Just In
Don't Miss!
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Sports
ICC Womens ODI Ranking: ಅಗ್ರ 10ರೊಳಗೆ ಸ್ಮೃತಿ ಮಂಧಾನ, 11ನೇ ಸ್ಥಾನದಲ್ಲಿ ರಾಜೇಶ್ವರಿ
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ವಾಹನ ನೋಂದಣಿ: ಈ ರಾಜ್ಯಗಳಲ್ಲಿದ್ದಾರೆ ಅತಿಹೆಚ್ಚು ಕಾರು ಮತ್ತು ಬೈಕ್ ಮಾಲೀಕರು!
ಭಾರತದಲ್ಲಿ ಕಳೆದ ದಶಕ ಅವಧಿಯಲ್ಲಿ ಹೊಸ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗಿದ್ದು, ವಾಹನ ಮಾಲೀಕತ್ವ ಪ್ರಮಾಣವು ಸಾಕಷ್ಟು ಹೆಚ್ಚಳವಾಗಿದೆ. ಜೀವನ ಶೈಲಿ ಬದಲಾಗುತ್ತಿದ್ದಂತೆ ವಾಹನ ಮಾಲೀಕತ್ವ ಪ್ರಮಾಣವು ಕೂಡಾ ದ್ವಿಗುಣಗೊಳ್ಳುತ್ತಿದ್ದು, ವಾಹನ ಮಾಲೀಕತ್ವದ ಕುರಿತಾದ ಹೊಸ ಸಮೀಕ್ಷೆವೊಂದು ಇದೀಗ ಪ್ರಕಟಗೊಂಡಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮಿತಿಯು ಇತ್ತೀಚೆಗೆ ನಡೆಸಿದ ಹೊಸ ಸಮೀಕ್ಷೆಯಲ್ಲಿ ಭಾರತೀಯರ ಕುಟುಂಬಗಳಲ್ಲಿ ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳ ಮಾಲೀಕತ್ವಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸಿದ್ದು, ಹೊಸ ಸಮೀಕ್ಷೆಯಲ್ಲಿ ವಿವಿಧ ರಾಜ್ಯಗಳಲ್ಲಿನ ಜನಸಂಖ್ಯೆ(ಕುಟುಂಬಗಳು) ಸಂಖ್ಯೆ ಆಧರಿಸಿ ವಿವಿಧ ವಾಹನಗಳ ಮಾಲೀಕತ್ವದ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.

ಸಮೀಕ್ಷೆಯಲ್ಲಿನ ಅಂಕಿಅಂಶಗಳ ಪ್ರಕಾರ, ಪ್ರತಿ ಕುಟುಂಬದಲ್ಲಿ ಯಾವ ಯಾವ ವಾಹಗಳ ಮಾಲೀಕತ್ವವನ್ನು ಹೊಂದಲಾಗಿದೆ ಎನ್ನುವುದು ಬಹಿರಂಗ ಪಡಿಸಲಾಗಿದ್ದು, ಕಾರುಗಳು, ಬೈಕ್ ಮತ್ತು ಸೈಕಲ್ ಮಾಲೀಕತ್ವ ಅಂಕಿಅಂಶಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.

ಕಾರು ಮಾಲೀಕತ್ವ
ಭಾರತದಲ್ಲಿ ಅತಿ ಹೆಚ್ಚು ಕಾರು ಮಾಲೀಕತ್ವ ಹೊಂದಿರುವ ರಾಜ್ಯಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದು, ಬಿಹಾರ ಕೊನೆಯ ಸ್ಥಾನದಲ್ಲಿದೆ. ಕುಟುಂಬಗಳಿಗೆ ಅನುಗುಣವಾಗಿ ಕಾರು ಮಾಲೀಕತ್ವವನ್ನು ಇಲ್ಲಿ ಲೆಕ್ಕಾಚಾರ ಮಾಡಲಾಗಿದ್ದು, ಮೊದಲ ಸ್ಥಾನದಲ್ಲಿ ಗೋವಾದಲ್ಲಿ ಶೇ. 45.2 ಕುಟುಂಬಗಳು ಕಾರು ಮಾಲೀಕತ್ವ ಹೊಂದಿದ್ದರೆ ಬಿಹಾರದಲ್ಲಿ ಕೇವಲ ಶೇ. 2 ರಷ್ಟು ಕುಟುಂಬಗಳು ಮಾತ್ರ ಕಾರು ಮಾಲೀಕತ್ವ ಹೊಂದಿವೆ.

ಕುಟುಂಬಗಳಲ್ಲಿ ಕಾರು ಮಾಲೀಕತ್ವ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, ದೇಶಾದ್ಯಂತ 2018ರದಲ್ಲಿದ್ದ ಶೇ. 6 ರಷ್ಟು ಕಾರು ಮಾಲೀಕತ್ವ ಪ್ರಮಾಣವು ಇದೀಗ ಶೇ. 7.5 ಕ್ಕೆ ಏರಿಕೆಯಾಗಿದೆ.

ಕೋವಿಡ್ ನಂತರ ಸ್ವಂತ ವಾಹನ ಬಳಕೆಯು ಹೆಚ್ಚಿದ ಪ್ರಮಾಣದ ಕಾರು ಮಾಲೀಕತ್ವ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದ್ದು, ಮಾಹಾನಗರಗಳಲ್ಲಿ ಮಾತ್ರವಲ್ಲ ಟೈರ್1 ಮತ್ತು ಟೈರ್ 2 ನಗರಗಳಲ್ಲೂ ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಿರುವುದು ಇಲ್ಲಿ ಸ್ಪಷ್ಟವಾಗಿದೆ.

ಕರ್ನಾಟಕದಲ್ಲೂ ಕೂಡಾ ಕುಟುಂಬಗಳಲ್ಲಿನ ಕಾರು ಮಾಲೀಕತ್ವ ಪ್ರಮಾಣವು ಸಾಕಷ್ಟು ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಶೇ. 9.1 ಕುಟುಂಬಗಳು ಕಾರುಗಳ ಮಾಲೀಕತ್ವ ಹೊಂದಿವೆ. ವಾಹನ ಮಾಲೀಕತ್ವ ಪ್ರಮಾಣವು ಇಲ್ಲಿ ಕುಟುಂಬಗಳಿಗೆ ಅನುಸಾರವಾಗಿ ಲೆಕ್ಕಾಚಾರ ಮಾಡಲಾಗಿದ್ದು, ಕಾರು ಮಾರಾಟ ಪ್ರಮಾಣವನ್ನು ಆಧರಿಸಿರುವುದಿಲ್ಲ.

ಬೈಕ್ ಮಾಲೀಕತ್ವ
ದ್ವಿಚಕ್ರ ವಾಹನಗಳ ಮಾಲೀಕತ್ವ ಪ್ರಮಾಣವು ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಬೈಕ್ ಮಾಲೀಕತ್ವ ಹೊಂದಿರುವ ರಾಜ್ಯಗಳಲ್ಲಿ ಶೇ. 86.7 ರಷ್ಟು ಪ್ರಮಾಣದೊಂದಿಗೆ ಗೋವಾ ಮೊದಲ ಸ್ಥಾನದಲ್ಲಿದ್ದು, ಶೇ. 16.7 ರಷ್ಟು ಪ್ರಮಾಣದೊಂದಿಗೆ ನಾಗಾಲ್ಯಾಂಡ್ ಕೊನೆಯ ಸ್ಥಾನದಲ್ಲಿದೆ.

ಕುಟುಂಬಗಳಲ್ಲಿ ಬೈಕ್ ಮಾಲೀಕತ್ವ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ಶೇ.12ರಷ್ಟು ಬೆಳವಣಿಗೆ ಕಂಡಿದ್ದು, ದೇಶಾದ್ಯಂತ 2018ರದಲ್ಲಿದ್ದ ಶೇ. 37.7 ರಷ್ಟಿದ್ದ ಬೈಕ್ ಮಾಲೀಕತ್ವ ಪ್ರಮಾಣವು ಇದೀಗ ಶೇ. 49.7 ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲೂ ಕೂಡಾ ಬೈಕ್ ಮಾಲೀಕತ್ವ ಪ್ರಮಾಣವು ಸಾಕಷ್ಟು ಏರಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಸದ್ಯ ಶೇ. 61.1 ಕುಟುಂಬಗಳು ಬೈಕ್ ಮಾಲೀಕತ್ವ ಹೊಂದಿವೆ. ನೆರೆ ರಾಜ್ಯಗಳಾದ ತಮಿಳುನಾಡು ಕೂಡಾ ಹೆಚ್ಚಿನ ಸಂಖ್ಯೆಯ ಬೈಕ್ ಮಾಲೀಕತ್ವ ಪ್ರಮಾಣವನ್ನು ಹೊಂದಿದ್ದು, ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ.

ಸೈಕಲ್ ಮಾಲೀಕತ್ವ
ಬೈಕ್ ಮತ್ತು ಕಾರುಗಳ ಮಾಲೀಕತ್ವ ಪ್ರಮಾಣಕ್ಕಿಂತ ಸೈಕಲ್ ಮಾಲೀಕತ್ವ ಪ್ರಮಾಣವು ಭಿನ್ನವಾಗಿದ್ದು, ಕಳೆದ ಕೆಲ ವರ್ಷಗಳಿಂದ ಸೈಕಲ್ ಬಳಕೆ ಪ್ರಮಾಣವು ಸಾಕಷ್ಟು ಇಳಿಕೆಯಾಗಿದೆ. ಸದ್ಯ ಉತ್ತರಪ್ರದೇಶದಲ್ಲಿ ಶೇ. 75.6 ರಷ್ಟು ಕುಟುಂಬಗಳು ಸೈಕಲ್ ಮಾಲೀಕತ್ವದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಶೇ. 5.5 ರಷ್ಟು ಸೈಕಲ್ ಮಾಲೀಕತ್ವ ಹೊಂದಿರುವ ನಾಗಾಲ್ಯಾಂಡ್ ಕೊನೆಯ ಸ್ಥಾನದಲ್ಲಿದೆ.

ಪರಿಸರ ಸ್ನೇಹಿ ಜೊತೆಗೆ ಆರೋಗ್ಯಕಾರಿ ಜೀವನ ಶೈಲಿಗೆ ಪೂರಕವಾಗಿರುವ ಸೈಕಲ್ ಮಾಲೀಕತ್ವವು ಕಳೆದ ಕೆಲ ವರ್ಷಗಳಲ್ಲಿ ನಿರಂತರ ಕಡಿಮೆಯಾಗುತ್ತಿದ್ದು, ಸೈಕಲ್ ಜಾಗದಲ್ಲಿ ಇದೀಗ ಬೈಕ್ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಜೊತೆಗೆ ಕುಟುಂಬ ಸಮೇತರಾಗಿ ಪ್ರಯಾಣಿಸುವ ಉದ್ದೇಶದಿಂದ ಕಾರು ಖರೀದಿಸುವವರ ಸಂಖ್ಯೆಯು ಮಹಾನಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲಿ ಹೆಚ್ಚುತ್ತಿದೆ.