Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 3 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 5 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 6 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಶಿವಮೊಗ್ಗ: ಮಳೆಯಲ್ಲಿ ಸಿಲುಕಿದ್ದ 150 ಮಂದಿಗೆ ಆಪತ್ಭಾಂಧವರಾದ ಅಗ್ನಿಶಾಮಕ ದಳ
- Sports
MI ಆಡುವ 11ರ ಬಳಗದಲ್ಲಿ ಮಗನಿಗೆ ಅವಕಾಶ ಸಿಗದ ಕುರಿತು ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ಅವಧಿಗಾಗಿ ಪ್ರಮುಖ ಕಾರುಗಳ ಖರೀದಿ ಮೇಲೆ ಹೊಸ ಆಫರ್ ಘೋಷಣೆ ಮಾಡಿದ ಹ್ಯುಂಡೈ
ಸೆಮಿಕಂಡಕ್ಟರ್ ಕೊರತೆ ನಡುವೆಯೂ ಹ್ಯುಂಡೈ ಇಂಡಿಯಾ(Hyundai India) ಕಂಪನಿಯು ತನ್ನ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಕೋವಿಡ್ ಪರಿಣಾಮ ಏರಿಳಿತವಾಗಿದ್ದ ಹೊಸ ಕಾರುಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

ಕೋವಿಡ್ ಪರಿಣಾಮ ಕುಸಿತ ಕಂಡಿದ್ದ ಹೊಸ ವಾಹನ ಮಾರಾಟ ಇದೀಗ ಸಾಕಷ್ಟು ಸುಧಾರಿಸಿದ್ದು, ಪ್ರಮುಖ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಹ್ಯುಂಡೈ ಕಂಪನಿಯು ಸಹ ವಿವಿಧ ಮಾದರಿಗಳೊಂದಿಗೆ ಕಾರು ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಕಾರು ಮಾರಾಟದಲ್ಲಿ ಸ್ಥಿರತೆಗಾಗಿ ಕಂಪನಿಯು ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಆಫರ್ ಘೋಷಣೆ ಮಾಡಿದೆ.

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ 2022ರ ಮಾರ್ಚ್ ಅವಧಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿದೆ.

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕಾರು ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕಂಪನಿಯು ಕೂಡಾ ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್, ಐ20 ಮತ್ತು ಔರಾ ಕಾರುಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡುತ್ತಿದೆ.

ಎಂಟ್ರಿ ಲೆವಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಗ್ರಾಂಡ್ ಐ10 ನಿಯೋಸ್ ಆವೃತ್ತಿಯ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 50 ಸಾವಿರ ತನಕ ಉಳಿತಾಯ ಅವಕಾಶ ನೀಡಿದ್ದು, ಎಕ್ಸ್‌ಚೆಂಜ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಒಳಗೊಂಡಿರಲಿದೆ.

ಔರಾ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯ ಮೇಲೂ ಹ್ಯುಂಡೈ ಕಂಪನಿಯು ರೂ.50 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ಔರಾ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ವೆರಿಯೆಂಟ್‌ಗಳ ಮೇಲೂ ಗರಿಷ್ಠ ನಗದು ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ಜೊತೆಗೆ ಕಂಪನಿಯು ಔರಾ ಕಾರಿನ ಸಿಎನ್‌ಜಿ ಮಾದರಿಯ ಮೇಲೂ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದ್ದು, ನಿಗದಿತ ಅವಧಿಯ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ಜೊತೆ ಹೆಚ್ಚುವರಿ ವಾರಂಟಿ ಆಫರ್ ನೀಡಲಿದೆ.

ಹ್ಯುಂಡೈ ಕಂಪನಿಯು ತನ್ನ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.40 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಸ್ಯಾಂಟ್ರೊ ಕಾರಿನ ಪೆಟ್ರೋಲ್ ಮಾದರಿಯ ಜೊತೆಗೆ ಸಿಎನ್‌ಜಿ ಮಾದರಿಯು ಸಹ ಹೊಸ ಆಫರ್ ಒಳಗೊಂಡಿದೆ.

ಹೊಸ ಆಫರ್‌ಗಳಲ್ಲಿ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಹ್ಯುಂಡೈ ಕಂಪನಿಯು ರೂ. 40 ಸಾವಿರದಷ್ಟು ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಹೊಸ ಆಫರ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳ ಮೇಲೂ ಅನ್ವಯವಾಗಲಿದೆ.

ಹೊಸ ಆಫರ್‌ಗಳಲ್ಲಿ ಸ್ಯಾಂಟ್ರೋ, ಔರಾ, ಗ್ರಾಂಡ್ ಐ10 ನಿಯೋಸ್ ಮತ್ತು ಐ20 ಹೊರತುಪಡಿಸಿ ವೆನ್ಯೂ, ಕ್ರೆಟಾ, ವೆರ್ನಾ, ಅಲ್ಕಾಜರ್ ಮತ್ತು ಕೊನಾ ಇವಿ ಕಾರುಗಳ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ಇನ್ನು ಹ್ಯುಂಡೈ ಕಂಪನಿಯು ಕೋವಿಡ್ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಹೊಸ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿರುವ ಏರಿಳಿತವಾಗುತ್ತಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

ಹೊಸ ಕಾರುಗಳ ಖರೀದಿಗೆ ಡಿಸ್ಕೌಂಟ್ ಜೊತೆ ಹ್ಯುಂಡೈ ಕಾರು ಮಾಲೀಕರಿಗೆ ಕಂಪನಿಯ ನಿಗದಿತ ಅವಧಿಯಲ್ಲಿ ಬಿಡಿಭಾಗಗಳ ಸೇವೆಗಳನ್ನು ರಿಯಾಯ್ತಿ ದರದಲ್ಲಿ ಒದಗಿಸುತ್ತಿದ್ದು, ಗ್ರಾಹಕರು ಬಿಡಿಭಾಗಗಳ ಮೇಲೆ ಶೇ.10 ರಷ್ಟು, ಬಿಡಿಭಾಗಗಳ ಸೇವಾ ದರಗಳ ಮೇಲೆ ಶೇ.20 ರಷ್ಟು ರಿಯಾಯ್ತಿ ನೀಡುತ್ತಿದೆ.

ಹೊಸ ಗ್ರಾಹಕರಿಗೆ ಮಾತ್ರವಲ್ಲ ಅಸ್ತಿತ್ವದಲ್ಲಿರುವ ಗ್ರಾಹಕರಿಗೂ ಉಳಿತಾಯಕ್ಕೆ ಅವಕಾಶ ನೀಡಿರುವ ಹ್ಯುಂಡೈ ಕಂಪನಿಯು ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ್ದು, ರಿಯಾಯ್ತಿ ದರದಲ್ಲಿ ಬಿಡಿಭಾಗಗಳ ಸೇವಾಗಳನ್ನು ಒದಗಿಸುತ್ತಿದೆ.