ಮೇ ತಿಂಗಳ ಮಾರಾಟದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಟೊಯೊಟಾ ಫಾರ್ಚೂನರ್
ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. 2022 ಮೇ ತಿಂಗಳಿನ ಪೂರ್ಣ ಗಾತ್ರದ ಎಸ್ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರತಿಸ್ಪರ್ಧಿಗಳನ್ನು ಮತ್ತೊಮ್ಮೆ ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಟೊಯೊಟಾ ತನ್ನ ಫಾರ್ಚೂನರ್ ಎಸ್‍ಯುವಿಯನ್ನು ನವೀಕರಿಸಿ ಹೊಸ ಫೇಸ್‌ಲಿಫ್ಟ್ ಮಾದರಿಯನ್ನು ಕಳೆದ ವರ್ಷ ಪರಿಚಯಿಸಿತು. ಪೂರ್ಣ ಗಾತ್ರದ ಎಸ್ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ. ಏಳು-ಸೀಟುಗಳ ಇತ್ತೀಚಿನ ಜನರೇಷನ್ ಫಾರ್ಚೂನರ್ ಅನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇತ್ತೀಚೆಗೆ ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಶ್ರೇಣಿಗೆ ಸೇರಿಸಲಾಯಿತು. ಫಾರ್ಚುನರ್‌ನ ಲೆಜೆಂಡರ್ ಆವೃತ್ತಿಯು ಕಳೆದ ವರ್ಷದ ಆರಂಭದಿಂದ ಮಾರಾಟದಲ್ಲಿದೆ ಮತ್ತು ಇದನ್ನು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ.

ಕಳೆದ ತಿಂಗಳು ಟೊಯೊಟಾ ಫಾರ್ಚೂನರ್ ಮಾದರಿಯ 1,184 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಮೇ ತಿಂಗಳಲ್ಲಿ ಫಾರ್ಚೂನರ್ ಮಾದರಿಯ 15 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ದಾಖಲೆ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ.

ಟೊಯೊಟಾ ಫಾರ್ಚೂನರ್ ಮಾದರಿಯಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮುಂದಿನ ಜನರೇಷನ್ ಫಾರ್ಚುನರ್ ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದು iMV ಲ್ಯಾಡರ್ ಫ್ರೇಮ್ ಚಾಸಿಸ್ ಆಧಾರವಾಗಿರಬಹುದು.

ಸ್ಕೋಡಾ ಕೊಡಿಯಾಕ್
ಸ್ಕೋಡಾ ಕೊಡಿಯಾಕ್ ಪೂರ್ಣ-ಗಾತ್ರದ ಎಸ್ಯುವಿ ವಿಭಾಗದ ಮೇ ತಿಂಗಳ ಮಾರಾಟದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸ್ಕೋಡಾ ಕೊಡಿಯಾಕ್ ಮಾದರಿಯ 106 ಯುನಿಟ್‌ಗಳು ಮಾರಾಟವಾಗಿವೆ. ಈ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ತಿಂಗಳುಗಳ ಹಿಂದೆ ಮಾತ್ರ ಪರಿಚಯಿಸಲಾಯಿತು.

ಬಿಎಸ್6 ಮಾಲಿನ್ಯ ನಿಯಮದ ಕಾರಣದಿಂದಾಗಿ ಹಿಂದಿನ ಮಾದರಿಯನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಯಿತು. 2022ರ ಆವೃತ್ತಿಯು ಪ್ರಸ್ತುತ ಸುರಕ್ಷತೆ ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ಈ ಕೊಡಿಯಾಕ್ ಫೇಸ್‌ಲಿಫ್ಟ್ ಮಾದರಿಯಲ್ಲಿ 2.0 ಲೀಟರ್, ನಾಲ್ಕು-ಸಿಲಿಂಡರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇನ್ನು ಕೊಡಿಯಾಕ್ ಎಸ್‍ಯುವಿಯು ಸ್ಟೈಲ್, ಸ್ಪೋರ್ಟ್‌ಲೈನ್ ಮತ್ತು ಲಾರಿನ್ & ಕ್ಲೆಮೆಂಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಎಸ್‍ಯುವಿಯ 4,699 ಎಂಎಂ ಉದ್ದ, 1,882 ಎಂಎಂ ಅಗಲ ಮತ್ತು 1,685 ಎಂಎಂ ಎತ್ತರ ಮತ್ತು 2,791 ಎಂಎಂ ವೀಲ್‌ಬೇಸ್ ಅನ್ನು ಒಳಗೊಂಡಿದೆ. ಕೊಡಿಯಾಕ್ 7-ಸೀಟರ್ ಪ್ರೀಮಿಯಂ ಎಸ್‍ಯುವಿ ಮಾದರಿಯಾಗಿದೆ.

ಮಹೀಂದ್ರಾ ಅಲ್ತುರಾಸ್ ಜಿ4
ಪೂರ್ಣ-ಗಾತ್ರದ ಎಸ್ಯುವಿ ವಿಭಾಗದ ಮಾರಾಟದಲ್ಲಿ ಸ್ಯಾಂಗ್‌ಯಾಂಗ್ ರೆಕ್ಸ್‌ಟನ್ ಜಿ4 ಆಧಾರಿತ ಮಹೀಂದ್ರಾ ಅಲ್ತುರಾಸ್ ಜಿ4 ಮೂರನೇ ಸ್ಥಾನವನ್ನು ಪಡೆದಿದೆ. ಕಳೆದ ತಿಂಗಳು ಮಹೀಂದ್ರಾ ಅಲ್ತುರಾಸ್ ಮಾದರಿಯ ಒಟ್ಟು 90 ಯೂನಿಟ್‌ಗಳು ಮಾರಾಟವಾಗಿವೆ.

ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಹೀಂದ್ರಾ ಅಲ್ತುರಾಸ್ ಜಿ4 ಮಾದರಿಯ ಕೇವಲ 9 ಯುನಿಟ್‌ಗಳು ಮಾತ ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.900 ರಷ್ಟು ಮಾರಾಟದ ಬೆಳವಣಿಗೆಯನ್ನು ಸಾಧಿಸಿದೆ. ಆದರೆ ಕಳೆದ ವರ್ಷದ ಈ ಅವಧಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕೂಡ ಹೆಚ್ಚಾಗಿತ್ತು.

ಫೋಕ್ಸ್‌ವ್ಯಾಗನ್ ಟಿಗ್ವಾನ್
ಕಳೆದ ತಿಂಗಳು ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಮಾದರಿಯ 54 ಯುನಿಟ್ ಯುನಿಟ್‌ಗಳು ಮಾರಾಟವಾಗಿವೆ. ಡಿಸೆಂಬರ್ 2021 ರಲ್ಲಿ, ಫೋಕ್ಸ್‌ವ್ಯಾಗನ್ ಫೇಸ್‌ಲಿಫ್ಟೆಡ್ ಟಿಗ್ವಾನ್ ಅನ್ನು ಪರಿಚಯಿಸಿತು ಮತ್ತು ನವೀಕರಿಸಿದ ಕೊಡಿಯಾಕ್ 2022ರ ಆರಂಭದಲ್ಲಿ ಆಗಮಿಸಿತು. ಎರಡು ಮಾದರಿಯಲ್ಲಿಯು 2.0-ಲೀಟರ್ ನಾಲ್ಕು-ಸಿಲಿಂಡರ್ TSI ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಎಂಜಿ ಗ್ಲೊಸ್ಟರ್
ಎಂಜಿ ಗ್ಲೊಸ್ಟರ್ 2022ರ ಮೇ ತಿಂಗಳಿನಲ್ಲಿ ಎಂಜಿ ಗ್ಲೊಸ್ಟರ್ ಮಾದರಿಯ 51 ಯುನಿಟ್ ಮಾರಾಟವಾಗಿದೆ. ಪ್ರತಿ ಬಾರಿಯು ಪೂರ್ಣ ಗಾತ್ರದ ಎಸ್ಯುವಿ ವಿಭಾಗದ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುತ್ತಿದ್ದ ಗ್ಲೊಸ್ಟರ್ ಈ ಬಾರಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಸಿಟ್ರನ್ ಏರ್‌ಕ್ರಾಸ್
ಸಿಟ್ರನ್ ಏರ್‌ಕ್ರಾಸ್ 24 ಯುನಿಟ್‌ಗಳೊಂದಿಗೆ ಆರನೇ ಸ್ಥಾನವನ್ನು ಗಳಿಸಿತು. ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರು ಉತ್ಪಾದನೆ ಆರಂಭಿಸಿರುವ ಸಿಟ್ರನ್ ಕಂಪನಿಯು ಮೊದಲ ಕಾರು ಮಾದರಿಯಾಗಿ ಕಳೆದ ಮೇ ತಿಂಗಳಿನಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿತ್ತು.


Click it and Unblock the Notifications