Just In
- 53 min ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- 1 hr ago ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- 1 hr ago ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್‌ಯುವಿ... ಟಾಟಾಗೆ ಆತಂಕ ಶುರು
- 2 hrs ago ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ನವೆಂಬರ್‌ನಲ್ಲಿ ಇನೋವಾ ಹೈಬ್ರಿಡ್ ಸೇರಿದಂತೆ ನಾಲ್ಕು ಹೊಸ SUVಗಳ ಬಿಡುಗಡೆ
ಕೆಲವು ಪ್ರಮುಖ ಕಾರು ಕಂಪನಿಗಳು ಇದೇ ನವೆಂಬರ್‌ನಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿವೆ. ಪ್ರಸ್ತುತ ವರ್ಷ ಮುಗಿಯಲು ಇನ್ನೇನು 56 ದಿನಗಳಿದ್ದು, ವರ್ಷಾಂತ್ಯಕ್ಕೆ ಹೊಸ ಮಾದರಿಗಳ ಬಿಡುಗಡೆಯೊಂದಿಗೆ ಮುಂದಿನ ವರ್ಷದಲ್ಲಿ ಹೆಚ್ಚಿನ ಮಾರಾಟವನ್ನು ಸಾಧಿಸಲು ಸಜ್ಜಾಗಿವೆ.
ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ತಲುಪಲಿರುವ ಕೆಲವು ಕಾರು ಮಾದರಿಗಳನ್ನು ಇಲ್ಲಿ ನೋಡೋಣ.. ಪ್ರಸ್ತುತ ಮಾಹಿತಿಯ ಪ್ರಕಾರ, ಜೀಪ್ ಗ್ರ್ಯಾಂಡ್ ಚೆರೋಕೀ, BYD ಅಟ್ಟೊ 3, ಟೊಯೊಟಾ ಇನ್ನೋವಾ ಹೈಕ್ರಾಸ್, ಪ್ರವೈಗ್ ಎಕ್ಸ್‌ಟಿಂಕ್ಷನ್ MK1 ಎಲೆಕ್ಟ್ರಿಕ್ ಕಾರು ಮತ್ತು ಐದು-ಬಾಗಿಲಿನ ಫೋರ್ಸ್ ಗೂರ್ಕಾವನ್ನು ಇದೇ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು.
ಜೀಪ್ ಗ್ರ್ಯಾಂಡ್ ಚೆರೋಕೀ
ಜೀಪ್ ತನ್ನ ಗ್ರಾಂಡ್ ಚೆರೋಕೀ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮರುಪ್ರಾರಂಭಿಸಲು ಯೋಜಿಸುತ್ತಿದೆ. ಅಲ್ಲದೆ, ತನ್ನ ಬಿಡುಗಡೆ ದಿನಾಂಕವನ್ನು ಈಗಾಗಲೇ ಖಚಿತಪಡಿಸಿದೆ. ಜೀಪ್ ಗ್ರ್ಯಾಂಡ್ ಚೆರೋಕೀ ಇದೇ ತಿಂಗಳ 11 ರಂದು ಬಿಡುಗಡೆಯಾಗಲಿದೆ.
ಜೀಪ್ ಸಿಕೆಡಿ ಮೂಲಕ ಈ ಐಷಾರಾಮಿ ಕಾರನ್ನು ಮಾರಾಟ ಮಾಡಲಿದೆ. ಹಿಂದಿನ ಆವೃತ್ತಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿದೆ. ಗ್ರ್ಯಾಂಡ್ ಚೆರೋಕೀ ಗಮನಾರ್ಹವಾದ ಸ್ಟೈಲಿಷ್ ಬದಲಾವಣೆಯನ್ನು ಪಡೆಯುವ ನಿರೀಕ್ಷೆಯಿದೆ. ಹೆಚ್ಚಿನ ವೈಶಿಷ್ಟ್ಯಗಳನ್ನು ಸಹ ಪ್ರಮಾಣಿತವಾಗಿ ಪಡಿಯಲಿದೆ.
BYD ಅಟ್ಟೊ 3
BYD ಚೀನಾದ ಕಂಪನಿಯಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಗಮನಹರಿಸಿದೆ. ಕಂಪನಿಯು ಈಗಾಗಲೇ E6 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದೆ. ಇದರೊಂದಿಗೆ ಕಂಪನಿಯು ಅಟ್ಟೊ 3 ಅನ್ನು ಎರಡನೇ ಕಾರು ಮಾದರಿಯಾಗಿ ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ.
ಇದು ಎಸ್‌ಯುವಿ ಎಲೆಕ್ಟ್ರಿಕ್ ಕಾರಾಗಿದೆ. ರೂ. 20 ರಿಂದ ರೂ. 25 ಲಕ್ಷದವರೆಗೆ ಕಾರು ಮಾರಾಟವಾಗುವ ನಿರೀಕ್ಷೆಯಿದೆ. BYD ಈ ಎಲೆಕ್ಟ್ರಿಕ್ ಕಾರಿನಲ್ಲಿ ಗರಿಷ್ಠ ಮೈಲೇಜ್ ಒದಗಿಸಲು 60.48 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿದೆ. ಇದರೊಂದಿಗೆ, ಕಂಪನಿಯು ಈ ವಾಹನದಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸಲು ಯೋಜಿಸುತ್ತಿದೆ. ಅದು 201 bhp ಪವರ್ ಮತ್ತು 310 Nm ಟಾರ್ಕ್ ಅನ್ನು ನೀಡುತ್ತದೆ. ಇದೇ ನವೆಂಬರ್ 16 ರಂದು ಲಾಂಚ್ ಆಗಲಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್
ಇನ್ನೋವಾ ಟೊಯೊಟಾ ಕಂಪನಿಯ ಪ್ರಸಿದ್ಧ ಕಾರು ಮಾದರಿಗಳಲ್ಲಿ ಒಂದಾಗಿದೆ. ಟೊಯೊಟಾ ಈ ಕಾರು ಮಾದರಿಯಲ್ಲಿಯೇ ಹೊಸ ಆಯ್ಕೆಯನ್ನು ನೀಡುತ್ತಿದೆ. ಕಂಪನಿಯು ಇನ್ನೋವಾ ಹೈಕ್ರಾಸ್ ಮಾದರಿಯನ್ನು 21ರಂದು ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಲಿದೆ.
ಇದರ ಬೆನ್ನಲ್ಲೇ ಇನ್ನೋವಾ ಹೈಕ್ರಾಸ್ ಇದೇ 25ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ವಾಹನವು ಪನೋರಮಿಕ್ ಸನ್‌ರೂಫ್ ಮತ್ತು ಹೈಬ್ರಿಡ್ ತಂತ್ರಜ್ಞಾನದಂತಹ ವಿವಿಧ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಕಾರು 2.4 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎರಡು ಮೋಟಾರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಪೆಟ್ರೋಲ್ ಮೋಟರ್‌ನೊಂದಿಗೆ ಹೈಬ್ರಿಡ್ ಸೌಲಭ್ಯವನ್ನೂ ಒದಗಿಸಲಾಗಿದೆ.
ಪ್ರವೈಗ್ MK1
ಪ್ರವೈಕ್ ಬೆಂಗಳೂರು ಮೂಲದ ಕಂಪನಿಯಾಗಿದೆ. ನಮ್ಮ ಬೆಂಗಳೂರು ಕಂಪನಿಯಿಂದ ಎಕ್ಸ್‌ಟಿಂಕ್ಷನ್ MK1 ಎಲೆಕ್ಟ್ರಿಕ್ ಕಾರು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಮಾದರಿಯು ಮಾರಾಟಕ್ಕೆ ಬರುವ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಾಗಿದ್ದು, ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನ ಪ್ರೇಮಿಗಳು ಇದನ್ನು ಪೆಟ್ ಎಂದು ಕರೆಯಲು ಆರಂಭಿಸಿದ್ದಾರೆ.
ಪ್ರವೈಗ್ ಡೈನಾಮಿಕ್ಸ್ ಹೆಚ್ಚು ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಈ ಎಲೆಕ್ಟ್ರಿಕ್ ಕಾರನ್ನು 25 ರಂದು ಬಿಡುಗಡೆ ಮಾಡಲಿದೆ. ಈ ಕಾರು ಟೊಯೊಟಾ ಇನ್ನೋವಾ ಹೈಕ್ರಾಸ್ ಬಿಡುಗಡೆಯಾದ ದಿನವೇ ಬಿಡುಗಡೆಯಾಗಲಿದೆ. ಗಮನಾರ್ಹವಾಗಿ, ಈ ಎಲೆಕ್ಟ್ರಿಕ್ ವಾಹನವು ಒಂದೇ ಚಾರ್ಜ್‌ನಲ್ಲಿ 504 ಕಿ.ಮೀ ಮೈಲೇಜ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಫೋರ್ಸ್ ಗೂರ್ಖಾ 5-ಡೋರ್ಸ್
ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಿ ಫೋರ್ಸ್ ಗೂರ್ಕಾ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಕಾರಿಗೆ ಆಫ್ ರೋಡ್ ಪ್ರಿಯರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫೋರ್ಸ್ ಈ ಕಾರು ಮಾದರಿಯ ಐದು-ಬಾಗಿಲಿನ ಆವೃತ್ತಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ, ಇದು ಈ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮೇಲೆ ನೋಡಿದ ಎಲ್ಲಾ ಕಾರು ಮಾದರಿಗಳನ್ನು ನವೆಂಬರ್ 2022 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಕಾರು ಮಾದರಿಗಳಲ್ಲದೆ, ಕೆಲವು ಹೊಸ ದ್ವಿಚಕ್ರ ವಾಹನಗಳನ್ನು ಸಹ ಈ ತಿಂಗಳು ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ಈ ನವೆಂಬರ್ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಪ್ರಿಯರಿಗೆ ಒಳ್ಳೆಯ ಟ್ರೀಟ್ ನೀಡುವ ತಿಂಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.