ತು ದ್ವಿಚಕ್ರ ವಾಹನಗಳಿಗೂ ಅನ್ವಯಿಸುತ್ತದೆ. ಆದ್ದರಿಂದ, ದೆಹಲಿ ಸರ್ಕಾರದ ಈ ಘೋಷಣೆಯು ವಿತರಣಾ ಸೇವೆಗಳಲ್ಲಿ ತೊಡಗಿರುವವರಿಗೆ ಆಘಾತವನ್ನುಂಟು ಮಾಡಿದೆ. ಕಾಲ್ ಟ್ಯಾಕ್ಸಿ ಮತ್ತು ವಿತರಣಾ ಸೇವೆಗಳಲ್ಲಿ ತೊಡಗಿರುವವರನ್ನು ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸುವ ಮಾರ್ಗವಾಗಿ ದೆಹಲಿ ಸರ್ಕಾರ ಈ ಅಧಿಸೂಚನೆಯನ್ನು ಪ್ರಕಟಿಸಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ದೆಹಲಿ ಸಾರಿಗೆ ಇಲಾಖೆಯು 'ದೆಹಲಿ ಮೋಟಾರು ವಾಹನ ಬಲವರ್ಧನೆ ಯೋಜನೆ' ಶೀರ್ಷಿಕೆಯಡಿಯಲ್ಲಿ ಈ ಹೊಸ ನೀತಿಯನ್ನು ಬಿಡುಗಡೆ ಮಾಡಿದೆ. ಇದರ ಹೊರತಾಗಿ, ಕಡಿಮೆ ಸ್ಟಾರ್ ರೇಟಿಂಗ್ ಪಡೆಯುವ ಪಾಲುದಾರರ ವಿರುದ್ಧ ತಕ್ಷಣದ ಕ್ರಮವನ್ನು ಸಹ ನಿಬಂಧನೆಯು ಒದಗಿಸುತ್ತದೆ. ಅದೇನೆಂದರೆ, ಡೆಲಿವರಿ ಬಾಯ್ ಅಥವಾ ಕಾಲ್ ಟ್ಯಾಕ್ಸಿ ಡ್ರೈವರ್ ವಿರುದ್ಧದ ದೂರುಗಳಿಗೆ ಒಂದು ತಿಂಗಳ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿಯಮ ಹೇಳುತ್ತದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ನಿರ್ದಿಷ್ಟವಾಗಿ ಹೇಳುವುದಾದರೆ ಈ ನಿಯಮವು 3.5 ಸ್ಟಾರ್ ರೇಟಿಂಗ್‌ಗಳಿಗಿಂತ ಕಡಿಮೆ ಇರುವ ಚಾಲಕರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ. ಈ ಬಗ್ಗೆ ಕಂಪನಿಗಳು ವರದಿ ಪ್ರಕಟಿಸಬೇಕು ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ. ಹೀಗಾಗಿ ಇನ್ನು ಮುಂದೆ ಚಾಲಕರು ಹೆಚ್ಚುವರಿ ಹಣ ವಸೂಲಿ ಮಾಡುವುದು, ಅನಗತ್ಯವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ದೆಹಲಿ ಸರ್ಕಾರದ ಈ ರೀತಿಯ ಕ್ರಮವು ಪರಿಸರವನ್ನು ರಕ್ಷಿಸುವ ಬಗ್ಗೆ ಮಾತ್ರವಲ್ಲದೆ ರಾಜ್ಯದ ಜನರ ಕಲ್ಯಾಣದ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ. ಇತ್ತೀಚೆಗಷ್ಟೇ ಒಟಿಪಿ ವರದಿ ಮಾಡುವ ವಿಚಾರದಲ್ಲಿ ನಡೆದ ಜಗಳ ಐಟಿ ಉದ್ಯೋಗಿಯೊಬ್ಬರ ಸಾವಿನಲ್ಲಿ ಅಂತ್ಯಗೊಂಡಿದೆ. ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇಂತಹ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಈ ಹೊಸ ನಿಯಮವನ್ನು ಮಾಡಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಎಲೆಕ್ಟ್ರಿಕ್‌ ವಾಹನಗಳಿಗೆ ಕಡ್ಡಾಯ ವಿಮೆ

ಎಲೆಕ್ಟ್ರಿಕ್‌ ವಾಹನಗಳಿಗೆ ವಿಮೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್‌ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್‌ ಚಾವ್ಲಾ ಅವರ ನೇತೃತ್ವದ ವಿಭಾಗೀಯ ಪೀಠವು ವಕೀಲ ರಜತ್‌ ಕಪೂರ್‌ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ನಡೆಸಿ, ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಎಲೆಕ್ಟ್ರಿಕ್‌ ವಾಹನಗಳಿಗೆ ವ್ಯಾಪಕ ಬೇಡಿಕೆ ಉಂಟು ಮಾಡಿದೆ. ದ್ವಿಚಕ್ರ ಎಲೆಕ್ಟ್ರಿಕ್‌ ವಾಹನಗಳಿಗೆ ವಿಮೆ ಇಲ್ಲ ಎಂಬ ಮಹತ್ವದ ಪ್ರಶ್ನೆಯನ್ನು ಈ ವೇಳೆ ಎತ್ತಬೇಕಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

ಪ್ರತಿ ಗಂಟೆಗೆ ಗರಿಷ್ಠ 25 ಕಿ.ಮೀ ವೇಗ ಮೀರದ, 250 ವ್ಯಾಟ್‌ ಶಕ್ತಿಯ ಎಲೆಕ್ಟ್ರಿಕಲ್‌ ವೆಹಿಕಲ್‌ಗಳಿಗೆ ಚಾಲನಾ ಪರವಾನಗಿಯೂ ಬೇಕಿಲ್ಲ. ಇವುಗಳ ನೋಂದಣಿಯೂ ಅಗತ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳು, ಯುವಕರು ಮತ್ತು ನಿವೃತ್ತರು ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ... ಕಾಲ್ ಟ್ಯಾಕ್ಸಿ ಚಾಲಕರಿಗೆ ಬರೆ!

"ವಿಮೆಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಇಲ್ಲದಿರುವುದರಿಂದ ಹಲವು ಬಗೆಯ ವಾಹನಗಳು ರಸ್ತೆಗಿಳಿಯಲಿದ್ದು, ಇದು ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು. ಮೂರನೇ ವ್ಯಕ್ತಿ ವಿಮೆ (ಥರ್ಡ್‌ ಪಾರ್ಟಿ ಇನ್ಯೂರೆನ್ಸ್) ಅತ್ಯಗತ್ಯವಾಗಿದ್ದು, ವಿಮೆ ಔಪಚಾರಿಕತೆ ಮುಗಿಯುವವರೆಗೆ ಶೋರೂಮ್‌ನಿಂದ ವಾಹನ ತೆಗೆದುಕೊಂಡು ಹೋಗಲು ಅನುಮತಿಸಬಾರದು" ಎಂದು ಮನವಿಯಲ್ಲಿ ವಿವರಿಸಲಾಗಿದೆ.

Most Read Articles

Kannada
English summary
Draft policy for cab aggregators mandates transition to all electric vehicles by April 1 2030
Story first published: Friday, July 8, 2022, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X