ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಾ ವಿಧದ ಕಾರುಗಳು ಲಭ್ಯವಿದೆ. ಗ್ರಾಹಕರಿಗೆ ತಮ್ಮ ಆದ್ಯತೆಗೆ ಅನುಗುಣವಾಗಿ ಕಾರುಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಕಳೆದ ವರ್ಷ ಹಲವಾರು ಜನಪ್ರಿಯ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಈ ಹೊಸ ಆಗಮನಗಳಲ್ಲಿ ಹಲವು ಅದ್ಭುತ ಕಾರುಗಳು, ವಿವಿಧ ವಿಭಾಗಗಳು ಮತ್ತು ಕೈಗೆಟುಕುವ ಬೆಲೆಯಲ್ಲಿಯು ಕಾರುಗಳು ಬಿಡುಗಡೆಯಾಗಿವೆ. ಇದರಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಹಲವು ಮಾದರಿಗಳಿವೆ. ನಮ್ಮಂತಹ ಜನನಿಬಿಡ ದೇಶದಲ್ಲಿ, ಹೆಚ್ಚಿನ ನಗರಗಳು ಟ್ರಾಫಿಕ್ ಸಿಗ್ನಿಲ್ ಗಳನ್ನು ಹೊಂದಿದ್ದು, ಇಂತಹ ಸಂದರ್ಭಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳು ಉತ್ತಮವಾಗಿದೆ. ಬಜೆಟ್ ಬೆಲೆಯಲ್ಲಿಯು ಕೂಡ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರುಗಳಿವೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೈಗೆಟುಕುವ ಬೆಲೆಯ ಆಟೋಮ್ಯಾಟಿಕ್ ಕಾರುಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ದಟ್ಸನ್ ರೆಡಿಗೋ

ದಟ್ಸನ್ ಇನ್ನೂ ಭಾರತೀಯ ಮನೆಗಳಲ್ಲಿ ಸಾಮಾನ್ಯ ಹೆಸರಲ್ಲದಿರಬಹುದು. ಆದರೆ ಈ ಕಾರು ಸಾಕಷ್ಟು ಆಯ್ಕೆ ಮತ್ತು ಸೌಕರ್ಯಗಳೊಂದಿಗೆ ಆರು ರೂಪಾಂತರಗಳಲ್ಲಿ ಲಭ್ಯವಿದೆ. ದಟ್ಸನ್ ರೆಡಿಗೋ ಕಾರು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ, ಈ ಕಾರಿನ ಬೆಲೆಯು ಎಲ್ಸ್ ಶೋರೂಂ ಪ್ರಕಾರ ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ರೆನಾಲ್ಟ್ ಕ್ವಿಡ್

ಕ್ವಿಡ್ ಭಾರತದಲ್ಲಿ ರೆನಾಲ್ಟ್‌ನ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ.ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದ್ದು, ರೆನಾಲ್ಟ್ ಕ್ವಿಡ್ ಪ್ರಾರಂಭವಾದಾಗಿನಿಂದಲೂ ಸಣ್ಣ ಕಾರು ಖರೀದಿದಾರರ ಮೆಚ್ಚಿನ ಆಯ್ಕೆಯಲ್ಲಿ ಇದು ಕೂಡ ಒಂದಾಗಿದೆ. ಕ್ವಿಡ್ ಖರೀದಿದಾರರಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣವೆಂದರೆ ಇದರ ಲುಕ್ ಮತ್ತು ಪ್ರಾರಂಭವಾದ ಸಮಯದಲ್ಲಿ ತನ್ನ ವಿಭಾಗದಲ್ಲಿ ಟಚ್‌ಸ್ಕ್ರೀನ್ ನೀಡುವ ಏಕೈಕ ಮಾದರಿಯಾಗಿತ್ತು.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಕ್ವಿಡ್ ಕಾರಿನ ಮುಂಭಾಗದ ಆಕರ್ಷಕ ವಿನ್ಯಾಸ, ಹೆಚ್ಚು ಫೀಚರ್ ಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಕ್ವಿಡ್ ಭಾರತದಲ್ಲಿ ಜನಪ್ರಿಯವಾಗಲು ಸಹಾಯ ಮಾಡಿತು. ಈ ಕಾರು ಐದು-ಸ್ಪೀಡ್ ಗೇರ್‌ಬಾಕ್ಸ್ ನಲ್ಲಿ ಲಭ್ಯವಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಕ್ವಿಡ್ ಆರ್‌ಎಕ್ಸ್‌ಎಲ್ ಬೆಲೆ ಎಕ್ಸ್ ಶೋರೂಂ ಪ್ರಕಾರ ಕೇವಲ ರೂ.5 ಲಕ್ಷವಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಮಾರುತಿ ಎಸ್-ಪ್ರೆಸ್ಸೊ

ಈ ಮಾರುತಿ ಎಸ್-ಪ್ರೆಸ್ಸೊ ಕಾರಿನಲ್ಲಿ 1.0-ಲೀಟರ್ ಎಂಜಿನ್‌ ಅನ್ನು ಹೊಂದಿದು, ಈ ಎಂಜಿನ್ 68 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಎಸ್-ಪ್ರೆಸ್ಸೊ VXI AT ಬೆಲೆಯು ಸುಮಾರು ರೂ.5.05 ಲಕ್ಷಗಳಾದರೆ, VXI ಪ್ಲಸ್ AT ರೂಪಾಂತರದ ಬೆಲೆಯು ರೂ,5.21 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೊರೂಂ ಪ್ರಕಾರವಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಹ್ಯುಂಡೈ ಸ್ಯಾಂಟ್ರೋ

ಹ್ಯುಂಡೈ ಸ್ಯಾಂಟ್ರೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ 1.1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 69 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ನೊಂದಿಗೆ ಜೋಡಿಯಾಗಿ, ಗೇರ್‌ಬಾಕ್ಸ್ ನಗರದ ಪರಿಸ್ಥಿತಿಗಳಲ್ಲಿ ಸಮಂಜಸವಾಗಿ ದರವನ್ನು ಹೊಂದಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಈ ಹ್ಯುಂಡೈ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಎಎಂಟಿ ರೂಪಾಂತರದ ಬೆಲೆಯು ಸುಮಾರು ರೂ.5.80 ಲಕ್ಷಗಳಾದರೆ, ಸ್ಯಾಂಟ್ರೋ ಕಾರಿನ ಅಸ್ಟಾ ಎಎಂಟಿ ರೂಪಾಂತರದ ಬೆಲೆಯು ರೂ.6.50 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೊರೂಂ ಪ್ರಕಾರವಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಮಾರುತಿ ಸುಜುಕಿ ವ್ಯಾಗನ್ಆರ್

ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಐದು-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ವ್ಯಾಗನ್ಆರ್ ಕಾರಿನ ಆಟೋಮ್ಯಾಟಿಕ್ ರೂಪಾಂತರದ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ,6 ಲಕ್ಷವಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಮಾರುತಿ ಸೆಲೆರಿಯೊ

ಮಾರುತಿ ಸುಜುಕಿ ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ ಎರಡನೇ ತಲೆಮಾರಿನ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕಂಪನಿಯ ಪ್ರಕಾರ, ಇದು ದೇಶದಲ್ಲಿ ಮಾರಾಟದಲ್ಲಿರುವ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಪೆಟ್ರೋಲ್ ಕಾರು. ಈ ಕಾರಿನಲ್ಲಿ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಈ ಕಾರಿನಲ್ಲಿ 1.0-ಲೀಟರ್ NA ಪೆಟ್ರೋಲ್ ಎಂಜಿನ್ ಹೊಂದಿದೆ, ಈ ಎಂಜಿನ್ 66.6 ಬಿಹೆಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಸೆಲೆರಿಯೊ ಕಾರಿನ ಎಎಂಟಿ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.15 ಲಕ್ಷವಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ದಟ್ಸನ್ ಗೋ

ಈ ಕಾರಿನಲ್ಲಿ ಎಎಂಟಿ ಗೇರ್‌ಬಾಕ್ಸ್ ಉತ್ತಮವಾಗಿದ್ದರೂ, ಸಿವಿಟಿ ಕೂಡ ಹೊಂದುವುದು ಉತ್ತಮವಾಗಿದೆ. ಸಿವಿಟಿ ಟ್ರಾನ್ಸ್‌ಮಿಷನ್ ಗೇರ್ ಶಿಫ್ಟ್‌ಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ ಮತ್ತು ಸಾಮಾನ್ಯವಾಗಿ ಎಎಂಟಿಗಳಿಗಿಂತ ಸುಗಮವಾಗಿರುತ್ತದೆ. ದಟ್ಸನ್ ಗೋ ಕಾರಿನ ಆಟೋಮ್ಯಾಟಿಕ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.30 ಲಕ್ಷವಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಟಾಟಾ ಟಿಯಾಗೋ

ಈ ಟಾಟಾ ಟಿಯಾಗೋ ಕಾರು ಗ್ಲೋಬಲ್-ಎನ್‌ಸಿಎಪಿಯಿಂದ 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಟಾಟಾ ಟಿಯಾಗೊ ದೇಶದ ಸುರಕ್ಷಿತ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಪುಣೆ ಮೂಲದ ಆಟೋಮೊಬೈಲ್ ತಯಾರಕರ ಹ್ಯಾಚ್‌ಬ್ಯಾಕ್ ಯೋಗ್ಯವಾದ ಕಾರ್ಯಕ್ಷಮತೆ, ವಿಶಾಲವಾದ ಒಳಾಂಗಣಗಳು ಮತ್ತು ಗುಣಮಟ್ಟದ ವೈಶಿಷ್ಟ್ಯಗಳ ದೀರ್ಘ ಪಟ್ಟಿಯನ್ನು ಒಳಗೊಂಡಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಈ ಟಾಟಾ ಟಿಯಾಗೋ ಕಾರಿನಲ್ಲಿ 1.2-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಬರುತ್ತದೆ.ಟಾಟಾ ಟಿಯಾಗೋ ಕಾರಿನ ಬೆಲೆಯು ಭಾರತ ಎಕ್ಸ್ ಶೋ ಪ್ರಕಾರ ರೂ.5.19 ಲಕ್ಷದಿಂದ ಪ್ರಾರಂಭವಾಗುತ್ತದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಮಾರುತಿ ಇಗ್ನಿಸ್

ಈ ಇಗ್ನಿಸ್ ಕಾರಿನಲ್ಲಿ 1.2-ಲೀಟರಿನ ಕೆ 12 ಬಿ ಬಿಎಸ್-6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಖರೀದಿಸಬಹುದಾದ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರುಗಳಿವು..

ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.50 ಲಕ್ಷ ವಾಗಿದೆ. ಬಜೆಟ್ ಆಧಾರಿತ ಹ್ಯಾಚ್‍‍ಬ್ಯಾಕ್‍‍ಗಳಿಂದಾಗಿ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಇಗ್ನಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಹ್ಯಾಚ್‍‍ಬ್ಯಾಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Here is list of top affordable automatic cars in india details
Story first published: Monday, February 14, 2022, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X