ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಭಾರತದಲ್ಲಿ ಸೆಮಿಕಂಡಕ್ಟರ್ ಕೊರತೆಯಿಂದಾಗಿ ಕಳೆದ ಮೂರು ವರ್ಷಗಳಿಂದ ವಾಹನ ಉದ್ಯಮದಲ್ಲಿ ಬಹುತೇಕ ಕಾರು ಕಂಪನಿಗಳು ನಷ್ಟವನ್ನು ಕಂಡಿದ್ದವು. ಜೊತೆಗೆ ಈ ಮೂರು ವರ್ಷಗಳಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಹೊಸ ಕಾರುಗಳು ಸಹ ಬಿಡುಗಡೆಯಾಗಿರಲಿಲ್ಲ. ಇದೀಗ ವಾಹನ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಸಾಲು ಸಾಲಾಗಿ ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗತ್ತಿವೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಭಾರತದಲ್ಲಿ ಈಗಾಗಲೇ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್, ಫೋಕ್ಸ್‌ವ್ಯಾಗನ್ ವರ್ಟಸ್, ಮಹೀಂದ್ರ ಸ್ಕಾರ್ಪಿಯೊ-ಎನ್ ಸೇರಿದಂತೆ ವಿವಿಧ ಹೊಸ ಕಾರುಗಳನ್ನು ಈ ಜೂನ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಮಾರುತಿ ಸುಜುಕಿ ಬ್ರೆಝಾದ ಹೊಸ 2022 ಮಾಡೆಲ್ ಕೂಡ ಇಂದು (ಜೂನ್ 30) ಬಿಡುಗಡೆಯಾಗುತ್ತಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಇದರ ಬೆನ್ನಲ್ಲೇ ಜುಲೈನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳು ಬಿಡುಗಡೆಯಾಗಲಿವೆ. ಬಹಳಷ್ಟು ಕಾರುಗಳನ್ನು 'ಅನಾವರಣ' ಮಾಡಬೇಕಿದ್ದು, ವಾಹನ ತಯಾರಕರು ಕಾತುರದಲ್ಲಿದ್ದಾರೆ. ಹಾಗಾದರೆ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಜುಲೈ 1ರಂದು ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್

ಜುಲೈ ತಿಂಗಳಿನಲ್ಲಿ ಮೊದಲು ಬಿಡುಗಡೆಯಾಗಲಿರುವ ಕಾರು ಟೊಯೊಟಾದ ಹೊಚ್ಚ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯಾದ ಅರ್ಬನ್ ಕ್ರೂಸರ್ ಹೈರಿಡರ್. ಇದು ಸುಜುಕಿ ಮತ್ತು ಟೊಯೊಟಾದ ಜಂಟಿ ಉದ್ಯಮದಲ್ಲಿ ತಯಾರಾದ ಉತ್ಪನ್ನವಾಗಿದ್ದು, ಇದರ ಮೇಲೆ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಗಳಿದ್ದು, ಈ ಕುರಿತು ಜುಲೈ 1 ರಂದು ಮತ್ತಷ್ಟು ಮಾಹಿತಿ ಹೊರಬರಲಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಈ ಕಾರು ಮೈಲ್ಡ್ ಮತ್ತು ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯನ್ನು ಆಲ್-ವೀಲ್ ಡ್ರೈವ್ ಆಯ್ಕೆಯೊಂದಿಗೆ ನೀಡಲಾಗುವುದು. ಪ್ರಸ್ತುತ ಬಿಡುಗಡೆಯಾದ ಟೀಸರ್‌ಗಳನ್ನು ಆಧರಿಸಿ, ಕಾರು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಜುಲೈ 12ರಂದು 2022 ಆಡಿ A8L

Audi ನ ಪ್ರಮುಖ ಸೆಡಾನ್‌ಗಳಲ್ಲಿ ಒಂದಾದ A8L, ಫೇಸ್‌ಲಿಫ್ಟ್ ಡಿಸೈನ್ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. 2022 Audi A8L ಫೇಸ್‌ಲಿಫ್ಟ್ ಜುಲೈ 12 ರಂದು ಬಿಡುಗಡೆಯಾಗಲಿದೆ. ಈ ಮೊದಲು ಮೇ 5 ರಂದು A8L ಫೇಸ್‌ಲಿಫ್ಟ್‌ಗಾಗಿ ಆಡಿ ಇಂಡಿಯಾ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿತ್ತು.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಈ ಕಾರಿನ ಬುಕ್ಕಿಂಗ್ ಮೊತ್ತವನ್ನು 10 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ. ಈ ಹೊಸ ಮಾದರಿಯಲ್ಲಿ, ಮುಂಭಾಗದ ವಿನ್ಯಾಸವನ್ನು ನವೀಕರಿಸಲಾಗಿದೆ. ಮರು ವಿನ್ಯಾಸಗೊಳಿಸಿದ ಅಲಾಯ್ ವೀಲ್‌ಗಳು ಹೆಚ್ಚು ಆಕರ್ಷನೀಯವಾಗಿ ಕಾಣುತ್ತವೆ. ವರ್ಚುವಲ್ ಕಾಕ್‌ಪಿಟ್‌ಗಾಗಿ ಹೊಸ MIB 3 ಆಪರೇಟಿಂಗ್ ಸಿಸ್ಟಮ್ ಅನ್ನು ಸಹ ಒದಗಿಸಲಾಗಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಜುಲೈ 13ರಂದು ಹೊಸ ಹುಂಡೈ ಟಕ್ಸನ್

ಹುಂಡೈ ಇಂಡಿಯಾ ಜುಲೈ 13 ರಂದು ನವೀಕರಿಸಿದ ಹೊಸ ತಲೆಮಾರಿನ ಟಕ್ಸನ್ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಹ್ಯುಂಡೈ ಈಗಾಗಲೇ 2022 ಟಕ್ಸನ್ ಎಸ್‌ಯುವಿಯ ಬಾಹ್ಯ ಫೋಟೋಗಳನ್ನು ಬಿಡುಗಡೆ ಮಾಡಿದೆ. ಆದರೆ ಹೊಸ ತಲೆಮಾರಿನ ಟಕ್ಸನ್‌ಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸುವ ಪ್ರಕ್ರಿಯೆಯು ಅಧಿಕೃತವಾಗಿ ಪ್ರಾರಂಭವಾಗಬೇಕಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಹೊಸ ಪೀಳಿಗೆಯ ಟಕ್ಸನ್‌ನ ಕ್ಯಾಬಿನ್ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೊಸ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದಲ್ಲದೇ ವಿವಿಧ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ಅವಕಾಶಗಳಿವೆ. 2022 ಹ್ಯುಂಡೈ ಟಕ್ಸನ್ SUV ಅನ್ನು ಪೆಟ್ರೋಲ್ ಮತ್ತು ಡೀಸೆಲ್ 2 ಎಂಜಿನ್ ಆಯ್ಕೆಗಳೊಂದಿಗೆ ನೀಡಬಹುದು.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಜುಲೈ 20ರಂದು ಸಿಟ್ರೊಯೆನ್ C3 (Citroën C3)

ಫ್ರೆಂಚ್ ಕಂಪನಿಯಾದ ಸಿಟ್ರೊಯೆನ್, ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿರುವ ಎರಡನೇ ಕಾರು ಮಾದರಿ C3 ಆಗಿದೆ. ಭಾರತೀಯ ಮಾರುಕಟ್ಟೆಗೆ ಸಿಟ್ರೊಯೆನ್‌ನ ಮೊದಲ ಉತ್ಪನ್ನವಾದ ಸಿಟ್ರೊಯೆನ್ ಸಿ5 ಏರ್‌ಕ್ರಾಸ್ ಎಸ್‌ಯುವಿ ಅತ್ಯಂತ ದುಬಾರಿ ಮಾದರಿಯಾಗಿದ್ದು, ಸಿಟ್ರೊಯೆನ್ ಸಿ3 ಕಾರು ಅಗ್ಗದ ಮಾದರಿಯಾಗಿ ಬಿಡುಗಡೆಯಾಗಲಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

Citroen C3 ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರು ಜುಲೈ 1 ರಿಂದ ಕಾಯ್ದಿರಿಸಬಹುದಾಗಿದೆ. ಸಿಟ್ರೊಯೆನ್ ಕಂಪನಿಯ ಅಗ್ಗದ ಉತ್ಪನ್ನವಾಗಿರುವ C3 ಕಾರು ಭಾರತೀಯ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. Citroen C3 ಬೆಲೆ ಎಷ್ಟು, ಯಾವೆಲ್ಲಾ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂಬ ಮಾಹಿತಿ ಜುಲೈ 20 ರಂದು ತಿಳಿಯಲಿದೆ.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುತ್ತಿರುವ ಟಾಟಾ ಪಂಚ್, ಮಾರುತಿ ಸುಜುಕಿ ಇಗ್ನಿಸ್, ರೆನಾಲ್ಟ್ ಕ್ಯೋಸೆರಾ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಸಿಟ್ರೊಯೆನ್ ಸಿ3 ಮಾರಾಟದಲ್ಲಿ ಕಠಿಣ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಇದರ ಬೆಲೆಯು ಗ್ರಾಹಕರನ್ನು ಆಕರ್ಷಸಿದರೆ ಇದು ನಿಜವಾಗಿ ಸಂಭವಿಸಬಹುದು.

ಅಗ್ಗದ ಕಾರಿನಿಂದ ಐಷಾರಾಮಿ ಕಾರಿನವರೆಗೆ ಜುಲೈನಲ್ಲಿ ಬಿಡುಗಡೆಯಾಗಲಿರುವ 4 ಕಾರುಗಳಿವು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಕಾರುಗಳ ಮಾರಟವು ಚೇತರಿಸಿಕೊಳ್ಳುತ್ತಿದ್ದು, ಸೆಮಿಕಂಡಕ್ಟರ್‌ಗಳ ಪೂರೈಕೆ ಕೂಡ ಬೆಳೆಯುತ್ತಿದೆ. ಇದರಿಂದ ಗ್ರಾಹಕರು ತಮ್ಮ ಹೊಸ ವಾಹನಗಳಿಗಾಗಿ ಧೀರ್ಘಾವಧಿವರೆಗೆ ಕಾಯುವ ಸಮಸ್ಯೆ ಮುಂದಿನ ದಿನಗಳಲ್ಲಿ ತಪ್ಪಲಿದ್ದು, ಡೆಲಿವರಿ ಶೀಘ್ರದಲ್ಲೇ ಆಗಲಿದೆ. ಹಾಗಾಗಿ ವಾಹನ ಕಂಪನಿಗಳು ಕೂಡ ತಮ್ಮ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಉತ್ಸಾಹ ತೋರುತ್ತಿದ್ದಾರೆ.

Most Read Articles

Kannada
English summary
From cheap car to luxury car there are 4 cars that will be released in July
Story first published: Thursday, June 30, 2022, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X