ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7-ಸೀಟರ್ ಎಂಪಿವಿ ಕಾರುಗಳಿವು...
ಭಾರತೀಯ ಕಾರು ಮಾರುಕಟ್ಟೆಯಲ್ಲಿ, ಯುಟಿಲಿಟಿ ವಾಹನಗಳು (ಎಸ್‌ಯುವಿಗಳು ಮತ್ತು ಎಂಪಿವಿಗಳು ಸೇರಿದಂತೆ) ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿವೆ. ಎಂಪಿವಿ ವಿಭಾಗವು ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಭಾರತದಲ್ಲಿ ಹೆಚ್ಚಿನ ಸದಸ್ಯರನ್ನು ಒಳಗೊಂಡಿರುವ ದೊಡ್ಡ ಕುಟುಂಬಗಳು ಹೆಚ್ಚು ಇವೆ. ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡಲು 7-ಸೀಟರ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಎಂಪಿವಿ ಕಾರುಗಳ ಖರೀದಿದಾರರಿಗೆ ಸಾಕಷ್ಟು ಆಯ್ಕೆಗಳು ಲಭ್ಯವಿವೆ. ಆದರೆ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳ ಬೆಲೆಗಳು ಹೆಚ್ಚಾಗುತ್ತಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಎಂಪಿವಿ ಕಾರುಗಳು ಲಭ್ಯವಿದೆ. ಇನ್ನು ಸಾಕಷ್ಟು ಹೊಸ 7-ಸೀಟರ್ ಎಂಪಿವಿ ಕಾರುಗಳು ಶೀಘ್ರದಲ್ಲೇ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ 7-ಸೀಟರ್ ಎಂಪಿವಿ ಕಾರುಗಳ ಮಾಹಿತಿ ಇಲ್ಲಿದೆ.

ನ್ಯೂ ಜನರೇಷನ್ ಟೊಯೊಟಾ ಇನೋವಾ ಕ್ರಿಸ್ಟಾ
ಈ ನ್ಯೂ ಜನರೇಷನ್ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ ಮತ್ತು ಹೊಸ ಮಾದರಿಯು ಈ ವರ್ಷದ ನಂತರ ಬಿಡುಗಡೆಯಾಗುವ ನಿರೀಕ್ಷೆಯಿದೆ. ನ್ಯೂ ಜನರೇಷನ್ ಟೊಯೊಟಾ ಇನೋವಾ ಕ್ರಿಸ್ಟಾ ಮೊನೊಕೊಕ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ,

ಪ್ರಸ್ತುತ ಆವೃತ್ತಿಯಂತೆ ಲ್ಯಾಡರ್-ಫ್ರೇಮ್ ಪ್ಲಾಟ್‌ಫಾರ್ಮ್ ಅಲ್ಲ. ಅಲ್ಲದೆ, ಟೊಯೊಟಾ ಅದರ ಮೇಲೆ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ನೀಡುವ ಬಗ್ಗೆ ಊಹಾಪೋಹಗಳಿವೆ. ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬಂದರೆ ಹೆಚ್ಚಿನ ಮೈಲೇಜ್ ಅನ್ನು ನಿರೀಕ್ಷಿಸಬಹುದು. ಇನೋವಾ ಭಾರತೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ನ್ಯೂ ಜನರೇಷನ್ ಟೊಯೊಟಾ ಇನೋವಾ ಕ್ರಿಸ್ಟ ಎಂಪಿವಿ ಬಿಡುಗಡೆಯಾದ ಬಳಿಕ ಮಾರಾಟವನ್ನು ಹೆಚ್ಚಿಸಲು ನೆರವಾಗುತ್ತದೆ.

ಟೊಯೊಟಾ ರೂಮಿಯಾನ್
ಟೊಯೊಟಾ ತನ್ನ ರೂಮಿಯಾನ್ ಕಾರನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮಾರುತಿ ಎರ್ಟಿಗಾದ ರಿಬ್ಯಾಡ್ಜ್ ಮಾದರಿಯಾಗಿದೆ. ಈ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲೂ ಮಾರಾಟವಾಗುವ ನಿರೀಕ್ಷೆಯಿದೆ, ಬಹುಶಃ 2022ರ ಆರಂಭದಲ್ಲಿ ಸಾಧ್ಯತೆ ಇದೆ. ರಿಬ್ಯಾಡ್ಜ್ ಮಾದರಿಯು ಬಹುತೇಕ ಎರ್ಟಿಗಾವನ್ನು ಹೋಲುತ್ತದೆ ಆದರೆ ಹೊಸ ಮುಂಭಾಗದ ಗ್ರಿಲ್ ಮತ್ತು ವಿಭಿನ್ನ ಲೋಗೋಗಳನ್ನು ಹೊಂದಿದೆ.

ಈ ಟೊಯೊಟಾ ಎಂಪಿವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್‌ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರುತ್ತದೆ. ಕೈಗೆಟುಕು ದರದಲ್ಲಿ ಈ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸಿ ತಂತ್ರವನ್ನು ಹೊಂದಿರಬಹುದು. ಟೊಯೊಟಾ ರೂಮಿಯನ್ (Toyota Rumion) ಎಂದು ಕರೆಯಲ್ಪಡುವ ಹೊಸ ಎಂಪಿವಿ ಭಾರತದಲ್ಲಿ ಮಾರಾಟದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾವನ್ನು ಹೋಲುತ್ತದೆ.

ಈ ಹೊಸ ಟೊಯೊಟಾ ರೂಮಿಯನ್ ಎಂಪಿವಿ ತನ್ನನ್ನು ಮಾರುತಿ ಎರ್ಟಿಗಾದಿಂದ ಪ್ರತ್ಯೇಕಿಸಲು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಟೊಯೊಟಾ ರೂಮಿಯನ್ ಎಂಪಿವಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸ ರೂಮಿಯನ್ ಎಂಪಿವಿಯು ಟೊಯೋಟಾ ಬ್ಯಾಡ್ಜ್‌ನೊಂದಿಗೆ ವಿಭಿನ್ನ ಗ್ರಿಲ್ ಅನ್ನು ಪಡೆಯುತ್ತದೆ.

ಹುಂಡೈ ಸ್ಟಾರ್‌ಗೇಜರ್
ಹ್ಯುಂಡೈ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿಯನ್ನು ಪರಿಚಯಿಸಲು ಯೋಜಿಸುತ್ತಿದೆ, ಇದು ಕಿಯಾ ಕೆರೆನ್ಸ್ ನೊಂದಿಗೆ ತನ್ನ ಫ್ಲಾಟ್ ಫಾರ್ಮ್ ಅನ್ನು ಹಂಚಿಕೊಳ್ಳುತ್ತದೆ. ಹ್ಯುಂಡೈನ ಎಂಪಿವಿ ಕೆಲವು ಬಾರಿ ವಿದೇಶಿ ರಸ್ತೆಗಳಲ್ಲಿ ಪರೀಕ್ಷಿಸಲ್ಪಟ್ಟಿದೆ.

ಮುಂಬರುವ ಈ ಮಾದರಿಯು ಇಂಡೋನೇಷಿಯನ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಮಾರಾಟವಾಗಲಿದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿಗಳು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪರಿಗಣಿಸಿದರೆ, ಈ ಸ್ಟಾರ್‌ಗೇಜರ್ ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ನ್ಯೂ ಜನರೇಷನ್ ಕಿಯಾ ಕಾರ್ನಿವಲ್
ಕಿಯಾ ಶೀಘ್ರದಲ್ಲೇ ಹೊಸ ತಲೆಮಾರಿನ ಕಾರ್ನಿವಲ್ ಅನ್ನು ಭಾರತೀಯ ಮಾರುಕಟ್ಟೆಗೆ ತರುವ ನಿರೀಕ್ಷೆಯಿದೆ, ಆದರೆ ತಯಾರಕರು ಬಿಡುಗಡೆಯ ಟೈಮ್‌ಲೈನ್ ಅನ್ನು ಖಚಿತಪಡಿಸಿಲ್ಲ. ನ್ಯೂ ಜನರೇಷನ್ ಕಿಯಾ ಕಾರ್ನಿವಲ್ 2020 ರಲ್ಲಿ ಅದರ ಜಾಗತಿಕ ಚೊಚ್ಚಲ ಪ್ರವೇಶವನ್ನು ಹೊಂದಿತ್ತು,

ಈ ನ್ಯೂ ಜನರೇಷನ್ ಕಿಯಾ ಕಾರ್ನಿವಲ್ ಎಂಪಿವಿಯು ನಯವಾದ ವಿನ್ಯಾಸ, ದೊಡ್ಡ ಆಯಾಮಗಳು ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಹೊಂದಿದೆ. ಈ ನ್ಯೂ ಜನರೇಷನ್ ಕಿಯಾ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ರೆನಾಲ್ಟ್ ಟ್ರೈಬರ್ ಟರ್ಬೋ
ಈ ರೆನಾಲ್ಟ್ ಟ್ರೈಬರ್ ಟರ್ಬೋ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯಲಿದೆ. ಬಹುಶಃ ಈ ವರ್ಷದ ಅಂತ್ಯದ ಮೊದಲು. ವರದಿಗಳ ಪ್ರಕಾರ, ಫ್ರೆಂಚ್ ಕಾರು ತಯಾರಕರು ಅದನ್ನು ಮಾಡಲು ಸ್ವಲ್ಪ ಸಮಯದಿಂದ ಯೋಜಿಸಿದ್ದರು, ಆದರೆ ಭಾರತೀಯ ಕಾರು ಮಾರುಕಟ್ಟೆಯ ಏರಿಳಿತಗಳು ರೆನಾಲ್ಟ್ ಟ್ರೈಬರ್ ಟರ್ಬೊ ಬಿಡುಗಡೆಯನ್ನು ಹಲವು ಬಾರಿ ವಿಳಂಬಗೊಳಿಸುವಂತೆ ಮಾಡಿದೆ.


Click it and Unblock the Notifications