Just In
- 50 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 14 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 16 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್‌ಜಿ ಕಾರು ಬಿಡುಗಡೆ
Don't Miss!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಸಿಎನ್‌ಜಿ ವಾಹನ ಬಳಕೆದಾರರಿಗೆ ಶುಭ ಸುದ್ದಿ: ಈ ನಗರದಲ್ಲಿ ಶೀಘ್ರದಲ್ಲೇ CNG ಹೋಂ ಡೆಲಿವರಿ ಲಭ್ಯ
ಭಾರತದಲ್ಲಿ ಇಂಧನ ಬೆಲೆಗಳ ಏರಿಕೆಯಿಂದಾಗಿ ಹಲವರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋದರೆ, ಇನ್ನೂ ಕೆಲವರು ಸಿಎನ್‌ಜಿ ವಾಹನಗಳನ್ನು ಬಳಸುತ್ತಿದ್ದಾರೆ. ಪೆಟ್ರೋಲ್, ಡೀಸಲ್‌ಗಳ ಬೆಲೆಗೆ ಹೋಲಿಸಿಕೊಂಡರೆ ಸಿಎನ್‌ಜಿ ಅಗ್ಗವಾಗಿದ್ದು, ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗಿದೆ. ಆದರೆ ನಮ್ಮ ದೇಶದಲ್ಲಿ ಪೆಟ್ರೋಲ್ ಬಂಕ್‌ಗಳು ಸಿಗುವಷ್ಟು ಹೇರಳವಾಗಿ ಸಿನ್‌ಜಿ ಫಿಲ್ಲಿಂಗ್ ಸ್ಟೇಷನ್‌ಗಳು ಲಭ್ಯವಿಲ್ಲ.

ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಿನ ರೀಫಿಲ್ಲಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಹಲವು ಕಂಪನಿಗಳು ಮುಂದಾಗಿವೆ. ಈ ನಡುವೆ ಮುಂಬೈನಲ್ಲಿ ಸಿಎನ್‌ಜಿಯನ್ನು ಮನೆ ಬಾಗಿಲಿಗೆ (ಡೋರ್ ಡೆಲಿವರಿ) ತಲುಪಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮುಂಬೈ ಮೂಲದ ಸ್ಟಾರ್ಟಪ್ ಕಂಪನಿಯಾದ ಫ್ಯೂಯಲ್ ಡೆಲಿವರಿ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಗ್ರಾಹಕರಿಗೆ ಸಿಎನ್‌ಜಿಯನ್ನು ಹೋಮ್ ಡೆಲಿವರಿ ಮಾಡುವ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.

ಈ ಯೋಜನೆಯು ಯಶಸ್ವಿಯಾದಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಿಎನ್‌ಜಿ ಹೋಂ ಡೆಲಿವರಿಯನ್ನು ವಿಸ್ತರಿಸಲು ಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ಇದಕ್ಕೆ ಸಂಬಂಧಿಸಿದ ಆ್ಯಪ್ ಅನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬರಲಿದೆ.

CNG ಹೋಂ ಡೆಲಿವರಿ ಹೇಗೆ ?
ಗ್ರಾಹಕರು ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಸಿಎನ್‌ಜಿಯನ್ನು ಮನೆ ಬಾಗಿಲಿಗೆ ತಲುಪಿಸಲು ಬುಕ್ ಮಾಡಬಹುದು. ಇದಕ್ಕಾಗಿ ಕಂಪನಿಯು ಮೊಬೈಲ್ ಅಪ್ಲಿಕೇಶನ್ ಮತ್ತು ಟೋಲ್ ಫ್ರೀ ಸಂಖ್ಯೆಯನ್ನು ನೀಡುತ್ತದೆ. ಗ್ರಾಹಕರಿಂದ ಬುಕಿಂಗ್ ಅನ್ನು ಸ್ವೀಕರಿಸಿದ ನಂತರ ಕಂಪನಿಯು CNG ಅನ್ನು ತಲುಪಿಸಲು ಬುಕ್ ಮಾಡಿದ ವಿಳಾಸಕ್ಕೆ ಕಳುಹಿಸುತ್ತದೆ.

ಇದಕ್ಕಾಗಿ ಗ್ರಾಹಕರು ಪ್ರತಿ ಕೆ.ಜಿ ಸಿಎನ್‌ಜಿ ದರ ಮತ್ತು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮುಂಬೈ ಪ್ರತಿ ವರ್ಷ 43 ಲಕ್ಷ ಕೆ.ಜಿ ಸಿಎನ್‌ಜಿ ಬಳಸುತ್ತಿದೆ ಎಂದು ವರದಿಯೊಂದು ಹೇಳಿದೆ. ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು CNG ವಾಹನಗಳು ನೋಂದಣಿಯಾಗಿವೆ, ಆದರೆ ಕೆವಲ 223 CNG ಕೇಂದ್ರಗಳು ಮಾತ್ರ ಲಭ್ಯವಿವೆ. ಇಂತಹ ಪರಿಸ್ಥಿತಿಯಲ್ಲಿ ಜನರು ಸಿಎನ್‌ಜಿ ತುಂಬಲು ರೀಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ.

ಈ ವಿತರಣೆಯು ಪ್ರಸ್ತುತ IoT ತಂತ್ರಜ್ಞಾನಗಳ ಮೂಲಕ ವ್ಯಾಪಾರದಿಂದ ವ್ಯಾಪಾರದ ಮಾದರಿಯಲ್ಲಿ 500 ಕ್ಕೂ ಹೆಚ್ಚು ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತಲುಪಿಸುತ್ತಿದೆ. ಕಂಪನಿಯ ಗ್ರಾಹಕರು ರಿಯಲ್ ಎಸ್ಟೇಟ್, ಲಾಜಿಸ್ಟಿಕ್ಸ್, ಉದ್ಯಮ, ಗೋದಾಮು ಮತ್ತು ಕೃಷಿಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ.

ಸಿಎನ್‌ಜಿಯನ್ನು ಮನೆಗೆ ತಲುಪಿಸುವ ಪರಿಚಯದೊಂದಿಗೆ ಜನರು ರೀಫಿಲ್ಲಿಂಗ್‌ನಲ್ಲಿ ಅನುಕೂಲವನ್ನು ಪಡೆಯಲಿದ್ದಾರೆ. ಅಲ್ಲದೇ ಈ ರೀತಿಯ ರೀಫಿಲಿಂಗ್‌ನ ಲಭ್ಯತೆಯಿಂದಾಗಿ ಜನರು ಸಿಎನ್‌ಜಿ ಕಾರುಗಳನ್ನು ಖರೀದಿಸಲು ಮುಂದಾಗುತ್ತಾರೆ. CNG ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗಿಂತ ಕಡಿಮೆ ಕಾರ್ಬನ್ ಅನ್ನು ಹೊರಸೂಸುತ್ತವೆ. ಅಲ್ಲದೇ ಸಿಎನ್‌ಜಿ ಕಾರುಗಳ ಮೈಲೇಜ್ ಕೂಡ ಹೆಚ್ಚು.

ಮುಂಬೈ ಮಹಾನಗರ ಗ್ಯಾಸ್ ಲಿಮಿಟೆಡ್‌ನಿಂದ ಅನುಮತಿ
ಮಾಹಿತಿಯ ಪ್ರಕಾರ, ಕಂಪನಿಯು ಇತ್ತೀಚೆಗೆ ಸಿಎನ್‌ಜಿಯನ್ನು ಮನೆಗೆ ಡೆಲಿವರಿ ನೀಡಲು ಪ್ರಾರಂಭಿಸಲು ಮುಂಬೈ ಮಹಾನಗರ ಗ್ಯಾಸ್ ಲಿಮಿಟೆಡ್‌ನಿಂದ (ಎಂಜಿಎಲ್) ಅನುಮತಿಯನ್ನು ಪಡೆದುಕೊಂಡಿದೆ. ಮನೆ ಬಾಗಿಲಿಗೆ CNG ಸೇವೆ ಪ್ರಾರಂಭವಾದ ನಂತರ, CNG ವಾಹನಗಳಿಗೆ ಎಲ್ಲಿ ಬೇಕಾದರೂ ರೀಫಿಲ್ಲಿಂಗ್ ಮಾಡಬಹುದು.

ಇದೇ ಸಮಯದಲ್ಲಿ ಸಿಎನ್‌ಜಿ ಕಾರುಗಳನ್ನು ಓಡಿಸುವವರು ಬಂಕ್‌ನಲ್ಲಿನ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ ಸಾಂಪ್ರದಾಯಕ್ಕೆ ಚೆಕ್ ಇಡಬಹುದು. ಕಂಪನಿಯು ಆರಂಭದಲ್ಲಿ ಮುಂಬೈನ ಆಯ್ದ ಏರಿಯಾಗಳಲ್ಲಿ ಸೇವೆಯನ್ನು ಪ್ರಾರಂಭಿಸಲಿದೆ, ನಂತರ ಅದನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿಸ್ತರಿಸಲಾಗುತ್ತದೆ.

ಸಾಮಾನ್ಯವಾಗಿ ದೊಡ್ಡ ನಗರಗಳ ಟ್ರಾಫಿಕ್‌ನಲ್ಲಿ ಸಿಎನ್‌ಜಿ ಖಾಲಿಯಾಗುವ ಬಗ್ಗೆ ಜನರು ಚಿಂತಿಸುತ್ತಾರೆ. CNG ಖಾಲಿಯಾದರೆ ಹತ್ತಿರದಲ್ಲಿ ಯಾವುದೇ CNG ರೀಫಿಲ್ಲಿಂಗ್ ಕೇಂದ್ರವಿಲ್ಲದಿದ್ದರೆ, ನೀವು ತೊಂದರೆಗೆ ಒಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸಿಎನ್‌ಜಿ ಬಂಕ್‌ಗಳಿಗಾಗಿ ಹುಡುಕಿಕೊಂಡು ಹೋಗಿ ದೀರ್ಘ ಸರತಿ ಸಾಲಿನಲ್ಲಿ ಕಾಯಬೇಕು.

ಆದರೆ ಈಗ ಸಿಎನ್‌ಜಿ ಮುಗಿದ ತಕ್ಷಣ ಎಲ್ಲೂ ಹೋಗದೇ ಕಾರಿನ ಸಿಎನ್‌ಜಿ ಟ್ಯಾಂಕ್ ತುಂಬಿಸಿಕೊಳ್ಳಬಹುದು. ಈ ಸಿಎನ್‌ಜಿ ವಿತರಣೆಯು ಕಾರುಗಳು, ಆಟೋಗಳು, ವ್ಯಾನ್‌ಗಳು, ಬಸ್‌ಗಳು, ವಾರದ ಏಳು ದಿನದ ಇಪ್ಪತ್ತನಾಲ್ಕು ಘಂಟೆಯು ಎಲ್ಲಾ ರೀತಿಯ ಸಿಎನ್‌ಜಿ ಚಾಲನೆಯಲ್ಲಿರುವ ವಾಹನಗಳಿಗೆ ತನ್ನ ಸೇವೆಯನ್ನು ಒದಗಿಸುವುದಾಗಿ ಕಂಪನಿ ಹೇಳಿದೆ.

ಇಂತಹ ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ತಪ್ಪಲಿದೆ. ಅಲ್ಲದೇ ಹೇರಳವಾಗಿ ಬೆಳೆಯುತ್ತಿರುವ ಪೆಟ್ರೋಲ್ ಚಾಲಿತ ವಾಹನಗಳ ಸಂಖ್ಯೆ ಕೂಡ ತಗ್ಗಲಿದೆ. ಈಗಾಗಲೇ ಮುಂಬೈನಲ್ಲಿ ಸಿಎನ್‌ಜಿ ಡೆಲಿವರಿ ಕುರಿತು ಎಲ್ಲಾ ರೀತಿಯ ತಯಾರಿ ನಡೆಸಿರುವ ಕಂಪನಿಯು ಆದಷ್ಟು ಬೇಗ ಸೇವೆಯನ್ನು ಕಾರ್ಯ ರೂಪಕ್ಕೆ ತರಲು ಸಿದ್ಧತೆ ನಡೆಸುತ್ತಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಪ್ರಸ್ತುತ ಭಾರತದಲ್ಲಿ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳು ನಿಧಾನವಾಗಿ ಬೆಳೆಯುತ್ತಿವೆ. ಕೆಲವು ವಿಷಯಗಳಲ್ಲಿ ಇವು ಪೆಟ್ರೋಲ್ ಚಾಲಿತ ವಾಹನಗಳಷ್ಟು ಗುಣಮಟ್ಟ ಹೊಂದಿಲ್ಲವಾದರೂ ಮೈಲೇಜ್ ಹಾಗೂ ಪರಿಸರ ಹಾನಿಯಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳಾಗಿವೆ. ಸದ್ಯ ಎಲೆಕ್ಟ್ರಿಕ್ ಹಾಗೂ ಸಿನ್‌ಜಿಗಳನ್ನು ಪ್ರಯೋಗ ಹಂತದ ವಾಹನಗಳೆಂದು ಹೇಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದ ಪೂರ್ಣ ಗುಣಮಟ್ಟದೊಂದಿಗೆ ಈ ವಾಹನಗಳು ಹೊರಹೊಮ್ಮಲಿವೆ.