ವಿನೂತನ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಕಿಯಾ ಇಂಡಿಯಾ(Kia India) ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಗಳಾದ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಸೆಲ್ಟೊಸ್ ಎಸ್‌ಯುವಿ ಮಾದರಿಗಳ 2022ರ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಗಳು ಪ್ರಮುಖ ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಹೊಸ ಸೊನೆಟ್ ಕಾರು ಮಾದರಿಯೊಂದಿಗೆ ಕಿಯಾ ಕಂಪನಿಯು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಬಾರಿ ಎಂಟ್ರಿ ಲೆವಲ್ ಮಾದರಿಯಲ್ಲೂ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ಅಳವಡಿಸಿದೆ. ಹೀಗಾಗಿ ಹೊಸ ಕಾರಿನ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.69 ಲಕ್ಷ ಬೆಲೆ ಹೊಂದಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

2022ರ ಸೆಲ್ಟೊಸ್ ಮಾದರಿಯ ಬೆಸ್ ವೆರಿಯೆಂಟ್‌ನಲ್ಲೂ ಈ ಬಾರಿ ಹಲವಾರು ಹೊಸ ಫೀಚರ್ಸ್ ನೀಡಿರುವ ಕಿಯಾ ಕಂಪನಿಯು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹೊಸ ಮಾದರಿಯು ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.45 ಲಕ್ಷ ಬೆಲೆ ಹೊಂದಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಸೊನೆಟ್ ಹಳೆಯ ಮಾದರಿಗಿಂತಲೂ ಹೊಸ ಆವೃತ್ತಿಯು ಈ ಬಾರಿ ರೂ. 30 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಇದರ ಜೊತೆಗೆ ಹೊಸ ಕಾರಿನಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಸಹ ವಿಸ್ತರಿಸಲಾಗಿದೆ. ಇದರ ಹೊರತಾಗಿ ಹೊಸ ಮಾದರಿಯಲ್ಲಿ ಈ ಹಿಂದಿನ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಸೊನೆಟ್ ಮಾದರಿಯನ್ನು ಅನ್ನು ನವೀಕರಿಸಿರುವ ಕಂಪನಿಯು ಸುರಕ್ಷತೆಯ ಮೇಲೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ನವೀಕರಣಗೊಂಡಿರುವ 2022ರ ಸೊನೆಟ್ ಮಾದರಿಯ ಬೆಸ್ ವೆರಿಯೆಂಟ್‌ನಲ್ಲಿ ಈ ಬಾರಿ ಸ್ಟ್ಯಾಂಡರ್ಡ್ ಆಗಿ ನಾಲ್ಕು ಏರ್‌ಬ್ಯಾಗ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ನೀಡಲಾಗಿದೆ. ಹಾಗೆಯೇ ವೈಟ್ ಸ್ಟಿಚ್ ಹೊಂದಿರುವ ಸೆಮಿ ಲೆದರ್ ಆಸನಗಳು ಒಳಾಂಗಣ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಿದ್ದು, ಹಿಂಭಾಗದ ಸೀಟಿನಲ್ಲಿ ಮಡಿಕೆ ಮಾಡಬಹುದಾದ ನಾಬ್ ನೀಡಲಾಗಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಇದರೊಂದಿಗೆ ಹೊಸ ಕಾರಿನಲ್ಲಿ ಟಾಪ್ ಎಂಡ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳಲ್ಲಿ ಟಿಪಿಎಂಎಸ್ ಮತ್ತು 4 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು 6 ಏರ್‌ಬ್ಯಾಗ್‌ಗಳು, ಹೊಸ ಕಿಯಾ ಕನೆಕ್ಟ್ ಅಪ್ಲಿಕೇಶನ್, ಹೊಸ ಎಸ್ಒಎಸ್ ಮತ್ತು ಐಆರ್‌ವಿಎಂ ನಲ್ಲಿ ಕಿಯಾ ಕನೆಕ್ಟ್ ಬಟನ್ ನೀಡಲಾಗಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಜೊತೆಗೆ ಈ ಹಿಂದೆ ಹೆಚ್‌ಟಿಎಕ್ಸ್ ಅಥವಾ ಮೇಲಿನ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದ್ದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಸೌಲಭ್ಯಗಳನ್ನು ಇದೀಗ ಮಿಡ್ ವೆರಿಯೆಂಟ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಹಾಗೆಯೇ ಹೊಸ ಮಾದರಿ ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಆನಿವರ್ಸರಿ ಎಡಿಷನ್‌ಗೆ ಕಂಪನಿಯು 4.2-ಇಂಚಿನ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಿದ್ದು, ಇದು ಮೊದಲು ಟಾಪ್ ಎಂಡ್ ವೆರಿಯೆಂಟ್‌ನಲ್ಲಿ ಮಾತ್ರವೇ ಲಭ್ಯವಿತ್ತು.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಸೆಲ್ಟೊಸ್ ಮಾದರಿಯ ಮೂರು ಎಂಜಿನ್ ಆಯ್ಕೆಯೊಂದಿಗೆ ಒಟ್ಟು 17 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯಲ್ಲೂ ಕಂಪನಿಯು ಇದೀಗ ನಾಲ್ಕು ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲ್ ಸೌಲಭ್ಯಗಳಿವೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

2022ರ ಸೆಲ್ಟೊಸ್ ಮಾದರಿಯಲ್ಲಿ ಇದೀಗ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಹೊಸ ಕಾರಿನ ಎಲ್ಲಾ ಆಟೋಮ್ಯಾಟಿಕ್ ಮಾದರಿಗಳಲ್ಲೂ ಕಂಪನಿಯು ಪ್ಯಾಡಲ್ ಶಿಫ್ಟರ್ ಜೋಡಣೆ ಮಾಡಿದ್ದು, ಇದರ ಜೊತೆ ಹೆಚ್‌ಟಿಎಕ್ಸ್ ಡೀಸೆಲ್ ಮಾದರಿಯಲ್ಲೂ ಈ ಬಾರಿ ಆಟೋಮ್ಯಾಟಿಕ್ ಪರಿಚಯಿಸಲಾಗಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಹಾಗೆಯೇ ಹೊಸ ಕಾರಿನ ಬೆಸ್ ವೆರಿಯೆಂಟ್‌ನಲ್ಲಿ ಕಂಪನಿಯು ಹೊಸದಾಗಿ ವಿನ್ಯಾಸಗೊಳಿಸಲಾದ ಕಿಯಾ ಲೊಗೊ ಹೊಂದಿರುವ ವ್ಹೀಲ್ ಕವರ್, ಎಕ್ಸ್ ಲೈನ್ ಮಾದರಿಗಳಲ್ಲಿ ಕಂಪನಿಯು ಕಿಯಾ ಲೊಗೊ ಹೊಂದಿರುವ ಹೆಡ್‌ರೆಸ್ಟ್ ಸೇರಿದಂತೆ ಟಾಪ್ ಲೈನ್‌ಗಳಲ್ಲಿ ಆರು ಏರ್‌ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಟಾಪ್ ಎಂಡ್ ಮಾದರಿಯಲ್ಲಿರುವ ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್‌(ಒ), ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್-ಲೈನ್ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳಿದ್ದು, ಹೆಚ್‌ಟಿಎಕ್ಸ್ ಪ್ಲಸ್ ಡಿಸೇಲ್ ಮಾದರಿಗಳಲ್ಲಿ ಐಎಂಟಿ ಕ್ಲಚ್‌ಲೆಸ್ ಗೇರ್‌ಬಾಕ್ಸ್ ಆಯ್ಕೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿವೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಇದರ ಹೊರತಗಾಗಿ ಹೊಸ ಮಾದರಿಯಲ್ಲಿ ಈ ಹಿಂದಿನ ತಾಂತ್ರಿಕ ಸೌಲಭ್ಯಗಳನ್ನೇ ಮುಂದುವರಿಸಲಾಗಿದ್ದು, ಹೊಸ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿವೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಇನ್ನು ಸೊನೆಟ್ ಕಾರು ಮಾದರಿಯು ಒಟ್ಟು ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಇದರ ಪೆಟ್ರೋಲ್ ಮಾದರಿಯು 1.0-ಲೀಟರ್ ಟರ್ಬೊ ಜಿಡಿಐ ಎಂಜಿನ್ ಹೊಂದಿದ್ದು ಅದು ಗರಿಷ್ಠ 120 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಗರಿಷ್ಠ 83 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 1.5-ಲೀಟರ್ ಸಿಆರ್‌ಡಿಐ ಎಂಜಿನ್ ಅನ್ನು ಪಡೆದಿದ್ದು, ಇದು 100 ಬಿಎಚ್‌ಪಿ ಮತ್ತು 115 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಇದರಲ್ಲಿ 1.0 ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮಾದರಿಯು ಸ್ಮಾರ್ಟ್‌ಸ್ಟ್ರೀಮ್ 6 ಸ್ಪೀಡ್ ಐಎಂಟಿ ಮತ್ತು 7 ಡಿಸಿಟಿ ಮತ್ತು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋ ಗೇರ್‌ಬಾಕ್ಸ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತವೆ.

ಮಾರುಕಟ್ಟೆ ಪ್ರವೇಶಿಸಿದ 2022ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್

ಸೆಲ್ಟೊಸ್ ಮಾದರಿಯಲ್ಲಿ ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ನೀಡಲಾಗಿದೆ.

More from DriveSpark

Article Published On: Friday, April 8, 2022, 17:56 [IST]
English summary
Kia india introduces refreshed seltos and sonet in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+