ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಪ್ರೆಸ್ಟೀಜ್ ಎಕ್ಸಿಕ್ಯೂಟಿವ್ ಎಂದು ಕರೆಯಲ್ಪಡುವ ಅಲ್ಕಾಜರ್‌ನ ಹೊಸ ಬೇಸ್ ವೆರಿಯೆಂಟ್ ಅನ್ನು ಪರಿಚಯಿಸಿದೆ. ಈ ಹೊಸ ಹ್ಯುಂಡೈ ಅಲ್ಕಾಜರ್ ಪ್ರೆಸ್ಟೀಜ್ ಎಕ್ಸಿಕ್ಯೂಟಿವ್ ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.89 ಲಕ್ಷವಾಗಿದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ಹಿಂದಿನ ಮೂಲ ರೂಪಾಂತರಕ್ಕೆ ಹೋಲಿಸಿದರೆ, ಇದು ರೂ.55,000 ಅಗ್ಗವಾಗಿದೆ. ಹ್ಯುಂಡೈ ಅಲ್ಕಾಜರ್ ಹೆಚ್ಚು ಜನಪ್ರಿಯವಾದ ಕ್ರೆಟಾ ಮಿಡ್ ಸೈಜ್ ಎಸ್‍ಯುವಿಯನ್ನು ಆಧರಿಸಿದ ಆವೃತ್ತಿಯಾಗಿದೆಮತ್ತು ಇದು ಎರಡು ಪ್ರಯಾಣಿಕರಿಗೆ ಹೆಚ್ಚುವರಿ ಆಸನಗಳನ್ನು ನೀಡುವಾಗ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ. ಅಲ್ಕಾಜರ್ ಅನ್ನು ಆರು ಅಥವಾ ಏಳು-ಆಸನಗಳನ್ನು ಹೊಂದಬಹುದು ಮತ್ತು ಪ್ರೆಸ್ಟೀಜ್, ಪ್ರೆಸ್ಟೀಜ್ (O), ಪ್ಲಾಟಿನಂ, ಪ್ಲಾಟಿನಂ (O), ಸಿಗ್ನೇಚರ್ ಮತ್ತು ಸಿಗ್ನೇಚರ್ (O) ಟ್ರಿಮ್ ಹಂತಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಬೇಸ್ ಪ್ರೆಸ್ಟೀಜ್ ಎಕ್ಸಿಕ್ಯುಟಿವ್ ಟ್ರಿಮ್‌ನಲ್ಲಿ ಆರು-ಆಸನಗಳ ಆವೃತ್ತಿಯನ್ನು ಡೀಸೆಲ್ ಮ್ಯಾನ್ಯುವಲ್ ನಿರ್ದಿಷ್ಟತೆಯಲ್ಲಿ ಮಾತ್ರ ನೀಡಲಾಗುತ್ತದೆ ಆದರೆ ಪೆಟ್ರೋಲ್ ಎಂಜಿನ್ ಈ ನಿರ್ದಿಷ್ಟ ಟ್ರಿಮ್‌ನಲ್ಲಿ ಎಟಿ ರೂಪಾಂತರವನ್ನು ಪಡೆಯುವುದಿಲ್ಲ. ಹಿಂದಿನ ಎಂಟ್ರಿ ಲೆವೆಲ್ ಮಾದರಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಇನ್-ಕಾರ್ ಸಂಪರ್ಕಿತ ತಂತ್ರಜ್ಞಾನವನ್ನು ಪಡೆಯುತ್ತದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಈ ಬೇಸ್ ಪ್ರೆಸ್ಟೀಜ್ ಎಕ್ಸಿಕ್ಯುಟಿವ್ ಟ್ರಿಮ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಪನರೋಮಿಕ್ ಸನ್‌ರೂಫ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇತ್ಯಾದಿಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಇದರೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಸ ಟ್ರಿಮ್‌ನಲ್ಲಿ ವಾಯ್ಸ್ ಕಾಮೆಂಡ್ ಗಳನ್ನು ಸಕ್ರಿಯಗೊಳಿಸುವುದರ ಜೊತೆಗೆ ವೈರ್‌ಲೆಸ್ Apple CarPlay ಮತ್ತು Android Auto ಹೊಂದಾಣಿಕೆಯೊಂದಿಗೆ ಎಂಟು ಇಂಚಿನ ಸಣ್ಣ ಯುನಿಟ್ ಅನ್ನು ಆಯ್ಕೆಮಾಡಲಾಗಿದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಹೊಸ ಆಟೋಮ್ಯಾಟಿಕ್ IRVM ಸಹ ಇರುವಾಗ ಇದು ಟೆಲಿಮ್ಯಾಟಿಕ್ಸ್ ಕಾರ್ಯವನ್ನು ನೀಡುವುದಿಲ್ಲ. ಡಾರ್ಕ್ ಕ್ರೋಮ್ ಫಿನಿಶ್ ಮಾಡಿದ ಡೋರ್ ಹ್ಯಾಂಡಲ್‌ಗಳು ಬರ್ಗಲರ್ ಅಲರ್ಟ್ ಅನ್ನು ಸಹ ಮಿಸ್ ಮಾಡಲಾಗಿದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಕಾರ್ಯಕ್ಷಮತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಕಾಜರ್ ಎಸ್‍ಯುವಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳನ್ನು ಹೊಂದಿವೆ. ಇದರಲ್ಲಿ 2.0 ಲೀಟರ್ ಎಂಜಿನ್ 159 ಬಿಹೆಚ್‍ಪಿ ಪವರ್ ಮತ್ತು 191 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಇನ್ನು ಇದರ 1.5-ಲೀಟರ್ ಡೀಸೆಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ ಪವರ್‌ಟ್ರೇನ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಹಾಗೂ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಹೊಂದಿದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಪ್ರಯಾಣಿಕರ ಸುರಕ್ಷತೆಗಾಗಿ ಈ ಅಲ್ಕಾಜರ್ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ಹೊಂದಿವೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಈ ಹ್ಯುಂಡೈ ಅಲ್ಕಾಜರ್ ಮಾದರಿಯನ್ನು 6 ಮತ್ತು 7 ಆಸನಗಳ ಸಂರಚನೆಗಳಲ್ಲಿ ಅನ್ನು ನೀಡುತ್ತದೆ. ಈ ಅಲ್ಕಾಜಾರ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಸೆಂಟರ್ ಕನ್ಸೋಲ್‌ನೊಂದಿಗೆ ಪಡೆಯುತ್ತದೆ, ಇದರಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕಪ್‌ಹೋಲ್ಡರ್‌ಗಳಿವೆ. ಎಲ್ಲಾ ಮೂರು ಸಾಲುಗಳ ಸೀಟುಗಳೊಂದಿಗೆ 180 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. ಅಲ್ಕಾಜರ್ ಮಾದರಿಯಲ್ಲಿ 579 ಲೀಟರ್ ನಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದನ್ನು 1051 ಲೀಟರ್'ಗೆ ಹೆಚ್ಚಿಸಬಹುದು. ಇನ್ನು ಈ ಎಸ್‍ಯುವಿಯ ಡೈವಿಂಗ್ ಸೀಟ್ ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಿಕೊಳ್ಳಬಹುದು. ಇದರ ಎರಡನೇ ಸಾಲಿನ ಸೀಟನ್ನು ಮಡಿಚುವ ಮೂಲಕ ಮೂರನೇ ಸಾಲಿನ ಸೀಟನ್ನು ಸುಲಭವಾಗಿ ಪ್ರವೇಶಿಸಬಹುದು.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಕಳೆದ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಒಟ್ಟು 49,001 ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ಟಾಟಾ ಮೋಟಾರ್ಸ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಇನ್ನು ಕಳೆದ ವರ್ಷದ ಜೂನ್ ತಿಂಗಳಿನಲ್ಲಿ 40,496 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,21 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹುಂಡೈನ ಮಾರಾಟ ಸಂಖ್ಯೆಯು ಕಳೆದ ತಿಂಗಳು ವರ್ಷದಿಂದ ವರ್ಷಕ್ಕೆ 21 ಶೇಕಡಾ (8,505 ಯುನಿಟ್‌ಗಳು) ಹೆಚ್ಚಾಗಿದೆ. ಹುಂಡೈನ ಮಾರಾಟವು 2022ರ ಮೇ ತಿಂಗಳಿಗೆ ಹೋಲಿಸಿದರೆ 42,293 ಯುನಿಟ್‌ಗಳೊಂದಿಗೆ ಶೇಕಡಾ.15.86 (6,708 ಯುನಿಟ್‌ಗಳು) ಹೆಚ್ಚಾಗಿದೆ.

ಅಲ್ಕಾಜರ್ ಎಸ್‌ಯುವಿಗಾಗಿ ಹೊಸ ಬೇಸ್ ವೆರಿಯೆಂಟ್ ಪರಿಚಯಿಸಿದ ಹ್ಯುಂಡೈ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯ ಹೊಸ ಬೇಸ್ ವೆರಿಯೆಂಟ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಹ್ಯುಂಡೈ ಅಲ್ಕಾಜರ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಟಾಟಾ ಸಫಾರಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XUV700 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ..

Most Read Articles

Kannada
English summary
Hyundai introduced new base variant for alcazar suv price details
Story first published: Wednesday, July 6, 2022, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X