ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಕೇಂದ್ರ ಸರ್ಕಾರವು 2021ರಲ್ಲಿ ಘೋಷಣೆ ಮಾಡಿದ್ದ ಮಹತ್ವಾಕಾಂಕ್ಷಿ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು 2022ರ ಏಪ್ರಿಲ್ 1ರಿಂದ ಅಧಿಕೃತವಾಗಿ ಜಾರಿಗೆ ತರುವ ಸಿದ್ದತೆಯಲ್ಲಿದ್ದು, ಹೊಸ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯ ಪರಿಣಾಮಕಾರಿ ಜಾರಿಗಾಗಿ ಸಂಸದೀಯ ಸಲಹಾ ಸಮಿತಿ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಸ್ವಯಂಪ್ರೇರಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಮೂಲಕ ಹೊಸ ವಾಹನ ಖರೀದಿಗೆ ಹಲವು ವಿನಾಯ್ತಿಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗುತ್ತಿದ್ದರೂ ಪರಿಣಾಮಕಾರಿ ನೀತಿ ಜಾರಿಗಾಗಿ ಇನ್ನು ಕೆಲವು ಕ್ರಮಗಳು ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಲಹಾ ಸಮಿತಿಯು ಅಭಿಪ್ರಾಯಪಟ್ಟಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಆಟೋಮೊಬೈಲ್ ವಲಯದಲ್ಲಿನ ಕುಸಿತದ ಬಗ್ಗೆ ಎಚ್ಚರಿಸಿರುವ ಸಂಸದೀಯ ಸಲಹಾ ಸಮಿತಿಯು ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಳೆಯ ವಾಹನ ಮಾಲೀಕರು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಇನ್ನು ಕೆಲವು ಪ್ರೊತ್ಸಾಹ ಕ್ರಮಗಳ ಅಗತ್ಯವಿದೆ ಎಂದಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಪ್ರೊತ್ಸಾಹ ಕ್ರಮಗಳ ಅಡಿಯಲ್ಲಿ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಳೆಯ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಹಣಕಾಸು ಸಹಾಯಗಳ ಅಗತ್ಯವಿದ್ದು, ಸದ್ಯ ಜಾರಿಗೊಳಿಸಲಾಗುತ್ತಿರುವ ವೆಹಿಕಲ್ ಸ್ಕ್ರ್ಯಾಪೇಜ್ ನಿಬಂಧನೆಗಳಲ್ಲಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದ ನಂತರ ಮಾಲೀಕರಿಗೆ ಹೊಸ ವಾಹನಗಳ ಖರೀದಿಯನ್ನು ಪ್ರೊತ್ಸಾಹಿಸುವ ಯಾವುದೇ ಬಲವಾದ ಅಂಶಗಳಿಲ್ಲ ಎಂದಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಹೀಗಾಗಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದ ನಂತರ ಮಾಲೀಕರಿಗೆ ಸುಲಭ ಹಣಕಾಸು ಆಯ್ಕೆಗಳು ಮತ್ತು ಗರಿಷ್ಠ ವಿನಾಯ್ತಿಗಳ ಅಗತ್ಯವಿದೆ ಎಂದಿರುವ ಸಂಸದೀಯ ಸಲಹಾ ಸಮಿತಿ ಶಿಫಾರಸ್ಸುಗಳಿಗೆ ಕೇಂದ್ರ ಸರ್ಕಾರವು ಸಹ ಸ್ಪಂದಿಸಿದ್ದು, ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯ ಅಧಿಕೃತ ಜಾರಿಗೂ ಮುನ್ನ ಇನ್ನು ಕೆಲವು ವಿನಾಯ್ತಿ ಘೋಷಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಇನ್ನು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಿದ್ದು, ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಫೆಸಿಲಿಟಿ (RVSF) ಮೂಲಕ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಆರಂಭಿಸಲಾಗಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಯಾವ ಹಂತದಲ್ಲಿ ನಿಮ್ಮ ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಲು ಪರಿಗಣಿಸಬೇಕು?

ನಿಗದಿತ ಅವಧಿಯ ನೋಂದಣಿ ಮುಗಿದ ನಂತರ ಇಲ್ಲವೇ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾದರೆ ನಿಮ್ಮ ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಬಹುದು. ಹಳೆಯ ವಾಹನವನ್ನು ದೀರ್ಘಕಾಲದವರೆಗೆ ಬಳಸದೆ ಬಿಟ್ಟರೆ ಮತ್ತು ಇನ್ನು ಮುಂದೆ ಅದು ಕಾರ್ಯಾಚರಣೆ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ ಅದನ್ನು ರದ್ದುಗೊಳಿಸಬಹುದಾಗಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಇದಲ್ಲದೆ ಆರ್‌ಟಿಒ ಆರ್‌ಸಿ ಅಥವಾ ಫಿಟ್‌ನೆಸ್ ಪ್ರಮಾಣಪತ್ರವನ್ನು ನವೀಕರಿಸಲು ವಿಫಲವಾದರೂ ಸಹ ಅದನ್ನು ರದ್ದುಗೊಳಿಸಬಹುದಾಗಿದ್ದು, ಸಾರಿಗೆ ಇಲಾಖೆಯೇ ಮುಟ್ಟುಹಾಕಿಕೊಳ್ಳುವ ಮುನ್ನ ನಾವೇ ಸ್ಕ್ರ್ಯಾಪ್ ಮಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ವಾಹನವನ್ನು ಸ್ಕ್ರ್ಯಾಪ್ ಮಾಡುವಾಗ ಸಲ್ಲಿಸಬೇಕಾದ ದಾಖಲೆಗಳು ಯಾವುವು?

ಕೇಂದ್ರ ಸಾರಿಗೆ ಇಲಾಖೆಯಿಂದಲೇ ನೋಂದಾಯಿತ ಸ್ಕ್ರ್ಯಾಪ್‌ ಯಾರ್ಡ್‌ನಲ್ಲಿ ವಾಹನವನ್ನು ಸ್ಕ್ರ್ಯಾಪ್ ಮಾಡುವುದು ತುಂಬಾ ಮುಖ್ಯವಾದ ವಿಚಾರ. ಈ ವೇಳೆ ಹಳೆಯ ವಾಹನದ ಮಾಲೀಕರು ಕೆಲವು ದಾಖಲೆಗಳನ್ನು ಸಲ್ಲಿಸಬೇಕು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಹಳೆಯ ವಾಹನದ ಈ ಹಿಂದಿನ ನೋಂದಣಿ ಪ್ರಮಾಣಪತ್ರ, ರಸ್ತೆಯಲ್ಲಿ ಓಡಲು ಕಾರು ಅನರ್ಹವೆಂದು ಘೋಷಿಸುವ ಫಿಟ್‌ನೆಸ್ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಕಾರನ್ನು ಸ್ಕ್ರ್ಯಾಪ್ ಮಾಡಲು ಮಾಲೀಕರ ಒಪ್ಪಿಗೆ ಪತ್ರ, ವಾಹನದ ಮೂಲ ಮಾಲೀಕ ಮರಣದ ಸಂದರ್ಭದಲ್ಲಿ ಮರಣ ಪ್ರಮಾಣಪತ್ರ ಅಥವಾ ಪ್ರಸ್ತುತ ಮಾಲೀಕರ ಉತ್ತರಾಧಿಕಾರಿಯ ಪ್ರಮಾಣಪತ್ರ ಸಲ್ಲಿಸಬೇಕು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಏನು ಪ್ರಯೋಜನ?

ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಏನಾದರೂ ಪ್ರಯೋಜನವಿದೆಯೇ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡದೆ ಇರಲಾರದು. ಆದರೆ ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡುವುದರಿಂದ ಅದರ ಮಾಲೀಕರಿಗೆ ನಿರ್ದಿಷ್ಟ ಪ್ರಮಾಣದ ಹಣ ಸಿಗುತ್ತದೆ. ದಿನದ ಸ್ಕ್ರ್ಯಾಪ್ ಮೆಟಲ್ ಬೆಲೆಗೆ ಅನುಗುಣವಾಗಿ ಮೊತ್ತವನ್ನು ಪಾವತಿಸಲಾಗುತ್ತದೆ. ಕಾರಿನ ಮೆಟಲ್‌ ಅನ್ನು ಪ್ರತಿ ಕೆ.ಜಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಯನ್ನು ಪ್ರತ್ಯೇಕವಾಗಿ ನೀಡಲಾಗುದು ಮತ್ತು ಕಾರಿನ ಕೆಲವು ಪ್ರಮುಖ ತಾಂತ್ರಿಕ ಅಂಶಗಳು ಕ್ರಿಯಾತ್ಮಕವಾಗಿದ್ದರೆ ಅದನ್ನು ಕೂಡಾ ಪ್ರತ್ಯೇಕವಾಗಿ ಮೌಲ್ಯೀಕರಿಸಲಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಹೀಗಾಗಿ ಹಳೆಯ ಕಾರು ಓಡಿಸಲು ಸಾಧ್ಯವಿಲ್ಲವಾದರೂ ತಾಂತ್ರಿಕವಾಗಿ ತುಸು ಹೆಚ್ಚಿನ ಮೌಲ್ಯವನ್ನು ಒಳಗೊಂಡಿದ್ದರೆ ಸ್ಕ್ರ್ಯಾಪ್ ಮಾಡುವಾಗ ಗಣನೀಯ ಆದಾಯವನ್ನು ಗಳಿಸಬಹುದು. ಒಂದು ವೇಳೆ ಸ್ಕ್ರ್ಯಾಪ್ ಮಾಡಿದ ನಂತರ ಹಣದ ಬದಲಾಗಿ ಹೊಸ ಕಾರಿನ ಖರೀದಿಗೆ ವಿನಾಯ್ತಿ ಪಡೆದುಕೊಳ್ಳಬಹುದು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಿದ ನಂತರ ಅಧಿಕೃತ ಸ್ಕ್ರ್ಯಾಪ್ ಯಾರ್ಡ್ ಕೇಂದ್ರವು ಪ್ರಮಾಣ ಪತ್ರವನ್ನು ನೀಡಲಿದ್ದು, ಹೊಸ ವಾಹನವನ್ನು ಖರೀದಿಸುವಾಗ ಆ ಪ್ರಮಾಣ ಪತ್ರ ತೋರಿಸಿ ಯಾವುದೇ ಡೀಲರ್ಸ್‌ಗಳಲ್ಲಿ ವಿವಿಧ ಆಫರ್‌ಗಳನ್ನು ಪಡೆಯಬಹುದು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ವಾಹನ ಸ್ಕ್ರ್ಯಾಪ್ ಮಾಡಿದ ನಂತರ ಏನು ಮಾಡಬೇಕು?

ಈ ಹಿಂದೆ ವಾಹನವನ್ನು ಸ್ಕ್ರ್ಯಾಪ್ ಮಾಡಿದ ನಂತರ ಆ ವಾಹನದ ಮಾಲೀಕರಿಗೆ ಚಾಸಿಸ್ ಸಂಖ್ಯೆ ಮತ್ತು ಕಾರನ್ನು ಸ್ಕ್ರ್ಯಾಪ್ ಮಾಡುವಾಗ ತೆಗೆದ ಚಿತ್ರಗಳನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರವು ನಿಯಮ ರೂಪಿಸಿತ್ತು. ಈ ವೇಳೆ ಸ್ಕ್ರ್ಯಾಪ್ ಯಾರ್ಡ್ ದಾಖಲೆಗಳನ್ನು ಆರ್‌ಟಿಒಗೆ ಹಸ್ತಾಂತರಿಸಬೇಕಿತ್ತು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಆದರೆ ಇದೀಗ ಈ ಗೊಂದಲಮಯ ನಿಯಮಗಳನ್ನು ಸರ್ಕಾರ ಈಗ ಮತ್ತೆ ಮಾರ್ಪಡಿಸಿದೆ. ತಿದ್ದುಪಡಿ ಮಾಡಲಾದ ನಿಯಮ ಪ್ರಕಾರ ವೆಹಿಕಲ್ ಸ್ಕ್ರ್ಯಾಪ್ ಯಾರ್ಡ್‌ನಲ್ಲಿ ವಾಹನ ಮಾಲೀಕರಿಗೆ ಚಾಸಿಸ್ ಸಂಖ್ಯೆಯನ್ನು ಒದಗಿಸದೆ ಅದೇ ನೇರವಾಗಿ ವಾಹನ್ ಸೈಟ್‌ಗೆ ಸ್ಕ್ರ್ಯಾಪಿಂಗ್ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಯಶಸ್ವಿಗಾಗಿ ಹೊಸ ಸಲಹೆ ನೀಡಿದ ಸಂಸದೀಯ ಸಲಹಾ ಸಮಿತಿ

ಅಲ್ಲದೆ ಆರ್‌ಟಿ ಡೇಟಾಬೇಸ್‌ನಲ್ಲಿ ಹಳೆಯ ವಾಹನದ ನೋಂದಣಿಯನ್ನು ಪೂರ್ತಿಯಾಗಿ ಅಳಿಸಿ ಹಾಕಲಿದ್ದು, ವಾಹನ ದಾಖಲೆಯ ಮರುಮಾರಾಟ ಮತ್ತು ದುರುಪಯೋಗವನ್ನು ತಪ್ಪಿಸುತ್ತದೆ. ವೆಹಿಕಲ್ ಸ್ಕ್ರ್ಯಾಪ್ ಯಾರ್ಡ್ ಕೇಂದ್ರಗಳು ಪ್ರಮಾಣಪತ್ರವನ್ನು ಅಪ್‌ಲೋಡ್ ನಂತರ ವಾಹನ ಮಾಲೀಕರು ವಾಹನ್ ಸೈಟ್‌ನಿಂದ ಸ್ಕ್ರ್ಯಾಪ್ ಪ್ರಮಾಣಪತ್ರ ಮತ್ತು ಅಳಿಸಿದ ಪ್ರಮಾಣಪತ್ರ ಎರಡರನ್ನು ಕೂಡಾ ಡೌನ್‌ಲೋಡ್ ಮಾಡಬಹುದಾಗಿದೆ.

Most Read Articles

Kannada
English summary
Financial incentives for scrapping of old vehicles in india suggestion given by a parliamentary pane
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X