2022ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೈಬ್ರಿಡ್ ಕಾರುಗಳಿವು..
ಪ್ರಸ್ತುತ ದಿನಗಳಲ್ಲಿ ಹೈಬ್ರಿಡ್ ಕಾರುಗಳ ಜನಪ್ರಿಯತೆ ತುಂಬಾ ಹೆಚ್ಚಾಗುತ್ತಿದ್ದು, ವಾಹನ ತಯಾರಕ ಕಂಪನಿಗಳು ಆಧುನಿಕ ಹೈಬ್ರಿಡ್ ಕಾರುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ವರ್ಷ (2022) ಲಾಂಚ್ ಆದ ಹೈಬ್ರಿಡ್ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.
ಹೋಂಡಾ ಸಿಟಿ ಇ-ಹೆಚ್‌ಇವಿ:
ಹೋಂಡಾ ಕಂಪನಿಯು ತನ್ನ 'ಸಿಟಿ ಇ - ಹೆಚ್‌ಇವಿ' ಹೈಬ್ರಿಡ್ ಕಾರನ್ನು ಈ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಹೈಬ್ರಿಡ್ ಆವೃತ್ತಿಯು ಲಾಂಚ್ ಆಗುವ ಸಮಯದಲ್ಲಿ ರೂ.19.50 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಬೆಲೆಯನ್ನು ಹೊಂದಿತ್ತು. ಈ ಕಾರು ಐದನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಅನ್ನು ಆಧರಿಸಿದೆ. ಆದರೆ, ಅತ್ಯುತ್ತಮ ವಿನ್ಯಾಸ, ನವೀಕರಿಸಿದ ವೈಶಿಷ್ಟ್ಯಗಳನ್ನು ಹೊಂದಿದ್ದು, ವಾಹನ ಖರೀದಿದಾರರಿಗೆ ತುಂಬಾ ಇಷ್ಟವಾಗುತ್ತದೆ.

'ಹೋಂಡಾ ಸಿಟಿ ಇ - ಹೆಚ್‌ಇವಿ' 1.5 ಲೀಟರ್ ಅಟ್ಕಿನ್ಸನ್ i-VTEC ಪೆಟ್ರೋಲ್ ಎಂಜಿನ್ ಜೊತೆಗೆ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದ್ದು, ಇದು 125 bhp ಗರಿಷ್ಠ ಪವರ್ ಮತ್ತು 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದೇ ಫಿಕ್ಸ್ಡ್ ರೇಶಿಯೋ eCVT ಆಟೋಮೆಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹಾಗಾಗಿ, ಇದು 26.5 kmpl ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 40 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್:
ಟೊಯೊಟಾ ಕಂಪನಿಯು ತನ್ನ ಇನ್ನೋವಾ ಹೈಕ್ರಾಸ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದರ ಆರಂಭಿಕ ಬೆಲೆ ರೂ.18.30 ಲಕ್ಷ ಇದ್ದು, ಟಾಪ್ ವೆರಿಯಂಟ್ ಬೆಲೆ ಬರೋಬ್ಬರಿ ರೂ.28.97 ಲಕ್ಷ (ಎಕ್ಸ್ ಶೋರೂಂ, ಭಾರತ) ಆಗಿದೆ. ಇದು ಹೆಕ್ಸಾಗೊನಲ್ ಗ್ರಿಲ್ ಅನ್ನು ಹೊಂದಿದ್ದು, ಮಧ್ಯದಲ್ಲಿ ಬ್ರ್ಯಾಂಡ್ ಲೋಗೋವನ್ನು ಪಡೆದುಕೊಂಡಿದೆ. ವಿನ್ಯಾಸವು ತುಂಬಾ ಆಕರ್ಷಕವಾಗಿದ್ದು, ಆಂತರಿಕ ವೈಶಿಷ್ಟ್ಯಗಳನ್ನು ಸಹ ಗ್ರಾಹಕ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಜಿನ್ ಬಗ್ಗೆ ಹೇಳುವುದಾದರೆ, ಇದು ಪೆಟ್ರೋಲ್ ಅಥವಾ ಪೆಟ್ರೋಲ್ ಹೈಬ್ರಿಡ್ ಆಯ್ಕೆಯನ್ನು ಹೊಂದಿದೆ. ಆದರೆ, ಡೀಸೆಲ್ ಎಂಜಿನ್ ಹೊಂದಿವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಬಹುದು. ಇದು ಪ್ರಮಾಣಿತ 2.0 ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 172 bhp ಪವರ್ ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಖಂಡಿತವಾಗಿಯೂ ಇದು ಕಾರನ್ನು ಡ್ರೈವ್ ಮಾಡುವವರಿಗೆ ಉತ್ತಮ ಚಾಲನಾ ಅನುಭವ ನೀಡಲಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಹೊಸ ಗ್ರಾಂಡ್ ವಿಟಾರಾವನ್ನು ಬಿಡುಗಡೆ ಮಾಡಿತು. ಗ್ರ್ಯಾಂಡ್ ವಿಟಾರಾ ರೂ.10.45 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಟಾಪ್ ವೆರಿಯಂಟ್ ಬೆಲೆ ರೂ.19.65 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೊಸ ಗ್ರಾಂಡ್ ವಿಟಾರಾ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್, ಕನೆಕ್ಟ್ ಕಾರ್ ಟೆಕ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಗ್ರ್ಯಾಂಡ್ ವಿಟಾರಾ ಎಂಜಿನ್ ಬಗ್ಗೆ ಮಾತನಾಡುವುದರೆ, 1.5-ಲೀಟರ್, 4-ಸಿಲಿಂಡರ್ K15C ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 103 hp ಗರಿಷ್ಠ ಪವರ್ ಮತ್ತು 136 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಜೋಡಿಸಲಾಗಿದೆ. ಅದರ ಹೊರತಾಗಿ ಇದು ಸುಜುಕಿಯ AllGrip AWD ಆಯ್ಕೆಯನ್ನು ಸಹ ಪಡೆದುಕೊಂಡಿದ್ದು, ಪ್ರತಿ ಲೀಟರ್‌ಗೆ 28 ಕಿಮೀ/ಲೀ ಮೈಲೇಜ್ ನೀಡುತ್ತದೆ.
ಟೊಯೊಟಾ ಹೈರೈಡರ್:
ಟೊಯೊಟಾ ಹೈರೈಡರ್ ಹೈಬ್ರಿಡ್ ಕಾರುಗಳಲ್ಲಿ ಒಂದಾಗಿದೆ, ಇದು 2022ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಹೈರೈಡರ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದ ಮೊದಲ ಮಧ್ಯಮ ಗಾತ್ರದ ಎಸ್‌ಯುವಿ ಆಗಿದ್ದು. 1.5-ಲೀಟರ್ TNGA ಅಟ್ಕಿನ್ಸನ್ ಸೈಕಲ್ ಎಂಜಿನ್ ಅನ್ನು ಹೊಂದಿದ್ದು. ಇದು 92 HP ಗರಿಷ್ಠ ಪವರ್ ಮತ್ತು 122 Nm ಟಾರ್ಕ್ ಉತ್ಪಾದಿಸುತ್ತದೆ. ಇದಲ್ಲದೆ, ಇದನ್ನು 79 HP ಪವರ್ ಮತ್ತು 141 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೂ ಜೋಡಿಸಲಾಗಿದೆ.
ಹೈರೈಡರ್ ಎಸ್‌ಯುವಿ, ಮಾರುತಿ ಸುಜುಕಿಯ ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸಹ ಪಡೆದುಕೊಂಡಿದೆ. ಹಾಗಾಗಿ, ಇದು 1.5-ಲೀಟರ್ K15C ಎಂಜಿನ್ ಅನ್ನು ಸಹ ಹೊಂದಿರುತ್ತದೆ. ಇದು 103 HP ಗರಿಷ್ಠ ಪವರ್ ಮತ್ತು 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು. ಇದನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ವಿನ್ಯಾಸ ಮತ್ತು ವೈಶಿಷ್ಟ್ಯಗಳ ದೃಷ್ಟಿಯಿಂದಲೂ ಇದು ತುಂಬಾ ಒಳ್ಳೆಯ ಎಸ್‌ಯುವಿ ಆಗಿದೆ ಎಂದು ಹೇಳಬಹುದು.


Click it and Unblock the Notifications








