Just In
- 18 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭರ್ಜರಿ ಸಿಹಿಸುದ್ದಿ.. ಮಹೀಂದ್ರಾ ಕಾರುಗಳ ಮೇಲೆ ಬರೋಬ್ಬರಿ 1 ಲಕ್ಷದವರೆಗೆ ಡಿಸ್ಕೌಂಟ್
ಮಹೀಂದ್ರಾ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. XUV300, Marazzo, Bolero ಮತ್ತು Bolero Neo ಮೇಲೆ ಡಿಸೆಂಬರ್‌ನಲ್ಲಿ 1 ಲಕ್ಷದವರೆಗೆ ರಿಯಾಯಿತಿ ಘೋಷಿಸಿದೆ. ಆದರೆ, ಮಹೀಂದ್ರಾದ ಜನಪ್ರಿಯ ಥಾರ್ ಎಸ್‌ಯುವಿ ಮೇಲೆ ಕನಿಷ್ಠ ಬೆಲೆ ಕಡಿತ ಮಾಡಲಾಗಿದ್ದು, ಸ್ಕಾರ್ಪಿಯೋ N, ಸ್ಕಾರ್ಪಿಯೋ ಕ್ಲಾಸಿಕ್ ಮತ್ತು XUV700ಗೆ ಯಾವುದೇ ರಿಯಾಯಿತಿ ನೀಡಿಲ್ಲ.
ಮಹೀಂದ್ರಾ XUV300 (1 ಲಕ್ಷದವರೆಗೆ ರಿಯಾಯಿತಿ)
ದೇಶೀಯ ಕಾರು ತಯಾರಿಕ ಕಂಪನಿಯಾಗಿರುವ ಮಹೀಂದ್ರಾ, XUV300 ಕಾಂಪ್ಯಾಕ್ಟ್ ಎಸ್‌ಯುವಿಯ ಟಾಪ್-ಸ್ಪೆಕ್ W8(O) ರೂಪಾಂತರದ ಮೇಲೆ ಬರೋಬ್ಬರಿ 1 ಲಕ್ಷದವರೆಗೆ ರಿಯಾಯತಿ ನೀಡುವುದಾಗಿ ಘೋಷಣೆ ಮಾಡಿದೆ. ಎಂಟ್ರಿ ಲೆವೆಲ್ W4 ರೂಪಾಂತರದ ಮೇಲೆ 53,000 ರೂ.ವರೆಗಿನ ಒಟ್ಟು ಪ್ರಯೋಜನವನ್ನು ಪಡೆಯಬಹುದು. ಆದರೆ, ಮಿಡ್-ಸ್ಪೆಕ್ W6 ಮತ್ತು W8 ರೂಪಾಂತರದ ಮೇಲೆ ಕ್ರಮವಾಗಿ 80,000 ರೂ. ಮತ್ತು 90,000 ರೂ.ವರೆಗೆ ಗ್ರಾಹಕರಿಗೆ ರಿಯಾಯಿತಿ ಸಿಗಲಿದೆ.
ಹೆಚ್ಚು ಶಕ್ತಿಶಾಲಿಯಾಗಿರುವ TurboSportನ W6, W8 ಹಾಗೂ W8 (O) ರೂಪಾಂತರಗಳ ಮೇಲೆ 60,000 ರೂ.ವರೆಗೆ ರಿಯಾಯಿತಿಯನ್ನು ಮಾತ್ರ ಪಡೆಯಬಹುದಾಗಿದೆ. 131hp ಎಂಜಿನ್ ಜೊತೆಗೆ ಈ ಮಹೀಂದ್ರಾ XUV300, 110hp, 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, 117hp,1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ ಅವಲಂಬಿಸಿ, ಖರೀದಿದಾರರು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಅನ್ನು ಆಯ್ಕೆ ಮಾಡಬಹುದಾಗಿದೆ. XUV300 ಆರಂಭಿಕ ಬೆಲೆಗಳು 8.41 ರೂ. (ಎಕ್ಸ್ ಶೋ ರೂಂ ಪ್ರಕಾರ) ಇದೆ.
ಮಹೀಂದ್ರಾ ಬೊಲೆರೊ (95,000 ರೂ.ವರೆಗೆ ಆಫರ್)
ಡಿಸೆಂಬರ್‌ನಲ್ಲಿ, ಮಹೀಂದ್ರಾ ಬೊಲೆರೊ ಖರೀದಿಸಿವ ಗ್ರಾಹಕರು, ಒಟ್ಟು 95,000 ರೂ.ವರೆಗಿನ ರಿಯಾಯಿತಿ ಪ್ರಯೋಜನ ಪಡೆಯಬಹುದು. ಟಾಪ್-ಸ್ಪೆಕ್ B6 (O) ಮೇಲೆ ಗರಿಷ್ಠ ರಿಯಾಯಿತಿ ಇದೆ. ಆದರೆ, ಬೇಸ್ B2 ಒಟ್ಟು 33,000 ರೂ. ರಿಯಾಯಿತಿಯನ್ನು ಹೊಂದಿದೆ. ಮಿಡ್-ಸ್ಪೆಕ್ B4 ಮತ್ತು B6 ರೂಪಾಂತರಗಳು 75,000 ರೂ. ವರೆಗಿನ ರಿಯಾಯಿತಿ ಇರಲಿದೆ. ಇದರ ವಿನ್ಯಾಸವು ಗ್ರಾಹಕರನ್ನು ಸೆಳೆಯಲಿದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ. ಬೊಲೆರೊ, 75hp, 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮಹೀಂದ್ರಾ ಮರಾಜೊ (60,200 ರೂ.ವರೆಗೆ ರಿಯಾಯಿತಿ)
ಮಹೀಂದ್ರಾ ವಾಹನಗಳಲ್ಲಿ ನಿಧಾನಗತಿಯಲ್ಲಿ ಮಾರಾಟವಾಗುವ ಮರಾಝೊ ಎಂಪಿವಿಯ ಮೇಲೆ ಒಟ್ಟು 67,200 ರೂ.ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಮೂರು ಟ್ರಿಮ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡೀಸೆಲ್ ಎಂಜಿನ್ ಅನ್ನು ಮಾತ್ರ ಹೊಂದಿದೆ. ಮರಾಜೊ, ಕಿಯಾ ಕಾರ್ನಿವಲ್, ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಎಂಪಿವಿಗಳಿಗೆ ಕೊಂಚ ಮಟ್ಟಿಗೆ ಪೈಪೋಟಿ ನೀಡುತ್ತಿದೆ. ಮರಾಜೊ,123hp, 1.5-ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಮಹೀಂದ್ರಾ ಥಾರ್ (20,000 ರೂ.ವರೆಗೆ ಆಫರ್)
ಆಗಸ್ಟ್ 2020ರಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದ ಮೂರು-ಡೋರ್, 2-GEN ಥಾರ್ ಭಾರತೀಯ ಖರೀದಿದಾರರನ್ನು ಆಕರ್ಷಿಸಿತ್ತು. ಈ ತಿಂಗಳು, ಮಹೀಂದ್ರಾ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳ ಮೇಲೆ ಕನಿಷ್ಠ 20,000 ರೂಪಾಯಿ ಬೆಲೆಯನ್ನು ಕಡಿತ ಮಾಡುತ್ತಿದೆ. ಥಾರ್ 152hp, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 132hp, 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಶೀಘ್ರದಲ್ಲೇ ಅಂದರೇ 2023ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ5-ಡೋರ್ ಥಾರ್ ಬಿಡುಗಡೆಯಾಗಲಿದೆ.
ಇಷ್ಟೇ ಅಲ್ಲದೆ, ಹೋಂಡಾ ಕಂಪನಿಯು ಸಹ ಅಮೇಜ್, ಜಾಝ್ ಮತ್ತು WR-Vನಂತಹ ಆಯ್ದ ಮಾದರಿಗಳ ಮೇಲೆ ಈ ಡಿಸೆಂಬರ್‌ನಲ್ಲಿ ರಿಯಾಯತಿ ಘೋಷಿಸಿದ್ದು, ಇದರಲ್ಲಿ ಎಕ್ಸ್‌ಚೇಂಜ್ ಬೋನಸ್, ನಗದು ರಿಯಾಯಿತಿ, ಲಾಯಲ್ಟಿ ಬೋನಸ್‌ಗಳು ಮತ್ತು ಕಾರ್ಪೊರೇಟ್ ಪ್ರಯೋಜನಗಳು ಕೂಡ ಸೇರಿವೆ. WR-Vಯ ಎಲ್ಲಾ ಪೆಟ್ರೋಲ್ ರೂಪಾಂತರಗಳ ಮೇಲೆ 72,340 ರೂ.ವರೆಗಿನ ರಿಯಾಯಿತಿ ಪ್ರಯೋಜನಗಳು ಲಭ್ಯವಿದೆ. ಹೋಂಡಾ ಸಿಟಿ (Gen 5) ಮೇಲೆ 72,145 ರೂ.ವರೆಗೆ ರಿಯಾಯಿತಿ ಸಿಗಲಿದೆ.
ಒಂಬತ್ತು ವರ್ಷಗಳಲ್ಲಿ ಐದು ಲಕ್ಷ ಯುನಿಟ್ ಮಾರಾಟವಾಗಿ ದಾಖಲೆ ನಿರ್ಮಿಸಿರುವ ಹೋಂಡಾ ಅಮೇಜ್ ಮೇಲೆ 43,144 ರೂ.ವರೆಗೆ ರಿಯಾಯಿತಿ, ಹೋಂಡಾ ಜಾಝ್ ಮೇಲೆ 37,047 ರೂ.ವರೆಗೆ ಡಿಸ್ಕೌಂಟ್, ಹೋಂಡಾ ಸಿಟಿ (Gen 4) ಮೇಲೆ 5,000 ರೂ.ವರೆಗೆ ರಿಯಾಯಿತಿ ಪ್ರಯೋಜನ ನೀಡಲಾಗಿದೆ. ಈಗಾಗಲೇ ಹೊಸ ವರ್ಷಕ್ಕೆ ತಮ್ಮ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ರೆಡಿಯಾಗಿರುವ ಕಾರು ತಯಾರಿಕ ಕಂಪನಿಗಳು, ವರ್ಷದ ಕೊನೆಯಲ್ಲಿ ಹಲವು ಆಫರ್ ನೀಡುವ ಮೂಲಕ ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.