Just In
- 1 hr ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 1 hr ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 2 hrs ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 3 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- Finance
ಪೇಟಿಎಂ ಷೇರು ಶೇಕಡ 6ರಷ್ಟು ಕುಸಿತ, ಕಾರಣವೇನು?
- News
ಬಿಜೆಪಿ ನಾಯಕರಿಗೆ 'ಈಗಲೇ ಬಿಟ್ಟು ಹೊರಡಿ' ಎಂಬ ಸಂದೇಶ ನೀಡುತ್ತಿದ್ದಾರೆ ನಿತೀಶ್ ಕುಮಾರ್
- Sports
ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ತಂಡಗಳು; ಪಂದ್ಯದ ದಿನಾಂಕ, ಸ್ಥಳ
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆ: ಈ ವಾಹನಗಳಿಗಾಗಿ ಕಾಯಬೇಕಿದೆ ಕನಿಷ್ಠ 6 ತಿಂಗಳು!
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಂತೆ ಈಗ ಎಲೆಕ್ಟ್ರಿಕ್ ಕಾರುಗಳಿಗಾಗಿ ಕಾಯುವ ಅವಧಿ ಹೆಚ್ಚುತ್ತಿದೆ. 30 ಲಕ್ಷದೊಳಗಿನ ಎಲೆಕ್ಟ್ರಿಕ್ ಕಾರುಗಳಿಗೆ ದೇಶದಲ್ಲಿ ಹೆಚ್ಚಿನ ಬೇಡಿಕೆಯಿರುವ ಕಾರಣ, ಈ ಕಾರುಗಳ ವಿತರಣೆಗೆ ತಡವಾಗುತ್ತಿದ್ದು ಗ್ರಾಹಕರು ಈಗ ದೀರ್ಘ ಸಮಯ ಕಾಯಬೇಕಾಗಿದೆ.

ನೀವು ಭಾರತದಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ರೂ. 30 ಲಕ್ಷದೊಳಗೆ ಖರೀದಿಸಲು ಬಯಸಿದರೆ, ನಿಮಗೆ ಹಲವು ಆಯ್ಕೆಗಳಿವೆ. ಟಾಟಾ ನೆಕ್ಸಾನ್ ಇವಿ, ಟಾಟಾ ಟಿಗೊರ್ ಇವಿ, ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ಝಡ್ಎಸ್ ಇವಿಯಂತಹ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ.

ಭಾರತದ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಆದರೆ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಇದಕ್ಕಾಗಿ ಚಾರ್ಜಿಂಗ್ ಕೇಂದ್ರಗಳ ತ್ವರಿತ ಅಭಿವೃದ್ಧಿ ಅಗತ್ಯವಾಗಿದೆ.

ಪ್ರಸ್ತುತ, ಟಾಟಾ ಮತ್ತು ಎಂಜಿ ಕಂಪನಿಗಳು ತಮ್ಮ ಗ್ರಾಹಕರ ಮನೆಗಳಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತಿವೆ. ಇದಲ್ಲದೆ ವಸತಿ ಸಂಘಗಳು, ಉದ್ಯಾನವನಗಳು ಮತ್ತು ಆಸ್ಪತ್ರೆಗಳ ಸುತ್ತಲೂ ಚಾರ್ಜಿಂಗ್ ಕೇಂದ್ರಗಳನ್ನು ಒದಗಿಸಲಾಗುತ್ತಿದೆ. ಯಾವ ಎಲೆಕ್ಟ್ರಿಕ್ ಕಾರಿಗೆ ಕಾಯುವ ಅವಧಿ ಎಷ್ಟಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಟಾಟಾ ನೆಕ್ಸಾನ್ ಇವಿ ಪ್ರೈಮ್
ನೀವು ಎಲೆಕ್ಟ್ರಿಕ್ ಕಾರು ಖರೀದಿಸಲು ಯೋಚಿಸುತ್ತಿದ್ದರೆ, ಟಾಟಾ ನೆಕ್ಸಾನ್ ಇವಿ ಪ್ರೈಮ್ ಮಾಡಲ್‌ಗಾಗಿ ಕಾಯುವ ಅವಧಿಯ ಬಗ್ಗೆ ನಿಮಗೆ ತಿಳಿದಿರಬೇಕು. ಟಾಟಾ ನೆಕ್ಸಾನ್ ಇವಿ ಪ್ರೈಮ್ ಕಾರಿನ ಸರಾಸರಿ ಕಾಯುವ ಅವಧಿಯು ಐದರಿಂದ ಆರು ತಿಂಗಳುಗಳಿದೆ. ಆದರೆ ಚಂಡೀಗಢ ಮತ್ತು ಪಾಟ್ನಾದ ಗ್ರಾಹಕರು ಈ ಕಾರನ್ನು ಶೀಘ್ರವಾಗಿ ಪಡೆಯಬಹುದು.

ಉನ್ನತ ಶ್ರೇಣಿಯ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಖರೀದಿಸಲು ಬಯಸಿದರೆ, ನೀವು ಐದು ತಿಂಗಳೊಳಗೆ ಈ ಮಾದರಿಯನ್ನು ಪಡೆಯಬಹುದು. ಟಾಟಾ ನೆಕ್ಸಾನ್ EV ಪ್ರೈಮ್ 30.2 kWh ಬ್ಯಾಟರಿಯೊಂದಿಗೆ ಬರುತ್ತದೆ. ಆದರೆ Nexon EV ಮ್ಯಾಕ್ಸ್ ದೊಡ್ಡ 40.5kWh ಬ್ಯಾಟರಿಯೊಂದಿಗೆ ಬರುತ್ತದೆ.

ನೆಕ್ಸಾನ್ ಇವಿ ಪ್ರೈಮ್ 318 ಕಿಲೋಮೀಟರ್ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ 437 ಕಿ.ಮೀಗಳ ಮೈಲೇಜ್ ಅನ್ನು ಕೇವಲ ಒಂದೇ ಚಾರ್ಜ್‌ನಲ್ಲಿ ನೀಡುತ್ತದೆ. ಬೆಲೆಯ ಕುರಿತು ಮಾತನಾಡುವುದಾದರೆ, ನೆಕ್ಸಾನ್ ಇವಿ ಪ್ರೈಮ್ ಎಕ್ಸ್ ಶೋ ರೂಂ ಬೆಲೆ ರೂ. 14.99 ಲಕ್ಷ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ರೂ. 18.34 ಲಕ್ಷದಲ್ಲಿ ಲಭ್ಯವಿದೆ.

ಹುಂಡೈ ಕೋನಾ ಎಲೆಕ್ಟ್ರಿಕ್
ಹುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗಾಗಿ ಸುಮಾರು ಎರಡು ತಿಂಗಳು ಕಾಯಬೇಕು. ಇದು ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಡೆಲಿವರಿ ಸಮಯಕ್ಕೆ ಹೋಲಿಸಿದರೆ ಅತಿ ಕಡಿಮೆ ಎಂದೇ ಹೇಳಬಹುದು. ಕಂಪನಿಯು ಕೋನಾವನ್ನು 39.2kWh ಬ್ಯಾಟರಿಯೊಂದಿಗೆ ನೀಡುತ್ತದೆ. 452 ಕಿ.ಮೀ ಮೈಲೇಜ್ ನೀಡುತ್ತದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಭಾರತದಲ್ಲಿ 23.84 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.

ಟಾಟಾ ಟಿಗೋರ್ ಇವಿ
ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಗೋರ್ ಇವಿ ಆಗಿದ್ದು, ಇದರ ವಿತರಣೆಯನ್ನು ತೆಗೆದುಕೊಳ್ಳಲು ನೀವು ನಾಲ್ಕರಿಂದ ಐದು ತಿಂಗಳು ಕಾಯಬೇಕಾಗುತ್ತದೆ. ಆದರೆ, ಎರಡರಿಂದ ಮೂರು ತಿಂಗಳೊಳಗೆ ಚಂಡೀಗಢದಲ್ಲಿ ಈ ಕಾರು ಸಿಗಲಿದೆ. ಟಾಟಾ ಟಿಗೊರ್ EV 26 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಒಂದೇ ಚಾರ್ಜ್‌ನಲ್ಲಿ 306 ಕಿ.ಮೀ ಮೈಲೇಜ್ ನೀಡುತ್ತದೆ.

MG ZS EV
MG ZS EV ದೇಶಾದ್ಯಂತ ಸರಾಸರಿ ನಾಲ್ಕು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ. ಇದು 50.3kWh ನ ಈ ಪಟ್ಟಿಯಲ್ಲಿ ಅತಿದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಒಂದೇ ಚಾರ್ಜ್‌ನಲ್ಲಿ 461 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. MG ZS EV 21,99,800 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ತಯಾರಕರು ವಿತರಣೆ ಮಾಡಲು ದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಮೇಲೆ ತಿಳಿಸಿರುವ ಕಾರುಗಳು ಇತರ ವಾಹನಗಳಿಗೆ ಹೋಲಿಸಿಕೊಂಡಿರೆ ತುಸು ಬೇಗನೇ ಡೆಲಿವರಿಯಾಗಲಿದ್ದು, ಇವು ಪ್ರಸ್ತುತ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಾಗಿವೆ.