ಮಾರುತಿ ಕಾರುಗಳ ಅಬ್ಬರದ ನಡುವೆಯೂ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಟಾ ನೆಕ್ಸಾನ್

ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳು ಅನಾವರಣಗಳು ಮತ್ತು ಬಿಡುಗಡೆಗಳು ನಡೆಯುತ್ತಿವೆ. ಅಲ್ಲದೇ ಭಾರತದಲ್ಲಿ ಕಾರು ಮಾರಾಟವು ಕ್ರಮೇಣ ವೇಗವನ್ನು ಪಡೆದುಕೊಳ್ಳುತ್ತಿದೆ. 2022ರ ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಬಹಿರಂಗವಾಗಿದೆ. ಕಳೆದ ಅತಿ ಹೆಚ್ಚು ಮಾರಾಟವಾದ ಟಾಪ್-5 ಕಾರುಗಳ ಪಟ್ಟಿ ಇಲ್ಲಿವೆ.

ಮಾರುತಿ ಸುಜುಕಿ ಬಲೆನೊ
ಮಾರುತಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್, ಬಲೆನೊ ಕಳೆದ ತಿಂಗಳು ದೇಶದಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಕಳೆದ ತಿಂಗಳಿನಲ್ಲಿ ಬಲೆನೊ ಮಾದರಿಯ 20,945 ಯೂನಿಟ್ ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಮಾರಾಟವಾದ ಯುನಿಟ್ ಗಳಿಗೆ ಹೋಲಿಸಿದರೆ ಶೇ.110 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದೆ. 2022ರ ಅಕ್ಟೋಬರ್ ತಿಂಗಳಿನಲ್ಲಿ ಬಲೆನೊ ಮಾದರಿಯ 17,149 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳಿಗೆ ಶೇಕಡಾ 22 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಟಾ ನೆಕ್ಸಾನ್

ಮಾರುತಿ ಸುಜುಕಿ ತನ್ನ ನವೀಕರಿಸಿ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಹೊಸ ಮಾದರಿಯು ಪರಿಷ್ಕೃತ ಸ್ಟೈಲಿಂಗ್, ಗಮನಾರ್ಹವಾಗಿ ಪರಿಷ್ಕೃತ ಒಳಾಂಗಣ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಈ ಮಾರುತಿ ಬಲೆನೊ ಕಾರಿನಲ್ಲಿ ಲೀಟರ್ 4-ಸಿಲಿಂಡರ್ ಡ್ಯುಯಲ್ ಜೆಟ್ ಯುನಿಟ್ ಒಂದೇ ಪೆಟ್ರೋಲ್ ಎಂಜಿನ್‌ನಲ್ಲಿ ನೀಡಲಾಗಿದೆ. ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟಾಟಾ ನೆಕ್ಸಾನ್
ಟಾಟಾ ಮೋಟಾರ್ಸ್ ತನ್ನ ಸ್ವಂತ ವಿಭಾಗದಿಂದ ಪ್ರಬಲವಾದ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ ದೇಶದಲ್ಲಿ 15,871 ಯೂನಿಟ್ ನೆಕ್ಸಾನ್ ಎಸ್‌ಯುವಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದ ಕಾರಣ ಟಾಟಾ ಮೋಟಾರ್ಸ್ ಕಳೆದ ತಿಂಗಳ ಅವಧಿಯಲ್ಲಿ ನೆಕ್ಸಾನ್ ಎಸ್‌ಯುವಿ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದ್ದು, ಭಾರತೀಯ ವಾಹನೋದ್ಯಮವನ್ನು ತಲ್ಲಣಗೊಳಿಸಿದೆ. ಇದಲ್ಲದೆ, ಟಾಟಾ ನೆಕ್ಸಾನ್ ಎಸ್‍ಯುವಿ ವರ್ಷದಿಂದ ವರ್ಷಕ್ಕೆ 61 ಪ್ರತಿಶತಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಸಾಧಿಸಿದೆ.

ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಟಾ ನೆಕ್ಸಾನ್

ಟಾಟಾ ಕಂಪನಿಯು ಕಳೆದ ವರ್ಷದ ಇದೇ ಅವಧಿಯಲ್ಲಿ ನೆಕ್ಸಾನ್ ಮಾದರಿಯ 9,831 ಯೂನಿಟ್ ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿತ್ತು. ಇನ್ನು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇಕಡಾ 15 ಕ್ಕಿಂತ ಹೆಚ್ಚು ಸುಧಾರಿಸಿದೆ.ಬೆಳವಣಿಗೆಯನ್ನು ಸಾಧಿಸಿದೆ. ಈ ಟಾಟಾ ಮೋಟಾರ್ಸ್ ಹಲವಾರು ಕಾರಣಗಳಿಂದಾಗಿ ನೆಕ್ಸಾನ್ ಅನ್ನು ದೀರ್ಘಕಾಲದಿಂದಲೂ ಹೆಚ್ಚು ಮಾರಾಟವಾಗುತ್ತಿರುವ ಮಾದರಿಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದ ಮಾದರಿಯಾಗಿದೆ. 2017ರ ಕೊನೆಯಲ್ಲಿ ಬಿಡುಗಡೆಯಾದ ನಂತರ ಸಬ್-ಫೋರ್-ಮೀಟರ್ ಎಸ್‍ಯುವಿಯು ಗ್ರಾಹಕರ ಗಮನ ಸೆಳೆಯಿತು.

ಮಾರುತಿ ಸುಜುಕಿ ಆಲ್ಟೋ
ಮಾರುತಿ ಸುಜುಕಿ ಆಲ್ಟೋ ಯಾವಾಗಲೂ ಭಾರತದಲ್ಲಿ ಇಂಡೋ-ಜಪಾನೀಸ್ ವಾಹನ ತಯಾರಕರಿಗೆ ಸ್ಥಿರವಾದ ಮಾರಾಟಗಾರರಾಗಿದ್ದಾರೆ. 2022ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಆಲ್ಟೋ ಹ್ಯಾಚ್‌ಬ್ಯಾಕ್‌ನ 15,663 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2021ರ ನವೆಂಬರ್ ತಿಂಗಳಿನಲ್ಲಿ ಮಾರಾಟವಾದ ಯುನಿಟ್ ಗಳಿಗೆ ಹೊಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 13.4 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಹ್ಯಾಚ್‌ಬ್ಯಾಕ್‌ನ ತಿಂಗಳಿನಿಂದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಅಂಕಿಅಂಶಗಳು ಶೇಕಡಾ 26 ಕ್ಕಿಂತ ಕಡಿಮೆಯಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್
2022ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮಾದರಿಯ 15,153 ಯೂನಿಟ್ ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ವರ್ಷದ ಇದೇ ಅವಧಿಯ ಮಾರಾಟಕ್ಕೆ ಹೋಲಿಸಿದರೆ ಶೇ.4 ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಇನ್ನು 2022ರ ಅಕ್ಟೋಬರ್ ತಿಂಗಳಿನಲ್ಲಿ ಮಾರಾಟದ ಸ್ವಿಫ್ಟ್ ಯುನಿಟ್ ಗಳಿಗೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಶೇ.12 ರಷ್ಟು ಕುಸಿತವನ್ನು ಕಂಡಿದೆ. ಸ್ವಿಫ್ಟ್ ಮಾದರಿಯು ಭಾರತದಲ್ಲಿ ಹಲವು ವರ್ಷಗಳಿಂದ ಮಾರಾಟವಾಗುತ್ತಿರುವ ಜನಪ್ರಿಯ ಕಾರ್ ಆಗಿದೆ.

ಮಾರುತಿ ಸುಜುಕಿ ವ್ಯಾಗನ್ಆರ್
ಮಾರುತಿ ಸುಜುಕಿ ವ್ಯಾಗನ್ಆರ್ ಭಾರತದಲ್ಲಿ ಇಂಡೋ-ಜಪಾನೀಸ್ ವಾಹನ ತಯಾರಕರಿಗೆ ಬಹಳ ಸ್ಥಿರವಾದ ಪ್ರದರ್ಶನವಾಗಿದೆ. 2022ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ದೇಶಾದ್ಯಂತ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನ 14,720 ಯುನಿಟ್‌ಗಳನ್ನು ಮಾರಾಟ ಮಾಡಲು ಯಶಸ್ವಿಯಾಯಿತು. ಯೋಗ್ಯವಾದ ಮಾರಾಟದ ಅಂಕಿಅಂಶಗಳ ಹೊರತಾಗಿಯೂ, ಮಾರುತಿ ಸುಜುಕಿ ವ್ಯಾಗನ್‌ಆರ್‌ನ ವರ್ಷದಿಂದ ವರ್ಷದ ಮಾರಾಟದಲ್ಲಿ ಶೇಕಡಾ 12.6 ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಅಲ್ಲದೇ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಟಾಲ್-ಬಾಯ್ ಹ್ಯಾಚ್‌ಬ್ಯಾಕ್ ಸಹ ಸುಮಾರು 18 ಪ್ರತಿಶತದಷ್ಟು ಕುಸಿದಿದೆ.

Most Read Articles

Kannada
English summary
List of top 5 bestselling cars in november 2022 details
Story first published: Wednesday, December 7, 2022, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X