ಇತಿಹಾಸದ ಪುಟ ಸೇರಲಿವೆ ಜನಪ್ರಿಯ ಹೋಂಡಾ ಸಿಟಿ WR-V, ಅಮೇಜ್ ಡೀಸೆಲ್ ಕಾರುಗಳು...ಕಾರಣ

ಜನಪ್ರಿಯ ಕಾರು ತಯಾರಕ ಕಂಪನಿ 'ಹೋಂಡಾ' ಭಾರತದಲ್ಲಿ ಏಪ್ರಿಲ್ 2023ರಿಂದ ಡೀಸೆಲ್ ಎಂಜಿನ್ ಕಾರು ಮಾರಾಟವನ್ನು ಸ್ಥಗಿತಗೊಳಿಸಲಿದೆ. ಹೋಂಡಾ ಸಿಟಿ ಡಬ್ಲ್ಯುಆರ್-ವಿ, ಅಮೇಜ್‌ ಕಾರುಗಳು ಇತಿಹಾಸದ ಪುಟ ಸೇರಲು ಸಿದ್ಧವಾಗಿವೆ.

ಐದು ತಿಂಗಳು ಮಾತ್ರ ಮಾರುಕಟ್ಟೆಯಲ್ಲಿ ಈ ಕಾರುಗಳು ಲಭ್ಯವಿರಲಿವೆ. ಫೆಬ್ರವರಿ 2023ರಿಂದ 'ರಿಯಲ್ ಟೈಮ್ ಡ್ರೈವಿಂಗ್ ಎಮಿಷನ್ಸ್' ಮಾನದಂಡಗಳು ಜಾರಿಯಾಗಲಿವೆ. ಇದನ್ನು ಪೂರೈಸಲು ಡೀಸೆಲ್ ಎಂಜಿನ್‌ ತಯಾರಿಕೆಗೆ ಹೆಚ್ಚಿನ ವೆಚ್ಚವಾಗುವುದರಿಂದ ಹೋಂಡಾ ಈ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ಡೀಸೆಲ್ ಎಂಜಿನ್‌ ಕಾರುಗಳಿಗೆ ಹೋಲಿಸಿದರೆ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರುಗಳು ಭಾರೀ ಬೇಡಿಕೆಯೊಂದಿಗೆ ಮಾರಾಟವಾಗುತ್ತಿವೆ. ಜೊತೆಗೆ ರಿಯಲ್ ಡ್ರೈವಿಂಗ್ ಎಮಿಷನ್ಸ್ (RDE) ಪರೀಕ್ಷೆಯಲ್ಲಿ ಸಾಕಷ್ಟು ದೂರುಗಳು ಬರುತ್ತಿರುವುದರಿಂದ 'ಹೋಂಡಾ' ಡೀಸೆಲ್‌ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ತನ್ನ ಫ್ಯಾಕ್ಟರಿಯಲ್ಲಿ ಡೀಸೆಲ್ ಎಂಜಿನ್‌ ಉತ್ಪಾದನೆಯನ್ನು ನಿಲ್ಲಿಸಲ್ಲಿದೆ. ಆದರೆ, ಕಂಪನಿಯು ಚಾಪಿಂಗ್ ಬ್ಲಾಕ್‌ನಲ್ಲಿರುವ 1.5 ಲೀಟರ್ i-DTEC ಟರ್ಬೊ ಡೀಸೆಲ್ ಎಂಜಿನ್ ತಯಾರಿಕೆಯನ್ನು ಮಾತ್ರ ಮುಂದುವರಿಸಿದೆ.

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ, 1.6 ಲೀಟರ್ i-DTEC ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಅದನ್ನು ಹೋಂಡಾ CR-Vನಲ್ಲಿ ಬಳಕೆ ಮಾಡಲು ಥಾಯ್ ಮಾರುಕಟ್ಟೆಗೆ ರಫ್ತು ಮಾಡುತ್ತಿದೆ. ಇದರೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಡೀಸೆಲ್‌ ಮಾರಾಟ ಅಂತ್ಯವಾಗಲಿದೆ. ಭವಿಷ್ಯದಲ್ಲಿ ಪೆಟ್ರೋಲ್ ಎಂಜಿನ್‌ ಕಾರುಗಳು ಇರುವುದಿಲ್ಲ. ಅವು ಟರ್ಬೊ ಪೆಟ್ರೋಲ್‌ ಹಾಗೂ ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ಗಳಾಗಿ ಬದಲಾಗುತ್ತಿವೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ, 2023ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಹೋಂಡಾ SUV ಬಲಿಷ್ಠವಾದ ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್ ಒಳಗೊಂಡಿರುವ ಸಾಧ್ಯತೆಯಿದೆ.

ಈಗಾಗಲೇ, ಹೋಂಡಾ 5ನೇ ತಲೆಮಾರಿನ ಸಿಟಿ ಸೆಡಾನ್ ರೂಪದಲ್ಲಿ ಹೈಬ್ರಿಡ್ ಚಾಲಿತ ಕಾರುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಶೀಘ್ರದಲ್ಲೇ, ಭಾರತದಲ್ಲಿ ಹೆಚ್ಚು ಸ್ಟ್ರಾಂಗ್ ಹೈಬ್ರಿಡ್ ಚಾಲಿತ ಹೋಂಡಾ ಕಾರುಗಳನ್ನು ಕಾಣುವ ನಿರೀಕ್ಷೆಯಿದೆ. 'ಹೋಂಡಾ ಇಂಡಿಯಾ' ವಕ್ತಾರರ ಪ್ರಕಾರ, 'ನಮ್ಮ ಕಂಪನಿಯ ಕಾರಗಳಲ್ಲಿ ಪೆಟ್ರೋಲ್ ಮಾದರಿಗಳು ಶೇ90 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. ಡೀಸೆಲ್ ಬೇಡಿಕೆಯು ಕಡಿಮೆಯಾಗುತ್ತಿದೆ. ಸದ್ಯಕ್ಕೆ, ನಾವು ಸ್ವಲ್ಪ ಸಮಯದವರೆಗೆ ಡೀಸೆಲ್ ರೂಪಾಂತರಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿರುವ 'ಮಾರುತಿ ಸುಜುಕಿ' ಈಗಾಗಲೇ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಈಗ CNG, ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಹಾಗೂ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಕಾರುಗಳ ಉತ್ಪಾದನೆ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಗ್ರಾಂಡ್ ವಿಟಾರ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುರುವುದನ್ನು ಕಂಪನಿ ಬಹಿರಂಗಪಡಿಸಿತ್ತು.

ಇದು ಹೀಗಿದ್ದರೆ ಒಂದೆರಡು ವರ್ಷಗಳ ನಂತರ ಮಾರುತಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ರೆನಾಲ್ಟ್, ನಿಸ್ಸಾನ್, ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಕೂಡ ಡೀಸೆಲ್‌ ಎಂಜಿನ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ, ಈಗ ಪೆಟ್ರೋಲ್ ಚಾಲಿತ ಕಾರುಗಳು ಮಾತ್ರ ಮಾರಾಟ ಮಾಡುತ್ತಿವೆ. ವಿದೇಶಿ ಕಾರು ತಯಾರಿಕಾ ಕಂಪನಿಗಳಾದ ಹ್ಯುಂಡೈ, ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್‌ ಕಾರುಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿವೆ.

ಆದರೆ, ಆರ್‌ಡಿಇ ಮಾನದಂಡಗಳು ಜಾರಿಗೆ ಬಂದ ನಂತರ ಹ್ಯುಂಡೈ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ. ಟೊಯೊಟಾ ಕೂಡ ಡೀಸೆಲ್‌ ಎಂಜಿನ್ ಕಾರುಗಳ ತಯಾರಿಕೆಯಿಂದ ಹಿಂದೆ ಸರಿಯುತ್ತಿದೆ. ಉದಾಹರಣೆಗೆ, ಮುಂಬರಲಿರುವ Innova HyCross MPV ಪೆಟ್ರೋಲ್ ಹಾಗೂ ಪೆಟ್ರೋಲ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾದಂತಹ ಸ್ವದೇಶಿ ಕಾರ್ ಬ್ರಾಂಡ್‌ಗಳು ಮಾತ್ರ ಡೀಸೆಲ್ ಎಂಜಿನ್‌ ಕಾರು ತಯಾರಿಕೆಯನ್ನು ಮುಂದುವರೆಸಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೂ ಗಮನ ಹರಿಸಿವೆ.

Most Read Articles

Kannada
English summary
Honda city wr v amaze diesel cars will history page
Story first published: Wednesday, November 23, 2022, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X