ಕಿಯಾ ಸೊನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಹ್ಯುಂಡೈ ವೆನ್ಯೂ ಎನ್-ಲೈನ್ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಸ್ಪೋರ್ಟಿ ಸಬ್-ಕಾಂಪ್ಯಾಕ್ಟ್ SUV ಆಗಿದೆ. ಕೊರಿಯನ್ ವಾಹನ ತಯಾರಕರ ಎರಡನೇ N-ಲೈನ್ ಉತ್ಪನ್ನವು ಈ ಬಾರಿ ಪರ್ಫಾಮೆನ್ಸ್, ಡಿಸೈನ್‌ ಹಾಗೂ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಹ್ಯುಂಡೈ ವೆನ್ಯೂ ಎನ್-ಲೈನ್‌ನಂತೆಯೇ ಕಿಯಾ ಕೂಡ ತನ್ನ ವಿಶೇಷವಾದ ಸಾನೆಟ್ ಎಕ್ಸ್-ಲೈನ್ ಅನ್ನು ಬಿಡುಗಡೆ ಮಾಡಿದೆ, ಇದು ಜಿಟಿ-ಲೈನ್‌ಗಿಂತ ಮೇಲಿರುತ್ತದೆ. ಆದ್ದರಿಂದ ನೀವು ಮಾರುಕಟ್ಟೆಯಲ್ಲಿ ಈ ಎರಡು SUV ಗಳಲ್ಲಿ ಒಂದನ್ನು ಖರೀದಿಸಲು ಬಯಸುತ್ತಿದ್ದರೆ ಈ ಲೇಖನವನ್ನು ಒಮ್ಮೆ ಓದಿ. ಇಲ್ಲಿ ಎರಡು ವಾಹನಗಳ ಹೋಲಿಕೆಯನ್ನು ಮಾಡಲಾಗಿದ್ದು ನಿಮ್ಮ ಖರೀದಿಗೆ ಸಹಾಯಕವಾಗಬಹುದು.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ರೂಪಾಂತರಗಳು ಮತ್ತು ಬೆಲೆ

ಹ್ಯುಂಡೈ ವೆನ್ಯೂ ಎನ್-ಲೈನ್ ಬೆಲೆಯು 12.16 ಲಕ್ಷ ರೂ. ಮತ್ತು ಟಾಪ್ ವೇರಿಯಂಟ್‌ ಬೆಲೆಯು 13.15 ಲಕ್ಷ ರೂ.ವರೆಗೆ ಏರುತ್ತದೆ. ಇದನ್ನು ಎನ್-6 ಮತ್ತು ಎನ್-8 ರೂಪಾಂತರಗಳ ಬೆಲೆಯಲ್ಲಿ ಲಭ್ಯವಾಗಿಸಲಾಗಿದೆ. ಕಿಯಾ ಸಾನೆಟ್ ಎಕ್ಸ್-ಲೈನ್ ಅನ್ನು ನೋಡುವುದಾದರೆ ರೂ. 13.39 ಲಕ್ಷಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ, ಇದರ ಟಾಪ್ ವೇರಿಯೆಂಟ್ ರೂ. 13.99 ಲಕ್ಷಕ್ಕೆ ಏರುತ್ತದೆ. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ವಿನ್ಯಾಸ

ಕಿಯಾ ಸಾನೆಟ್ ಎಕ್ಸ್-ಲೈನ್‌ನ ಲುಕ್ ಬಗ್ಗೆ ಮಾತನಾಡುವುದಾದರೆ, ಗ್ರಿಲ್ ಅನ್ನು ಗ್ಲೋಸ್ ಬ್ಲ್ಯಾಕ್ ಬಣ್ಣದಲ್ಲಿ ಇರಿಸಲಾಗಿದೆ. ಹೊರಭಾಗವು ಗ್ರ್ಯಾಫೈಟ್ ಬಣ್ಣದಲ್ಲಿದ್ದು, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು ಡಾರ್ಕ್ ಮೆಟಲ್ ಆ್ಯಕ್ಸೆಂಟ್‌ಗಳೊಂದಿಗೆ ಪಿಯಾನೋ ಬ್ಲ್ಯಾಕ್ ಬಣ್ಣವನ್ನು ಪಡೆಯುತ್ತವೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಇದರ ಫಾಗ್ ಲ್ಯಾಂಪ್‌ಗಳಲ್ಲಿ ಗ್ಲಾಸ್ ಬ್ಲಾಕ್ ಬಣ್ಣವನ್ನು ನೀಡಲಾಗಿದೆ. ಹಾಗೆಯೇ ಹೊರಗಿನ ಮಿರರ್‌ಗಳಲ್ಲಿ ಮತ್ತು ಡೋರ್‌ಗಳಲ್ಲಿ ಡಾರ್ಕ್ ಮೆಟಲ್ ಆ್ಯಕ್ಸೆಂಟ್‌ಗಳನ್ನು ನೀಡಲಾಗಿದೆ. ಸಾನೆಟ್ ಎಕ್ಸ್-ಲೈನ್ ಹೊಸದಾಗಿ 16-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದ್ದು, ಇವು ಶೈನಿ ಬ್ಲಾಕ್‌ನಲ್ಲಿದ್ದರೇ, ಬ್ರೇಕ್ ಕ್ಯಾಲಿಪರ್‌ಗಳನ್ನು ಸಿಲ್ವರ್‌ನಲ್ಲಿ ಇರಿಸಲಾಗಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಇದು ಜಿಟಿ ರೂಪಾಂತರದಲ್ಲಿ ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಒಟ್ಟಿನಲ್ಲಿ ಈ ಎಕ್ಸ್ ಲೈನ್ ವೆರಿಯಂಟ್ ಗೆ ವಿಭಿನ್ನವಾದ ಗುರುತನ್ನು ನೀಡುವ ಪ್ರಯತ್ನ ಮಾಡಲಾಗಿದ್ದು, ಈ ವೆರಿಯಂಟ್ ನಲ್ಲಿ ಮಾತ್ರ ಈ ಬಣ್ಣವನ್ನು ನೀಡಲಾಗಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ವೆನ್ಯೂ ಎನ್-ಲೈನ್ ಡಿಸೈನ್ ಬಗ್ಗೆ ಮಾತನಾಡುವುದಾದರೆ ಸ್ಪೋರ್ಟಿ ಮತ್ತು ಆಕರ್ಷಕವಾಗಿಸಲು, ಮುಂಭಾಗ, ಹಿಂಭಾಗ ಮತ್ತು ಬದಿಗಳಲ್ಲಿ ಕೆಂಪು ಉಚ್ಚಾರಣೆಗಳನ್ನು ನೀಡಲಾಗಿದೆ. ಕಾರಿನ ಮುಂಭಾಗದ ಬಂಪರ್, ಹಿಂಭಾಗದ ಬಂಪರ್, ರೂಫ್ ಹಳಿಗಳು ಮತ್ತು ವೀಲ್ ಆರ್ಚ್‌ಗಳಲ್ಲಿ ರೆಡ್‌ ಆ್ಯಕ್ಸೆಂಟ್‌ಗಳನ್ನು ನೀಡಲಾಗಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಅದರ ಮುಂಭಾಗದ ಗ್ರಿಲ್‌ನಲ್ಲಿ "N-ಲೈನ್" ಬ್ಯಾಡ್ಜಿಂಗ್ ಸಹ ಲಭ್ಯವಿದೆ. ಕಾರು ಹೊಸ 18-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಟಿಪ್ಸ್ ಅನ್ನು ಪಡೆಯುತ್ತದೆ. ಸ್ಪೋರ್ಟಿ ಲುಕ್ ಹೆಚ್ಚಿಸಲು, ಮುಂಭಾಗದ ಡಿಸ್ಕ್ ಬ್ರೇಕ್‌ನಲ್ಲಿ ಕೆಂಪು ಕ್ಯಾಲಿಪರ್‌ಗಳನ್ನು ಅಳವಡಿಸಲಾಗಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ವೈಶಿಷ್ಟ್ಯಗಳು ಮತ್ತು ಸುರಕ್ಷತಾ ಸಾಧನಗಳು

ಸಾನೆಟ್ ಎಕ್ಸ್-ಲೈನ್‌ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಮತ್ತು ಆಪಲ್ ಕಾರ್‌ಪ್ಲೇ, ಯುವೋ ಕನೆಕ್ಟೆಡ್ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಎಲೆಕ್ಟ್ರಿಕ್ ಸನ್‌ರೂಫ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಸುರಕ್ಷತೆಗಾಗಿ ಸಾನೆಟ್ ಎಕ್ಸ್-ಲೈನ್ ಎಬಿಎಸ್ ಜೊತೆಗೆ ಇಬಿಡಿ, ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ ಅನ್ನು ಒಳಗೊಂಡಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ವೆನ್ಯೂ ಎನ್-ಲೈನ್‌ನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಜೊತೆಗೆ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸಂಪರ್ಕಿತ ಕಾರ್ ಟೆಕ್, ಆಂಬಿಯೆಂಟ್ ಲೈಟಿಂಗ್, ಚಾಲಿತ ಡ್ರೈವರ್ ಸೀಟ್, ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್, ವಾಯ್ಸ್ ಕಮಾಂಡ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬೋಸ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಇನ್ನು ಸುರಕ್ಷತೆಯನ್ನು ನೋಡುವುದಾದರೆ ಎನ್-ಲೈನ್‌ನಲ್ಲಿ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲ್ಲಾ ವೀಲ್‌ಗಳಿಗೆ ಡಿಸ್ಕ್ ಬ್ರೇಕ್‌ಗಳು, ಎರಡನೇ ಸಾಲಿನ ಐಸೊಫಿಕ್ಸ್ ಸೀಟ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್ ಸಿಸ್ಟಮ್, ಪಾರ್ಕಿಂಗ್ ಅಸಿಸ್ಟ್ ಸೆನ್ಸಾರ್ ಮತ್ತು ಡೈನಾಮಿಕ್ ಗೈಡ್‌ಲೈನ್ಸ್ ಕ್ಯಾಮೆರಾವನ್ನು ಒಳಗೊಂಡಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಎಂಜಿನ್

ಎಂಜಿನ್ ಆಯ್ಕೆಗಳ ವಿಷಯದಲ್ಲಿ, ಕಿಯಾ ಸಾನೆಟ್ ಎಕ್ಸ್ ಲೈನ್ ಅನ್ನು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಅನುಕ್ರಮವಾಗಿ 7-ಡಿಸಿಟಿ ಮತ್ತು 6-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ವೆನ್ಯೂ ಎನ್ ಲೈನ್‌ನಲ್ಲಿ 1.0-ಲೀಟರ್ ಟರ್ಬೊ ಜಿಡಿಐ ಪೆಟ್ರೋಲ್ ಅನ್ನು ಒಳಗೊಂಡಿರುವ ಅದೇ ಎಂಜಿನ್ ಗೇರ್‌ಬಾಕ್ಸ್ ಕಂಡುಬರುತ್ತದೆ. ಇದು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಅನ್ನು ಪಡೆದುಕೊಂಡಿದೆ.

ಕಿಯಾ ಸಾನೆಟ್ ಎಕ್ಸ್-ಲೈನ್ VS ಹ್ಯುಂಡೈ ವೆನ್ಯೂ ಎನ್-ಲೈನ್: ಬೆಲೆ, ವಿನ್ಯಾಸ, ವೈಶಿಷ್ಟ್ಯಗಲ್ಲಿ ಯಾವುದು ಬೆಸ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬೆಲೆಗೆ ಸಂಬಂಧಿಸಿದಂತೆ ಹುಂಡೈ ವೆನ್ಯೂ ಎನ್ ಲೈನ್ ಬೆಸ್ಟ್ ಎನಿಸಿದರೆ, ವೈಶಿಷ್ಟ್ಯಗಳ ವಿಷಯದಲ್ಲಿ ಸಾನೆಟ್ ಎಕ್ಸ್-ಲೈನ್ ಸ್ವಲ್ಪ ಮುಂದೆ ಕಾಣುತ್ತದೆ. ಇದರೊಂದಿಗೆ ಎಂಜಿನ್ ಆಯ್ಕೆಯು ಎರಡರಲ್ಲೂ ಲಭ್ಯವಿದೆ. ಆದರೆ ಡೀಸೆಲ್ ಎಂಜಿನ್‌ನ ಹೆಚ್ಚುವರಿ ಆಯ್ಕೆಯು ಸಾನೆಟ್ ಎಕ್ಸ್ ಲೈನ್‌ನಲ್ಲಿ ಲಭ್ಯವಿದೆ.

Most Read Articles

Kannada
English summary
Kia sonet x line vs hyundai venue n line which is best in price design features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X