ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇತ್ತೀಚೆಗೆ ಭಾರತದಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿತು. ಇದೀಗ ಟೊಯೊಟಾ ಕಂಪನಿಯು ಕೂಡ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಮಾರುತಿ ಬಲೆನೊ ಕಾರಿನ ರಿಬ್ಯಾಡ್ಜ್ ವರ್ಷನ್ ಗ್ಲಾಂಝಾ ಆಗಿದೆ. ಹೊಸದಾಗಿ ಬಿಡುಗಡೆಗೊಂಡ ಈ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಆವೃತ್ತಿಯ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.43 ಲಕ್ಷವಾಗಿದೆ. ಮಾರುತಿ ಸುಜುಕಿ ಬಲೆನೊ ಎಸ್-ಸಿಎನ್‌ಜಿ ಹ್ಯಾಚ್‌ಬ್ಯಾಕ್‌ನಂತೆಯೇ, ಹೊಸದಾಗಿ ಬಿಡುಗಡೆಯಾದ ಟೊಯೊಟಾ ಗ್ಲಾಂಝಾ ಇ-ಸಿಎನ್‌ಜಿ ಹ್ಯಾಚ್‌ಬ್ಯಾಕ್ ಕೇವಲ ಎರಡು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಇದು ಜಿ ಮತ್ತು ಎಸ್ ಆಗಿದೆ. ಹೊಸ ಗ್ಲಾಂಝಾ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯ 'ಎಸ್' ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.46 ಲಕ್ಷವಾಗಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಎಂಜಿನ್

ಟೊಯೊಟಾ ಗ್ಲಾಂಝಾ ವಾಹನ ತಯಾರಕರ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ರೂಪಾಂತರವು ಮೂಲಭೂತವಾಗಿ ಮಾರುತಿ ಸುಜುಕಿ ಬಲೆನೊ ಎಸ್-ಸಿಎನ್‌ಜಿ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಇದರ ಪರಿಣಾಮವಾಗಿ, ಮಾದರಿಯು ಅದೇ 1.2-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರರ್ಡ್ ಸಿಎನ್‌ಜಿ-ಹೊಂದಾಣಿಕೆಯ ಎಂಜಿನ್‌ನಿಂದ ಚಾಲಿತವಾಗಿದೆ, ಅದು ಬಲೆನೊ ಎಸ್-ಸಿಎನ್‌ಜಿ ಹ್ಯಾಚ್‌ಬ್ಯಾಕ್‌ಗೆ ಪವರ್ ನೀಡುತ್ತದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಸ್ಟ್ಯಾಂಡರ್ಡ್ ರೂಪದಲ್ಲಿ ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಿಎನ್‌ಜಿ ಇಂಧನದೊಂದಿಗೆ, 76 ಬಿಹೆಚ್‍ಪಿ ಪವರ್ ಮತ್ತು 98.5 ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಟೊಯೊಟಾ ಗ್ಲಾಂಝಾ ಇ-ಸಿಎನ್‌ಜಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ,

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಮೈಲೇಜ್

ಈ ಹೊಸ ಟೊಯೊಟಾ ಗ್ಲಾಂಝಾ ಇ-ಸಿಎನ್‌ಜಿ ಹ್ಯಾಚ್‌ಬ್ಯಾಕ್‌ 30.61 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇದು ಟೊಯೋಟಾ ಗ್ಲಾಂಝಾ ಇ-ಸಿಎನ್‌ಜಿಯನ್ನು ದೇಶದ ಅತ್ಯಂತ ಇಂಧನ-ಸಮರ್ಥ ಕಾರುಗಳಲ್ಲಿ ಒಂದಾಗಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ವಿನ್ಯಾಸ

ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಈ ಹೊಸ ಟೊಯೊಟಾ ಗ್ಲಾಂಝಾ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ವಿನ್ಯಾಸದ ಶೈಲಿಯನ್ನು ಹೊಂದಿದೆ. ಹೊಸ ಟೊಯೊಟಾ ಗ್ಲಾಂಝಾ ಕಾರಿನ ವಿನ್ಯಾಸದ ಬಗ್ಗೆ ಹೆಳುವುದಾದರೆ, ಈ ಕಾರಿನ ಮುಂಭಾಗದ ಆಕರ್ಷಕ ವಿನ್ಯಾಸ ಶೈಲಿಯನ್ನು ಒಳಗೊಂಡಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಇದು ಟೊಯೊಟಾದ ಜಾಗತಿಕ ಕಾರುಗಳಿಗೆ ಅನುಗುಣವಾಗಿರುತ್ತದೆ. ಇದು ಕ್ಯಾಮ್ರಿ ತರಹದ ಮುಂಭಾಗದ ಗ್ರಿಲ್ ಮತ್ತು ಬಂಪರ್, ಹೊಸ ಕ್ರೋಮ್ ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್) ಗಳನ್ನು ಒಳಗೊಂಡಿದೆ. ಈ ಟೊಯೊಟಾ ಗ್ಲಾಂಝಾ ಕಾರಿನ ಹಿಂಭಾಗವು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಟೈಲ್-ಲೈಟ್‌ಗಾಗಿ ಹೊಸ ಇನ್‌ಸರ್ಟ್‌ಗಳನ್ನು ಒಳಗೊಂಡಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಈ ಪ್ರೀಮಿಯಂ ಟೊಯೊಟಾ ಗ್ಲಾಂಝಾ ವಿನ್ಯಾಸಗೊಳಿಸಲಾದ 16-ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಈ ಹೊಸ ಗ್ಲಾಂಝಾ ಕಾರು ರೆಡ್, ಬ್ಲೂ, ಗ್ರೇ, ವೈಟ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಇಂಟಿರಿಯರ್

ಈ ಹೊಸ ಟೊಯೊಟಾ ಗ್ಲಾಂಝಾ ಹ್ಯಾಚ್‌ಬ್ಯಾಕ್ ಕಾರಿನ ಕ್ಯಾಬಿನ್ ಹೊಸ ಬಲೆನೊ ಮಾದರಿಗೆ ಹೋಲುವಂತಿದೆ. ಇದು ಬಲೆನೊದಲ್ಲಿ ನೀಡಲಾಗುವ ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಬದಲಿಗೆ ಬ್ಲ್ಯಾಕ್ ಮತ್ತು ಬೀಜ್ ಬಣ್ಣಗಳ ಯೋಜನೆಯೊಂದಿಗೆ ಬರುತ್ತದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ವೈಶಿಷ್ಟ್ಯಗಳು

ವೈಶಿಷ್ಟ್ಯಗಳ ವಿಷಯದಲ್ಲಿ, ಈ ಗ್ಲಾಂಝಾ ಕಾರಿನಲ್ಲಿ ಮಲ್ಟಿ-ಫಂಕ್ಷನಲ್ ಲೆದರ್ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕನ್ಸೋಲ್, ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಏರ್-ಕಾನ್ ವೆಂಟ್‌ಗಳು ಮತ್ತು ಹಿಂಭಾಗ ಆಟೋಮ್ಯಾಟಿಕ್ ಎಸಿಯನ್ನು ಒಳಗೊಂಡಿವೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಇದರೊಂದಿಗೆ Apple CarPlay ಮತ್ತು Android Auto, ನ್ಯಾವಿಗೇಶನ್ ಮತ್ತು ವಾಯ್ಸ್ ಕಾಮೆಂಡ್ ಗಳೊಂದಿಗೆ ದೊಡ್ಡ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬರುತ್ತಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಇನ್ನು ಈ ಕಾರಿನಲ್ಲಿ ಹೊಸದಾಗಿ 360-ಡಿಗ್ರಿ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ (HUD), ವಾಯ್ಸ್ ಅಸಿಸ್ಟ್ ಫೈಂಡ್ ಮೈ ಕಾರ್ ವೈಶಿಷ್ಟ್ಯ ಮತ್ತು ರಿಮೋಟ್ ಲಾಕ್ ಮತ್ತು ಅನ್‌ಲಾಕ್ ಕಾರ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಕನೆಕ್ಟಿವಿಟಿ ಕಾರ್ ತಂತ್ರಜ್ಞಾನಗಳನ್ನು ಹೊಂದಿವೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಸುರಕ್ಷೆತಾ ಫೀಚರ್ಸ್

ಈ ಟೊಯೊಟಾ ಗ್ಲಾಂಝಾ ಹ್ಯಾಚ್‌ಬ್ಯಾಕ್ ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷೆತೆಗೆಗಾಗಿ, ಆರು ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ಇಬಿಡಿಯೊಂದಿಗೆ ಎಬಿಎಸ್ ಇತ್ಯಾದಿಗಳಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಟೊಯೊಟಾ ಗ್ಲಾಂಝಾ ಇ-ಸಿಎನ್‌ಜಿ ಬಿಡುಗಡೆಯ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಮಾರಾಟ ಮತ್ತು ಕಾರ್ಯತಂತ್ರದ ಮಾರ್ಕೆಟಿಂಗ್ ಅಸೋಸಿಯೇಟ್ ಉಪಾಧ್ಯಕ್ಷ ಶ್ರೀ ಅತುಲ್ ಸೂದ್ ಮಾತನಾಡಿ, ಗ್ರಾಹಕ ಕೇಂದ್ರಿತ ಕಂಪನಿಯಾಗಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಗ್ರಾಹಕರ ಆಸಕ್ತಿಯನ್ನು ಇರಿಸುವಲ್ಲಿ ನಂಬಿಕೆ ಹೊಂದಿದೆ.

ಹೆಚ್ಚು ಮೈಲೇಜ್ ನೀಡುವ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನ ವಿಶೇಷತೆಗಳು

ಟೊಯೊಟಾದಲ್ಲಿ ನಮ್ಮ ಗುರಿ ಯಾವಾಗಲೂ ಗ್ರಾಹಕರ ಆಕಾಂಕ್ಷೆಗಳ ಮೇಲೆ ಸ್ಪಷ್ಟವಾದ ಗಮನವನ್ನು ಕೇಂದ್ರೀಕರಿಸುವ ಮೂಲಕ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವುದು ಮತ್ತು ನಮ್ಮ ಗ್ರಾಹಕರಿಗೆ ಅತ್ಯಂತ ಕಾರ್ಯಸಾಧ್ಯವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ,. ಸಿಎನ್‌ಜಿ ವಿಭಾಗದಲ್ಲಿ, ಎರಡು ಬಹು ಬೇಡಿಕೆಯ ಕೊಡುಗೆಗಳಾದ ಟೊಯೊಟಾ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಹೈರಿಡರ್‌ಗಾಗಿ ಸಿಎನ್‌ಜಿ ರೂಪಾಂತರಗಳಲ್ಲಿ ಚಾಲನೆ ಮಾಡಲಾಗುತ್ತಿದೆ ಎಂದು ಹೇಳಿದರು.

Most Read Articles

Kannada
Read more on ಟೊಯೊಟಾ toyota
English summary
Here some top highlights of toyota glanza cng details
Story first published: Friday, November 11, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X