ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್‌ ನೀಡುವ ಯೂಲರ್ ಹೈಲೋಡ್ ಎಲೆಕ್ಟ್ರಿಕ್ ವಿಡಿಯೋ ರಿವ್ಯೂ

ಯೂಲರ್ ಮೋಟಾರ್ಸ್ ನಿರ್ಮಾಣದ ಹೊಸ ಹೈಲೋಡ್ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಭವಿಷ್ಯದ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೊಸ ಭರವಸೆ ಮೂಡಿಸಿದೆ.

ಹೊಸ ಯೂಲರ್ ಹೈಲೋಡ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವು ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಗರಿಷ್ಠ 688 ಕೆ.ಜಿ ತನಕ ಸರಕು ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ. ಭವಿಷ್ಯದಲ್ಲಿ ಹೊಸ ಸಂಚಲನ ಮೂಡಿಸಲಿರುವ ಹೈಲೋಡ್ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವು ಪ್ರಮುಖ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಇವಿ ವಾಹನವು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.50 ಲಕ್ಷ ಬೆಲೆ ಹೊಂದಿದೆ.

ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿ ಸಬ್ಸಡಿ ಪಡೆದುಕೊಂಡಿರುವ ಹೊಸ ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವು ಪ್ರಮುಖ ತಾಂತ್ರಿಕ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರ ಆಕರ್ಷಿಸುತ್ತಿದ್ದು, ಸದ್ಯಕ್ಕೆ ಹೊಸ ವಾಹನ ಬಿಡುಗಡೆ ಮಾಡಿ ಬುಕ್ಕಿಂಗ್ ಸ್ವಿಕರಿಸುತ್ತಿರುವ ಯೂಲರ್ ಮೋಟಾರ್ಸ್ ಕಂಪನಿಯು ಈ ತಿಂಗಳಾಂತ್ಯದಲ್ಲಿ ವಿತರಣೆ ಆರಂಭಿಸಲಿದೆ.

150 ಕಿ.ಮೀ ಮೈಲೇಜ್‌ ನೀಡುವ ಯೂಲರ್ ಹೈಲೋಡ್ ಎಲೆಕ್ಟ್ರಿಕ್

ಹೈಲೋಡ್ ಮಾದರಿಯಲ್ಲಿ ಯೂಲರ್ ಮೋಟಾರ್ಸ್ ಕಂಪನಿಯು ತನ್ನ ವಿನೂತನ 'ಆರ್ಕ್ ರಿಯಾಕ್ಟರ್ 100' ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಸರಕು ಸಾಗಾಣಿಕೆಯ ವೇಳೆ ಒತ್ತಡದಲ್ಲೂ ಇವಿ ವಾಹನದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ. ಹೊಸ ತ್ರಿ-ಚಕ್ರ ವಾಹನದಲ್ಲಿ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 72V, 12.4kW ಲಿಕ್ವಿಡ್ ಕೂಲಿಂಗ್ ಬ್ಯಾಟರಿ ಪ್ಯಾಕ್ ಜೋಡಿಸಲಾಗಿದ್ದು, 42 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ 9.1 ಬಿಎಚ್‌ಪಿ, 88.55 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೈಲೋಡ್ ಇವಿ ವಾಹನವು ಒಟ್ಟು 3,400 ಎಂಎಂ ಉದ್ದಳತೆಯೊಂದಿಗೆ 300 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಅತ್ಯುತ್ತಮ ಪ್ಲೇ ಲೋಡ್ ಕಂಟನೈರ್ ಅಳವಡಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಫ್ ಲೋಡ್ ಬಾಡಿ, ಡೆಲಿವರಿ ವ್ಯಾನ್, ಹೈ ಡೆಕ್ ಕಂಟನೈರ್ ಮತ್ತು ಫ್ಲ್ಯಾಟ್ ಡೆಕ್ ಆಯ್ಕೆ ಮಾಡಬಹುದು.

ಹೊಸ ಹೈಲೋಡ್ ಇವಿ ವಾಹನವನ್ನು ಸಾಮಾನ್ಯ ಬಳಕೆಯ ತ್ರಿ ಪಿನ್ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು ಇಲ್ಲವೇ ಫಾಸ್ಟ್ ಡಿಸಿ ಚಾರ್ಜಿಂಗ್ ಸೌಲಭ್ಯದ ಮೂಲಕ ಚಾರ್ಜ್ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಎರಡು ಮಾದರಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಕಂಪನಿಯು ಫಾಸ್ಟ್ ಚಾರ್ಜಿಂಗ್‌ನಲ್ಲಿ ಫ್ಲ್ಯಾಶ್ 6 ಮತ್ತು ಫ್ಲ್ಯಾಶ್ 27 ಎನ್ನುವ ಎರಡು ಮಾದರಿಯ ಚಾರ್ಜಿಂಗ್ ಸಾಕೆಟ್ ನೀಡಲಾಗಿದ್ದು, ಫ್ಲ್ಯಾಶ್ 6 ಮೂಲಕ ಹೊಸ ವಾಹನವು ತುಸು ನಿಧಾನವಾಗಿ ಚಾರ್ಜ್ ಆಗಲಿದ್ದರೆ ಫ್ಲ್ಯಾಶ್ 27 ಮೂಲಕ ಅತಿ ಕಡಿಮೆ ಅವಧಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಮಾಡಬಹುದಾಗಿದೆ.

Most Read Articles

Kannada
English summary
Euler hiload three wheeler kannada review video
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X