ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಭಾರತದಲ್ಲಿ ವಾಹನಗಳ ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ತರಲು ಸಜ್ಜಾಗುತ್ತಿದೆ. ಇದಕ್ಕಾಗಿ ಭಾರತದಲ್ಲಿನ ಕಾರುಗಳ ಕಾರ್ಬನ್ ಹೊರಸೂಸುವಿಕೆಯನ್ನು ಆಧರಿಸಿ ತೆರಿಗೆಯನ್ನು ವಿಧಿಸಲು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎಂದು ಬೃಹತ್ ಕೈಗಾರಿಕೆಗಳ ಕಾರ್ಯದರ್ಶಿ ಅರುಣ್ ಗೋಯೆಲ್ ಹೇಳಿದ್ದಾರೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಈ ಹೊಸ ಯೋಜನೆಯು ಕಾರುಗಳ ಪವರ್‌ಟ್ರೇನ್ ಪ್ರಕಾರವನ್ನು ಆಧರಿಸಿರುವುದಕ್ಕಿಂತ ಹೆಚ್ಚಾಗಿ ವಾಹನಗಳು ಹೊರಸೂಸುವ ಕಾರ್ಬನ್ ಮಾನದಂಡಗಳೊಂದಿಗೆ ತೆರಿಗೆ ದರಗಳನ್ನು ನಿಗಧಿಪಡಿಸುತ್ತದೆ. ಇದಕ್ಕಾಗಿ ತಜ್ಞರ ತಂಡವು ಪ್ರಸ್ತುತ ಜಾಗತಿಕ ಮತ್ತು ದೇಶೀಯ ಡೇಟಾವನ್ನು ಪರಿಶೀಲಿಸುತ್ತಿದೆ. ಜೊತೆಗೆ ಕಾರು ತಯಾರಕರ ಬೇಡಿಕೆಗಳನ್ನು ಪರಿಶೀಲಿಸುತ್ತಿದೆ ಎಂದು ಇತ್ತೀಚಿನ SIAM ಪ್ಯಾನೆಲ್ ಚರ್ಚೆಯಲ್ಲಿ ಸಚಿವ ಗೋಯೆಲ್ ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಪ್ರಸ್ತುತ ವಾಹನಗಳ ಮೇಲಿನ ತೆರಿಗೆ ಹೇಗಿದೆ?

ಕೇಂದ್ರವು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 5 ರಷ್ಟು ತೆರಿಗೆಯನ್ನು ವಿಧಿಸುತ್ತಿದೆ. ಮತ್ತೊಂದೆಡೆ ಮೈಲ್ಡ್ ಹೈಬ್ರಿಡ್‌ಗಳಿಗೆ ಶೇ 20 ರಷ್ಟು ತೆರಿಗೆ ಮತ್ತು ಸ್ಟ್ರಾಂಗ್ ಹೈಬ್ರಿಡ್‌ಗಳಿಗೆ ಶೇ 43 ರಷ್ಟು ತೆರಿಗೆಯನ್ನು ವಿಧಿಸುತ್ತಿದೆ. ಆಂತರಿಕ ದಹನಕಾರಿ ಎಂಜಿನ್ (ICE) ವಾಹನಗಳು, 1.2-ಲೀಟರ್ ಎಂಜಿನ್ ಅಥವಾ ಅದಕ್ಕಿಂತ ಕಡಿಮೆ ಇರುವ ಸಬ್-4m ವಾಹನಗಳಿಗೆ ತೆರಿಗೆ ದರವು ಶೇ 29 ರಷ್ಟಿದೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

1.5-ಲೀಟರ್ ಎಂಜಿನ್ ಅಥವಾ ಅದಕ್ಕಿಂತ ಕಡಿಮೆ ಇರುವ ಸಬ್-4m ವಾಹನಗಳಿಗೆ ಶೇ 31 ರಷ್ಟು, 4m ಗಿಂತ ಹೆಚ್ಚಿನ ವಾಹನಗಳಿಗೆ ಶೇ 45 ರಷ್ಟು ತೆರಿಗೆ ವಿಧಿಸಿದರೆ, 1.5-ಲೀಟರ್ ಎಂಜಿನ್ ಅಥವಾ ಅದಕ್ಕಿಂತ ಕಡಿಮೆ ಮತ್ತು 1.5 ಲೀಟರ್ ಗಿಂತ ದೊಡ್ಡ ಎಂಜಿನ್ ಹೊಂದಿರುವ 4m-ಪ್ಲಸ್ ವಾಹನಗಳಿಗೆ ಶೇ 48 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಭಾರತದಲ್ಲಿ ಹೈಬ್ರಿಡ್ ಕಾರುಗಳಿಗೆ ಉತ್ತೇಜನ

ಭಾರತೀಯ ಮಾರುಕಟ್ಟೆಯು ಈ ವರ್ಷ ಹೆಚ್ಚು ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳನ್ನು ಬಿಡುಗಡೆ ಮಾಡಿದೆ, ಇದು ಹೋಂಡಾ ಸಿಟಿ e:HEV ಮತ್ತು ಇತ್ತೀಚೆಗೆ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಿಂದ ಪ್ರಾರಂಭವಾಗಿದೆ. ವಾಸ್ತವವಾಗಿ ಗ್ರಾಂಡ್ ವಿಟಾರಾ ಬುಕಿಂಗ್‌ಗಳಲ್ಲಿ ಶೇ 43 ರಷ್ಟು ಅದರ ಸ್ಟ್ರಾಂಗ್ ಹೈಬ್ರಿಡ್ ವೇರಿಯೆಂಟ್‌ಗಳೇ ಪಡೆದುಕೊಂಡಿವೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಇಂತಹ ಉತ್ಪನ್ನಗಳೊಂದಿಗೆ ಮಾರುತಿ ಸುಜುಕಿಯಂತಹ ಕಾರು ತಯಾರಕರು ಹೈಬ್ರಿಡ್ ವಾಹನಗಳ ಮೇಲೆ ಕಡಿಮೆ ತೆರಿಗೆಗಳನ್ನು ಹೊಂದಿದ್ದಾರೆ. "ಹೈಬ್ರಿಡ್‌ಗಳು ಶೇ 50 ಅಥವಾ ಅದಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಉತ್ತೇಜಿಸಲು ಬೆಂಬಲ ಅಥವಾ ಪ್ರೋತ್ಸಾಹ ನೀಡಬೇಕಿದೆ, ಏಕೆಂದರೆ ಇವು ಪರಿಸರ ಸ್ನೇಹಿಯಾಗಿರುತ್ತವೆ" ಎಂದು ಮಾರುತಿ ಸುಜುಕಿಯ ಮಾರಾಟ ಮತ್ತು ಮಾರುಕಟ್ಟೆಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಇನ್ನು ಟೊಯೊಟಾ ಮೂರನೇ ಮಾದರಿ, ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಸಹ ಸಿದ್ಧಪಡಿಸುತ್ತಿದೆ. ಇದನ್ನು ಟೊಯೊಟಾ-ಮಾರುತಿ ಎಸ್‌ಯುವಿಗಳನ್ನು ತಯಾರಿಸುವ ಅದೇ ಬಿಡದಿ ಸ್ಥಾವರದಲ್ಲಿ ಉತ್ಪಾದಿಸುವ ನಿರೀಕ್ಷೆಯಿದೆ. ಒಂದೇ ಸ್ಥಳದಲ್ಲಿ ಅನೇಕ ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳನ್ನು ತಯಾರಿಸುವುದು ಮತ್ತು ಅವೆಲ್ಲವೂ ಒಂದೇ ಘಟಕಗಳನ್ನು ಹಂಚಿಕೊಳ್ಳುವುದು ಆರ್ಥಿಕತೆಯ ಪ್ರಮಾಣದ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಭಾರತದಲ್ಲಿ ಹೈಬ್ರಿಡ್ ಕಾರುಗಳು

ಭಾರತದಲ್ಲಿ ಮಾರ್ಚ್ 2021 ಮತ್ತು ಏಪ್ರಿಲ್ 2022 ರ ನಡುವೆ, ಕಾರುಗಳ ಮಾರಾಟದಲ್ಲಿ ಪೆಟ್ರೋಲ್ ಎಂಜಿನ್ ಶೇಕಡಾ 68, ಡೀಸೆಲ್ ಶೇಕಡಾ 19 ಮತ್ತು CNG ಶೇಕಡಾ 8 ರಷ್ಟು ಮಾರಾಟವಾಗಿವೆ. ಪ್ರಸ್ತುತ ಹೈಬ್ರಿಡ್‌ಗಳು ಅವುಗಳ ICE ಕೌಂಟರ್‌ಪಾರ್ಟ್‌ಗಳಿಗೆ ಹೋಲಿಸಿದರೆ ಶೇ 30 ರಷ್ಟು ಹೆಚ್ಚಿನ ಬೆಲೆಯನ್ನು ಹೊಂದಿವೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಆದರೆ ಇತ್ತೀಚೆಗೆ ಪರಿಚಯಿಸಲಾದ ಟೊಯೋಟಾ ಹೈರೈಡರ್ 1.5-ಲೀಟರ್ ಪೆಟ್ರೋಲ್ ಸ್ಟ್ರಾಂಗ್-ಹೈಬ್ರಿಡ್ ಇ-ಸಿವಿಟಿಯ ಮೂಲಕ ಇವುಗಳ ಬೆಲೆ ಇಳಿಕೆಯಾಗಿದ್ದು, ಹೊಸ ಟೊಯೋಟಾ ಹೈರೈಡರ್ ಸ್ಟ್ರಾಂಗ್-ಹೈಬ್ರಿಡ್ ಇ-ಸಿವಿಟಿಯ ಬೆಲೆ 18.99 ಲಕ್ಷ ರೂ.ಗೆ ನಿಗಧಿಪಡಿಸಲಾಗಿದೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

"ಭಾರತದಲ್ಲಿ ಎಲ್ಲಾ ರೀತಿಯ ಇಂಧನಗಳಿಗೆ ಅವಕಾಶವಿದೆ. ಸಿಎನ್‌ಜಿ ಕಾರುಗಳು ಬಹಳ ವೇಗವಾಗಿ ಬೆಳೆಯುತ್ತಿವೆ. ಭಾರತವು ಮೊದಲು ಸಿಎನ್‌ಜಿ, ಎರಡನೆಯದಾಗಿ ಹೈಬ್ರಿಡ್ ನಂತರ ಎಲೆಕ್ಟ್ರಿಕ್ ಮಾರ್ಗವನ್ನು ಅನುಸರಿಸುತ್ತದೆ" ಎಂದು ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್‌ಸಿ ಭಾರ್ಗವ ಹೇಳಿದ್ದಾರೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ (FAME-II) ಯೋಜನೆಯ ಎರಡನೇ ಹಂತದ ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (FAME-II) ಯೋಜನೆಯಡಿಯಲ್ಲಿ ನಿಗದಿಪಡಿಸಲಾದ 10,000 ಕೋಟಿ ರೂ.ಗಳಲ್ಲಿ, ಸರ್ಕಾರವು ಇದುವರೆಗೆ ಸುಮಾರು 1,400 ಕೋಟಿ ರೂ. ವೆಚ್ಚಿಸಿದೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

2023 ರ ಯೂನಿಯನ್ ಬಜೆಟ್ ಈ ವಲಯಕ್ಕೆ ಹೆಚ್ಚಿನ ಒತ್ತು ನೀಡಿದ್ದು FAME ಯೋಜನೆಗೆ ನಿಧಿ ಹಂಚಿಕೆಯನ್ನು ಕಳೆದ ವರ್ಷ 800 ಕೋಟಿ ರೂ.ಗಳಿಂದ 3,000 ಕೋಟಿ ರೂ.ಗೆ ಏರಿಸಿ ಮೂರು ಪಟ್ಟು ಹೆಚ್ಚಿಸಿದೆ. ಸಾಂಪ್ರದಾಯಿಕ ಇಂಧನ ಕಾರುಗಳು ಮತ್ತು EV ಗಳ ನಡುವಿನ ಬೆಲೆಯ ಅಂತರ ಕಡಿಮೆಯಾಗಲು ಸುಧೀರ್ಘ ಸಮಯ ಬೇಕಿದೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಇದಕ್ಕೆ ಕಾರಣ ಉತ್ತಮ ಬ್ಯಾಟರಿ ತಂತ್ರಜ್ಞಾನದ ಅವಶ್ಯಕತೆ, ಮೂಲಸೌಕರ್ಯ ಜೊತೆಗೆ ಗ್ರಾಹಕರು ಸುಗಮ ಸ್ಥಿತ್ಯಂತರವನ್ನು ಖಚಿತಪಡಿಸಿಕೊಳ್ಳಲು ಬೆಲೆಯನ್ನು ಪಡೆಯುವುದು ಇದಕ್ಕೆ ಕಾರಣವಾಗಿದೆ. ಆದ್ದರಿಂದ ಇದು ಸಂಭವಿಸುವವರೆಗೆ ಸಂಪೂರ್ಣ ವಿದ್ಯುದ್ದೀಕರಣದ ಹಾದಿಯಲ್ಲಿರುವ ಗ್ರಾಹಕರಿಗೆ ಹೈಬ್ರಿಡ್‌ಗಳು ಉತ್ತಮ ಆಯ್ಕೆಯಾಗಲಿವೆ.

ಹೈಬ್ರಿಡ್ ಕಾರು ಪ್ರಿಯರಿಗೆ ಶುಭಸುದ್ದಿ: ಶೀಘ್ರದಲ್ಲೇ ತೆರಿಗೆ ದರಗಳ ಇಳಿಕೆ ಮಾಡಲಿದೆ ಕೇಂದ್ರ ಸರ್ಕಾರ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಮುಂದಿನ ಸ್ಟ್ರಾಂಗ್ ಹೈಬ್ರಿಡ್ ಬಿಡುಗಡೆಯು ಮಾರುತಿ ಗ್ರ್ಯಾಂಡ್ ವಿಟಾರಾ SUV ಆಗಿದ್ದು, ಇದು ತನ್ನ ಪ್ಲಾಟ್‌ಫಾರ್ಮ್ ಪವರ್‌ಟ್ರೇನ್ ಮತ್ತು ಅಸೆಂಬ್ಲಿ ಲೈನ್ ಅನ್ನು ಟೊಯೋಟಾ ಹೈರೈಡರ್‌ನೊಂದಿಗೆ ಹಂಚಿಕೊಂಡಿದೆ. ಗ್ರ್ಯಾಂಡ್ ವಿಟಾರಾ ಬೆಲೆಗಳನ್ನು ಈ ತಿಂಗಳ ಕೊನೆಯಲ್ಲಿ ಘೋಷಿಸುವ ನಿರೀಕ್ಷೆಯಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ಹೈಬ್ರಿಡ್ ಕಾರುಗಳ ಆಗಮನಕ್ಕೆ ನಾಂದಿ ಹಾಡಲಿದೆ.

Most Read Articles

Kannada
English summary
Good news for hybrid car lovers The central government will soon reduce the tax rates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X