ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಅನೇಕ ಪ್ರಮುಖ ಕಂಪನಿಗಳು ತಮ್ಮ ಕೆಲವು ಉನ್ನತ-ಮಾರಾಟದ ವಾಹನಗಳ ಸೀಮಿತ ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಾರೆ. ಈ ಸ್ಪೆಷಲ್ ಎಡಿಷನ್ ವಾಹನಗಳು ಆಕರ್ಷಕವಾದ ಟಾಪ್-ವೇರಿಯಂಟ್ ವೈಶಿಷ್ಟ್ಯಗಳೊಂದಿಗೆ ಮತ್ತು ಮಿಡ್ ಟ್ರಿಮ್ ಬೆಲೆಗಳಲ್ಲಿ ಮಾರಾಟವಾಗುತ್ತವೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಅನೇಕ ಕಾರ್ ಬ್ರಾಂಡ್‌ಗಳು ಈ ಸೀಮಿತ ಆವೃತ್ತಿಗಳಿಗೆ ವಿಶೇಷ ಬ್ಯಾಡ್ಜಿಂಗ್ ಅನ್ನು ಒಳಗೊಂಡಿವೆ, ಇದು ಈ ವಾಹನಗಳನ್ನು ಹೆಚ್ಚು ಬೇಡಿಕೆಯಿಡುವಂತೆ ಮಾಡುತ್ತದೆ. ಈ ವಿಶೇಷ ಆವೃತ್ತಿಯ ಕಾರುಗಳು ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿವೆ ಎಂಬುದನ್ನು ಗಮನಿಸುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು, ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯ ಮತ್ತು ಪ್ರಸ್ತುತ ತಮ್ಮ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ನೋಟಗಳೊಂದಿಗೆ ಆಕರ್ಷಕವಾಗಿರುವ ಕೆಲವು ಸ್ಪೆಷಲ್ ಎಡಿಷನ್ ಕಾರುಗಳನ್ನು ಬಗ್ಗೆ ಮಾಹಿತಿ ಇಲ್ಲಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಕಿಯಾ ಸೆಲ್ಟೋಸ್ ಎಕ್ಸ್-ಲೈನ್

ಕೊರಿಯಾ ಮೂಲದ ವಾಹನ ತಯಾರಕ ಕಂಪನಿಯಾದ ಕಿಯಾ ಪ್ರಸ್ತುತ ದೇಶದ ಜನಪ್ರಿಯ ಕಾರು ತಯಾರಕರಲ್ಲಿ ಒಬ್ಬರು. ಈ ಕಿಯಾ ಬ್ರ್ಯಾಂಡ್ 2019 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್‌ನೊಂದಿಗೆ ಪಾದಾರ್ಪಣೆ ಮಾಡಿತು ಮತ್ತು ಇದು ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತು. ನಂತ ಕಿಯಾ ತನ್ನ ಸೆಲ್ಟೋಸ್ ಎಸ್‍ಯುವಿಯ ಹೊಸ ಎಕ್ಸ್-ಲೈನ್ ವೆರಿಯೆಂಟ್ ಬಿಡುಗಡೆಗೊಳಿಸಿತ್ತು.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಸ್ಪೆಷಲ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.17.8 ಲಕ್ಷಗಳಾಗಿದೆ. ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಹಣಕ್ಕಾಗಿ ಅತ್ಯಂತ ಮೌಲ್ಯದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಕಿಯಾ ಎಸ್‌ಯುವಿಯ ಟಾಪ್-ಎಂಡ್ ರೂಪಾಂತರವಾಗಿ ಸೆಲ್ಟೋಸ್ ಎಕ್ಸ್-ಲೈನ್ ನೀಡುತ್ತಿದೆ. ಇದನ್ನು ಸೆಲ್ಟೋಸ್‌ನ ಜಿಟಿ-ಲೈನ್ ಆವೃತ್ತಿಯ ಮೇಲೆ ಇರಿಸಲಾಗಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಈ ವೆರಿಯೆಂಟ್ ಟಾಪ್-ಸ್ಪೆಕ್ ಜಿಟಿ ಲೈನ್ ವೆರಿಯೆಂಟ್ ಅನ್ನು ಆಧರಿಸಿದೆ, ಹೊಸ ಟಾಪ್-ಆಫ್-ಲೈನ್ ಎಕ್ಸ್-ಲೈನ್ ವೆರಿಯೆಂಟ್ ಕಾಸ್ಮೆಟಿಕ್ ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಬರುತ್ತದೆ. ಸೆಗ್ಮೆಂಟ್-ಅತಿದೊಡ್ಡ 18-ಇಂಚಿನ ಕ್ರಿಸ್ಟಲ್-ಕಟ್ ಮ್ಯಾಟ್ ಗ್ರ್ಯಾಫೈಟ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಇದು ಹೊಸ ಇಂಡಿಗೋ ಪೆರಾ ಲೆಥೆರೆಟ್ ಅಪ್‌ಹೋಲ್ಸ್ಟರಿಯನ್ನು ಪಡೆಯುತ್ತದೆ. ಈ ಎಕ್ಸ್-ಲೈನ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಟೊಯೊಟಾ ಇನೋವಾ ಲಿಮಿಟೆಡ್ ಎಡಿಷನ್

ಟೊಯೊಟಾ ಇನೋವಾ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಮಾದರಿಯು ಫ್ಯಾಮಿಲಿ ಕಾರು ಎಂದು ಕೂಡ ಜನಪ್ರಿಯವಾಗಿದೆ. ಇನೋವಾ ಲಿಮಿಟೆಡ್ ಆವೃತ್ತಿಯು ಮಿಡ್ ವೆರಿಯೆಂಟ್ ವೈಶಿಷ್ಟ್ಯಗಳನ್ನು ಹೊಂದಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಟೊಯೊಟಾ ಇನೋವಾ ಲಿಮಿಟೆಡ್ ಎಡಿಷನ್ ಆರಂಭಿಕ ಬೆಲೆಯು ರೂ.17.2 ಲಕ್ಷವಾಗಿದೆ. ಲಿಮಿಟೆಡ್ ಎಡಿಷನ್ ಕಂಪನಿಯು ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಹೊಸ ಮಾದರಿಯ ಡಿಸ್‌ಪ್ಲೇ ಮತ್ತು ಅಡ್ವಾನ್ಸ್ ಕನೆಕ್ಟಿವಿಟಿ ಸೌಲಭ್ಯದ ಜೊತೆಗೆ ಮಲ್ಟಿ ಟೆರೇನ್ ಮಾನಿಟರ್ ಸಿಸ್ಟಂ(360 ಡಿಗ್ರಿ ಕ್ಯಾಮೆರಾ), ವರ್ಚುವಲ್ ಬರ್ಡ್ ಐ ವ್ಯೂ, ಹೆಡ್ಸ್ ಅಪ್ ಡಿಸ್‌ಪ್ಲೇ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್, ಡೋರ್ ಎಡ್ಜ್ ಲೈಟಿಂಗ್ ನೀಡಲಾಗಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಫೋಕ್ಸ್‌ವ್ಯಾಗನ್ ಪೊಲೊ ಮ್ಯಾಟ್ ಎಡಿಷನ್

ಹೆಸರೇ ಸೂಚಿಸುವಂತೆ, ಪೊಲೊ ವಿಶೇಷ ಆವೃತ್ತಿಯು ಮ್ಯಾಟ್ ಪೇಂಟ್ ಅನ್ನು ಹೊಂದಿದೆ. ಸುಮಾರು ರೂ.10 ಲಕ್ಷದಿಂದ ಪ್ರಾರಂಭವಾಗುವ ಈ ವಾಹನವು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಒಂದಾಗಿದೆ. ಪೊಲೊದ ಉನ್ನತ-ಮಟ್ಟದ ರೂಪಾಂತರವು ನೀಡುವ ಎಲ್ಲಾ ಉತ್ತಮ-ಗುಣಮಟ್ಟದ ವೈಶಿಷ್ಟ್ಯಗಳನ್ನು ಮ್ಯಾಟ್ ಆವೃತ್ತಿಯು ಒಳಗೊಂಡಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಈ ಕಾರಿನ ಹೊರಮೈ ಜೊತೆಗೆ ಫ್ರಂಟ್ ಗ್ರಿಲ್, ಲಿಪ್ ಸ್ಪಾಯ್ಲರ್, ಬಾಡಿ ಮೊಲ್ಡಿಂಗ್, ರಿಯರ್ ಡಿಫ್ಯೂಸರ್, ಟೈಲ್‌ಗೇಟ್ ಸ್ಪಾಯ್ಲರ್, ಟ್ರಕ್ ಲಿಪ್ ಗಾರ್ನಿಶ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್

ಸೊನೆಟ್ ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಂಪನಿಯು ಬಿಡುಗಡೆಗೊಳಿಸಿತ್ತು. ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಟರ್ಬೊ ಐಎಂಟಿ, ಟರ್ಬೊ ಡಿಸಿಟಿ, ಡೀಸೆಲ್ ಎಂಟಿ ಮತ್ತು ಡೀಸೆಲ್ ಎಟಿ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಆನಿವರ್ಸರಿ ಎಡಿಷನ್ ಮಿಡ್-ಲೆವೆಲ್ HTX ಟ್ರಿಮ್ ಅನ್ನು ಆಧರಿಸಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಬೆಲೆಯು ರೂ.10.8 ಲಕ್ಷಗಳಾಗಿದೆ. ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯು ಅರೋರಾ ಬ್ಲಾಕ್ ಪರ್ಲ್, ಗ್ರಾವಿಟಿ ಗ್ರೇ, ಸಿಲ್ವರ್ ಸ್ಟೀಲ್ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಈ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯಲ್ಲಿ ಕಾಸ್ಮೆಟಿಕ್ ನವೀಕರಣಗಳು ಪಡೆದಿದೆ. ಇದು ಟ್ರಾಂಚರಿನ್ ಆಕ್ಸೆಂಟ್ಸ್‌ನೊಂದಿಗೆ ಅರೋಚ್ಸ್ ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳನ್ನು ಪಡೆಯುತ್ತದೆ. ಅರೋಚ್ಸ್ ಸೈಡ್ ಸ್ಕಿಡ್ ಪ್ಲೇಟ್‌ಗಳು, ಕಿಯಾ ಸಿಗ್ನೇಚರ್ ಟೈಗರ್ ಗ್ರಿಲ್ ಹೀಟ್ ಸ್ಟ್ಯಾಂಪ್ಡ್ ಟ್ಯಾಂಗರಿನ್ ಅಸ್ಸೆಂಟ್ ಗಳು, ಹಾರ್ಟ್ ಬೀಟ್ ಎಲ್ಇಡಿ ಟೈಲ್-ಲ್ಯಾಂಪ್‌ಗಳು, ಕ್ರೌನ್ ಜೊವವ್ ಲ್‌ಇಡಿ ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಡಿಆರ್‌ಎಲ್ ಮತ್ತು ಸೆಮಿ ಲೆಥೆರೆಟ್ ಸೀಟ್‌ಗಳನ್ನು ಒಳಗೊಂಡಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಸ್ಕೋಡಾ ರ‍್ಯಾಪಿಡ್‌ ಮ್ಯಾಟ್ ಎಡಿಷನ್

ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಆವೃತ್ತಿಯು ಅದರ ಸೌಂದರ್ಯವನ್ನು ಒಂದು ಹಂತವನ್ನು ಹೆಚ್ಚಿಸುತ್ತದೆ. ಬೂದುಬಣ್ಣದ ಮ್ಯಾಟ್ ಪೇಂಟ್‌ವರ್ಕ್ ಗ್ರಿಲ್ ಮತ್ತು ವ್ಹೀಲ್ ಗಳೊಂದಿಗೆ ಜೋಡಿಯಾಗಿದೆ. ಈ ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಎಡಿಷನ್ ಸುಮಾರು ರೂ.12 ಲಕ್ಷಗಳ ಆರಂಭಿಕ ಬೆಲೆಯನ್ನು ಒಳಗೊಂಡಿದೆ.

ರೂ.20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಪೆಷಲ್ ಎಡಿಷನ್ ಕಾರುಗಳಿವು..

ಇನ್ನು ಈ ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಎಡಿಷನ್ ಲೆದರ್ ಅಲ್ಕಾಂಟರಾ ಸೀಟಿಂಗ್, ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಇತ್ಯಾದಿಗಳನ್ನು ಒಳಗೊಂಡಂತೆ ನೀವು ಕೇಳಬಹುದಾದ ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಅಲ್ಲದೇ ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

Article Published On: Friday, March 11, 2022, 20:14 [IST]
English summary
Find here some special edition cars under 20 lakhs kia seltos to volkswagen polo details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+