ಅಪಘಾತದಲ್ಲಿ ಸಹಾಯಕ್ಕೆ ಬಾರದ ಏರ್‌ಬ್ಯಾಗ್- ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ಕೆಲವು ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳಿದ್ದರೂ ಸರಿಯಾದ ಕಾರ್ಯನಿರ್ವಹಣೆ ಮಾಡದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ನ್ ಖರೀದಿಸಬಹುದಾಗಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಹೌದು, ಹೊಸ ಕಾರುಗಳಲ್ಲಿ ಇತ್ತೀಚೆಗೆ ಬಹುತೇಕ ಕಂಪನಿಗಳು ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಘೋಷಣೆ ಮಾಡುತ್ತಿದ್ದರೂ ಅವುಗಳ ಕಳಪೆ ಕಾರ್ಯಕ್ಷಮತೆಯು ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತಿಲ್ಲ ಎನ್ನುವುದು ಹಲವಾರು ಅಪಘಾತ ಪ್ರಕರಣಗಳಲ್ಲಿ ಸಾಬೀತಾಗಿದೆ. ಇಂತದ್ದೆ ಪ್ರಕರಣವೊಂದರಲ್ಲಿ ಹ್ಯುಂಡೈ ಕ್ರೆಟಾ ಮಾಲೀಕರೊಬ್ಬರು ಕೂಡಾ ಕಂಪನಿಯ ಸುಳ್ಳು ಮಾಹಿತಿಯಿಂದಾಗಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಕಂಪನಿಯ ಸುಳ್ಳು ಮಾಹಿತಿ ವಿರುದ್ದ ಇದೀಗ ಕಾನೂನು ಹೋರಾಟದ ಮೂಲಕ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ದೆಹಲಿ ಮೂಲದ ಶೈಲೇಂದರ್ ಭಾತ್‍ನಗರ್ ಎಂಬುವವರು ತಮ್ಮ ಹ್ಯುಂಡೈ ಕ್ರೆಟಾ ಮಾದರಿಯಲ್ಲಿನ ಕಳಪೆ ಸುರಕ್ಷಾ ವಿಚಾರವಾಗಿ ರೂ. 3 ಲಕ್ಷ ಪರಿಹಾರ ಪಡೆದುಕೊಂಡಿದ್ದು, ಏರ್‌ಬ್ಯಾಗ್ ಕಾರ್ಯನಿರ್ವಹಣೆಯಲ್ಲಿ ವಿಫಲವಾದ ಹಿನ್ನಲೆಯಲ್ಲಿ ಹ್ಯುಂಡೈ ಕಂಪನಿಯ ವಿರುದ್ದ ದೆಹಲಿ ಗ್ರಾಹಕರ ವೇದಿಕೆಯ ತ್ವರಿತ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಶೈಲೇಂದರ್ ಭಾತ್‍ನಗರ್ ಅವರು 2015ರ ಅಗಸ್ಟ್‌ನಲ್ಲಿ ಹ್ಯುಂಡೈ ಕಂಪನಿಯ ಕ್ರೆಟಾ ಎಸ್‌ಯುವಿಯ 1.6 ವಿಟಿವಿಟಿ ಎಸ್ಎಕ್ಸ್ ಪ್ಲಸ್ ಪೆಟ್ರೋಲ್ ಮಾದರಿಯನ್ನು ಖರೀದಿ ಮಾಡಿದ್ದರು. ಕಾರು ಖರೀದಿಯ ವೇಳೆ ಹೆಚ್ಚು ಸುರಕ್ಷಿತವಾಗಿರುವ ಟಾಪ್ ಎಂಡ್ ಮಾದರಿಗೆ ಆದ್ಯತೆ ನೀಡಿದ್ದ ಶೈಲೇಂದರ್ ಕ್ರೆಟಾ ಸುರಕ್ಷತೆಯ ಬಗೆಗೆ ಹೆಚ್ಚು ವಿಶ್ವಾಸ ಹೊಂದಿದ್ದರು.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಆದರೆ ದುರದೃಷ್ಟವಶಾತ್ ಹೊಸ ಕಾರು 2017ರ ನವೆಂಬರ್‌‌ನಲ್ಲಿ ಭೀಕರ ಅಪಘಾತಕ್ಕೆ ಸಿಲುಕಿಕೊಂಡಿತು. ದೆಹಲಿ-ಪಾಣಿಪತ್ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶೈಲೇಂದರ್ ತೀವ್ರವಾಗಿ ಗಾಯಗೊಂಡು ತಿಂಗಳುಗಟ್ಟಲೇ ಆಸ್ಪತ್ರೆ ಸೇರಿದ್ದರು.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಅಪಘಾತ ಶೈಲೇಂದರ್ ಅವರಿಗೆ ಹೆಚ್ಚಿನ ಹೊಡೆತ ಅವರ ಹಣೆ ಮತ್ತು ಮೂಗಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದವು. ಆದರೆ ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಅಪಘಾತದ ತೀವ್ರತೆ ಇಷ್ಟೊಂದು ಪ್ರಮಾಣದಲ್ಲಿ ಆಗುತ್ತಿರಲಿಲ್ಲವೆಂದು ಹ್ಯುಂಡೈ ಕಂಪನಿಯ ವಿರುದ್ದ ಸುಳ್ಳು ಮಾಹಿತಿ ಕೇಸ್ ದಾಖಲಿಸಿದರು.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಹೊಸ ಕಾರು ಖರೀದಿಯ ಸಂಭರ್ದದಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಹೊಂದಿರುವುದಾಗಿ ಕಂಪನಿಯು ಮಾಹಿತಿ ನೀಡಿತ್ತು. ಆದರೆ ಅಪಘಾತದ ಸಂದರ್ಭದಲ್ಲಿ ಅವು ಕಾರ್ಯನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಈ ಹಿನ್ನಲೆಯಲ್ಲಿ ಆದ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸುವಂತೆ ದೆಹಲಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಪ್ರಕರಣ ಕುರಿತಂತೆ ವಾದ-ಪ್ರತಿವಾದಗಳನ್ನು ಆಲಿಸಿದ ದೆಹಲಿ ಗ್ರಾಹಕರ ನ್ಯಾಯಾಲಯವು ಅಂತಿಮವಾಗಿ ಅಪಘಾತದಲ್ಲಿ ಶೈಲೇಂದರ್ ಅವರಿಗೆ ಹ್ಯುಂಡೈ ಕಂಪನಿಯು ರೂ. 3 ಲಕ್ಷ ಪರಿಹಾರವನ್ನು ನಿಗದಿಪಡಿಸಿದ ದಿನಾಂಕದೊಳಗೆ ಪಾವತಿಸುವಂತೆ ಮಹತ್ವದ ಆದೇಶ ನೀಡತು.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ರೂ. 3 ಲಕ್ಷ ಪರಿಹಾರದಲ್ಲಿ ವೈದ್ಯಕೀಯ ವೆಚ್ಚ ಮತ್ತು ಆದಾಯದ ನಷ್ಟಕ್ಕೆ ರೂ. 2 ಲಕ್ಷ, ಪ್ರಕರಣದ ವ್ಯಾಜ್ಯಕ್ಕಾಗಿ ಖರ್ಚು ಮಾಡಿದ ರೂ. 50 ಸಾವಿರ ಮತ್ತು ಅಪಘಾತದ ಕಾರಣದಿಂದ ಉಂಟಾದ ಮಾನಸಿಕ ಸಂಕಟಕ್ಕಾಗಿ ರೂ. 50 ಸಾವಿರ ಪರಿಹಾರ ಒಳಗೊಂಡಿದ್ದು, ಗ್ರಾಹಕರ ಸುರಕ್ಷತೆಗೆ ವಾಹನ ತಯಾಕ ಕಂಪನಿಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಗ್ರಾಹಕರ ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಸದ್ಯ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಕ್ರೆಟಾ ಮಾದರಿಯು ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಹಳೆಯ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚು ಬಲಿಷ್ಠ, ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

2015ರ ಜುಲೈನಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಕ್ರೆಟಾ ಕಾರು ಇದುವರೆಗೆ ಸುಮಾರು 7 ಲಕ್ಷ ಯುನಿಟ್ ಮಾರಾಟಗೊಂಡಿದ್ದು, ಬಿಎಸ್-6 ಜಾರಿ ನಂತರ ಕ್ರೆಟಾ ಹೊಸ ತಲೆಮಾರಿನ ಆವೃತ್ತಿಯು ಭಾರೀ ಬದಲಾವಣೆಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಕೈಗೆಟುಕುವ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಕ್ರೆಟಾ ಕಾರು ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಾ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಬಿಎಸ್-6 ಜಾರಿ ನಂತರ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ನ್ಯೂ ಜನರೇಷನ್ ಮಾದರಿಯ ಬಿಡುಗಡೆಯ ನಂತರವೇ ಕ್ರೆಟಾ ಕಾರು ಮಾದರಿಯು ಇದುವರೆಗೆ ಸುಮಾರು 2.50 ಲಕ್ಷಕ್ಕೂ ಅಧಿಕ ಯುನಿಟ್ ಮಾರಾಟಗೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಸದ್ಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಾರುಗಳ ಮಾರಾಟ ಪೈಕಿ ನ್ಯೂ ಜನರೇಷನ್ ಕ್ರೆಟಾ ಖರೀದಿಗೆ ಹೆಚ್ಚು ಬೇಡಿಕೆಯಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಆರಂಭಿಕವಾಗಿ ರೂ.10.27 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 18.02 ಲಕ್ಷ ಬೆಲೆ ಪಡೆದುಕೊಂಡಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಹ್ಯುಂಡೈ ಕಂಪನಿಯಿಂದ ರೂ.3 ಲಕ್ಷ ಪರಿಹಾರ ಪಡೆದ ಕ್ರೆಟಾ ಮಾಲೀಕ!

ಕ್ರೆಟಾ ಆವೃತ್ತಿಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ವರ್ಷನ್ ಖರೀದಿಸಬಹುದಾಗಿದೆ.

Most Read Articles

Kannada
English summary
Hyundai to pay creta owner rs 3 lakh after airbags failed to deploy details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X