ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಉತ್ತೇಜಿಸಲು ನೀತಿ ಆಯೋಗ ಕೆಲವು ಪ್ರಮುಖ ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ, ಕೇಂದ್ರ ಸರ್ಕಾರವು ಸ್ಥಾಪಿಸಿದ ಸಂಸ್ಥೆಯು ಭಾರತೀಯ ನಾಗರಿಕರಲ್ಲಿ ಇ-ಮೊಬಿಲಿಟಿ ಬಗ್ಗೆ ಜಾಗೃತಿ ಮೂಡಿಸಲು ಇ-ಅಮೃತ್ ಹೆಸರಿನ ಮೊಬೈಲ್ ಅಪ್ಲಿಕೇಶನ್ (ಆಪ್) ಅನ್ನು ಪ್ರಾರಂಭಿಸಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗಾಗಿ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಭಾರತದ ಇಂಧನ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ ಎಂದು ನೀತಿ ಆಯೋಗವು ವರದಿಯನ್ನು ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಇ-ಅಮೃತ್ ಮೊಬೈಲ್ ಅಪ್ಲಿಕೇಶನ್ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸುತ್ತದೆ. ಎಲೆಕ್ಟ್ರಿಕ್ ವಾಹನಗಳ ಪ್ರಯೋಜನಗಳನ್ನು ನಿರ್ಣಯಿಸಲು, ಉಳಿತಾಯವನ್ನು ನಿರ್ಧರಿಸಲು ಇದು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಮತ್ತು ಉದ್ಯಮದ ಅಭಿವೃದ್ಧಿಯ ಕುರಿತು ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ನೀತಿ ಆಯೋಗ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಈ ದಶಕದ ಅಂತ್ಯದ ವೇಳೆಗೆ ಭಾರತವು 600 GWh ಬ್ಯಾಟರಿ ಶೇಖರಣಾ ಸಾಮರ್ಥ್ಯವನ್ನು ಹೊಂದುವ ನಿರೀಕ್ಷೆಯಿದೆ. ಈ ವರದಿಯಲ್ಲಿನ ವಿಶ್ಲೇಷಣೆಯ ಆಧಾರದ ಮೇಲೆ, ಭಾರತದಲ್ಲಿ ಒಟ್ಟು ಬ್ಯಾಟರಿ ಸಂಗ್ರಹಣೆಯು 2030 ರ ವೇಳೆಗೆ ಸುಮಾರು 600 GW (Giga Watts) ಎಂದು ಹೇಳಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ನಂತಹ ಕ್ಷೇತ್ರಗಳು ಭಾರತದಲ್ಲಿ ಈ ಬ್ಯಾಟರಿ ಶಕ್ತಿಯನ್ನು ಹೆಚ್ಚು ಬಳಸಿಕೊಳ್ಳುತ್ತವೆ. ಭಾರತದಲ್ಲಿ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ ರಿಯೂಸ್ ಮತ್ತು ರಿಸೈಕ್ಲಿಂಗ್ ಮಾರುಕಟ್ಟೆ' ಎಂಬ ಶೀರ್ಷಿಕೆಯ ವರದಿಯಲ್ಲಿ, ನೀತಿ ಆಯೋಗ ತನ್ನ ವರದಿಯಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿಗಳು), ಸ್ಟೇಷನರಿ ಸ್ಟೋರೇಜ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ನಂತಹ ವಲಯಗಳಲ್ಲಿ ಬ್ಯಾಟರಿ ಸಂಗ್ರಹಣೆಗೆ ಭಾರಿ ಬೇಡಿಕೆಯಿದೆ ಎಂದು ಹೇಳಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ವಿದ್ಯುಚ್ಛಕ್ತಿ ಗ್ರಿಡ್‌ನಲ್ಲಿ, ಸಾರಿಗೆ ಮತ್ತು ಬ್ಯಾಟರಿ ವಿದ್ಯುತ್ ಸಂಗ್ರಹಣೆಯು ಬ್ಯಾಟರಿ ಬೇಡಿಕೆಯ ಬೆಳವಣಿಗೆಯ ಪ್ರಮುಖ ವಿಭಾಗಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮತ್ತು ಆಟೋ ಉದ್ಯಮವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ನೀತಿ ಆಯೋಗ ಸಿಇಒ ಪರಮೇಶ್ವರನ್ ಅಯ್ಯರ್ ಹೇಳಿದ್ದಾರೆ. ಮುಂದಿನ ದಶಕದಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ವೇಗವಾಗಲಿದೆ ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಈಗಾಗಲೇ 13 ಲಕ್ಷ ಇ-ವಾಹನಗಳು ನೋಂದಣಿಯಾಗಿವೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಿಂದೆಂದಿಗಿಂತಲೂ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತಯಾರಕರು ಸಹ ಹೊಸ ವಾಹನಗಳನ್ನು ಪರಿಚಯಿಸುತ್ತಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 13 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳ ನೋಂದಣಿ ವಿವರಗಳನ್ನು ಪಟ್ಟಿಯಲ್ಲಿ ಇನ್ನೂ ಸೇರಿಸಲಾಗಿಲ್ಲ ಎಂದು ಅವರು ವಿವರಿಸಿದರು. ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಮತ್ತು ವಾಟರ್ (CEEW) ವರದಿಯ ಪ್ರಕಾರ, 2050 ರಲ್ಲಿ ಭಾರತದ ಹೊಸ ಪ್ರಯಾಣಿಕ ಕಾರು ಮಾರಾಟದಲ್ಲಿ ಶೇ75ರಷ್ಟು ಎಲೆಕ್ಟ್ರಿಕ್ ಕಾರುಗಳೇ ಇರುಬಹುದು ಎಂದು ಅಂದಾಜಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಈ ವರದಿಯ ಪ್ರಕಾರ, ಭಾರತದಲ್ಲಿನ ಒಟ್ಟು ವಿದ್ಯುತ್ ಉತ್ಪಾದನೆಯ ಶೇಕಡಾ 21 ರಷ್ಟನ್ನು ಸಾರಿಗೆ ಕ್ಷೇತ್ರ ಮಾತ್ರ ಬಳಸುತ್ತದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಾರತವು ಎಲೆಕ್ಟ್ರಿಕ್ ವಾಹನಗಳಿಂದ ಕಡಿಮೆ ಕಾರ್ಬನ್ ಹೊರಸೂಸುವಿಕೆಯನ್ನು ಹೊಂದಿರಲಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ದೇಶದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯ ನಿಧಾನಗತಿಯು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ ಎಂದು ವರದಿ ಹೇಳಿದೆ. ಇದರ ಜೊತೆಗೆ ಸೆಮಿಕಂಡಕ್ಟರ್‌ಗಳ ಕೊರತೆಯು ಎಲೆಕ್ಟ್ರಿಕ್ ವಾಹನ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ ಎಂದು CEEW ಅಭಿಪ್ರಾಯಪಟ್ಟಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳು ಶೂನ್ಯ ಇಂಗಾಲವನ್ನು ಹೊರಸೂಸುತ್ತವೆ. ಪರಿಸರ ಸ್ನೇಹಿಯಾಗಿರುತ್ತವೆ, ಅವು ಪೆಟ್ರೋಲ್ / ಡೀಸೆಲ್ ವಾಹನಗಳಂತೆ ಹೆಚ್ಚು ಶಬ್ದ ಮಾಡುವುದಿಲ್ಲ. ಆದರೆ, ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಶಾಂತವಾಗಿರಬಾರದು ಎಂದು ಸರ್ಕಾರ ಹೇಳುತ್ತದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಇವಿಗಳು ಮೌನವಾಗಿರುತ್ತವೆ ಮತ್ತು ರಸ್ತೆಯಲ್ಲಿ ಪಾದಚಾರಿಗಳು ಎಚ್ಚರವಾಗಿರುವುದಿಲ್ಲ ಹೀಗಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಮಟ್ಟಿಗೆ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಕಮಿಟಿ ಕೂಡ ಹೊಸ ನಿಯಮವನ್ನು ಜಾರಿಗೆ ತರಲು ಹೊರಟಿದೆ.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಈ ನಿಬಂಧನೆಯು ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳು ಮತ್ತು ಸರಕು ವಾಹಕಗಳಿಗೆ ಅನ್ವಯಿಸುತ್ತದೆ. ಈ ಹೊಸ ನಿಯಮಗಳನ್ನು 1989 ರ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ (CMVR) ಸೇರಿಸುವ ಸಾಧ್ಯತೆಯಿದೆ. ಈ ಹೊಸ ನಿಯಮವನ್ನು ಪರಿಚಯಿಸಿದ ನಂತರ, ಎಲೆಕ್ಟ್ರಿಕ್ ಕಾರು ತಯಾರಕರು ತಮ್ಮ EV ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು.

ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಮಾಹಿತಿ ಪಡಿಯಲು ಇ-ಅಮೃತ್ ಮೊಬೈಲ್ ಆಪ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಕಮಿಟಿ ನಿಯಮ ಜಾರಿಗೆ ಬಂದ ನಂತರ EV ಕಂಪನಿಗಳು ತಮ್ಮ ವಾಹನಗಳಲ್ಲಿ ಎಕೌಸ್ಟಿಕ್ ವಾಹನ ಎಚ್ಚರಿಕೆ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ. ಇದು ಎಲೆಕ್ಟ್ರಿಕ್ ವಾಹನಗಳ ಚಾಲಕರಿಗೆ ಮಾತ್ರವಲ್ಲದೆ ಪಾದಚಾರಿಗಳಿಗೂ ಉಪಯುಕ್ತವಾಗಲಿದೆ.

Most Read Articles

Kannada
English summary
E Amrit mobile app launched to get important information about electric vehicles
Story first published: Saturday, July 23, 2022, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X