ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ದೇಶದಲ್ಲಿ ವಾಹನ ಉದ್ಯಮವು ಈ ಹಿಂದಿಗಿಂತ ಬಹಳಷ್ಟು ಬದಲಾಗಿದೆ. ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳು ಆಟೋಮೊಬೈಲ್ ಉದ್ಯಮವನ್ನು ಆವರಿಸುತ್ತಿವೆ. ಸದ್ಯ ಇಂಧನ ಚಾಲಿತ ವಾಹನಗಳ ಮಟ್ಟಿಗೆ ಮಾರಾಟವಾಗದಿದ್ದರೂ ಮುಂದಿನ ದಿನಗಳಲ್ಲಿ ಇವುಗಳಿಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ನಮ್ಮ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹಿಂದೆಂದಿಗಿಂತ ಹೆಚ್ಚಾಗಿದೆ. ಇದರಲ್ಲಿ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳು ಮೇಲುಗೈ ಸಾಧಿಸಿವೆ. ಎಲೆಕ್ಟ್ರಿಕ್ ಕಾರುಗಳ ಮಾರಾಟವು ಉತ್ತಮವಾಗಿದೆಯಾದರೂ ದ್ವಿಚಕ್ರ ವಾಹನಗಳಿಗೆ ಹೋಲಿಸಿಕೊಂಡರೆ ಕಡಿಮೆಯೆಂದೇ ಹೇಳಬಹುದು.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಸದ್ಯ ತೈಲ ಬೆಲೆ ಏರಿಕೆ, ಕಾರ್ಬನ್ ಹೊರಸೂಸುವಿಕೆ ಹಾಗೂ ಇಂಧನ ಚಾಲಿತ ವಾಹನಗಳ ನಿರ್ವಹಣಾ ವೆಚ್ಚಗಳಿಗೆ ಹೋಲಿಸಿಕೊಂಡಿರೆ ಎಲೆಕ್ಟ್ರಿಕ್ ವಾಹನಗಳು ತುಂಬಾ ಅಗ್ಗವೆಂದು ಹೇಳಬಹುದು. ಇನ್ನು ವಾತಾವರಣ ಕಾಲುಷ್ಯ ಹೆಚ್ಚಾಗುತ್ತಿರುವ ಕಾರಣ ಪ್ರಸ್ತುತದ ಪರಿಸ್ಥಿತಿಗೆ EV ಅಳವಡಿಕೆ ಜಗತ್ತಿಗೆ ತುಂಬಾ ಅವಶ್ಯಕವಾಗಿದೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕೂಡ ಇವಿ ಅಳವಡಿಕೆಗೆ ಶ್ರಮಿಸುತ್ತಿದೆ. ಭಾರತದಲ್ಲಿ ಸಾರ್ವಜನಿಕರು, ಸರ್ಕಾರಿ ಅಂಗಸಂಸ್ಥೆಗಳು ಅಥವಾ OEM ಗಳಾಗಿರಬಹುದು ಎಲ್ಲರೂ ಕೂಡ EV ರಂಗವನ್ನು ಉತ್ತೇಜಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ CEEW-CEFನ ಇತ್ತೀಚಿನ ವರದಿಯು ಭಾರತೀಯ EV ಮಾರುಕಟ್ಟೆಯು 2030ರ ವೇಳೆಗೆ 16,24,722 ಕೋಟಿ ರೂಪಾಯಿಗಳನ್ನು ತಲುಪುತ್ತದೆ ಎಂದು ತಿಳಿಸಿದೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಶ್ರೇಣಿ -1 ರಾಜ್ಯಗಳಿಗೆ ಮಾತ್ರವಲ್ಲದೆ ಇದು ಎಲ್ಲಡೆ ವ್ಯಾಪಕವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕರ್ನಾಟಕವು ಶೇ4.66 ರಷ್ಟು ಮಾರುಕಟ್ಟೆ ದರದೊಂದಿಗೆ ಮುನ್ನಡೆಸಿದೆ, ನಂತರ ಗೋವಾ ಮತ್ತು ಮಹಾರಾಷ್ಟ್ರವು ಕ್ರಮವಾಗಿ ಶೇ4.39 ಮತ್ತು ಶೇ3.14ರಷ್ಟು ಎಲೆಕ್ಟ್ರಿಕ್ ಸ್ಕೂಟರಗಳನ್ನು ಅಳವಡಿಸಿಕೊಂಡಿವೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಇದರಲ್ಲಿ ನಮ್ಮ ಬೆಂಗಳೂರು ನಗರವು ಕರ್ನಾಟಕದಲ್ಲಿ 20,059 ಮಾರಾಟವಾದ ಘಟಕಗಳಲ್ಲಿ ಶೇಕಡಾ 57 ರಷ್ಟು ಹೆಚ್ಚಿನ ಪಾಲನ್ನು ಹೊಂದಿದ್ದು, ಇದರಲ್ಲಿ ಶೇಕಡಾ 90 ರಷ್ಟು ಪಾಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳದ್ದಾಗಿದೆ. EV ವಲಯದಲ್ಲಿ ಬೃಹತ್ ಬೆಳವಣಿಗೆಗೆ ದೇಶವು ಸಜ್ಜಾಗುತ್ತಿದ್ದರೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೇಡಿಕೆ ಮತ್ತು ಮಾರಾಟದ ವಿಷಯದಲ್ಲಿ ಅತ್ಯಧಿಕ ಕಾರ್ಯಕ್ಷಮತೆಯನ್ನು ದಾಖಲಿಸಿವೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಾರ್ಷಿಕ ಮಾರಾಟದಲ್ಲಿ 20-21 ರಲ್ಲಿ 1,34,821 ರಿಂದ 21-22 ರಲ್ಲಿ 4,29,217 ಯುನಿಟ್‌ಗಳ ಮಾರಾಟದೊಂದಿಗೆ ಮೂರು ಪಟ್ಟು ಬೆಳವಣಿಗೆಯನ್ನು ಕಂಡಿದೆ. ಈ ಅಂಕಿ ಅಂಶವು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮದ ಅನನ್ಯ ಬೆಳವಣಿಗೆಯನ್ನು ತೋರುತ್ತಿದೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ವಾಹನ ಡೇಟಾದ ಪ್ರಕಾರ, ದೇಶದಲ್ಲಿ ಒಟ್ಟಾರೆ E2W ಮಾರಾಟವು ಜೂನ್ 2022 ರಲ್ಲಿ 42,245 ಯುನಿಟ್‌ಗಳ ಒಟ್ಟು ಇವಿ ಮಾರಾಟದ ಶೇ61 ರಷ್ಟು ಪಾಲನ್ನು ಹೊಂದಿದೆ. ಔಟ್‌ಗ್ರೋಯಿಂಗ್, ಕಾಂಪೊನೆಂಟ್ ಮತ್ತು ಚಿಪ್ ಕೊರತೆಗಳು ಅಥವಾ EV ಬೆಂಕಿಯ ಘಟನೆಗಳು, ವಿದ್ಯುತ್ ಚಲನಶೀಲತೆಯು ಟ್ವಿಸ್ಟ್-ಟರ್ನ್‌ಗಳಿಂದ ಪರಿವರ್ತನೆಯ ಹಂತದವರೆಗಿನ ಪ್ರಯಾಣವನ್ನು ಸಂಕ್ಷಿಪ್ತಗೊಳಿಸಿದೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಹರಿಯಾಣದಲ್ಲಿ ಇವಿ ಕಾರು ಖರೀದಿಗೆ ಭರ್ಜರಿ ಸಬ್ಸಿಡಿ

ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಇತ್ತೀಚೆಗೆ ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ಹೊಸ ಇವಿ ಪಾಲಿಸಿ ಘೋಷಣೆ ಮಾಡಿದ ನಂತರ ಇದೀಗ ಹರಿಯಾಣ ಸರ್ಕಾರವು ಸರ್ಕಾರವು ಇವಿ ಪಾಲಿಸಿಗೆ ಅನುಮೋದನೆ ನೀಡಿದ್ದು, ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳು, ಇವಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳಿಗೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ತಯಾರಕರಿಗೆ ಹಲವಾರು ಆರ್ಥಿಕ ಪ್ರೋತ್ಸಾಹಗಳನ್ನು ನೀಡಲು ತೀರ್ಮಾನಿಸಲಾಗಿದೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಹೊಸ ಇವಿ ನೀತಿ ಅಡಿಯಲ್ಲಿ ಹರಿಯಾಣ ಸರ್ಕಾರವು ಎಲೆಕ್ಟ್ರಿಕ್ ವಾಹನಗಳು ಅಥವಾ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ರೂ. 10 ಲಕ್ಷದವರೆಗೆ ಸಬ್ಸಿಡಿ ಘೋಷಣೆ ಮಾಡಿದ್ದು, ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಮತ್ತು ಮೋಟಾರ್ ವಾಹನ ತೆರಿಗೆಯಲ್ಲಿ ಸಹ ವಿನಾಯ್ತಿ ಪಡೆಯಲಿದ್ದಾರೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ರಾಜ್ಯದಲ್ಲಿ ಇವಿ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಹರಿಯಾಣ ಸರ್ಕಾರವು ಹೊಸ ಚಾರ್ಜಿಂಗ್ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಯೋಜನಾ ವೆಚ್ಚದ 50 ಪ್ರತಿಶತವನ್ನು (ರೂ. 1 ಕೋಟಿವರೆಗೆ) ನೀಡುತ್ತಿದೆ. ಇದರೊಂದಿಗೆ ಆರ್ & ಡಿ ಕೇಂದ್ರಗಳಲ್ಲಿ ಹೊಸ ಇವಿಗಳನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂಪಾಯಿಗಳವರೆಗೆ ನೆರವು ನೀಡುವುದಾಗಿ ಹೇಳಿದೆ.

ದೇಶದಲ್ಲಿ ಇವಿ ವಾಹನ ಅಳವಡಿಕೆಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಕರ್ನಾಟಕ: ನಮ್ಮ ಬೆಂಗಳೂರು ನಂ.1

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ತೈಲ ಬೆಲೆ ಏರಿಕೆ, ಕಾರ್ಬನ್ ಹೊರಸೂಸುವಿಕೆ ಹಾಗೂ ಇಂಧನ ಚಾಲಿತ ವಾಹನಗಳ ನಿರ್ವಹಣಾ ವೆಚ್ಚಗಳಿಗೆ ಹೋಲಿಸಿಕೊಂಡಿರೆ ಎಲೆಕ್ಟ್ರಿಕ್ ವಾಹನಗಳು ತುಂಬಾ ಅಗ್ಗವೆಂದು ಹೇಳಬಹುದು. ಇನ್ನು ವಾತಾವರಣ ಕಾಲುಷ್ಯ ಹೆಚ್ಚಾಗುತ್ತಿರುವ ಕಾರಣ ಪ್ರಸ್ತುತದ ಪರಿಸ್ಥಿತಿಗೆ EV ಅಳವಡಿಕೆ ಜಗತ್ತಿಗೆ ತುಂಬಾ ಅವಶ್ಯಕವಾಗಿದೆ.

Most Read Articles

Kannada
English summary
Karnataka tops the list of EV vehicles in the country Namma Bengaluru no 1
Story first published: Tuesday, July 12, 2022, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X