ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಹೊಸ ಕಾರುಗಳ ಖರೀದಿಯ ವೇಳೆ ಗ್ರಾಹಕರು ಅಗ್ಗದ ಬೆಲೆಯ ಮಾದರಿಗಳಿಗೆ ಮಾದರಿಗಳಿಂತಲೂ ಸುರಕ್ಷಿತ ಮಾದರಿಗಳಿಗೆ ಒತ್ತು ನೀಡುತ್ತಿರುವುದು ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಪ್ರಮುಖ ಕಾರು ಮಾದರಿಗಳು ಸುರಕ್ಷತೆಯಲ್ಲಿ ಗಮನಸೆಳೆಯುತ್ತಿವೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಆಧುನಿಕ ಕಾಲಘಟ್ಟದಲ್ಲಿ ಹೊಸ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು, ಇದರ ಭಾಗವಾಗಿ ಕಾರುಗಳ ಸುರಕ್ಷತಾ ಗುಣಮಟ್ಟವು ಸಾಕಷ್ಟು ಸುಧಾರಿಸಿದೆ. ವಾಹನಗಳ ಸುರಕ್ಷತೆ ಖಚಿತಪಡಿಸಲು ಭಾರತ ಸರ್ಕಾರವು 2019ರ ಅಕ್ಟೋಬರ್ 1ರಿಂದ ಪ್ರತಿ ಹೊಸ ಕಾರಿಗೂ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಿದ್ದು, ಸುರಕ್ಷತೆ ಇಲ್ಲದ ಕಾರುಗಳಿಗೆ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, #SAFERCARSFORINDIA ಅಭಿಯಾನದಡಿ ಹೊಸ ಕಾರುಗಳ ಸುರಕ್ಷತೆಯನ್ನು ಸುಧಾರಿಸಲಾಗುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಲು ಕನಿಷ್ಠ 3 ಅಂಕಗಳ ಅವಶ್ಯಕತೆಯಿದ್ದು, 5 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಕಾರುಗಳು ಅತ್ಯುತ್ತಮ ಕಾರು ಮಾದರಿಯಾಗಿ ಗುರುತಿಸಲಾಗುತ್ತದೆ. ಇತ್ತೀಚೆಗೆ ನಡೆಸಲಾದ 2022ರ ಮೊದಲ ಕ್ರ್ಯಾಶ್ ಟೆಸ್ಟ್‌ನಲ್ಲಿ ಪ್ರಮುಖ ಕಾರುಗಳ ಸುರಕ್ಷತೆಯನ್ನು ಪರೀಕ್ಷಿಸಲಾಗಿದ್ದು, ಸುರಕ್ಷಾ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ರೇಟಿಂಗ್ಸ್ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ದೇಶಿಯ ಮಾರುಕಟ್ಟೆಯಲ್ಲಿರುವ ಹೊಸ ಕಾರುಗಳ ಸುರಕ್ಷತೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಸದ್ಯ ಅಗ್ರಸ್ಥಾನದಲ್ಲಿದ್ದು, ಎಕ್ಸ್‌‌ಯುವಿ ಮಾದರಿಯಲ್ಲಿ ಆರು ಏರ್‌ಬ್ಯಾಗ್, ಎಡಿಎಎಸ್ ತಂತ್ರಜ್ಞಾನದೊಂದಿಗೆ ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆ 5 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆ 4 ಸ್ಟಾರ್ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಗ್ಲೋಬಲ್ ಎನ್‍‌ಎಸಿಎಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಟಾಟಾ ಪಂಚ್ ಮಾದರಿಯು ಸ್ಥಾನಪಡೆದುಕೊಂಡಿದ್ದು, ಇದು ಸಣ್ಣಕಾರುಗಳಲ್ಲಿ ಹೆಚ್ಚಿನ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಹೊಂದಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಕ್ರ್ಯಾಶ್ ಟೆಸ್ಟಿಂಗ್ ಸದ್ಯ ಮಹೀಂದ್ರಾ ನಿರ್ಮಾಣದ ಪ್ರಮುಖ ಕಾರುಗಳು ಉತ್ತಮ ರೇಟಿಂಗ್ಸ್ ಪಡೆದುಕೊಳ್ಳುತ್ತಿದ್ದು, ಎಕ್ಸ್‌ಯುವಿ300 ಮಾದರಿಯು ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಪಂಚ್ ನಂತರದ ಸ್ಥಾನದಲ್ಲಿರುವ ಟಾಟಾ ಆಲ್‌ಟ್ರೊಜ್ ಮತ್ತು ನೆಕ್ಸಾನ್ ಮಾದರಿಗಳು ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಪಟ್ಟಿಯಲ್ಲಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದು, ಎರಡು ಕಾರು ಮಾದರಿಗಳು ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್ ರೇಟಿಂಗ್ ಹೊಂದಿವೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಗ್ಲೋಬಲ್ ಎನ್‌ಸಿಎಪಿ ಪಟ್ಟಿಯಲ್ಲಿ ಮಹೀಂದ್ರಾ ಥಾರ್ ಮಾದರಿಯು ಆರನೇ ಸ್ಥಾನದಲಿದ್ದು, ಇದರಲ್ಲಿ ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಹೊಂದಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಈ ಬಾರಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹೋಂಡಾ ಸಿಟಿ 4ನೇ ತಲೆಮಾರಿನ ಆವೃತ್ತಿಯು ಉತ್ತಮ ಪ್ರದರ್ಶನ ತೋರಿದ್ದು, ಸಿಟಿ ಕಾರಿನಲ್ಲಿ ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ತದನಂತರದಲ್ಲಿ ಟಾಟಾ ಟಿಗೋರ್ ಎಲೆಕ್ಟ್ರಿಕ್ ಮತ್ತು ಟೊಯೊಟೊ ಅರ್ಬನ್ ಕ್ರೂಸರ್ ಕಾರು ಮಾದರಿಗಳು ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದು, ಇವುಗಳಲ್ಲಿನ ಹೊಸ ಸುರಕ್ಷಾ ಫೀಚರ್ಸ್‌ಗಳ ಪರಿಣಾಮ ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಕ್ರಮವಾಗಿ 4 ಮತ್ತು 3 ಸ್ಟಾರ್ ರೇಟಿಂಗ್ ಹೊಂದಿವೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಇವಿ ಕಾರು ಮಾದರಿಯಲ್ಲಿ ಮಾತ್ರವಲ್ಲದೆ ಟಾಟಾ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ಟಿಗೋರ್ ಮತ್ತು ಟಿಯಾಗೋ ಮಾದರಿಯಲ್ಲೂ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿದ್ದು, ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಮತ್ತ ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್: ಹೆಚ್ಚು ರೇಟಿಂಗ್ಸ್ ಹೊಂದಿರುವ ಹೊಸ ಟಾಪ್ 10 ಕಾರುಗಳಿವು!

ಟಾಪ್ 10 ಸುರಕ್ಷಿತ ಕಾರು ಮಾದರಿಗಳಲ್ಲಿ ಈ ಬಾರಿ ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಸಹ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಮಧ್ಯವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

Most Read Articles

Kannada
English summary
Indian cars safety rating april 2022 new list details
Story first published: Friday, April 15, 2022, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X