ಡ್ರೈವಿಂಗ್ ಬಾರದಿದ್ದರೂ ಕಾರು ಖರೀದಿಸಿ ಡೆಲಿವರಿ ಪಡೆದ ದಿನವೇ ಹತ್ತು ಬೈಕ್‌ಗಳಿಗೆ ಡಿಕ್ಕಿ
ಚಾಲಕನೊಬ್ಬ ಬ್ರೇಕ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿ ಬ್ರೇಕ್ ಒತ್ತುವ ಬದಲು ಆಕ್ಸಿಲರೇಟರ್ ಅನ್ನು ತುಳಿದು ದೊಡ್ಡ ಅಪಘಾತವನ್ನೇ ಮಾಡಿದ್ದಾನೆ. ಘಟನೆಯಲ್ಲಿ ಯಾರಿಗೂ ಹಾನಿಯಾಗದಿದ್ದರೂ ಡಿಕ್ಕಿಯ ರಭಸಕ್ಕೆ ಸುಮಾರು ಹತ್ತು ಬೈಕ್‌ಗಳು ನೆಲಕ್ಕುರುಳಿವೆ.

ನಮ್ಮಲ್ಲಿ ಹೆಚ್ಚಿನವರಿಗೆ ಹೊಚ್ಚಹೊಸ ಕಾರನ್ನು ಡೆಲಿವರಿ ಪಡೆದುಕೊಳ್ಳುವುದು ಕನಸಾಗಿರುತ್ತದೆ. ಏಕೆಂದರೆ ಕಾರು ಬೈಕ್‌ನಂತಲ್ಲ, ಬುಕ್ ಮಾಡಿದ ಹಲವು ತಿಂಗಳಿಗೆ ಡೆಲಿವರಿಯಾಗುತ್ತದೆ. ಕೆಲವೊಮ್ಮೆ ವರ್ಷಗಟ್ಟಲೇ ಕಾಯಬೇಕಾಗುತ್ತದೆ. ಆದರೆ ಕೆಲವರು ಕಾರನ್ನು ಹೇಗೆ ಓಡಿಸಬೇಕು ಎಂಬುದನ್ನು ಅಭ್ಯಾಸ ಮಾಡದೆ ಖರೀದಿಸಲು ಮುಂದಾಗುತ್ತಾರೆ.

ಇನ್ನು ಕೆಲವರು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅನುಸರಿಸುವ ಸುಲಭ ವಿಧಾನಗಳು ಸಮಸ್ಯೆಯನ್ನು ತಂದೊಡ್ಡುತ್ತವೆ. ಈ ವಿಡಿಯೋದಲ್ಲಿನ ಘಟನೆಯೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹೊಚ್ಚಹೊಸ ಟಾಟಾ ನೆಕ್ಸಾನ್ ಅಪಾರ್ಟ್‌ಮೆಂಟ್‌ನಂತೆ ಕಾಣುತ್ತಿರುವ ಪ್ರದೇಶಕ್ಕೆ ಪ್ರವೇಶಿಸಿ ಏಕಾಎಕಿ ದ್ವಿಚಕ್ರ ವಾಹನಗಳ ಮೇಲೆ ಹತ್ತಿರುವುದು ಹಲವರನ್ನು ದಿಗ್ಬ್ರಮೆಗೊಳಿಸಿದೆ.
ವಿಡಿಯೋವನ್ನು ನೋಡಿದರೆ ಚಾಲಕನು ತುಂಬಾ ಕಡಿಮೆ ಅನುಭವವನ್ನು ಹೊಂದಿರುವಂತೆ ತೋರುತ್ತಿದೆ. ಬ್ರೇಕ್ ಪೆಡಲ್ ಅನ್ನು ಒತ್ತುವ ಬದಲು ಆಕ್ಸೆಲೆಟರ್ ಪೆಡಲ್ ಅನ್ನು ಸಂಪೂರ್ಣ ನೆಲಸಮಗೊಳಿಸಿದ್ದಾನೆ. ಅದರ ಪರಿಣಾಮವು ಹೊಸ ನೆಕ್ಸಾನ್ ಹಲವು ಬೈಕ್‌ಗಳನ್ನು ಡಿಕ್ಕಿಹೊಡೆದು ಬಹುತೇಕ ಉರುಳಿಬಿದ್ದಂತಾಗಿದೆ. ಆದರೆ ಆ ವೇಳೆಗಾಗಲೇ ಚಾಲಕ ನಿಯಂತ್ರಣಕ್ಕೆ ತಂದಿದ್ದಾನೆ.

ಎಲ್ಲಾ ಹೂವಿನ ಅಲಂಕಾರಗಳೊಂದಿಗೆ ಹೊಸ ಬೇಸ್ ಟಾಟಾ ನೆಕ್ಸಾನ್ ಎಕ್ಸ್‌ಇ ರೂಪಾಂತರವು ಅಹಿತಕರ ಆರಂಭಿಕ ದಿನವನ್ನು ಸವಿದಿದೆ. ಕನಿಷ್ಠ ಘನ ನಿರ್ಮಾಣವನ್ನು ಹೊಂದಿರುವ ಟಾಟಾ ನೆಕ್ಸಾನ್ NCAP ಕ್ರಾಷ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿರುವ ಕಾರಣ ಚಾಲಕನಿಗೆ ಹಾನಿಯಾಗುವುದು ತೀರಾ ಕಡಿಮೆ ಎಂದೇ ಹೇಳಬಹುದು.

ಟಾಟಾ ನೆಕ್ಸಾನ್ ಪ್ರಸ್ತುತ ಬೆಲೆಯು ಮೂಲ ರೂಪಾಂತರಕ್ಕೆ ರೂ. 7.59 ಲಕ್ಷ ಮತ್ತು ಟಾಪ್-ಎಂಡ್ ಮಾಡೆಲ್‌ಗೆ (ಎಕ್ಸ್ ಶೋ ರೂಂ) 14.08 ಲಕ್ಷ ರೂ. ಇದೆ. ಈ ಕಾಂಪ್ಯಾಕ್ಟ್ SUV 1.2-ಲೀಟರ್ ಟರ್ಬೋಚಾರ್ಜ್ಡ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ 120 PS ಪವರ್ ಮತ್ತು 170 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಇದರ ಡೀಸಲ್ ವೇರಿಯಂಟ್ ಅನ್ನು ನೋಡುವುದಾದರೆ 1.5-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ನೊಂದಿಗೆ 110 PS ಪವರ್ ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಸ್ಟ್ಯಾಂಡರ್ಡ್ ಅಥವಾ 6-ಸ್ಪೀಡ್ AMT ಆಯ್ಕೆಯಾಗಿ ಪಡೆಯಬಹುದು.

ಐದು ವರ್ಷಗಳಲ್ಲಿ 4 ಲಕ್ಷ ಯುನಿಟ್ ಉತ್ಪಾದನೆ
ಗ್ರಾಹಕರ ವಿಶ್ವಾಸದಂತೆ ಹೊಸ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ನೆಕ್ಸಾನ್ ಫೇಸ್‌ಲಿಫ್ಟ್ ಮಾದರಿಯ ಬಿಡುಗಡೆಯ ನಂತರ ಹೊಸ ಕಾರಿನ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಕಂಪನಿಯು ನೆಕ್ಸಾನ್ ಬಿಡುಗಡೆ ಮಾಡಿದ ಐದು ವರ್ಷಗಳಲ್ಲಿ 4 ಲಕ್ಷ ಯುನಿಟ್ ಉತ್ಪಾದನೆ ಗುರಿತಲುಪಿದೆ. ಹೊಸ ಕಾರು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದ ನಂತರ ಕಾರು ಮಾರಾಟವು ನಿರಂತವಾಗಿ ಏರಿಕೆಯಾಗುತ್ತಿದ್ದು, ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ತೋರುತ್ತಿರುವುದು ಕೂಡಾ ಟಾಟಾ ಕಾರುಗಳ ಮಾರಾಟ ಬೆಳವಣಿಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಟಾಟಾ ಮೋಟಾರ್ಸ್ ಕಾರುಗಳ ಮಾರಾಟವು 2020ರ ಮಧ್ಯಂತರದಿಂದ ಭಾರತದಲ್ಲಿ ನಿರಂತರವಾಗಿ ಹೆಚ್ಚಳವಾಗಿದ್ದು, ಇದರಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಅಗ್ರಸ್ಥಾನ ಕಾಯ್ದಕೊಂಡಿದೆ. 2017ರ ಕೊನೆಯಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್ ಕಾರು ಕಳೆದ ವರ್ಷದ ಅವಧಿಯಲ್ಲಿ ಸುಮಾರು 2.50 ಲಕ್ಷ ಯುನಿಟ್ ಮಾರಾಟಗೊಂಡಿದ್ದು, ಇದೀಗ ಉತ್ಪಾದನಾ ಪ್ರಮಾಣವು 4 ಲಕ್ಷ ಯುನಿಟ್‌ಗೆ ತಲುಪಿದೆ.

ನೆಕ್ಸಾನ್ ಕಾರು ಮೊದಲ ಬಾರಿಗೆ ಬಿಡುಗಡೆಯಾದ ಸಂದರ್ಭದಲ್ಲಿ ಪ್ರತಿ ತಿಂಗಳು 2 ಸಾವಿರದಿಂದ 3 ಸಾವಿರ ಯುನಿಟ್ ಮಾತ್ರ ಮಾರಾಟ ಸಂಖ್ಯೆ ಹೊಂದಿತ್ತು. ಆದರೆ ಫೇಸ್‌ಲಿಫ್ಟ್ ಮಾದರಿಯೊಂದಿಗೆ ನೆಕ್ಸಾನ್ ಬೇಡಿಕೆಯು ನಿರಂತರವಾಗಿ ಹೆಚ್ಚುತ್ತಿದ್ದು, ಇದೀಗ ಪ್ರತಿ ತಿಂಗಳು ಸರಾಸರಿಯಾಗಿ 10 ಸಾವಿರದಿಂದ 15 ಸಾವಿರ ಯುನಿಟ್‌ಗೆ ತಲುಪಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಕಾರು ಉತ್ಪನ್ನಗಳನ್ನು ಉನ್ನತೀಕರಿಸುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ನೆಕ್ಸಾನ್ ಕಾರು ಮಾದರಿಗಾಗಿ ಮತ್ತಷ್ಟು ಹೊಸ ಬದಲಾವಣೆ ಮತ್ತು ಸುಧಾರಿತ ವೈಶಿಷ್ಟ್ಯತೆಗಳನ್ನು ಜೋಡಣೆ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.


Click it and Unblock the Notifications