2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಗಳಲ್ಲಿ ಮಿಂಚಿದ ಇವಿ ಕಾರುಗಳು!

ಜಾಗತಿಕ ಆಟೋ ಉದ್ಯಮದಲ್ಲಿನ ಬದಲಾವಣೆಗಾಗಿ ನೀಡಲಾಗುವ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ವಿವಿಧ ವಿಭಾಗಗಳಲ್ಲಿ ಪ್ರಮುಖ ಐಷಾರಾಮಿ ಕಾರುಗಳನ್ನು ಹಿಂದಿಕ್ಕಿರುವ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರು ಮಾದರಿಯು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ವಿಶ್ವಾದ್ಯಂತ ಜನಪ್ರಿಯ ಕಾರು ಮಾದರಿಗಳಿಗೆ ಪ್ರತಿ ವರ್ಷ ನೀಡಲಾಗುವ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ(ವರ್ಲ್ಡ್ ಕಾರ್ ಆಫ್ ಇಯರ್) 2022ರ ಆವೃತ್ತಿಯು ಹಲವು ಹೊಸ ಮಾದರಿಗಳ ನಡುವಿನ ಪೈಪೋಟಿ ನಡುವೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಾಂಪ್ರದಾಯಿಕ ಕಾರು ಮಾದರಿಗಳನ್ನು ಹಿಂದಿಕ್ಕಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ವಿಭಾಗದಲ್ಲಿನ ಮೊದಲ ಹಂತದ ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್ ವಿಭಾಗದಲ್ಲಿ ಆಡಿ ಇ-ಟ್ರಾನ್ ಜಿಟಿ ಮತ್ತು ಕಿಯಾ ಇವಿ6 ಮಾದರಿಯನ್ನು ಹಿಂದಿಕ್ಕಿರುವ ಹ್ಯುಂಡೈ ಐಯಾನಿಕ್ 5 ಮಾದರಿಯು ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿತು.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ಇಯರ್ ವಿಭಾಗದಲ್ಲಿನ ಪ್ರಶಸ್ತಿಗಾಗಿ ನಡೆದ ಪೈಪೋಟಿಯಲ್ಲಿ ಆಡಿ ಇ-ಟ್ರಾನ್ ಜಿಟಿ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಮಾದರಿಗಳಗೆ ಪೈಪೋಟಿ ನೀಡಿದ ಹ್ಯುಂಡೈ ಐಯಾನಿಕ್ 5 ಮಾದರಿಯು ಮೊದಲ ಸ್ಥಾನಪಡೆದುಕೊಂಡಿತು.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ವರ್ಲ್ಡ್ ಪರ್ಫಾಮೆನ್ಸ್ ಕಾರ್ ಆಫ್ ದಿ ಇಯರ್ ವಿಭಾಗದಲ್ಲಿ ಪ್ರಶಸ್ತಿ ಸನೀಹದಲ್ಲಿದ್ದ ಬಿಎಂಡಬ್ಲ್ಯು ಎಂ4 ಮತ್ತು ಸುಬಾರು ಬಿಆರ್‌ಜೆಡ್ ಮಾದರಿಗಳನ್ನು ಹಿಂದಿಕ್ಕಿದ ಆಡಿ ಇ-ಟ್ರಾನ್ ಜಿಟಿ ಮಾದರಿಯು ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿತು.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಇನ್ನು ವರ್ಲ್ಡ್ ಲಗ್ಷುರಿ ಕಾರ್ ಆಫ್ ದಿ ಇಯರ್ ಪ್ರಶಸ್ತಿ ವಿಭಾಗದಲ್ಲಿ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಮತ್ತು ಜಿನಿಸಿಸ್ ಜಿವಿ70 ನಡುವಿನ ತೀವ್ರ ಪೈಪೋಟಿ ನಡುವೆ ಮರ್ಸಿಡಿಸ್-ಬೆಂಝ್ ಇಕ್ಯೂಎಸ್ ಪ್ರಶಸ್ತಿ ಪಡೆದುಕೊಂಡಿದ್ದು, ಕಳೆದ ಬಾರಿ ಇದೇ ವಿಭಾಗದಲ್ಲಿ ಮರ್ಸಿಡಿಸ್-ಬೆಂಝ್ ಎಸ್-ಕ್ಲಾಸ್ ಮೊದಲ ಮಾದರಿಯಾಗಿ ಹೊರಹೊಮ್ಮಿತ್ತು.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಮತ್ತೊಂದು ಪ್ರಮುಖ ವಿಭಾಗವಾದ ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್ ಈ ಬಾರಿ ರೋಚಕತೆಯಿಂದ ಕೂಡಿತ್ತು. ಒಪೆಲ್ ಮೊಕಾ ಮತ್ತು ಭಾರತದಲ್ಲಿರುವ ಫೋಕ್ಸ್‌ವ್ಯಾಗನ್ ಟೈಗನ್ ಮಾದರಿಗೂ ತೀವ್ರ ಪೈಪೋಟಿ ನಡುವೆ ಟೊಯೊಟಾ ನಿರ್ಮಾಣದ ಹೊಸ ಯಾರಿಸ್ ಕ್ರಾಸ್ ಹೆಚ್ಚಿನ ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿತು.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಮೇಲಿನ ಆರು ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ, ಗುಣಮಟ್ಟದೊಂದಿಗೆ ಗಮನಸೆಳೆದ ಪ್ರಮುಖ ಕಾರುಗಳಿಗೆ ವರ್ಲ್ಡ್ ಕಾರ್ ಆಫ್ ಇಯರ್ ಪ್ರಶಸ್ತಿ ಘೋಷಣೆ ಮಾಡಲಾಯ್ತು. ಕಿಯಾ ಇವಿ6 ಮತ್ತು ಫೋರ್ಡ್ ಮಸ್ಟಾಂಗ್ ಮಾಚ್-ಇ ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿದ ಹ್ಯುಂಡೈ ಐಯಾನಿಕ್ 5 ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಅತ್ಯಾಧುನಿಕ ಸೌಲಭ್ಯವುಳ್ಳ ಐಯಾನಿಕ್ 5 ಅನಾವರಣಗೊಳಿಸಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರನ್ನು ಹ್ಯುಂಡೈ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸುವ ಸುಳಿವು ನೀಡಿದೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಎಲೆಕ್ಟ್ರಿಕ್ ಜೊತೆಗೆ ಭವಿಷ್ಯದಲ್ಲಿ ಹೈಡ್ರೊಜನ್ ಫ್ಯೂಲ್ ಸೆಲ್ಸ್ ವಾಹನಗಳು ಕೂಡಾ ಸದ್ದು ಮಾಡುವ ನೀರಿಕ್ಷೆಯಿದ್ದು, ಹೊಸ ಮಾದರಿಯ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕೂಡಾ ಶೀಘ್ರದಲ್ಲೇ ಐಯಾನಿಕ್ 5 ಕಾರನ್ನು ವಿಶ್ವದ ಪ್ರಮುಖ ಮಾರುಕಟ್ಟೆಗೆ ಪರಿಚಯಿಸಲಿದೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಈ ವರ್ಷಾಂತ್ಯಕ್ಕೆ ಅಮೆರಿಕ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಲಿರುವ ಐಯಾನಿಕ್ 5 ಕಾರನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲವಾದರೂ ಆಮದು ಸುಂಕ ಪರಿಷ್ಕಣೆ ಮಾಡಿದ್ದಲ್ಲಿ ಖಂಡಿತವಾಗಿಯೂ ಮುಂದಿನ ಕೆಲ ವರ್ಷಗಳಲ್ಲಿ ಐಯಾನಿಕ್ 5 ಭಾರತ ಪ್ರವೇಶಿಸಲಿದೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ವಿಸ್ತೃತ ವೀಲ್‌ಬೇಸ್‌ನ ಕಾರಣದಿಂದಾಗಿ ಐಯಾನಿಕ್ 5 ಕಾರು ಹಲವಾರು ವಿಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಐಯಾನಿಕ್ 5 ಕಾರು ಮಾದರಿಯು 4635 ಎಂಎಂ ಉದ್ದ, 1890 ಎಂಎಂ ಅಗಲ, 1605 ಎಂಎಂ ಎತ್ತರ ಮತ್ತು 3000 ಎಂಎಂ ವೀಲ್‌ಬೇಸ್‌ನೊಂದಿಗೆ ವಿಶಾಲವಾದ ಕ್ಯಾಬಿನ್ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

2022ರ ವಿಶ್ವದ ಶ್ರೇಷ್ಠ ಕಾರು ಪ್ರಶಸ್ತಿ ಘೋಷಣೆ- ಪ್ರಮುಖ ವಿಭಾಗಳಲ್ಲಿ ಮಿಂಚಿದ ಇವಿ ಕಾರುಗಳು!

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ 470-480 ಕಿ.ಮೀ ಮೈಲೇಜ್ ಹಿಂದಿಗಿರುಗಿಸಲಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 5 ನಿಮಿಷಗಳ ಕಾಲ ಚಾರ್ಜ್ ಮಾಡಿದರೂ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Hyundai ioniq 5 is the world car of the year evs dominate wcoty 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X