ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಹ್ಯುಂಡೈ(Hyundai) ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ಮಾದರಿಯಾದ ಕೊನಾ(Kona) ಎಸ್‌ಯುವಿ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಕೊನಾ ಕಾರಿನ ನವೀಕೃತ ಮಾದರಿಯನ್ನು ಹಂತ-ಹಂತವಾಗಿ ವಿವಿಧ ಮಾರುಕಟ್ಟೆಗಳಿಗೆ ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಯುರೋಪ್ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಪ್ರಮಾಣದ ಮಾರಾಟ ಸಂಖ್ಯೆ ಹೊಂದಿರುವ ಹ್ಯುಂಡೈ ಕೊನಾ ಇವಿ ಕಾರು ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ನವೀಕೃತ ಮಾದರಿಯನ್ನು ಪರಿಚಯಿಸಿರುವ ಹ್ಯುಂಡೈ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲೂ ನವೀಕೃತ ಕೊನಾ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಸಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಕೊನಾ ಇವಿ ನವೀಕೃತ ಮಾದರಿಯನ್ನು ಯುಕೆಯಲ್ಲಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ. 33.58 ಲಕ್ಷಕ್ಕೆ ಬಿಡುಗಡೆ ಮಾಡಿದ್ದ ಹ್ಯುಂಡೈ ಕಂಪನಿಯು ಹೊಸ ಕಾರನ್ನು ಭಾರತದಲ್ಲೂ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಪ್ರಮುಖ ತಾಂತ್ರಿಕ ಅಂಶಗಳನ್ನು ಪರಿಚಯಿಸಲಾಗಿದ್ದು, ಹೊಸ ವಿನ್ಯಾಸದ ಎಲ್ಇಡಿ ಡಿಆರ್‌ಎಲ್‌ಗಳು, ಟು ವರ್ಟಿಕಲ್ ಸ್ಲಾಟ್ ಹೊಂದಿರುವ ಬಂಪರ್, ಸಿಲ್ವರ್ ಆಕ್ಸೆಂಟ್ ಸೇರಿದಂತೆ ಪ್ರಮುಖ ಬದಲಾವಣೆಗಳು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಆಕರ್ಷಿಸಲಿವೆ. ಜೊತೆಗೆ ಹೊಸ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಪ್ರಮುಖ ಬದಲಾವಣೆಗಳಾಗಿದ್ದು, ಸ್ಪಿಟ್ ಟೈಲ್ ಲ್ಯಾಂಪ್ ಪ್ರತ್ಯೇಕಗೊಂಡಿರುವ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಿಗ್ನಲ್, ಆಕ್ಸಿಲರಿ ಟೈಲ್‌ಲ್ಯಾಂಪ್ ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಇದರೊಂದಿಗೆ ಹೊಸ ಕಾರಿನಲ್ಲಿ ಸುಧಾರಿತ ವಿನ್ಯಾಸದ ಅಲಾಯ್ ವೀಲ್ಹ್, ಆಕರ್ಷಕ ವಿನ್ಯಾಸದ ರೂಫ್ ರೈಲ್ಸ್ ನೀಡಲಾಗಿದ್ದು, ಹೊಸ ಕಾರಿನ ಒಳಭಾಗದಲ್ಲಿ ಫುಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಸರ್ಪೊಟ್ ಮಾಡುವ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ಹೊಸ ಕಾರಿನಲ್ಲಿ 6 ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ ಸೇರಿದಂತೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಾದ ರಿಯರ್ ಟ್ರಾಫಿಕ್ ಕೂಲಿಷನ್ ಅವಾಯ್ಡೆನ್ಸ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೂಲಿಷನ್ ಅವಾಯ್ಡೆನ್ಸ್ ಅಸಿಸ್ಟ್‌ನಂತಹ ಸೌಲಭ್ಯ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಹೊಸ ಕೊನಾ ಇವಿ ಕಾರು ಪ್ರಮುಖ ಫೀಚರ್ಸ್‌ಗಳ ಬದಲಾಣೆ ಹೊರತುಪಡಿಸಿ ಈ ಹಿಂದಿನಂತೆಯೇ ಎರಡು ಪ್ರಮುಖ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 64kWh ಮತ್ತು 39.2kWh ಬ್ಯಾಟರಿ ಪ್ಯಾಕ್ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ಸದ್ಯ ಕೊನಾ ಇವಿ ಮಾದರಿಗಾಗಿ 64kWh ಮತ್ತು 39.2kWh ಬ್ಯಾಟರಿ ಪ್ಯಾಕ್ ಮಾರಾಟ ಮಾಡುತ್ತಿದ್ದು, ಭಾರತದಲ್ಲಿ ಮಾತ್ರ ಸದ್ಯಕ್ಕೆ 39.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹ್ಯುಂಡೈ ಕಂಪನಿಯು ಭಾರತದಲ್ಲಿ 64kWh ಬ್ಯಾಟರಿ ಪ್ಯಾಕ್ ಹೊಂದಿರುವ ಕೊನಾ ಇವಿ ಮಾದರಿಯನ್ನು ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿದ್ದು, ಇದು 39.2kWh ಮಾದರಿಗಿಂತಲೂ ತುಸು ದುಬಾರಿ ದರದೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಜೊತೆಗೆ ಸಾಮಾನ್ಯ ಕಾರುಗಳಿಂತಲೂ ಶೇ.80ರಷ್ಟು ಕಡಿಮೆ ರನ್ನಿಂಗ್ ಕಾಸ್ಟ್ ಹೊಂದಿರುವ ಕೊನಾ ಇವಿ ಕಾರು ಪ್ರತಿ ಕಿ.ಮೀ ಗೆ ರೂ.1 ಕ್ಕಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಕೊನಾ ಇವಿ ಕಾರು 155ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ವಿವಿಧ ಕಂಪನಿಗಳು ತಮ್ಮ ಹೊಸ ಇವಿ ಕಾರಗಳನ್ನು ಮಾರಾಟ ಮಾಡುತ್ತಿದ್ದು, ಕೊನಾ ಇವಿ ಫೇಸ್‌ಲಿಫ್ಟ್ ಮಾದರಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರು 2018ರಿಂದ ಇದುವರೆಗೆ ವಿಶ್ವಾದ್ಯಂತ ಇದುವರೆಗೆ ಸುಮಾರು 1.80 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಫೇಸ್‌ಲಿಫ್ಟ್ ಮಾದರಿಯು ಮತ್ತಷ್ಟು ಬೇಡಿಕೆ ತಂದುಕೊಂಡಲಿದೆ. ಯುರೋಪಿನಲ್ಲಿ ಕೊನಾ ಇವಿ ಕಾರಿಗೆ ಹೆಚ್ಚಿನ ಬೇಡಿಕೆಯಿದ್ದೂ, ವಿಶ್ವಾದ್ಯಂತ ಪ್ರಮುಖ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊನಾ ಇವಿ ಮಾರಾಟಗೊಳ್ಳತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡ ಅತ್ಯಧಿಕ ಮೈಲೇಜ್ ಪ್ರೇರಿತ ಹ್ಯುಂಡೈ ಕೊನಾ ಇವಿ ಫೇಸ್‌ಲಿಫ್ಟ್

ಭಾರತದಲ್ಲಿ ಕೊನಾ ಇವಿ ಬಿಡುಗಡೆಗೂ ಮುನ್ನ ಹ್ಯುಂಡೈ ಕಂಪನಿಯು ತನ್ನ ಐಷಾರಾಮಿ ಇವಿ ಕಾರು ಮಾದರಿಯಾದ ಐಯಾನಿಕ್ 5 ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಐಯಾನಿಕ್ 5 ಮಾದರಿಯು ಮುಂಬರುವ ಜುಲೈ ಹೊತ್ತಿಗೆ ಬಿಡುಗಡೆಯಾಗಲಿದೆ. ಹೊಸ ಕಾರು ದುಬಾರಿ ಬೆಲೆಯೊಂದಿಗೆ ಉತ್ತಮ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಬಿಡುಗಡೆಯಾಗುತ್ತಿದ್ದು, ಐಯಾನಿಕ್ 5 ನಂತರವಷ್ಟೇ ಕೊನಾ ಇವಿ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Hyundai kona ev facelifted launch by the end of this year
Story first published: Tuesday, May 10, 2022, 2:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X